೫ ಜುಲೈ ೨೦೨೦ ರಂದು ಗುರುಪೂರ್ಣಿಮೆ ಇತ್ತು. ಈ ನಿಮಿತ್ತದಿಂದ ಸಾಧಕರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ’, ಎಂಬ ವಿಷಯದಲ್ಲಿ ಈ ಹಿಂದೆ ಪರಾತ್ಪರ ಗುರು ಡಾಕ್ಟರರ ಸಾಧಕರೊಂದಿಗೆ ನಡೆಸಿದ ಮಾರ್ಗದರ್ಶನಾತ್ಮಕ ಸಂವಾದದ ಧ್ವನಿಚಿತ್ರ ಮುದ್ರಿಕೆಯನ್ನು ತೋರಿಸಲಾಯಿತು. ಆ ಸಮಯದಲ್ಲಿ ಸಾಧಕರು ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಪರಾತ್ಪರ ಗುರುದೇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡುತ್ತಿದ್ದೇವೆ .
ಗುರುಕೃಪಾಯೋಗಾನುಸಾರ ಸಾಧನೆಯ ಮಹತ್ವ !
ಸತತವಾಗಿ ಜವಾಬ್ದಾರ ಸಾಧಕರಲ್ಲಿ ವಿಚಾರಿಸಿ ಸಂದೇಹಗಳನ್ನು ನಿವಾರಿಸಿ ಸಾಧನೆಯ ಮುಂದಿನ ಮಾರ್ಗವನ್ನು ಅವಲಂಬಿಸಬೇಕು !
ಪರಾತ್ಪರ ಗುರು ಡಾ. ಆಠವಲೆ : ನೀವು ಅಮೇರಿಕಾದಿಂದ ಭಾರತಕ್ಕೆ ಬಂದ ನಂತರ ನಿಮಗೆ ಏನು ಅರಿವಾಯಿತು ? ಶ್ರೀ ಸಾಗರ ಜೋಶಿ : ಅಮೇರಿಕಾ ಮತ್ತು ಭಾರತ ಇವುಗಳಲ್ಲಿ ಬಹಳ ವ್ಯತ್ಯಾಸವಿದೆ. ನಾನು ಅಮೇರಿಕಾದಲ್ಲಿರುವಾಗ ಸಾಧನೆ ಮಾಡಬೇಕು ಅಥವಾ ಏನಾದರೂ ಒಳ್ಳೆಯದನ್ನು ಮಾಡಬೇಕೆನ್ನುವ ವಿಚಾರಗಳು ಮನಸ್ಸಿನಲ್ಲಿ ಬರುತ್ತಿದ್ದವು. ಆದರೆ ನಾನು ಹಾಗೆ ಮಾಡದೇ ಉದ್ಯಾನವನ ಅಥವಾ ಬೇರೆ ಸ್ಥಳಗಳಿಗೆ ಹೋಗುವಂತಹ ಭೌತಿಕ ಕೃತಿಗಳಲ್ಲಿ ಸುಖ ಪಡೆಯುತ್ತಿದ್ದೆನು. ಭಾರತಕ್ಕೆ ಬಂದ ಬಳಿಕ ನನ್ನ ನಾಮಜಪ ತನ್ನಿಂದ ತಾನೇ ಆಗ ತೊಡಗಿತು. ಇದನ್ನೇ ಒಂದು ದೊಡ್ಡ ವ್ಯತ್ಯಾಸವೆನ್ನಬಹುದು. ಇಲ್ಲಿಗೆ ಬಂದ ನಂತರ ದೇವರು ನನ್ನನ್ನು ಪುನಃ ಆಧ್ಯಾತ್ಮಿಕ ಜೀವನದೆಡೆಗೆ ತಂದಿದ್ದಾನೆ ಎಂದೆನಿಸುತ್ತದೆ. ಆಶ್ರಮಕ್ಕೆ ಬಂದ ನಂತರ ನನ್ನ ಮನಸ್ಸಿನಲ್ಲಿದ್ದ ಎಲ್ಲ ಸಂದೇಹಗಳು ದೂರವಾದವು. ಇಲ್ಲಿ ಮಾರ್ಗದರ್ಶನ ಮಾಡುವ ಸಾಧಕರಿಂದ ಒಳ್ಳೆಯ ಮಾರ್ಗದರ್ಶನ ಸಿಕ್ಕಿತು ಮತ್ತು ನನ್ನ ಸಂದೇಹಗಳ ನಿವಾರಣೆಯಾಯಿತು.
ಪರಾತ್ಪರ ಗುರು ಡಾ. ಆಠವಲೆ : ಸುಖವು ಕನಿಷ್ಠ ಸ್ತರದ್ದಾಗಿರುತ್ತದೆ ಮತ್ತು ಅದು ಭೌತಿಕ ಅಥವಾ ಸಾಂಸಾರಿಕ ಸುಖಕ್ಕೆ ಸಂಬಂಧಿಸಿರುತ್ತದೆ. ಸಾಧನೆಯಿಂದ ಅನುಭವಿಸಲು ಸಿಗುವ ಆನಂದವು ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿರುತ್ತದೆ. ಯಾವಾಗ ನಾವು ಆನಂದಾವಸ್ಥೆಯಲ್ಲಿರುತ್ತೇವೆಯೋ, ಆಗ ನಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆಗಳೂ ಇರುವುದಿಲ್ಲ. ಆನಂದಾವಸ್ಥೆಯೆಂದರೆ ಸತ್-ಚಿತ್-ಆನಂದ. ಈ ಅವಸ್ಥೆಯಲ್ಲಿರುವಾಗ ನಮಗೆ ಒಳಗಿನಿಂದಲೇ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ದೇವರ ಅನುಸಂಧಾನದಲ್ಲಿರುವುದರಿಂದ ನಾವು ಆನಂದಾವಸ್ಥೆಯಲ್ಲಿರುತ್ತೇವೆ. ಈಶ್ವರನು ಸರ್ವಜ್ಞನಾಗಿದ್ದಾನೆ. ನಾವು ಅವನ ಅನುಸಂಧಾನದಲ್ಲಿ ಇರುವುದರಿಂದ ನಮಗೆ ಯಾವುದೇ ಗ್ರಂಥ ಅಥವಾ ಜಾಲತಾಣಗಳನ್ನು ನೋಡುವ ಆವಶ್ಯಕತೆ ಇರುವುದಿಲ್ಲ. ನಮಗೆ ಅದು ಒಳಗಿನಿಂದಲೇ ಸಿಗುತ್ತದೆ.
ಶ್ರೀ. ಸಾಗರ ಜೋಶಿ : ಮೊದಲು ನಾನು ಪ.ಪೂ. ವರದಾನಂದ ಭಾರತಿ (ಪೂರ್ವಾಶ್ರಮದ ಪ್ರಾ. ಅನಂತ ದಾಮೋದರ ಆಠವಲೆ) ಇವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿದ್ದೆ. ಎಸ್.ಎಸ್.ಆರ್.ಎಫ್.ನ ಸಂಪರ್ಕದಲ್ಲಿ ಬಂದ ನಂತರ ‘ನಿರ್ದಿಷ್ಟವಾಗಿ ಯಾವ ಸಾಧನೆಯನ್ನು ಮಾಡಬೇಕು ?, ಎನ್ನುವ ಚಿಂತೆಯಲ್ಲಿದ್ದೆನು. ನಿಮ್ಮನ್ನು ನೋಡಿದಾಗ ನನಗೆ ಅವರ (ಪ.ಪೂ. ವರದಾನಂದ ಭಾರತಿ ಇವರ) ನೆನಪಾಯಿತು. ನಿಮ್ಮಲ್ಲಿ ನನಗೆ ಅವರು ಕಾಣಿಸುತ್ತಾರೆ. ಒಮ್ಮೆ ನಾನು ಪೂ. ಕಾಳೆ ಅಜ್ಜಿ (ಸನಾತನ ಸಂಸ್ಥೆಯ ೫೮ ನೇ ಸಂತರಾದ ಪೂ. ವಿಜಯಲಕ್ಷ್ಮಿ ಕಾಳೆ) ಇವರಿಗೆ ಸನಾತನ ಸಂಸ್ಥೆ ಮತ್ತು ಎಸ್.ಎಸ್.ಆರ್.ಎಫ್.ವು ಹೇಳುವ ಸಾಧನೆಯ ವಿಷಯದಲ್ಲಿ ಕೇಳಿದ್ದೆನು. ಆಗ ಅವರು ‘ಗುರುತತ್ತ್ವ ಹೇಗೆ ಒಂದೇ ಆಗಿರುತ್ತದೆ ?, ಎಂದು ನನಗೆ ಹೇಳಿದ್ದರು. ಅದರ ಬಳಿಕ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹ ಉಳಿಯಲಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಗುರುತತ್ತ್ವವು ಆನಂದಾವಸ್ಥೆಯಲ್ಲಿರುತ್ತದೆ. ಅದು ಸರ್ವಜ್ಞ ಮತ್ತು ಸರ್ವವ್ಯಾಪಿಯಾಗಿರುತ್ತದೆ. ಸತ್-ಚಿತ್-ಆನಂದ ಇದು ಅದರ ಗುಣಧರ್ಮವಾಗಿರುತ್ತದೆ. ಆದುದರಿಂದ ನಮ್ಮ ಸ್ಥೂಲ ಕಣ್ಣುಗಳಿಗೆ ಗುರುಗಳು ಬೇರೆ, ಬೇರೆ ವ್ಯಕ್ತಿಗಳ ರೂಪದಲ್ಲಿ ಕಾಣುತ್ತಿದ್ದರೂ, ಪ್ರತ್ಯಕ್ಷದಲ್ಲಿ ಅವರು ತತ್ತ್ವ ರೂಪದಲ್ಲಿ ಒಬ್ಬರೇ ಆಗಿರುತ್ತಾರೆ.
ಪರಾತ್ಪರ ಗುರು ಡಾ. ಆಠವಲೆ : ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಪ್ರಶ್ನೆಯನ್ನು ಕೇಳುತ್ತಾ ಕುಳಿತರೆತ್ತಿದ್ದರೆ, ದೇವರನ್ನು ಅರಿತುಕೊಳ್ಳಲು ಅನೇಕ ಜನ್ಮಗಳು ಬೇಕಾಗುವವು. ಹಾಗೆಯೇ ಪ್ರತಿಯೊಂದು ಪ್ರಶ್ನೆಗೆ ಒಂದು ಮರು ಪ್ರಶ್ನೆ ಇದ್ದೇ ಇರುತ್ತದೆ. ಆದುದರಿಂದ ಆ ಪ್ರಶ್ನೆಗಳಿಗೆ ಕೊನೆಯಿಲ್ಲ. ಅಧ್ಯಾತ್ಮದಲ್ಲಿ ‘ಏಕೆ ಮತ್ತು ಹೇಗೆ ? ಇದರ ಆಚೆಗೆ ಹೋಗಿ ಹೇಳಿರುವ ಸಾಧನೆಯನ್ನು ಮಾಡಬೇಕಾಗುತ್ತದೆ.
ಸಾಧನೆಯ ವಿಷಯದಲ್ಲಿ ನಮಗೇನು ತಿಳಿದಿದೆಯೋ, ಅದನ್ನು ಇತರರಿಗೆ ಹೇಳಿ ಅವರಿಗೆ ಸಹಾಯ ಮಾಡುವುದು ಸಮಷ್ಟಿ ಸಾಧನೆಯೇ ಆಗಿದೆ !
ಸಾಧಕ : ಸೇವೆಯನ್ನು ಮಾಡುವಾಗ ನಮ್ಮ ಸಂಪರ್ಕಕ್ಕೆ ಬರುವ ಹೊಸ ಸಾಧಕರು ನಮಗೆ ಸಾಧನೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಉತ್ತರಗಳನ್ನು ಕೊಡುವಾಗ ‘ಈಶ್ವರನು ನನಗೆ ಜ್ಞಾನವನ್ನು ನೀಡುತ್ತಿದ್ದಾನೆ, ಎಂದು ಅನಿಸುತ್ತದೆ. ನಾನು ಅವರಿಗೆ, “ದೈನಿಕ ‘ಸನಾತನ ಪ್ರಭಾತದ ಮಾಧ್ಯಮದಿಂದ ತಾವು (ಪರಾತ್ಪರ ಗುರು ಡಾಕ್ಟರರು) ಯಾವ ಜ್ಞಾನವನ್ನು ನೀಡುತ್ತಿರುವರೋ, ಅದನ್ನೇ ಹೇಳುತ್ತಿದ್ದೇನೆ, ಎಂದು ಹೇಳುತ್ತೇನೆ. ಅವರಿಗೆ ಹೇಳಿದ ನಂತರ ನನ್ನ ಮನಸ್ಸಿನಲ್ಲಿ, ‘ನನಗೇ ಏನೂ ಬರುವುದಿಲ್ಲ, ಇತರರಿಗೆ ಹೇಳಲು ನನ್ನಲ್ಲಿ ಏನೂ ಯೋಗ್ಯತೆ ಇಲ್ಲ, ಆದರೂ ನಾನು ಇತರರಿಗೆ ಹೇಗೆ ಹೇಳಲಿ ? ಎಂದೆನಿಸುತ್ತದೆ, ಇದು ಯೋಗ್ಯವೇ ಅಥವಾ ಅಯೋಗ್ಯವೇ ?
ಪರಾತ್ಪರ ಗುರು ಡಾ. ಆಠವಲೆ : ‘ನಾನು ಹೇಳಿದೆ, ಎಂಬ ಅಹಂ ನಿರ್ಮಾಣವಾದರೆ, ಹಾಗೆನಿಸುವುದು ಯೋಗ್ಯವಾಗಿದೆ; ಆದರೆ ‘ಅವರಿಗೆ ಸಾಧನೆಯನ್ನು ತಿಳಿಸಿ ಹೇಳಿದರೆ, ‘ರಾಷ್ಟ್ರ ಮತ್ತು ಧರ್ಮದ ಬಗ್ಗೆ ಯಾವ ರೀತಿ ದೃಷ್ಟಿಕೋನ ಇರಬೇಕು ?, ಎಂಬುದನ್ನು ಹೇಳಿದರೆ, ಅದು ಸೇವೆಯಾಯಿತು. ಅದರ ಬಗ್ಗೆ ವಿಚಾರ ಮಾಡಬಾರದು.
ಸಾಧಕ : ‘ನಾನು ಸ್ವತಃ ಕೃತಿಯಲ್ಲಿ ತಂದು ಅವರಿಗೆ ಹಾಗೆ ಹೇಳುವುದು ಯೋಗ್ಯವಾಗಿದೆ; ಆದರೆ ನಾನು ಸ್ವತಃ ಕೃತಿಯನ್ನು ಮಾಡದಿರುವಾಗ ಇತರರಿಗೆ ಹಾಗೆ ಹೇಳುವುದು ಯೋಗ್ಯವಾಗಿದೆಯೇ ?
ಪರಾತ್ಪರ ಗುರು ಡಾ. ಆಠವಲೆ : ನಾವು ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡುತ್ತೇವೆ. ಯಾರಾದರೂ ಜ್ಞಾನಮಾರ್ಗದ ವಿಷಯದ ಪ್ರಶ್ನೆಗಳನ್ನು ಕೇಳಿದರೂ, ನಾವು ಅವರ ಉನ್ನತಿಗಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಆವಶ್ಯಕವಾಗಿದೆ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ನಾವು ಅವೆಲ್ಲವುಗಳನ್ನೂ ಹೇಗೆ ಕೃತಿಯಲ್ಲಿ ತರಲು ಸಾಧ್ಯವಿದೆ ? ನಮ್ಮ ಉದ್ದೇಶ ಒಳ್ಳೆಯದಾಗಿದೆ. ಇತರರಿಗೆ ಹೇಳುವುದರಿಂದ ನಮ್ಮಲ್ಲಿ ಅಹಂ ನಿರ್ಮಾಣವಾಗದಿದ್ದರೆ, ‘ಹೇಳುವುದು ಸಾಧನೆಯಾಗುತ್ತದೆ. ‘ನಾನು ಮಾಡುತ್ತಿರುವೆನೋ ಅಥವಾ ಇಲ್ಲವೋ ?, ಎಂಬ ವಿಚಾರ ಮಾಡುವುದು ಬೇಡ.
ಸಾಧಕ : ಸಾಧಕರಿಗೆ ಹೇಳಿದ ನಂತರ ನಾನು ಅವರಿಗೆ ಏನು ಹೇಳಿದೆನೋ, ಅದೆಲ್ಲವೂ ತಕ್ಷಣ ನನ್ನ ಮನಸ್ಸಿನಿಂದ ಹೊರಟು ಹೋಗುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ತುಂಬಾ ಚೆನ್ನಾಗಿದೆ ! ನಮ್ಮ ಸೇವೆ ಮತ್ತು ನಾಮಜಪ ಪುನಃ ಆರಂಭ ! ನಮಗೆ ವರ್ತಮಾನ ಕಾಲದಲ್ಲಿ ಇರಬೇಕಾಗಿರುತ್ತದೆ. ಆ ಕ್ಷಣವು ಹೊರಟು ಹೋಯಿತು. ಈಗ ಆ ಬಗ್ಗೆ ಏಕೆ ವಿಚಾರ ಮಾಡಬೇಕು ? ‘ಇತರರಿಗೆ ಹೇಳುವುದು, ಇದು ಸಹ ನಿಮ್ಮ ಸಾಧನೆಯೇ ಆಯಿತು.
ಸಾಧಕ : ನನ್ನೊಂದಿಗೆ ಸೇವೆಯನ್ನು ಮಾಡುವ ನನ್ನ ಪತ್ನಿಗೆ ‘ಇವರು ಅವರಿಗೇಕೆ ಹೇಳುತ್ತಿದ್ದಾರೆ ? ಇವರು ಸ್ವತಃ ಯಾವುದೇ ಕೃತಿಯನ್ನು ಮಾಡುವುದಿಲ್ಲ, ಹೀಗಿರುವಾಗ ಇತರರಿಗೆ ಏಕೆ ಹೇಳುತ್ತಿದ್ದಾರೆ ? ಎಂದು ಅನಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಹೀಗಿರುವುದಿಲ್ಲ. ಆಧುನಿಕ ವೈದ್ಯರು ತಮಗೆ ಕ್ಷಯರೋಗವಾಗದಿದ್ದರೂ, ಇತರರಿಗೆ ಕ್ಷಯ ರೋಗದ ಬಗ್ಗೆ ಏಕೆ ಹೇಳುತ್ತಾರೆ ಮತ್ತು ಔಷಧಿಗಳನ್ನು ಏಕೆ ಕೊಡುತ್ತಾರೆ ? ‘ನಮಗೆ ತಿಳಿದಿದ್ದನ್ನು, ಇತರರಿಗೆ ಹೇಳಿ ಅವರಿಗೆ ಸಹಾಯ ಮಾಡುವುದು ನಮ್ಮ ಸಾಧನೆಯಾಗಿದೆ.
‘ಈಶ್ವರಪ್ರಾಪ್ತಿಯ ಉದ್ದೇಶದಿಂದ ಪ್ರಯತ್ನ (ಸಾಧನೆಯನ್ನು) ಮಾಡುವುದು ಪೂರ್ಣ ಸಮಯದ ಕಾರ್ಯವಾಗಿದೆ !
ಪರಾತ್ಪರ ಗುರು ಡಾ. ಆಠವಲೆ : ‘ಭಗವಂತನ ಪ್ರಾಪ್ತಿಯನ್ನು ಮಾಡಿಕೊಳ್ಳುವುದು, ಪೂರ್ಣವೇಳೆ ಕಾರ್ಯವಾಗಿದೆ. ಅದು ಅರ್ಧವೇಳೆ ಮಾಡುವ ಕಾರ್ಯವಲ್ಲ; ಆದರೆ ಪೂರ್ಣವೇಳೆ ಮಾಡುವುದು ಕಠಿಣವಾಗುತ್ತದೆ. ‘ನನ್ನದೇನಾಗುವುದು ?, ಎಂದು ಮನಸ್ಸಿನ ಮೇಲೆ ಒತ್ತಡ ಬರುತ್ತದೆ. ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವಾಗುವವರೆಗೆ ‘ಭಗವಂತನು ಎಲ್ಲವನ್ನೂ ಮಾಡುತ್ತಾನೆ ಎಂಬ ವಿಶ್ವಾಸವು ನಮ್ಮಲ್ಲಿ ಇರುವುದಿಲ್ಲ. ಮಾಯೆ ಮತ್ತು ಈಶ್ವರ ಈ ಎರಡೂ ಬದಿಗಳು ನಮ್ಮನ್ನು ಎಳೆಯುತ್ತಿರುತ್ತವೆ; ಆದರೆ ಮುಂದೆ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವಾದಾಗ, ಮನೋಲಯವಾಗ ತೊಡಗುತ್ತದೆ. ಆಗ ಕೇವಲ ‘ಈಶ್ವರಪ್ರಾಪ್ತಿ ಧ್ಯೇಯವೊಂದೇ ಉಳಿಯುತ್ತದೆ. ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ನಂತರ ‘ಸಾಧನೆಯಿಂದ ಆನಂದ ಸಿಗುತ್ತದೆ, ಎಂಬುದರ ಅನುಭೂತಿ ಬರುವುದು ಮತ್ತು ಆಗ ‘ಮಾಯೆಯಲ್ಲಿ ಹಿಂದಿರುಗಿ ಹೋಗಬೇಕು, ಎಂದು ಅನಿಸುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಕೊನೆಗೆ ತನು-ಮನ-ಧನ ಎಲ್ಲವನ್ನೂ (ಭಗವಂತನಿಗೆ) ಅರ್ಪಿಸಬೇಕಾಗಿರುತ್ತದೆ. ಇಂದು ಎಷ್ಟು ಸಾಧ್ಯವೋ ಅಷ್ಟು ನಾವು ಅರ್ಪಿಸುತ್ತೇವೆ. ನಂತರ ನೌಕರಿ, ವ್ಯವಸಾಯ ಇತ್ಯಾದಿ ಇವೆಲ್ಲವುಗಳ ಬೇಸರ ಬರುತ್ತದೆ (ಬೇಡವೆನಿಸುತ್ತದೆ). ‘ಏನಿದು ಮಾಯೆಯಲ್ಲಿನ ಜೀವನ ?, ಎಂದು ನಮಗೆ ಅನಿಸತೊಡಗುತ್ತದೆ. ನಮ್ಮಲ್ಲಿ, ಸನಾತನ ಸಂಸ್ಥೆಯಲ್ಲಿ ಎಷ್ಟು ಜನರು ಪೂರ್ಣವೇಳೆ ಸಾಧಕರಿದ್ದಾರೆ, ನೋಡಿದಿರಲ್ಲ ? ಆಧುನಿಕ ವೈದ್ಯರು, ವಕೀಲರು, ಲೇಖಪಾಲರು, ಅಭಿಯಂತರು ಮತ್ತು ಇಲೆಕ್ಟ್ರಿಕಲ್ (ವಿದ್ಯುತ್‌ಪ್ರವಾಹದಿಂದ ನಡೆಸುವ ಉಪಕರಣಗಳಿಗೆ ಸಂಬಂಧಿತ) ಸೇವೆಯನ್ನು ಮಾಡುವವರಿದ್ದಾರೆ. ‘ಸಾಧನೆಯಿಂದ ಆನಂದ ಸಿಗುತ್ತದೆ, ಎಂಬುದರ ಬಗ್ಗೆ ಒಂದು ಬಾರಿ ಅನುಭೂತಿ ಪಡೆದರೆ, ಯಾರೂ ಪುನಃ ಮಾಯೆಯ ಜೀವನಕ್ಕೆ ವಾಪಾಸು ಹೋಗುವುದಿಲ್ಲ. ಆದರೆ ಇದು ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ನಂತರ ಆಗತೊಡಗುತ್ತದೆ. ಆಗ ಈಶ್ವರನ ಮೇಲೆ ಶ್ರದ್ಧೆ ಇರುತ್ತದೆ.
ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿರುವುದರಿಂದ ಬುದ್ಧಿಯಿಂದ ಅಧ್ಯಾತ್ಮದ ತಾತ್ತ್ವಿಕ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸುವುದೆಂದರೆ ಜೀವನವನ್ನು ವ್ಯರ್ಥಗೊಳಿಸುವುದು !
ಪರಾತ್ಪರ ಗುರು ಡಾ. ಆಠವಲೆ : ಯಾವಾಗ ಸಾಧನೆಯನ್ನು ಮಾಡುತ್ತಿರೋ, ಆಗ ಒಂದರ ನಂತರ ಒಂದರಂತೆ ಸ್ವಭಾವದೋಷಗಳು ಕಡಿಮೆಯಾಗುತ್ತವೆ. ಆಗ ಒಂದು ಚಕ್ರದ, ನಂತರ ಇನ್ನೊಂದು ಚಕ್ರ ಜಾಗೃತವಾಗುವ ಅನುಭೂತಿಯು ಬರುತ್ತದೆ. ಅಧ್ಯಾತ್ಮವು ತಾತ್ತ್ವಿಕ ಶಾಸ್ತ್ರವಾಗಿಲ್ಲ, ಅದು ಕೃತಿಯಲ್ಲಿ ತರುವ ಶಾಸ್ತ್ರವಾಗಿದೆ ಮತ್ತು ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಮನಸ್ಸಿನಲ್ಲಿ ಅನಂತ ಪ್ರಶ್ನೆಗಳು ಬರುತ್ತಿರುತ್ತವೆ. ಬುದ್ಧಿಯ ಸ್ತರದಲ್ಲಿ ಪ್ರಶ್ನೋತ್ತರಗಳ ನಂತರ ಪುನಃ ಪ್ರಶ್ನೋತ್ತರ, ಹೀಗೆ ನಾವು ಬುದ್ದಿಯ ಸ್ತರದಲ್ಲಿದ್ದರೆ, ಆಧ್ಯಾತ್ಮಿಕ ಉನ್ನತಿ ಎಂದಿಗೂ ಆಗುವುದಿಲ್ಲ. ಯಾವುದನ್ನು ಕಲಿತಿದ್ದೇವೆಯೋ, ಅದನ್ನು ಕೃತಿಯಲ್ಲಿ ತರಬೇಕು.