ಸನಾತನ-ನಿರ್ಮಿತ ಸರ್ವಾಂಗಸ್ಪರ್ಶಿ ಅಮೂಲ್ಯ ಆಧ್ಯಾತ್ಮಿಕ ಗ್ರಂಥಸಂಪತ್ತು ಎಲ್ಲ ಭಾರತೀಯ ಭಾಷೆಗಳಲ್ಲಿ ಪ್ರಕಾಶನವಾಗಬೇಕೆಂದು ಗ್ರಂಥರಚನೆಯ ಸೇವೆಯಲ್ಲಿ ವ್ಯಾಪಕವಾಗಿ ಪಾಲ್ಗೊಳ್ಳಿ !

ವಿವಿಧ ಭಾರತೀಯ ಭಾಷೆಗಳ ಮತ್ತು ಆಂಗ್ಲ ಭಾಷೆಯ ಜ್ಞಾನವಿರುವ ಸಾಧಕರು, ವಾಚಕರು ಮತ್ತು ಹಿತಚಿಂತಕರಿಗೆ ಆಧ್ಯಾತ್ಮಿಕ ಜ್ಞಾನದಾನದ ಕಾರ್ಯದಲ್ಲಿ ಭಾಗವಹಿಸುವ ಅಮೂಲ್ಯ ಅವಕಾಶ !

ಪರಾತ್ಪರ ಗುರು ಡಾ. ಆಠವಲೆ ಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ನವೆಂಬರ್ ೨೦೨೦ ರವರೆಗೆ ಕೇವಲ ೩೨೯ ಗ್ರಂಥ-ಕಿರುಗ್ರಂಥಗಳಷ್ಟೇ ರಚನೆಯಾಗಿದ್ದು ಇನ್ನೂ ಸುಮಾರು ೬ ಸಾವಿರಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಗ್ರಂಥಗಳ ರಚನೆಯ ಪ್ರಕ್ರಿಯೆಯು ಹೆಚ್ಚು ವೇಗದಲ್ಲಿ ಆಗಬೇಕಾದರೆ ಅನೇಕ ಜನರ ಸಹಾಯದ ಆವಶ್ಯಕತೆಯಿದೆ. ತಮ್ಮ ಆಸಕ್ತಿ ಹಾಗೂ ಕ್ಷಮತೆಗನುಸಾರ ಲೇಖನಗಳ ಸಂಕಲನ, ಸಂರಚನೆ ಮತ್ತು ವಿವಿಧ ಭಾಷೆಗಳಲ್ಲಿ ಭಾಷಾಂತರ ಮಾಡುವುದು ಇತ್ಯಾದಿ ಗ್ರಂಥ ರಚನೆಯ ಕಾರ್ಯದಲ್ಲಿ ತಾವು ಕೈಜೋಡಿಸಬಹುದು. 

೧. ಅಧ್ಯಾತ್ಮದ ವಿವಿಧ ವಿಷಯಗಳಲ್ಲಿ ಆಸಕ್ತಿ ಇರುವ ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಸಹಕರಿಸುವ ವಿವಿಧ ವಿಷಯಗಳ ಸಾವಿರಾರು ಗ್ರಂಥಗಳ ಸಂಕಲನ ಬಾಕಿಯಿದೆ

೧ ಅ. ಮುಂಬರುವ ಗ್ರಂಥಗಳ ಕೆಲವು ವಿಷಯಗಳು : ಇನ್ನೂ ಸಂಕಲನವಾಗಲು ಬಾಕಿ ಇರುವ ಗ್ರಂಥಗಳ ವಿಷಯ ಹಾಗೂ ಮುಂಬರುವ ಗ್ರಂಥಗಳ ಸಂಖ್ಯೆಯನ್ನು ಮುಂದೆ ಕೊಡಲಾಗಿದೆ. ಲೇಖನದ ಗಣಕೀಯ ಕಡತಗಳು ತಯಾರಿವೆ.

 ೨. ಗ್ರಂಥರಚನಾ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಉಪಲಬ್ಧವಿರುವ ವಿವಿಧ ಸೇವೆಗಳು

೨ ಅ. ಲೇಖನವನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು, ಪರಿಶೀಲನೆ ಮಾಡುವುದು ಮತ್ತು ಸಂಕಲನ ಮಾಡುವುದು : ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಬೆರಳಚ್ಚು ಮಾಡಿದ ನಂತರ  ‘ಎಲ್ಲ ಲೇಖನಗಳ ಬೆರಳಚ್ಚು ಮಾಡಿರುವುದು ಸರಿಯಾಗಿದೆಯೇ ?, ಎಂಬುದನ್ನು ಪರಿಶೀಲಿಸುವುದು ಮತ್ತು ಲೇಖನದ ಸಂಕಲನ ಮಾಡುವುದು.

೨ ಅ ೧. ಆವಶ್ಯಕ ಕೌಶಲ್ಯ : ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಗೊತ್ತಿರಬೇಕು. ಮರಾಠಿ, ಹಿಂದಿ, ಕನ್ನಡ ಅಥವಾ ಆಂಗ್ಲ ಭಾಷೆಗಳ ವ್ಯಾಕರಣ ಮತ್ತು ಶಬ್ದರಚನೆಯ ಜ್ಞಾನವಿರಬೇಕು.

೨ ಆ. ಲೇಖನದಲ್ಲಿ ಸಂಸ್ಕೃತ ವಚನಗಳು, ಶ್ಲೋಕ ಇತ್ಯಾದಿಗಳನ್ನು ಪರಿಶೀಲಿಸುವುದು : ಗ್ರಂಥದ ಲೇಖನದಲ್ಲಿ ಬಂದಿರುವ ಸಂಸ್ಕೃತ ಶ್ಲೋಕ, ವಚನಗಳು ಮತ್ತು ಸುಭಾಷಿತಗಳನ್ನು ಪರಿಶೀಲಿಸುವುದು; ಅವುಗಳ ಮೂಲ ಸಂದರ್ಭವನ್ನು ಬರೆಯುವುದು; ಅವುಗಳ ಅರ್ಥವನ್ನು ಬರೆಯುವುದು ಮುಂತಾದ ಸೇವೆಗಳು ಇದರಲ್ಲಿ ಸೇರಿವೆ. ಅದಕ್ಕಾಗಿ ಸಾಧಕನಿಗೆ ಸಂಸ್ಕೃತ ಭಾಷೆಯ ಅಲ್ಪಸ್ವಲ್ಪ ಜ್ಞಾನವಿರ ಬೇಕು. ಸಂಸ್ಕೃತ ಭಾಷೆಯ ಅಲ್ಪಸ್ವಲ್ಪ ಜ್ಞಾನವೂ ಇಲ್ಲದಿದ್ದರೆ ಅಷ್ಟು ಲೇಖನವನ್ನು ಬಿಟ್ಟು ಉಳಿದ ಲೇಖನವನ್ನು ಅಂತಿಮ ಮಾಡುವುದು.

೨ ಇ. ಮರಾಠಿ ಹಾಗೂ ಇತರ ಭಾಷೆಯ ಗ್ರಂಥಗಳ ಸಂಕಲನ ಮಾಡುವುದು

೨ ಇ ೧. ವಿವಿಧ ಸೇವೆಗಳು

ಅ. ಯಾವ ವಿಷಯದ ಗ್ರಂಥ ಮಾಡುವಿರೋ ಆ ವಿಷಯದ ವಿವಿಧ ವಿಷಯಗಳ ಶೀರ್ಷಿಕೆಗಳ ಮೂಲಕ ವಿಷಯದ ಅನುಕ್ರಮಣಿಕೆಯನ್ನು ತಯಾರಿಸುವುದು

ಆ. ಅನುಕ್ರಮಣಿಕೆಯಂತೆ ಲೇಖನವನ್ನು ಜೋಡಿಸಿ ಆ ಲೇಖನದ ಸಂಕಲನವನ್ನು ಪೂರ್ಣಗೊಳಿಸುವುದು

ಇ. ಒಂದು ಗ್ರಂಥದಲ್ಲಿ ಸುಮಾರು ೧೦೦ ಪುಟಗಳು (೫೦೦ ಕೆಬಿಯ) ಇರುತ್ತವೆ. ಲೇಖನದಿಂದ ಎಷ್ಟು ಪುಟಗಳ ಗ್ರಂಥವಾಗಬಲ್ಲದು, ಎಂದು ನೋಡುವುದು ಮತ್ತು ಪುಟಸಂಖ್ಯೆಯ ಅಂದಾಜು ಮಾಡಿ ಗ್ರಂಥವನ್ನು ೨, ೩ ಭಾಗಗಳಲ್ಲಿ ವಿಭಜನೆ ಮಾಡುವುದು

ಈ. ಪ್ರತಿಯೊಂದು ಭಾಗದ ಅನುಕ್ರಮಣಿಕೆ ಮತ್ತು ಮನೋಗತ ವನ್ನು ಸಿದ್ಧಪಡಿಸುವುದು

ಉ. ಪ್ರತಿಯೊಂದು ಭಾಗದ ಮುಖಪುಟ ಮತ್ತು ಹಿಂಭಾಗದ ಪುಟದಲ್ಲಿ ಲೇಖನವನ್ನು ಸಿದ್ಧಪಡಿಸುವುದು

೨ ಈ. ವಿವಿಧ ಭಾಷೆಗಳಲ್ಲಿ ಗ್ರಂಥ ಮತ್ತು ಕಿರುಗ್ರಂಥಗಳ ಗಣಕಯಂತ್ರದ ಸಂರಚನೆ ಮಾಡುವುದು ಹಾಗೆಯೇ ಗ್ರಂಥದಲ್ಲಿ ಮುದ್ರಿಸಲು ಕೋಷ್ಟಕ (ಟೇಬಲ್) ಸಿದ್ಧಪಡಿಸುವುದು : ಇದಕ್ಕೆ ‘ಇನ್-ಡಿಜೈನ್ ಈ ಗಣಕೀಯ ತಂತ್ರಾಂಶದ ಜ್ಞಾನವಿರಬೇಕು.

೨ ಉ. ಮರಾಠಿ, ಹಿಂದಿ, ಕನ್ನಡ ಅಥವಾ ಆಂಗ್ಲ ಭಾಷೆಯ ಗ್ರಂಥಗಳನ್ನು ಇತರ ದೇಶ-ವಿದೇಶಗಳ ಭಾಷೆಗಳಲ್ಲಿ ಭಾಷಾಂತರ ಮಾಡುವುದು : ಈ ಸೇವೆಯನ್ನು ಮಾಡಲು ‘ತಾವು ಯಾವ ಭಾಷೆಯಲ್ಲಿ ಭಾಷಾಂತರ ಮಾಡಲು ಇಚ್ಛಿಸುವಿರೋ, ಆ ಭಾಷೆಯಲ್ಲಿ ವ್ಯಾಕರಣದ ದೃಷ್ಟಿಯಿಂದ ಉತ್ತಮ ಜ್ಞಾನವಿರಬೇಕು. ಭಾಷೆಯ ಜ್ಞಾನವಿರಬಹುದು; ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಿಶೇಷ ಜ್ಞಾನವಿಲ್ಲದಿದ್ದರೆ, ಅದರಲ್ಲಿ ತರಬೇತಿ ಪಡೆಯಬೇಕು. ಗಣಕೀಯ ಜ್ಞಾನ (ಮರಾಠಿಯ ಲೇಖನವನ್ನು) ಆಂಗ್ಲ ಭಾಷೆಗೆ ಭಾಷಾಂತರ ಮಾಡುವ ಸೇವೆಗಾಗಿ MSWord ಮತ್ತು PDF ಈ ತಂತ್ರಾಂಶದ ಜ್ಞಾನವಿರಬೇಕು.

೩. ಗ್ರಂಥರಚನೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿರಿ !

ಈ ಮೇಲಿನ ಎಲ್ಲ ಸೇವೆಗಳಿಗಾಗಿ ಗಣಕಯಂತ್ರದ ಅಲ್ಪಸ್ವಲ್ಪ ಜ್ಞಾನವಿದ್ದು ಹಾಗೂ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಬರುವುದು ಆವಶ್ಯಕವಿದೆ. ಮೇಲೆ ಉಲ್ಲೇಖಿಸಿದ ಸೇವೆಯನ್ನು ಸನಾತನದ ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಸಹ ಮಾಡಬಹುದು. ಮನೆಯಲ್ಲಿದ್ದು ಸೇವೆ ಮಾಡಲು ಇಚ್ಛಿಸುವವರು ಸ್ವಲ್ಪ ದಿನ ಆಶ್ರಮಕ್ಕೆ ಬಂದು ಸೇವೆಯ ಸೂಕ್ಷ್ಮ ಆಯಾಮಗಳನ್ನು ಅರಿತರೆ ಮನೆಯಲ್ಲಿದ್ದು ಸೇವೆ ಮಾಡಲು ಸುಲಭವಾಗುವುದು.

ಈ ಸೇವೆಯನ್ನು ಮಾಡಲು ಇಚ್ಛಿಸುವವರು ಜಿಲ್ಲಾಸೇವಕರ ಮೂಲಕ ಈ ಮುಂದಿನ ಕೋಷ್ಟಕದಲ್ಲಿ ತಮ್ಮ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರಿಗೆ  [email protected] ಈ ಗಣಕೀಯ ವಿಳಾಸಕ್ಕೆ ಅಥವಾ ಈ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಅಂಚೆಗಾಗಿ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ. – ೪೦೩ ೪೦೧

ಗ್ರಂಥರಚನೆಯ ಸೇವೆ ಹಾಗೆಯೇ ಕಲಾಕೃತಿ, ಧ್ವನಿಚಿತ್ರೀಕರಣ ಮತ್ತು ನಿಯತಕಾಲಿಕೆ ‘ಸನಾತನ ಪ್ರಭಾತ ಇತ್ಯಾದಿಗಳ ಸಂಕಲನದ ಸೇವೆಗಳಿವೆ. ತಮ್ಮ ಆಸಕ್ತಿಗನುಸಾರ ಸಾಧಕರು ಸೇವೆಯನ್ನು ಆಯ್ದುಕೊಳ್ಳಬಹುದು.