ಶೇ. ೫೬ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ಮಂಗಳೂರಿನ ಕು. ಚರಣದಾಸ ರಮಾನಂದ ಗೌಡ (ವಯಸ್ಸು ೭ ವರ್ಷಗಳು) !

ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಈ ಪೀಳಿಗೆಯಲ್ಲಿ ಕು. ಚರಣದಾಸ ರಮಾನಂದ ಗೌಡ ಇವನೂ ಒಬ್ಬನಾಗಿದ್ದಾನೆ !

ಕು. ಚರಣದಾಸ ಗೌಡ

(‘೨೦೧೯ ರಲ್ಲಿ ಕು. ಚರಣದಾಸನ ಆಧ್ಯಾತ್ಮಿಕ ಮಟ್ಟವು ಶೇ. ೫೬ ರಷ್ಟಿತ್ತು. – ಸಂಕಲನಕಾರರು)

ಮಾರ್ಗಶಿರ ಶುಕ್ಲ ಪಕ್ಷ ಏಕಾದಶಿ (೨೫.೧೨.೨೦೨೦) ಯಂದು ಕು. ಚರಣದಾಸ ರಮಾನಂದ ಗೌಡನ ಹುಟ್ಟುಹಬ್ಬವಾಯಿತು. ಆ ನಿಮಿತ್ತದಿಂದ ಅವನ ತಾಯಿ, ಚಿಕ್ಕಮ್ಮ ಮತ್ತು ಓರ್ವ ಸಾಧಕಿ ಇವರಿಗೆ ಅರಿವಾದ ಅವನ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಸೌ. ಮಂಜುಳಾ ಗೌಡ (ತಾಯಿ), ಮಂಗಳೂರು ಸೇವಾಕೇಂದ್ರ

೧ ಅ. ಜಾಗರೂಕತೆ : ‘ಚರಣದಾಸನು ಆಟವಾಡುತ್ತಿದ್ದರೂ, ಅವನಿಗೆ ‘ಸುತ್ತಮುತ್ತಲು ಏನು ನಡೆಯುತ್ತಿದೆ ?, ಎಂಬ ಕಡೆಗೆ ಗಮನವಿರುತ್ತದೆ. ಅವನನ್ನು ನೋಡಿದರೆ ನಮಗೆ ‘ಅವನ ಗಮನವಿಲ್ಲ, ಎನಿಸುತ್ತದೆ; ಆದರೆ ಅವನಿಗೆ ಎಲ್ಲವೂ ಗೊತ್ತಿರುತ್ತದೆ. ಅದನ್ನೆಲ್ಲ ಅವನು ಹೇಳುತ್ತಾನೆ. ಆಡುವಾಗ ಅಥವಾ ಬೇರೆ ಸಮಯದಲ್ಲಿಯೂ ಅವನು ಬಹಿರ್ಮುಖವಾಗಿರುವುದಿಲ್ಲ. ನಮಗೆ ‘ಅವನು ಬೇರೆಯೇ ಅವಸ್ಥೆಯಲ್ಲಿರುತ್ತಾನೆ, ಎಂದೆನಿಸುತ್ತದೆ.

೧ ಆ. ತತ್ತ್ವನಿಷ್ಠೆ

೧ ಆ ೧. ‘ಅಣ್ಣನು ತನ್ನಿಂದಾದ ತಪ್ಪು ಸರಿಯಾಗಿ ಹೇಳಿ ಕ್ಷಮೆಯಾಚನೆಯನ್ನು ಮಾಡುತ್ತಾನಲ್ಲವೇ ?, ಎಂದು ನೋಡಲು ಚರಣದಾಸನು ಅಣ್ಣನೊಂದಿಗೆ ಅವನೂ ಕ್ಷಮೆಯಾಚನೆ ಮಾಡಲು ಹೋಗುವಾಗ ಜೊತೆಗೆ ಬರುವುದು : ಒಮ್ಮೆ ಅವನ ಅಣ್ಣನಿಂದ ತಪ್ಪಾಗಿತ್ತು. ಅದಕ್ಕಾಗಿ ಅವನಿಗೆ ಸೇವಾಕೇಂದ್ರದಲ್ಲಿ ಸೇವೆ ನಡೆಯುತ್ತಿರುವ ಎಲ್ಲ ಸ್ಥಳಗಳಿಗೆ ಹೋಗಿ ಸಾಧಕರಿಗೆ ತನ್ನ ತಪ್ಪನ್ನು ಹೇಳಿ ಕ್ಷಮೆಯಾಚನೆ ಮಾಡಲು ಹೇಳಲಾಯಿತು. ಅವನೊಂದಿಗೆ ಚರಣದಾಸನೂ ಹೋಗಿದ್ದನು. ಆಗ ಸಾಧಕರೊಂದಿಗಾದ ಅವನ ಸಂಭಾಷಣೆಗಳನ್ನು ಇಲ್ಲಿ ಕೊಡಲಾಗಿದೆ.

ಸಾಧಕ : ನೀನು ಕ್ಷಮೆಯಾಚನೆ ಮಾಡುವುದಿಲ್ಲವೇ ?

ಚರಣದಾಸ : ನಾನು ತಪ್ಪು ಮಾಡಲಿಲ್ಲ.

ಸಾಧಕ : ಹಾಗಾದರೆ ನೀನು ಏಕೆ ಬಂದಿರುವೆ ?

ಚರಣದಾಸ : ‘ಅಣ್ಣನು ಸರಿಯಾಗಿ ತಪ್ಪು ಹೇಳುತ್ತಾನಲ್ಲವೇ ? ಇನ್ನೂ ಹೇಳುವುದಿದೆಯೇ, ಎಂದು ನೋಡಲು ಬಂದೆನು.

೧ ಆ ೨. ಸಾಧಕರಿಗೆ ಅವರ ತಪ್ಪುಗಳನ್ನು ಅರಿವು ಮಾಡಿಕೊಡುವುದು : ಸಾಧಕರ ತಪ್ಪುಗಳು ಅವನ ಗಮನಕ್ಕೆ ಬಂದರೆ ತತ್ತ್ವನಿಷ್ಠೆಯಿಂದ ಅವರಿಗೆ ‘ಇದು ತಪ್ಪಲ್ಲವೇ ? ಹೀಗೆ ಮಾಡಬಾರದಾಗಿತ್ತು ಅಲ್ಲವಾ ?, ಎಂದು ಕೇಳುತ್ತಾನೆ ಮತ್ತು ಆ ತಪ್ಪನ್ನು ತತ್ತ್ವನಿಷ್ಠೆಯಿಂದ ಜವಾಬ್ದಾರ ಸಾಧಕರಿಗೂ ಹೇಳುತ್ತಾನೆ.

೧ ಇ. ಪ್ರಾರ್ಥನೆ ಮಾಡಿ ಏಕಾಗ್ರತೆಯಿಂದ ನಾಮಜಪವನ್ನು ಮಾಡುವುದು : ಚರಣದಾಸನು ದಿನನಿತ್ಯ ಬೆಳಗ್ಗೆ ೯ ರಿಂದ ೧೦ ರ ಸಮಯದಲ್ಲಿ ಅವನ ತಂದೆ ಪೂ. ರಮಾನಂದಣ್ಣನವರೊಂದಿಗೆ ನಾಮಜಪಕ್ಕೆ ಕುಳಿತುಕೊಳ್ಳುತ್ತಾನೆ. ನಾಮಜಪಕ್ಕೆ ಕುಳಿತುಕೊಳ್ಳುವ ಮುನ್ನ ಪೂ. ಅಣ್ಣನವರಿಗೆ ‘ನಾನು ಮತ್ತು ಅಣ್ಣನು ಇಂದು ಯಾವ ನಾಮಜಪವನ್ನು ಮಾಡಬೇಕು ?, ಎಂದು ಕೇಳುತ್ತಾನೆ ಮತ್ತು ಅವರು ಹೇಳಿದ ನಾಮಜಪವನ್ನು ಮಾಡುತ್ತಾನೆ. ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ಅವನ ತಂದೆಯವರು ಅವರಿಗೆ (ಗುರುದಾಸ ಮತ್ತು ಚರಣದಾಸ ಇವರಿಗೆ), “ನಾಮಜಪಕ್ಕೆ ಕುಳಿತುಕೊಳ್ಳುವ ಮುನ್ನ ನಾವು ಶ್ರೀ ಗುರುಗಳ ಚರಣಗಳನ್ನು ನಮ್ಮ ಕಣ್ಣುಗಳ ಮುಂದೆ ತಂದು ಅವರ ಚರಣಗಳಲ್ಲಿ ನಮ್ಮ ಮಸ್ತಕವನ್ನಿಡೋಣ ಮತ್ತು ಅವರಿಗೆ ಪ್ರಾರ್ಥನೆ ಮಾಡೋಣ, ‘ಹೇ ಗುರುದೇವಾ, ನಾನು ಅಜ್ಞಾನಿಯಾಗಿದ್ದೇನೆ. ‘ನಾಮಜಪವು ಹೇಗೆ ಮಾಡುವುದು ?, ಎಂಬುದು ತಿಳಿಯುವುದಿಲ್ಲ. ನೀವೇ ನನ್ನಿಂದ ಈ ನಾಮಜಪವನ್ನು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಮಾಡಿಸಿಕೊಳ್ಳಿರಿ. ಈ ನಾಮಜಪವು ತಮ್ಮ ಚರಣಗಳಲ್ಲಿ ಸಮರ್ಪಿತವಾಗಲಿ, ಎಂದು ತಮ್ಮ ಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆ ಎಂದು ಹೇಳಿಕೊಟ್ಟರು. ಅದರಂತೆ ಚರಣದಾಸನು ಕೈ ಜೋಡಿಸಿ ಏಕಾಗ್ರತೆಯಿಂದ ಪ್ರಾರ್ಥನೆಯನ್ನು ಮಾಡುತ್ತಾನೆ. ನಾಮಜಪವನ್ನು ಮಾಡುತ್ತಿರುವಾಗಲೂ ಮಧ್ಯಮಧ್ಯದಲ್ಲಿ ‘ಈಗ ಪ್ರಾರ್ಥನೆ ಮಾಡುವ, ಎಂದು ಹೇಳಿ ಪ್ರಾರ್ಥನೆ ಮಾಡುತ್ತಾನೆ.

೧ ಈ. ಅವನು ಕಣ್ಣುಗಳನ್ನು ಮುಚ್ಚಿ ಏಕಾಗ್ರತೆಯಿಂದ ನಾಮಜಪ ಮಾಡುತ್ತಿರುವಾಗ ಅವನ ಮುಖದ ಮೇಲೆ ಬದಲಾವಣೆಯಾಗುತ್ತದೆ. ಆಗ ಅವನು ಶಾಂತ ಮತ್ತು ಆನಂದದಲ್ಲಿರುವುದು ಕಾಣಿಸುತ್ತಾನೆ. ಕೆಲವೊಮ್ಮೆ ಅವನು ‘ನನಗೆ ಗುರುಗಳ ದರ್ಶನವಾಯಿತು, ಎಂದು ಆನಂದದಿಂದ ಹೇಳುತ್ತಾನೆ.

೨. ಕು. ರೂಪಾ ಗೌಡ (ಚಿಕ್ಕಮ್ಮ), ಮಂಗಳೂರು ಸೇವಾಕೇಂದ್ರ

೨ ಅ. ಜಿಜ್ಞಾಸೆ : ‘ಒಮ್ಮೆ ಸತ್ಸಂಗದಲ್ಲಿ ಪೂ. ಅಣ್ಣನವರು ‘ನಾವು ನಮ್ಮ ಅಂತರ್ಮುಖತೆಯನ್ನು ಹೆಚ್ಚಿಸಿದರೆ ಸಾಧನೆಯಲ್ಲಿ ನಮ್ಮ ಪ್ರಗತಿಯು ಬೇಗ ಆಗುತ್ತದೆ, ಎಂದು ಹೇಳುತ್ತಿದ್ದರು. ಆಗ ದೂರದಲ್ಲಿ ಕುಳಿತುಕೊಂಡು ಕೇಳುತ್ತಿದ್ದ ಚರಣದಾಸನು ಸತ್ಸಂಗವು ಮುಗಿದ ನಂತರ ತನ್ನ ತಾಯಿಗೆ, “ಅಂತರ್ಮುಖತೆ ಎಂದರೇನು ? ಎಂದು ಕೇಳಿದನು. ಆಗ ಅವನ ತಾಯಿಯು, “ನಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತೇವೆ ?, ಎಂಬುದನ್ನು ಹುಡುಕಿ ನಮ್ಮಲ್ಲಿ ಅದರಂತೆ ಬದಲಾವಣಣೆ ತರಲು ಪ್ರಯತ್ನಿಸುವುದು, ಎಂದರೆ ಅಂತರ್ಮುಖತೆ ! ಎಂದು ಹೇಳಿದಳು. ಆಗ ಅವನಿಗೆ ಅರ್ಥವಾಯಿತು.

೨ ಆ. ತನ್ನ ತಪ್ಪುಗಳನ್ನು ಮನಃಪೂರ್ವಕವಾಗಿ ಹೇಳುವುದು : ಅವನಿಂದ ಏನಾದರೂ ತಪ್ಪಾಗಿದ್ದರೆ ಅವನು ಆ ತಪ್ಪನ್ನು ನನಗೆ, ಅವನ ತಾಯಿಗೆ ಮತ್ತು ಪೂ. ಅಣ್ಣನವರಿಗೆ ಹೇಳಿ ಕ್ಷಮೆಯಾಚನೆಯನ್ನು ಮಾಡುತ್ತಾನೆ. ಅವನು ಮನಸ್ಸಿನಲ್ಲಿ ಏನೂ ಇಡದೇ ಎಲ್ಲ ತಪ್ಪುಗಳನ್ನು ಮನಮುಕ್ತವಾಗಿ ಹೇಳುತ್ತಾನೆ.

೨ ಇ. ಸೂಕ್ಷ್ಮವನ್ನು ತಿಳಿದುಕೊಳ್ಳುವ ಕ್ಷಮತೆ : ಒಮ್ಮೆ ನಾವು ನಾಮಜಪವನ್ನು ಮಾಡುತ್ತಿದ್ದೆವು. ಆಗ ಚರಣದಾಸನೂ ಕಣ್ಣುಮುಚ್ಚಿ ನಾಮಜಪವನ್ನು ಮಾಡುತ್ತಿದ್ದನು. ನಾಮಜಪ ಮಾಡುತ್ತಿರುವಾಗ ಮಧ್ಯದಲ್ಲಿಯೇ ನನ್ನ ಕಾಲು ತುಂಬಾ ನೋಯುತ್ತಿತ್ತು. ಸ್ವಲ್ಪ ಸಮಯದ ನಂತರ ಚರಣದಾಸನು ನನ್ನ ಕಾಲಿನ ಮೇಲೆ ಬಂದು ಕುಳಿತನು. ಆಗ ಪೂ. ಅಣ್ಣನವರು ಅವನಿಗೆ, “ನೀನು ಮಧ್ಯದಲ್ಲಿಯೇ ಎದ್ದು ಏಕೆ ಬಂದೆ ?, ಎಂದು ಕೇಳಿದರು. ಆಗ ಅವನು, “ಅಕ್ಕನ ಕಾಲುಗಳು ನೋವಾಗುತ್ತಿವೆ; ಆದ್ದರಿಂದ ಅವಳ ಕಾಲಿನ ಮೇಲೆ ಹೋಗಿ ಕುಳಿತುಕೊಳ್ಳಬೇಕು, ಎಂಬ ವಿಚಾರ ಬರುತ್ತಿತ್ತು; ಅದಕ್ಕೆ ಎದ್ದು ಬಂದೆನು, ಎಂದು ಹೇಳಿದನು. ಅವನು ನನ್ನ ಕಾಲಿನ ಮೇಲೆ ಬಂದು ಕುಳಿತುಕೊಂಡಾಗ ನನ್ನ ಕಾಲು ನೋವು ಕಡಿಮೆಯಾಯಿತು. ಇದರಿಂದ ‘ಅವನಿಗೆ ಸೂಕ್ಷ್ಮದ ಅರಿವಾಗುತ್ತದೆ ಮತ್ತು ಅದರ ಮೇಲೆ ಅವನು ತತ್ಪರತೆಯಿಂದ ಕೃತಿ ಮಾಡುತ್ತಾನೆ, ಎಂದು ಗಮನಕ್ಕೆ ಬಂದಿತು.

೩. ಸೌ. ಮಂಜುಳಾ ಗೌಡ ಮತ್ತು ಕು. ರೂಪಾ ಗೌಡ

೩ ಅ. ಪ್ರಗಲ್ಭ : ‘ಅವನ ಆಟವೂ ಆಧ್ಯಾತ್ಮಿಕ ಸ್ತರದಲ್ಲಿರುತ್ತದೆ. ಒಮ್ಮೆ ಪ್ರಸಾರದ ಸಾಧಕರ ಬಳಿಗೆ ಹೋಗಿ ಅವರನ್ನು ಹಿಂದಿ ಭಾಷೆಯಲ್ಲಿ, “ಈಗ ನಾವು ಸತ್ಸಂಗವನ್ನು ತೆಗೆದುಕೊಳ್ಳೋಣ. ಮಧುವಂತಿಕಾಕೂ, ನಿಮ್ಮಿಂದಾದ ತಪ್ಪುಗಳನ್ನು ಹೇಳಿ, ಎಂದು ಹೇಳಿದನು. ಅವರು ಆ ದಿನ ಅವರಿಂದಾದ ತಪ್ಪನ್ನು ಹೇಳಿದರು. ಅವರು ಹೇಳಿದ ನಂತರ ಅವನು ಇನ್ನೊಬ್ಬ ಸಾಧಕರಿಗೆ ‘ಈ ಪ್ರಸಂಗದ ಬಗ್ಗೆ ನಿಮಗೆ ಏನು ಎನಿಸುತ್ತದೆ ?, ಎಂದು ಕೇಳಿದನು. ಅವರು ಹೇಳಿದ ನಂತರ ಅವನು ಮಧುವಂತಿಕಾಕೂರವರಿಗೆ, “ಕಾಕೂ ಆ ಕೃತಿಯನ್ನು ಮಾಡುವಾಗ ನಿಮ್ಮ ಮನಸ್ಸಿನಲ್ಲಿ ಯಾವ ವಿಚಾರಗಳಿದ್ದವು ? ಎಂದು ದೊಡ್ಡವರಂತೆ ಪ್ರಬಲ್ಭವಾಗಿ ಮಾತನಾಡುತ್ತಾನೆ ಮತ್ತು ಅವನ ವಿಚಾರಗಳೂ  ಪ್ರಬಲ್ಭವಾಗಿರುತ್ತವೆ.

೩ ಆ. ಪ್ರೀತಿಮಯ

೩ ಆ ೧. ಆಕಳಿಗೆ ‘ಕೋಪಿಸಬಾರದು, ಎಂದು ಪ್ರೀತಿಯಿಂದ ತಿಳಿಸಿ ಹೇಳುವುದು ಮತ್ತು ತದನಂತರ ಆಕಳಿನ ಮುಖದಲ್ಲಿ ಬದಲಾವಣೆಯಾಗಿ ಅದರ ಸಿಟ್ಟು ಕಡಿಮೆಯಾಗುವುದು : ದೀಪಾವಳಿಯ ಸಮಯದಲ್ಲಿ ನಾವು ಊರಿಗೆ ಹೋಗಿದ್ದೆವು. ಅಲ್ಲಿ ಅವನು ದಿನದಲ್ಲಿ ಹೆಚ್ಚು ಸಮಯ ಆಕಳುಗಳೊಂದಿಗೆ ಕಳೆಯುತ್ತಿದ್ದನು. ಅವನು ಅವುಗಳಿಗೆ ಮೇವು ಹಾಕುವುದು ಮತ್ತು ಅವುಗಳೊಂದಿಗೆ ಮಾತನಾಡುತ್ತಿದ್ದನು. ಒಮ್ಮೆ ಯಾರಾದರೂ ಕರುವಿಗೆ ಹೊಡೆದರೆಂದು; ಆಕಳಿಗೆ (ಕರುವಿನ ತಾಯಿಗೆ) ಸಿಟ್ಟು ಬಂದಿತು. ಆಗ ಅವನು ಆ ಆಕಳಿಗೆ, “ಕೋಪಿಸಬಾರದು. ಕೋಪಿಸಿಕೊಂಡರೆ ನಿನಗೆ ಗುರುದೇವರು ಸಿಗುವುದಿಲ್ಲ. ನಿನಗೆ ಗುರುದೇವರು ಬೇಕಲ್ಲವೇ ? ಎಂದು ಹೇಳುತ್ತಿದ್ದನು. ಆಕಳೂ ಸಹ ಅವನ ಮಾತುಗಳನ್ನು ಗಮನವಿಟ್ಟು ಕೇಳುತ್ತಿತ್ತು. ನಂತರ ಆ ಆಕಳಿನ ಮುಖದ ಮೇಲೆ ಬದಲಾವಣೆಯಾಯಿತು ಮತ್ತು ಅದರ ಸಿಟ್ಟೂ ಕಡಿಮೆಯಾಯಿತು.

೩ ಆ ೨. ಅವನು ತನಗೆ ಕೊಟ್ಟಿರುವ ತಿನಿಸು ನಾಯಿಗೆ ಹಾಕಿ ಅವುಗಳೊಂದಿಗೆ ಪ್ರೀತಿಯಿಂದ ಮಾತನಾಡುತ್ತಾನೆ.

೩ ಇ. ದೂರದೃಷ್ಟಿ : ‘ಮುಂದೆ ಭೀಕರ ಆಪತ್ಕಾಲವು ಬರಲಿದೆ, ಎಂದು ತಿಳಿದ ನಂತರ ಅವನು ದಿನನಿತ್ಯ ರಟ್ಟಿನ ಮತ್ತು ಆಟದಲ್ಲಿನ ( Brick Construction Set ) ಮನೆಗಳನ್ನು ಕಟ್ಟುತ್ತಾನೆ. ಅವನು, “ಈ ಮನೆಗಳು ಸಾಧಕರಿಗಾಗಿ ಕಟ್ಟಿದ್ದು ಮುಂದೆ ಎಲ್ಲ ಸಾಧಕರ ವ್ಯವಸ್ಥೆಯಾಗಬೇಕು, ಎಂದು ಹೇಳುತ್ತಾನೆ. ಅವನು ಒಂದಕ್ಕೊಂದು ಜೋಡಿಸಿ (ಇಂಟರಲಾಕ್ ಪಿಸ್‌ನಿಂದ) ಕಟ್ಟುತ್ತಿರುವ ಮನೆಗಳು ತುಂಬಾ ಸುಂದರವಾಗಿ ಕಾಣುತ್ತವೆ.

೩ ಈ. ದೇವರ ಕುರಿತು ಸೆಳೆತ 

೧. ಅವನು ಆಟಿಕೆಯಲ್ಲಿ ಮನೆಗಳನ್ನು ಕಟ್ಟುತ್ತಿರುವಾಗ, ‘ಅದರಲ್ಲಿ ದೇವಸ್ಥಾನದ ಸುಂದರ ರಚನೆಯನ್ನು ಮಾಡಿ ‘ದಿನನಿತ್ಯ ದೇವರ ದರ್ಶನ ಮತ್ತು ಪ್ರಾರ್ಥನೆ ಮಾಡಲು ದೇವಸ್ಥಾನವನ್ನು ಕಟ್ಟಿದ್ದೇನೆ, ಎಂದು ಹೇಳುತ್ತಾನೆ.

೨. ಅವನು ಪುಸ್ತಕದಲ್ಲಿ ಶ್ರೀರಾಮನ ದೇವಸ್ಥಾನದಂತೆ ಚಿತ್ರವನ್ನು ಬಿಡಿಸಿ ಅದರ ಮೇಲೆ ಧ್ವಜವನ್ನು ಹಚ್ಚುತ್ತಾನೆ. ಅದನ್ನು ನೋಡುವಾಗ ಆನಂದವಾಗುತ್ತದೆ.

೩. ಅವನಿಗೆ ಆಂಜನೇಯನು ತುಂಬಾ ಇಷ್ಟವಾಗುತ್ತಾನೆ. ಅವನು ಆಂಜನೇಯನ ಚಿತ್ರ ಅಥವಾ ಧ್ವನಿಚಿತ್ರಮುದ್ರಿಕೆ (ವಿಡಿಯೋ) ನೋಡಲು ಇಷ್ಟಪಡುತ್ತಾನೆ. ಅವನು ‘ನನಗೆ ಬಜರಂಗ ಬಲಿಯಾಗಿ ಆಕಾಶದಲ್ಲಿ ಹಾರಬೇಕಾಗಿದೆ, ಎಂದು ಹೇಳುತ್ತಾನೆ. ಆ ರೀತಿ ನಟಿಸುತ್ತಾನೆ.

೪. ಹಬ್ಬವಿದ್ದಾಗ ಅವನು ಆಯಾ ದೇವತೆಗಳ ಕುರಿತು ಮಾಹಿತಿಯನ್ನು ಕೇಳುತ್ತಾನೆ ಮತ್ತು ‘ದೇವತೆಗಳಂತೆ ನನಗೂ ಸಂಪೂರ್ಣ ಬ್ರಹ್ಮಾಂಡವನ್ನು ಸುತ್ತಬೇಕು (ಭ್ರಮಣ ಮಾಡಬೇಕಾಗಿದೆ,) ಎಂದು ಹೇಳುತ್ತಾನೆ.

೩ ಉ. ಸಂತರ ಬಗೆಗಿನ ಭಾವ : ಸಂತರ ಆದರ್ಶ ವರ್ತನೆಯನ್ನು ನೋಡಿ ಚರಣದಾಸನು ಆ ರೀತಿ ನಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ‘ಪೂ. ಕರ್ವೆಮಾಮಾ ಮತ್ತು ಪೂ. ರಮಾನಂದಣ್ಣನವರು ಬೆಳಗ್ಗೆ ಎಷ್ಟು ಗಂಟೆಗೆ ಏಳುತ್ತಾರೆ ?, ಎಂದು ನೋಡಿ ‘ಅದರಂತೆ ನಾನೂ ಬೆಳಗ್ಗೆ ಬೇಗ ಏಳಬೇಕು, ಎಂದು ಹೇಳುತ್ತಾನೆ ಮತ್ತು ಹಾಗೆ ಪ್ರಯತ್ನಿಸುತ್ತಾನೆ. ಅವನು ಮಾತನಾಡುವಾಗ ‘ಸಂತರು ಹೇಳಿದ ವಿಷಯಗಳ ಆಜ್ಞಾಪಾಲನೆಯನ್ನು ಮಾಡಬೇಕು, ಎಂದು ಹೇಳುತ್ತಾನೆ. ಅವನ ಪ್ರತಿಯೊಂದು ಕೃತಿ ಅಥವಾ ವಿಚಾರಗಳಿಂದ ಇತರರಿಗೆ ಆನಂದ ಸಿಗುತ್ತದೆ. ಅವನು ಯಾವಾಗಲೂ ಸಹಜಸ್ಥಿತಿಯಲ್ಲಿರುತ್ತಾನೆ. ಉಚ್ಚಲೋಕದಿಂದ ಬಂದ ಮಕ್ಕಳ ವಿಚಾರಗಳು ಮತ್ತು ಅವರ ಕೃತಿಗಳು ಸಾಧನೆಯೊಂದಿಗೆ ಜೋಡಿಸಲ್ಪಟ್ಟಿರುತ್ತವೆ. ಆದುದರಿಂದ ಇತರರಿಗೂ ಸಾಧನೆಗಾಗಿ ಪ್ರೇರಣೆ ಸಿಗುತ್ತದೆ. ಚರಣದಾಸನ ವರ್ತನೆಯಿಂದ ನಮಗೂ ಇದು ಕಲಿಯಲು ಸಿಕ್ಕಿತು.

‘ಪ.ಪೂ. ಗುರುದೇವರ ಕೃಪೆಯಿಂದಾಗಿ ಅವನ ಗುಣ ವೈಶಿಷ್ಟ್ಯಗಳನ್ನು ನಮಗೆ ಬರೆಯಲು ಅವಕಾಶ ಸಿಕ್ಕಿತು, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

೪. ಸೌ. ಭವ್ಯ ಗೌಡ, ಮಂಗಳೂರು

೪ ಅ. ಪ್ರೀತಿಮಯ : ‘ಚರಣದಾಸನು ಎಲ್ಲ ಸಾಧಕರೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾನೆ. ಅವನು ತನ್ನ ಕುಟುಂಬದವರೊಂದಿಗೆ ಹೇಗೆ ವರ್ತಿಸುತ್ತಾನೋ, ಹಾಗೆಯೇ ಎಲ್ಲ ಸಾಧಕರೊಂದಿಗೆ ವರ್ತಿಸುತ್ತಾನೆ. ಅವನು ಎಲ್ಲರ ಬಳಿಗೆ ಹೋಗುತ್ತಾನೆ ಮತ್ತು ಎಲ್ಲರಿಗೂ ಅಷ್ಟೇ ಪ್ರೀತಿ ಮಾಡುತ್ತಾನೆ. ಚರಣದಾಸನು, ಗುರುದೇವರು ಮತ್ತು ಸಂತರು ಯಾವಾಗಲೂ “ನಾವೆಲ್ಲರೂ ಒಂದೇ ಕುಟುಂಬದವರಿದ್ದೇವೆ, ಎಂಬ ಹೇಳಿದ ವಾಕ್ಯವನ್ನು ನೆನಪಿಸಿ ಅದರಂತೆ ಪ್ರೀತಿಯಿಂದ ನಡೆದುಕೊಳ್ಳುವುದನ್ನು ನೋಡಲು ಸಿಗುತ್ತದೆ.

೪ ಆ. ಆಪತ್ಕಾಲದ ಅರಿವಾಗುವುದು : ಅವನು ಆಡುತ್ತಿರುವಾಗ ‘ಸಾಧಕರು ಮುಂದೆ ಹೇಗೆ ಇರಬೇಕು ? ಆಶ್ರಮವು ಹೇಗೆ ನಿರ್ಮಾಣ ಮಾಡಬೇಕು ?, ಎಂಬ ಬಗ್ಗೆ ಚಿಂತನೆ ಮಾಡುತ್ತಾನೆ. ನಾನು ಬೆಂಗಳೂರಿನಿಂದ ಮಂಗಳೂರಿಗೆ ಬಂದ ನಂತರ ಅವನು ನನ್ನ ಬಳಿ ಕುಳಿತುಕೊಂಡು, “ಅಕ್ಕಾ, ಆಪತ್ಕಾಲವು ಮುಗಿದ ನಂತರ ಆಶ್ರಮವನ್ನು ಚೆನ್ನಾಗಿ ಮಾಡೋಣ, ಎಂದು ಹೇಳಿದನು.

೪ ಇ. ಸಾಧನೆಯ ಆಟವನ್ನು ಆಡುವುದು : ಅವನ ಆಟದಲ್ಲಿ ದೇವಸ್ಥಾನವನ್ನು ಸಿದ್ಧಪಡಿಸುತ್ತಾನೆ ಮತ್ತು ಅಲ್ಲಿ ಸಾಧಕರಿಗೆ ನಾಮಜಪಕ್ಕೆ ಕುಳಿತುಕೊಳ್ಳಲು ‘ಧ್ಯಾನಮಂದಿರದ ಕಡೆಗೆ ಹೋಗುವ ದಾರಿ ಎಂದು ಬರೆಯುತ್ತಾನೆ. ಅವನು ಆಟ ಆಡುವಾಗಲೂ ಸಾಧನೆಯ ಆಟವನ್ನು ಆಡುತ್ತಾನೆ. ಅವನು ಯಾವಾಗಲೂ ಸತ್‌ಚಿಂತನೆಯಲ್ಲಿರುತ್ತಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವನ ಪ್ರತಿಯೊಂದು ಕೃತಿ ಮತ್ತು ವರ್ತನೆ ಇವುಗಳಿಂದ ಸಾತ್ತ್ವಿಕತೆಯ ಅರಿವಾಗುತ್ತದೆ.

೪ ಈ. ಭಾವ : ಅವನ ತಂದೆ ಸಂತರಿದ್ದಾರೆ; ಆದರೆ ಅವನು ಅವರೊಂದಿಗೆ ಅಥವಾ ಸಾಧಕರೊಂದಿಗೆ ಅವರ ಬಗ್ಗೆ ಮಾತನಾಡುವಾಗ ‘ಪೂ. ಅಣ್ಣಾ ಎಂದೇ ಮಾತನಾಡುತ್ತಾನೆ.

ಪಾಲಕರೇ ಇದನ್ನು ಗಮನದಲ್ಲಿಡಿ !

‘ನಿಮ್ಮ ಮಕ್ಕಳಲ್ಲಿ ಈ ರೀತಿಯ ವೈಶಿಷ್ಟ್ಯಗಳಿದ್ದರೆ, ‘ಅವನು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾನೆ, ಎಂಬುದನ್ನು ಗಮನದಲ್ಲಿಟ್ಟು ಅವನು ಮಾಯೆಯಲ್ಲಿ ಸಿಲುಕದೇ ಅವನ ಮೇಲೆ ಸಾಧನೆಗೆ ಅನುಕೂಲವಾಗುವಂತೆ, ಸಂಸ್ಕಾರಗಳನ್ನು ಮಾಡಿ. ಇದರಿಂದಾಗಿ ಅವನ ಜನ್ಮವು ಸಾರ್ಥಕವಾಗುವುದು ಮತ್ತು ನಿಮ್ಮ ಸಾಧನೆಯೂ ಆಗುವುದು. – (ಪರಾತ್ಪರ ಗುರು) ಡಾ. ಆಠವಲೆ

(ಡಿಸೆಂಬರ್ ೨೦೨೦) ಇದರೊಂದಿಗೆ ಬಾಲಸಾಧಕರಲ್ಲಿನ ವಿವಿಧ ದೈವೀ ಅಂಶಗಳು ಸಹಜವಾಗಿ ಗಮನಕ್ಕೆ ಬರುವ ವಿಡಿಯೋಗಳನ್ನು ನಾವು ಜಾಲತಾಣದಲ್ಲಿ ‘ಯೂಟ್ಯೂಬ್’ ನ https://goo.gl/06MJck ದಲ್ಲಿ ಸಂಪರ್ಕಿಸಬಹುದು.