ನಮ್ಮ ಸಾಧನೆಯ ಪ್ರಗತಿಯು ನಮ್ಮ ಪ್ರಯತ್ನಗಳ ಮೇಲೆಯೇ ಅವಲಂಬಿಸಿರುತ್ತದೆ !

(ಪೂ.) ಸಂದೀಪ ಆಳಶಿ

‘ಕೆಲವು ಸಾಧಕರಿಗೆ, ‘ಜವಾಬ್ದಾರ ಸಾಧಕರಿಗೆ ‘ನಾನು ಸಾಧನೆಯ ಪ್ರಯತ್ನಗಳನ್ನು ಚೆನ್ನಾಗಿ ಮಾಡುತ್ತೇನೆ’, ಎಂದು ಅನಿಸಬೇಕು ಮತ್ತು ಅವರು ಇದನ್ನು ಮುಂದೆ ಪ್ರಮುಖ-ಸೇವಕರಿಗೆ ಹೇಳಿದ ನಂತರವೇ ನನ್ನ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಆಗಿದೆ ಎಂದು ಘೋಷಿಸಲಾಗುವುದು’, ಎಂದೆನಿಸುತ್ತದೆ. ಈ ವಿಚಾರದಿಂದ ಅವರು ಜವಾಬ್ದಾರ ಸಾಧಕರೆದುರು ತಮ್ಮ ಪ್ರತಿಷ್ಠೆ ಒಳ್ಳೆಯದಿದೆ ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಆದರೆ ಒಂದು ವೇಳೆ ಜವಾಬ್ದಾರ ಸಾಧಕರು ಹೇಳಿದಂತೆ ಅವರಿಂದ ಕೃತಿಗಳಾಗದಿದ್ದರೆ ಅಥವಾ ಸೇವೆಯಲ್ಲಿ ತಪ್ಪುಗಳಾದರೆ, ‘ಈಗ ಜವಾಬ್ದಾರ ಸಾಧಕರಿಗೆ ನನ್ನ ಬಗ್ಗೆ ಏನನಿಸಬಹುದು ?ಈಗ ನನ್ನ ಪ್ರಗತಿ ಆಗುವುದಿಲ್ಲ’, ಎಂಬ ವಿಚಾರಗಳಿಂದ ಅವರು ಚಿಂತೆಗೊಳಗಾಗುತ್ತಾರೆ. ಇದರಿಂದ ಸ್ವಲ್ಪ ಹೊತ್ತು ಅವರಿಗೆ ಒತ್ತಡ ಅಥವಾ ನಕಾರಾತ್ಮಕತೆಯೂ ಬರುತ್ತದೆ. ಅವರ ಈ ವಿಚಾರಗಳು ಏಕೆ ಅಯೋಗ್ಯವಾಗಿವೆ, ಎಂಬುದು ಮುಂದಿನ ದೃಷ್ಟಿಕೋನಗಳಿಂದ ಗಮನಕ್ಕೆ ಬರುವುದು.

. ಸಾಧಕರ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಘೋಷಿಸುವುದು ಈಶ್ವರನ ನಿಯೋಜನೆಯೇ ಆಗಿರುತ್ತದೆ.

೨. ಅಧ್ಯಾತ್ಮದಲ್ಲಿ ನಮ್ಮ ನಿಜವಾದ ಸಂಬಂಧವು ಗುರು ಅಥವಾ ಈಶ್ವರನೊಂದಿಗಿರುತ್ತದೆ. ಆದ್ದರಿಂದ ಸಾಧಕರು ಜವಾಬ್ದಾರ ಸಾಧಕರ ಮನಸ್ಸನ್ನು ಒಲಿಸಿಕೊಳ್ಳುವುದಕ್ಕಿಂತ ಗುರು ಅಥವಾ ಈಶ್ವರನಿಗೆ ಅಪೇಕ್ಷಿತವಿರುವ ಸಾಧನೆಯನ್ನು ಮಾಡಿ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಬೇಕು.

. ‘ಪ್ರತಿಷ್ಠೆ ಕಾಪಾಡುವುದು’ ಈ ಸ್ವಭಾವದೋಷದಿಂದ ಪ್ರಗತಿಯಂತೂ ಆಗವುದೇ ಇಲ್ಲ, ತದ್ವಿರುದ್ಧ ಅಧೋಗತಿಯಾಗುತ್ತದೆ.

೪. ಸೂರ್ಯನು ಉದಯಿಸಿದ ಮೇಲೆ, ಅವನ ಪ್ರಕಾಶವು ಎಲ್ಲೆಡೆಗೆ ಪಸರಿಸುತ್ತದೆ ಮತ್ತು ಅದು ಎಲ್ಲರಿಗೂ ಕಾಣಿಸುತ್ತದೆ. ಅದರಂತೆ ಸಾಧಕನ ಸಾಧನೆಯು ಅಂತರ್ಮನದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದರೆ, ಅವನ ಅಂತರ್ಮನದಲ್ಲಿನ ಸಾಧನೆಯ-ದೀಪವು ಪ್ರಜ್ವಲಿಸುತ್ತದೆ ಮತ್ತು ಅದರ ಪ್ರಕಾಶವು ಹರಡಿ ಅದು ಎಲ್ಲರಿಗೂ ಕಾಣಿಸುತ್ತದೆ. ಸ್ವಲ್ಪದರಲ್ಲಿ ಸಾಧಕರ ಆಧ್ಯಾತ್ಮಿಕ ಪ್ರಗತಿಯು ಇತರರಿಗೂ ಕಾಣಿಸುತ್ತದೆ. ಆದ್ದರಿಂದ ಸಾಧಕರು ತಮ್ಮ ಪ್ರಗತಿಯ ಬಗ್ಗೆ ಅನಗತ್ಯ ವಿಚಾರಗಳನ್ನು ಮಾಡದೇ ಸಾಧನೆಯ ಪ್ರಯತ್ನಗಳನ್ನು ಉತ್ತಮ ರೀತಿಯಲ್ಲಿ ಮಾಡಲು ಪ್ರಾಧಾನ್ಯತೆಯನ್ನು ನೀಡಬೇಕು.’

– (ಪೂ.) ಶ್ರೀ. ಸಂದೀಪ ಆಳಶಿ (೧೪.೧೧.೨೦೨೦)