‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ
ಶ್ರೀ ಗಣಪತಿ ಅಥರ್ವಶೀರ್ಷದ ಪಠಣದಿಂದ ನಿರ್ಮಾಣವಾದ ಚೈತನ್ಯದಿಂದ ಉಪಾಸಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು, ಹಾಗೆಯೇ ಗಣೇಶೋತ್ಸವದ ಕಾಲಾವಧಿಯಲ್ಲಿ ಮಾಡಿದ ಈ ಸ್ತೋತ್ರ ಪಠಣದಿಂದ ಶ್ರೀ ಗಣೇಶಮೂರ್ತಿಯ ಮೇಲಾದ ಸಕಾರಾತ್ಮಕ ಪರಿಣಾಮ
‘ಶ್ರೀ ಗಣೇಶಚತುರ್ಥಿಯ ದಿನ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಪೃಥ್ವಿಯ ಮೇಲೆ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ಕಾಲಾವಧಿಯಲ್ಲಿ ಮಾಡಿದ ಶ್ರೀ ಗಣೇಶನ ಉಪಾಸನೆಯಿಂದ ಗಣೇಶೋತ್ಸವದ ಹೆಚ್ಚು ಪ್ರಮಾಣದಲ್ಲಿ ಲಾಭವಾಗುತ್ತದೆ. ಗೋವಾದ ಫೋಂಡಾದ ಶ್ರೀ. ಪ್ರಣವ ಸಾಧಲೆಯವರು ಗಣೇಶೋತ್ಸವದ ಸಮಯದಲ್ಲಿ ೧೬.೯.೨೦೧೮ ರಂದು ಶ್ರೀ ಗಣಪತಿ ಅಥರ್ವಶೀರ್ಷ ಸ್ತೋತ್ರದ ೧ ಸಾವಿರ ಆವರ್ತನೆಗಳನ್ನು ಮಾಡಿದರು. ‘ಉಪಾಸಕರು ಶ್ರೀ ಗಣಪತಿ ಅಥರ್ವಶೀರ್ಷ ಸ್ತೋತ್ರವನ್ನು ಪಠಣ ಮಾಡಿದ್ದರಿಂದ ಅವರಿಗೆ ಏನು ಲಾಭವಾಗುತ್ತದೆ ಮತ್ತು ಶ್ರೀ ಗಣೇಶನ ಮೂರ್ತಿಯ ಮೇಲೆ ಅದರ ಪರಿಣಾಮ ಏನಾಗುತ್ತದೆ, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಒಂದು ಪರೀಕ್ಷಣೆಯನ್ನು ನಡೆಸಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಎಂಬ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ಸ್ವರೂಪ, ಪ್ರಭಾವಲಯಗಳ ಅಳತೆಗಳ ನೊಂದಣಿಗಳು ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.
ಶ್ರೀ ಗಣಪತಿ ಅಥರ್ವಶೀರ್ಷ ಸ್ತೋತ್ರದ ಪಠಣದಿಂದ ಏಕಾಗ್ರತೆಯು ಬೇಗನೇ ಪ್ರಾಪ್ತವಾಗುತ್ತದೆ ಮತ್ತು ಶುಚಿರ್ಭೂತರಾಗಿ ಪಠಣ ಮಾಡಿದರೆ ಆಧ್ಯಾತ್ಮಿಕ ಶಕ್ತಿಯನ್ನು ಗ್ರಹಿಸುವ ಕ್ಷಮತೆ ಹೆಚ್ಚಾಗುತ್ತದೆ
‘ಅಥರ್ವಶೀರ್ಷವನ್ನು ಬಹಳ ನಿಧಾನವಾಗಿ ಮತ್ತು ಒಂದೇ ಲಯದಲ್ಲಿ ಹೇಳಬೇಕು. ಸ್ತೋತ್ರವನ್ನು ಹೇಳುವ ಮೊದಲು ಸ್ನಾನ ಮಾಡಬೇಕು. ಕುಳಿತುಕೊಳ್ಳಲು ಒಗೆದು ಮಡಚಿದ ವಸ್ತ್ರ, ಮೃಗಾಜಿನ, ಉಣ್ಣೆಯ ಪಂಚೆ ಅಥವಾ ದರ್ಭೆಯ ಚಾಪೆಯನ್ನು ಉಪಯೋಗಿಸಬೇಕು. ಪಠಣ ಪೂರ್ಣವಾಗುವವರೆಗೆ ಪುನಃ ಪುನಃ ಕಾಲುಗಳನ್ನು ಬದಲಾಯಿಸುವ ಆವಶ್ಯಕತೆ ಬರದಂತಹ ಸುಲಭ ಸುಖಾಸನದಲ್ಲಿ (ಕಾಲುಮಡಚಿ) ಕುಳಿತುಕೊಳ್ಳಬೇಕು. ದಕ್ಷಿಣ ದಿಕ್ಕನ್ನು ಬಿಟ್ಟು ಇತರ ಯಾವುದೇ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಹುದು. ಪಠಣವನ್ನು ಆರಂಭಿಸುವ ಮೊದಲು ಗಣಪತಿಯ ಪೂಜೆಯನ್ನು ಮಾಡಿ ಗಣಪತಿಗೆ ಅಕ್ಷತೆ, ದೂರ್ವೆ, ಶಮೀ ಮತ್ತು ಕೆಂಪು ಹೂವುಗಳನ್ನು ಅರ್ಪಿಸಬೇಕು. ಪೂಜೆಯನ್ನು ಮಾಡಲು ಆಗದಿದ್ದರೆ, ಒಂದು ನಿಮಿಷ ಗಣಪತಿಯ ಧ್ಯಾನವನ್ನು ಮಾಡಬೇಕು. ಆಮೇಲೆ ನಮಸ್ಕಾರ ಮಾಡಿ ಪಠಣವನ್ನು ಆರಂಭಿಸಬೇಕು. ಸ್ತೋತ್ರವನ್ನು ಗಣಪತಿಯ ಮೂರ್ತಿಯ ಕಡೆಗೆ ಅಥವಾ ಓಂಕಾರದ ಕಡೆಗೆ ನೋಡಿ ಹೇಳಬೇಕು ಅಥವಾ ಕಣ್ಣುಗಳ ಮುಂದೆ ಗಣಪತಿಯ ಮೂರ್ತಿಯನ್ನು ತರಬೇಕು. (ಸನಾತನ ಸಂಸ್ಥೆಯು ಗಣಪತಿಯ ಸಾತ್ತ್ವಿಕ ಚಿತ್ರ ಮತ್ತು ಮೂರ್ತಿಯನ್ನು ತಯಾರಿಸಿದೆ.) ಇವೆಲ್ಲವುಗಳಿಂದ ಏಕಾಗ್ರತೆಯನ್ನು ಬೇಗನೇ ಸಾಧಿಸಲು ಸಹಾಯವಾಗುತ್ತದೆ. ಹಾಗೆಯೇ ಶುಚಿರ್ಭೂತರಾಗಿ ಪಠಿಸುವುದರಿಂದ ಆಧ್ಯಾತ್ಮಿಕ ಶಕ್ತಿಯನ್ನು ಗ್ರಹಿಸುವ ಕ್ಷಮತೆ ಹೆಚ್ಚುತ್ತದೆ. (ಆಧಾರ : ಸನಾತನದ ಕಿರುಗ್ರಂಥ – ‘ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಟನಾಶನ ಸ್ತೋತ್ರ)
೧. ಪರೀಕ್ಷಣೆಯ ಸ್ವರೂಪ
ಈ ಪರೀಕ್ಷಣೆಯಲ್ಲಿ ಗಣೇಶನ ಉಪಾಸಕರಾದ ಶ್ರೀ. ಪ್ರಣವ ಸಾಧಲೆಯವರು ಅಥರ್ವಶೀರ್ಷ ಸ್ತೋತ್ರ ಪಠಣವನ್ನು ಆರಂಭಿಸುವ ಮೊದಲು ಮತ್ತು ಪಠಣದ ಒಂದು ಸಾವಿರ ಆವರ್ತನೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಮತ್ತು ಶ್ರೀ ಗಣೇಶ ಮೂರ್ತಿಯ ‘ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ಪ್ರಭಾವಲಯಗಳ ಅಳತೆಗಳನ್ನು ನೋಂದಣಿ ಮಾಡಲಾಯಿತು. ಈ ಎಲ್ಲ ಪ್ರಭಾವಲಯಗಳ ಅಳತೆಗಳ ತುಲನಾತ್ಮಕ ಅಭ್ಯಾಸವನ್ನು ಮಾಡಲಾಯಿತು.
ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದಲ್ಲಿನ ‘ಯು.ಎ.ಎಸ್ ಉಪಕರಣದ ಪರಿಚಯ, ‘ಉಪಕರಣದ ಮೂಲಕ ಮಾಡುವ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ, ‘ಘಟಕದ ಪ್ರಭಾವಲಯವನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ‘ಪರೀಕ್ಷಣೆಯಲ್ಲಿ ಸಮಾನತೆಯು ಬರಲು ವಹಿಸಿದ ಜಾಗರೂಕತೆ ಇತ್ಯಾದಿ ನಿತ್ಯದ ಅಂಶಗಳನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿನ bit.ly/UASResearch ಈ ಲಿಂಕ್‌ನಲ್ಲಿ ಇಡಲಾಗಿದೆ. ಈ ಲಿಂಕ್‌ನಲ್ಲಿನ ಕೆಲವು ಅಕ್ಷರಗಳು (Capital) ಕೆಪಿಟಲ್ ಇವೆ.
೨. ಪ್ರಭಾವಲಯಗಳ ಅಳತೆಗಳ ನೋಂದಣಿಗಳು ಮತ್ತು ಅವುಗಳ ವಿವೇಚನೆ
೨ ಅ. ನಕಾರಾತ್ಮಕ ಇಂಧನದ ವಿಷಯದಲ್ಲಿ ಮಾಡಿದ ಪ್ರಭಾವಲಯದ ಅಳತೆಗಳ ನೋಂದಣಿಗಳ ವಿವೇಚನೆ
೨ ಅ ೧. ಅಥರ್ವಶೀರ್ಷದ ಪಠಣದ ನಂತರ ಉಪಾಸಕರಲ್ಲಿನ ‘ಇನ್ಫ್ರಾರೆಡ್ ಎಂಬ ನಕಾರಾತ್ಮಕ ಇಂಧನವು ಸಂಪೂರ್ಣವಾಗಿ ಇಲ್ಲವಾಗುವುದು : ಆರಂಭದಲ್ಲಿ ಉಪಾಸಕರಲ್ಲಿ (ಶ್ರೀ. ಪ್ರಣವ ಸಾಧಲೆ ಇವರಲ್ಲಿ) ‘ಇನ್ಫ್ರಾರೆಡ್ ಎಂಬ ನಕಾರಾತ್ಮಕ ಇಂಧನವಿತ್ತು. ಅದರ ಪ್ರಭಾವಲಯ ೦.೯೫ ಮೀಟರ್‌ನಷ್ಟಿತ್ತು. ಅಥರ್ವ ಶೀರ್ಷದ ಪಠಣದ ನಂತರ ಅವರಲ್ಲಿನ ‘ಇನ್ಫ್ರಾರೆಡ್ ಎಂಬ ನಕಾರಾತ್ಮಕ ಇಂಧನವು ಸಂಪೂರ್ಣವಾಗಿ ಇಲ್ಲವಾಯಿತು. ಉಪಾಸಕರಲ್ಲಿ ಅಥರ್ವಶೀರ್ಷದ ಪಠಣವನ್ನು ಆರಂಭಿಸುವ ಮೊದಲು ಮತ್ತು ಪಠಣ ಮುಗಿದ ನಂತರವೂ ‘ಅಲ್ಟ್ರಾವೈಲೆಟ್ ಎಂಬ ನಕಾರಾತ್ಮಕ ಇಂಧನವು ಕಂಡುಬರಲಿಲ್ಲ.
೨ ಅ ೨. ಶ್ರೀ ಗಣೇಶಮೂರ್ತಿಯಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಇವೆರಡೂ ವಿಧದ ನಕಾರಾತ್ಮಕ ಇಂಧನಗಳು ಕಂಡುಬರಲಿಲ್ಲ.
೨ ಆ. ಸಕಾರಾತ್ಮಕ ಇಂಧನದ ಸಂದರ್ಭದಲ್ಲಿ ಮಾಡಿರುವ ಪ್ರಭಾವಲಯಗಳ ಅಳತೆಗಳ ನೋಂದಣಿಗಳ ವಿವೇಚನೆ
೨ ಆ ೧. ಅಥರ್ವಶೀರ್ಷದ ಪಠಣ ಮುಗಿದ ನಂತರ ಉಪಾಸಕರಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಇಂಧನವು ನಿರ್ಮಾಣವಾಗುವುದು : ಎಲ್ಲ ವ್ಯಕ್ತಿಗಳು, ವಾಸ್ತುಗಳು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಇಂಧನ ಇದ್ದೇ ಇರುತ್ತದೆ ಎಂದೇನಿಲ್ಲ. ಅಥರ್ವಶೀರ್ಷ ಪಠಣವನ್ನು ಆರಂಭಿಸುವ ಮೊದಲು ಉಪಾಸಕರಲ್ಲಿ ಸಕಾರಾತ್ಮಕ ಇಂಧನ ಸ್ವಲ್ಪವೂ ಇರಲಿಲ್ಲ. ಅಥರ್ವ ಶೀರ್ಷದ ಪಠಣ ಮುಗಿದ ನಂತರ ಅವರಲ್ಲಿ ಸಕಾರಾತ್ಮಕ ಇಂಧನ ನಿರ್ಮಾಣವಾಯಿತು. ಅದರ ಪ್ರಭಾವಲಯವು ೧.೮೪ ಮೀಟರ್ ಇತ್ತು.
೨ ಆ ೨. ಅಥರ್ವಶೀರ್ಷದ ಪಠಣ ಮುಗಿದ ನಂತರ ಶ್ರೀ ಗಣೇಶಮೂರ್ತಿಯ ಸಕಾರಾತ್ಮಕ ಇಂಧನದಲ್ಲಿ ಹೆಚ್ಚಳವಾಗುವುದು : ಅಥರ್ವಶೀರ್ಷ ಪಠಣ ಆರಂಭವಾಗುವ ಮೊದಲು ಶ್ರೀ ಗಣೇಶನ ಮೂರ್ತಿಯಲ್ಲಿ ಸಕಾರಾತ್ಮಕ ಇಂಧನವಿತ್ತು. ಅದರ ಪ್ರಭಾವಲಯವು ೨.೦೮ ಮೀಟರ್ ಇತ್ತು. ಅಥರ್ವಶೀರ್ಷ ಪಠಣ ಮುಗಿದ ನಂತರ ಆ ಶ್ರೀ ಗಣೇಶಮೂರ್ತಿಯ ಸಕಾರಾತ್ಮಕ ಇಂಧನದ ಪ್ರಭಾವಲಯದ ಪ್ರಮಾಣವು ೧.೭೨ ರಷ್ಟು ಹೆಚ್ಚಾಗಿ ಅದು ೩.೮೦ ಮೀಟರ್ ಆಯಿತು.
೨ ಇ. ಒಟ್ಟು ಪ್ರಭಾವಲಯದ ಸಂದರ್ಭದಲ್ಲಿ ಮಾಡಿರುವ ಅಳತೆಗಳ ನೋಂದಣಿಗಳ ವಿವೇಚನೆ
೨ ಇ ೧. ಅಥರ್ವಶೀರ್ಷ ಪಠಣ ಮುಗಿದ ನಂತರ ಉಪಾಸಕರ ಮತ್ತು ಶ್ರೀ ಗಣೇಶಮೂರ್ತಿಯ ಒಟ್ಟು ಪ್ರಭಾವಲಯದಲ್ಲಿ ಹೆಚ್ಚಳವಾಗುವುದು : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸುಮಾರು ೧ ಮೀಟರನಷ್ಟು ಇರುತ್ತದೆ. ಅಥರ್ವಶೀರ್ಷದ ಪಠಣ ಮುಗಿದ ನಂತರ ಉಪಾಸಕರ ಮತ್ತು ಶ್ರೀ ಗಣೇಶಮೂರ್ತಿಯ ಒಟ್ಟು ಪ್ರಭಾವಲಯದಲ್ಲಿ ಆದ ಹೆಚ್ಚಳವನ್ನು ಮುಂದೆ ಕೊಡಲಾಗಿದೆ.
ಈ ಮೇಲಿನ ಎಲ್ಲ ಅಂಶಗಳ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩ ರಲ್ಲಿ ಕೊಡಲಾಗಿದೆ.
೩. ಪ್ರಭಾವಲಯಗಳ ಅಳತೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಸ್ತೋತ್ರ : ‘ಸ್ತೂಯತೆ ಅನೇನ ಇತಿ ಅಂದರೆ ಯಾವುದರಿಂದ ದೇವತೆಯನ್ನು ಸ್ತುತಿಸಲಾಗುತ್ತದೆಯೋ, ಅದುವೇ ಸ್ತೋತ್ರ; ಹೀಗೆ ಸ್ತೋತ್ರದ ವ್ಯಾಖ್ಯೆಯಿದೆ. ಸ್ತೋತ್ರದಲ್ಲಿ ದೇವತೆಯ ಸ್ತುತಿ ಇರುತ್ತದೆ ಮತ್ತು ಅದರ ಜೊತೆಗೆ ಸ್ತೋತ್ರವನ್ನು ಪಠಿಸುವವನ ಸುತ್ತಲೂ ಸಂರಕ್ಷಣಾ ಕವಚನ್ನು ನಿರ್ಮಿಸುವ ಶಕ್ತಿಯೂ ಇರುತ್ತದೆ. ಈ ಸ್ತೋತ್ರಪಠಣವು ‘ತದರ್ಥಭಾವಪೂರ್ವಕ = ತತ್ + ಅರ್ಥ + ಭಾವಪೂರ್ವಕ, ಅಂದರೆ ಅದರ (ಸ್ತೋತ್ರದ) ಅರ್ಥವನ್ನು ತಿಳಿದುಕೊಂಡು ಭಾವದೊಂದಿಗೆ ಪಠಿಸಬೇಕು. ಕೇವಲ ಯಂತ್ರದಂತೆ ಪ್ರಾಣಹೀನ ಉಚ್ಚಾರವನ್ನು ಮಾಡಬಾರದು. ಉಚ್ಚಾರವನ್ನು ಹೇಗೆ ಮಾಡಬೇಕೆಂದರೆ, ಸ್ತೋತ್ರವನ್ನು ಪಠಿಸುವವನು ಭಗವದ್ಭಾವಯುಕ್ತ ಮತ್ತು ಭಗವಚ್ಛಕ್ತಿಯುಕ್ತನಾಗಬೇಕು. ಸ್ತೋತ್ರದಲ್ಲಿ ಫಲಶ್ರುತಿಯನ್ನು ನೀಡಲಾಗಿರುತ್ತದೆ. ಆತ್ಮಜ್ಞಾನಸಂಪನ್ನ ಋಷಿಮುನಿಗಳಿಗೆ ಈ ವಾಙ್ಮಯವು ಪರಾವಾಣಿಯಲ್ಲಿ ಸ್ಪುರಿಸಿದ್ದರಿಂದ ಮತ್ತು ಫಲಶ್ರುತಿಯ ಹಿಂದೆ ಅವರ ಸಂಕಲ್ಪ ಇರುವುದರಿಂದ ಪಠಣ ಮಾಡುವವರಿಗೆ ಫಲಶ್ರುತಿಯಿಂದ ಆ ಫಲವು ಸಿಗುತ್ತದೆ.
೩ ಆ. ‘ಅಥರ್ವಶೀರ್ಷ ಸ್ತೋತ್ರ : ‘ಥರ್ವ ಎಂದರೆ ಉಷ್ಣ (ಬಿಸಿ), ‘ಅಥರ್ವ ಎಂದರೆ ಶಾಂತಿ ಮತ್ತು ‘ಶೀರ್ಷ ಎಂದರೆ ಮಸ್ತಕ. ಯಾವುದರ ಪುರಶ್ಚರಣದಿಂದ ಮಸ್ತಕಕ್ಕೆ ಶಾಂತಿಯು ಪ್ರಾಪ್ತವಾಗುತ್ತದೆಯೋ, ಅದು ಅಥರ್ವಶೀರ್ಷ. ಭಗವಾನ ಜೈಮಿನಿ ಋಷಿಗಳ ಸಾಮವೇದಿಯ ಶಾಖೆಯಲ್ಲಿನ ಶಿಷ್ಯರಾದ ಮುದ್ಗಲ ಋಷಿಗಳು ‘ಸಾಮಮುದ್ಗಲ ಗಣೇಶ ಸೂಕ್ತವನ್ನು ರಚಿಸಿದರು. ಅನಂತರ ಅವರ ಶಿಷ್ಯರಾದ ಗಣಕ ಋಷಿಗಳು ‘ಗಣಪತಿ ಅಥರ್ವಶೀರ್ಷವನ್ನು ರಚಿಸಿದರು. ಹೆಚ್ಚಿನ ಸ್ತೋತ್ರಗಳಲ್ಲಿ ದೇವತೆಯ ಧ್ಯಾನ, ಆಂದರೆ ಮೂರ್ತಿಯ ವರ್ಣನೆ ಮೊದಲಿರುತ್ತದೆ ಮತ್ತು ಸ್ತುತಿ ನಂತರ ಇರುತ್ತದೆ. ಆದರೆ ಅಥರ್ವಶೀರ್ಷದಲ್ಲಿ ಸ್ತುತಿ ಮೊದಲು ಮತ್ತು ಧ್ಯಾನ ನಂತರ ಇದೆ. (ಆಧಾರ : ಸನಾತನದ ಕಿರುಗ್ರಂಥ – ‘ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೩ ಇ ಅಥರ್ವಶೀರ್ಷದ ಪಠಣದಿಂದ ನಿರ್ಮಾಣ ವಾಗುವ ಚೈತನ್ಯದಿಂದ ಉಪಾಸಕರಲ್ಲಿನ ನಕಾರಾತ್ಮಕ ಇಂಧನವು ನಾಶವಾಗುವುದು, ಅವರಲ್ಲಿ ತುಂಬಾ ಸಕಾರಾತ್ಮಕ ಇಂಧನ ನಿರ್ಮಾಣವಾಗುವುದು ಮತ್ತು ಅವರ ಒಟ್ಟು ಪ್ರಭಾವಲಯ ಹೆಚ್ಚಾಗುವುದು, ಈ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗುವುದು : ಅಂಶ ‘೩ ಅ ಮತ್ತು ‘೩ ಆ ಇವುಗಳಿಂದ ‘ಅಥರ್ವಶೀರ್ಷ ಸ್ತೋತ್ರ ಪಠಣದಿಂದ ಚೈತನ್ಯ ನಿರ್ಮಾಣವಾಗುತ್ತದೆ, ಎಂಬುದು ತಿಳಿಯುತ್ತದೆ. ಉಪಾಸಕರಲ್ಲಿ ಆರಂಭದಲ್ಲಿ ನಕಾರಾತ್ಮಕ ಇಂಧನವಿತ್ತು ಮತ್ತು ಸಕಾರಾತ್ಮಕ ಇಂಧನವು ಸ್ವಲ್ಪವೂ ಇರಲಿಲ್ಲ. ಅಥರ್ವಶೀರ್ಷ ಪಠಣದಿಂದ ನಿರ್ಮಾಣವಾದ ಚೈತನ್ಯದಿಂದ ಉಪಾಸಕರಲ್ಲಿನ ನಕಾರಾತ್ಮಕ ಇಂಧನವು ಇಲ್ಲವಾಯಿತು ಮತ್ತು ಅವರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಇಂಧನ ನಿರ್ಮಾಣವಾಯಿತು. ಇದರಿಂದ ಅವರ ಒಟ್ಟು ಪ್ರಭಾವಲಯವೂ ಹೆಚ್ಚಾಯಿತು.
೩ ಈ. ಅಥರ್ವಶೀರ್ಷ ಪಠಣದ ನಂತರ ಶ್ರೀ ಗಣೇಶ ಮೂರ್ತಿಯ ಸಕಾರಾತ್ಮಕ ಇಂಧನ ಮತ್ತು ಒಟ್ಟು ಪ್ರಭಾವಲಯದಲ್ಲಿ ಹೆಚ್ಚಳವಾಗುವುದು : ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಾಗಿರುತ್ತವೆ, ಇದು ಅಧ್ಯಾತ್ಮದಲ್ಲಿನ ಒಂದು ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕನುಸಾರ ಎಲ್ಲಿ ಶ್ರೀ ಗಣೇಶನ ರೂಪವಿದೆಯೋ, ಅಲ್ಲಿ ಶ್ರೀ ಗಣೇಶನ ಸ್ಪಂದನಗಳು, ಅಂದರೆ ಗಣೇಶತತ್ತ್ವವು ಆಕರ್ಷಿತವಾಗುವುದು ಸ್ವಾಭಾವಿಕವಾಗಿದೆ ಇದರಿಂದಾಗಿ ಶ್ರೀ ಗಣೇಶ ಮೂರ್ತಿಯಲ್ಲಿ ಆರಂಭದಲ್ಲಿಯೇ ಸಕಾರಾತ್ಮಕ ಇಂಧನವು ಕಂಡುಬಂದಿತು. ಅಥರ್ವ ಶೀರ್ಷದಲ್ಲಿ ಶ್ರೀಗಣೇಶನ ಸ್ತುತಿ ಇರುವುದರಿಂದ ಪಠಣದ ಸ್ಥಾನದ ವಾತಾವರಣದಲ್ಲಿ ಶ್ರೀ ಗಣೇಶನ ಸ್ಪಂದನಗಳು ಆಕರ್ಷಿಸಲ್ಪಟ್ಟವು. ಇದರ ಪರಿಣಾಮವೆಂದು ಅಥರ್ವಶೀರ್ಷದ ಪಠಣ ಮುಗಿದ ನಂತರ ಮಾಡಿದ ಫಲ ಶ್ರುತಿಯಿಂದ ಅಳತೆಯಲ್ಲಿ ಶ್ರೀ ಗಣೇಶ ಮೂರ್ತಿಯ ಸಕಾರಾತ್ಮಕ ಇಂಧನದಲ್ಲಿ ಮತ್ತು ಒಟ್ಟು ಪ್ರಭಾವಲಯದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿತು. ಸ್ವಲ್ಪದರಲ್ಲಿ ಹೇಳುವುದಾದರೆ, ನಮ್ಮ ಶ್ರೇಷ್ಠ ಋಷಿ ಮುನಿಗಳು ಮನುಕುಲದ ಕಲ್ಯಾಣಕ್ಕಾಗಿ ದೇವತೆಗಳ ಸ್ತೋತ್ರಗಳನ್ನು ರಚಿಸಿದರು. ‘ಈ ಸ್ತೋತ್ರಗಳ ಹಿಂದಿನ ಅವರಲ್ಲಿನ ಸಂಕಲ್ಪ ಮತ್ತು ಫಲಶ್ರುತಿಯಿಂದಾಗಿ ಆ ಸ್ತೋತ್ರಗಳನ್ನು ಭಾವಪೂರ್ಣವಾಗಿ ಪಠಣ ಮಾಡಿದರೆ ಮಾನವರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾ ಯಿತು. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೯.೯.೨೦೧೮)
ವಿ-ಅಂಚೆ : [email protected]