ಮಕರಸಂಕ್ರಾಂತಿಯ ಶುಭಮುಹೂರ್ತದಲ್ಲಿ ಸನಾತನದ ಧರ್ಮಪ್ರಸಾರದ ಕಾರ್ಯವು ಪುನಃ ಶುಭಾರಂಭ !

ಸಾಧಕರೇ, ಸಮರ್ಪಣಾಭಾವದಿಂದ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಂಡು ಸಂಧಿಕಾಲದಲ್ಲಿ ಸಾಧನೆಯ ಲಾಭವನ್ನು ಪಡೆದುಕೊಳ್ಳಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಮಕರಸಂಕ್ರಾಂತಿಯ ನಿಮಿತ್ತ ಎಲ್ಲ ಸಾಧಕರಿಗೆ ನಮಸ್ಕಾರಗಳು !

ಮಕರ ಸಂಕ್ರಾಂತಿಯ ಶುಭಮುಹೂರ್ತದಿಂದ (೧೪.೧.೨೦೨೧ ರಿಂದ) ಸನಾತನ ಸಂಸ್ಥೆಯಿಂದ ಪ್ರತ್ಯಕ್ಷ ಸಮಾಜಕ್ಕೆ ಹೋಗಿ ಧರ್ಮಪ್ರಸಾರದ ಕಾರ್ಯವು ಪುನಃ ಶುಭಾರಂಭವಾಗುತ್ತಿದೆ. ಕೊರೋನಾದಿಂದಾಗಿ ಕಳೆದ ೧೦ ತಿಂಗಳು ಸನಾತನ ಸಂಸ್ಥೆಯ ಧರ್ಮಪ್ರಸಾರವು ‘ಆನ್‌ಲೈನ್ ಮೂಲಕ ನಡೆಯುತ್ತಿತ್ತು. ಈಗ ಅನೇಕ ಜಿಲ್ಲೆಗಳ ಸ್ಥಿತಿಯು ಮೊದಲಿನಂತೆ ಆಗುತ್ತಿರುವುದರಿಂದ ಸನಾತನದ ಸಾಧಕರು ಕೊರೋನಾದ ನಿಯಮಗಳನ್ನು ಪಾಲಿಸಿ ಮೊದಲಿನಂತೆ ಸಮಾಜಕ್ಕೆ ಹೋಗಿ ಧರ್ಮಪ್ರಸಾರ ಮಾಡುವವರಿದ್ದಾರೆ.

ಕಳೆದ ಕೆಲವು ತಿಂಗಳು ಕೊರೋನಾದ ಪಿಡುಗಿನಿಂದಾಗಿ ಬಾಹ್ಯ ಆಪತ್ಕಾಲೀನ ಪರಿಸ್ಥಿತಿ ಇದ್ದರೂ, ಈ ಕಾಲವು ಸಾಧಕರಿಗೆ ಅನುಭೂತಿಯ ಉತ್ಸವವಾಗಿತ್ತು. ಕೊರೋನಾದಿಂದಾಗಿ ಮುಂಬರುವ ಭೀಕರ ಆಪತ್ಕಾಲದ ಒಂದು ಸಣ್ಣ ತುಣುಕು ಅನುಭವಿಸಲು ಸಾಧ್ಯವಾಗಿದ್ದರಿಂದ ಸಾಧಕರಿಗೆ ಸಾಧನೆಯನ್ನು ಹೆಚ್ಚೆಚ್ಚು ತಳಮಳದಿಂದ ಮಾಡಬೇಕೆಂಬ ಅರಿವಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ‘ಸಾಧಕರು ನಿರಂತರವಾಗಿ ‘ಸತ್ನಲ್ಲಿರಬೇಕು, ಎಂಬ ಬೋಧನೆಯನ್ನು ಸಾಧಕರಿಗೆ ನೀಡಿದರು, ಅದನ್ನು ಸಾಧಕರು ಈ ಬಿಕ್ಕಟ್ಟಿನ ಕಾಲದಲ್ಲಿ ಆಚರಣೆಗೆ ತರಲು ಪ್ರಯತ್ನಿಸಿದರು.

ಸಂಚಾರನಿಷೇಧದ ಕಾಲದಲ್ಲಿ ಪ್ರತ್ಯಕ್ಷ ಪ್ರಸಾರ ಮಾಡಲು ಮಿತಿ ಇದ್ದರೂ ‘ಆನ್‌ಲೈನ್ ಮಾಧ್ಯಮದಿಂದ ಸಮಾಜಕ್ಕೆ ಈಶ್ವರನತ್ತ ಹಾಗೂ ಧರ್ಮದತ್ತ ಕಾರ್ಯವು ಅವ್ಯಾಹತವಾಗಿ ಮುಂದುವರಿಯಿತು. ಅನೇಕ ಸಾಧಕರು ಮನೆಯಲ್ಲಿ ಕುಳಿತು ಆಧುನಿಕ ಮಾಧ್ಯಮಗಳನ್ನು ಕಲಿತು ತಳಮಳದಿಂದ ಸೇವೆಯನ್ನು ಮಾಡಿದರು. ಈ ಕಾಲದಲ್ಲಿ ಸಾಧಕರ ವ್ಯಷ್ಟಿ ಸಾಧನೆಯ ಪ್ರಯತ್ನಗಳಲ್ಲಿ ವೃದ್ಧಿಯಾಯಿತು. ಒಟ್ಟಾರೆ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯಲ್ಲಿ ಸಮತೋಲನ ಆಗಿದ್ದರಿಂದ ಸಾಧಕರಿಗಾಗಿ ಈ ಕಾಲವು ಕೃತಜ್ಞತಾ ಕಾಲವಾಯಿತು !

ಗುರುಕೃಪೆಯಿಂದ ಈಗ ಮಕರಸಂಕ್ರಾಂತಿಯ ಶುಭಮುಹೂರ್ತದಲ್ಲಿ ಸಾಧಕರಿಗೆ ಕೊರೋನಾದ ಬಗ್ಗೆ ಎಲ್ಲ ನಿಯಮಗಳನ್ನು ಪಾಲಿಸಿ ಪುನಃ ಪ್ರತ್ಯಕ್ಷ ಧರ್ಮಪ್ರಸಾರ ಮಾಡುವ ಸುವರ್ಣಾವಕಾಶ ಸಿಕ್ಕಿದೆ. ಸದ್ಯದ ಕಾಲವು ಆಪತ್ಕಾಲ ಸದೃಶ್ಯವಾಗಿದ್ದರೂ, ಮುಂಬರುವ ಆಪತ್ಕಾಲದ ತುಲನೆಯಲ್ಲಿ ಆ ಆಪತ್ಕಾಲವು ಸಂಪತ್ಕಾಲದಂತೆ ಇರಲಿದೆ. ಈ ಸಂಧಿಕಾಲವು ಸಾಧನೆಗಾಗಿ ಪೂರಕವಾಗಿದ್ದು ಈ ಕಾಲದಲ್ಲಿ ನಾವೆಲ್ಲರೂ ಸಮರ್ಪಣಾಭಾವದಿಂದ ಸಮಷ್ಟಿ ಸಾಧನೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಅದರ ಲಾಭವಾಗಲಿದೆ. ಅದಕ್ಕಾಗಿ ಎಲ್ಲ ಸಾಧಕರು ಈಶ್ವರನು ನೀಡಿದ ಸುವರ್ಣಾವಕಾಶದ ಲಾಭವನ್ನು ಪಡೆದುಕೊಳ್ಳಬೇಕು !

ಕೊರೋನಾದ ಪಿಡುಗಿನಲ್ಲಿ ಲಕ್ಷಗಟ್ಟಲೆ ಜನರು ಸಾವನ್ನಪ್ಪಿದ್ದರು ಹಾಗೂ ಕೋಟಿಗಟ್ಟಲೆ ಜನರು ಸೋಂಕಿಗೆ ತುತ್ತಾದರು; ಆದರೆ ಈಶ್ವರನ ಕೃಪೆಯಿಂದ ಎಲ್ಲ ಸಾಧಕರು ಈ ಆಪತ್ಕಾಲದಿಂದಲೂ ಹೊರಬಂದರು. ಈಶ್ವರ ಹಾಗೂ ಗುರುಗಳು ಸಾಧಕರ ಮೇಲೆ ಮಾಡಿದ ಅಪಾರ ಕೃಪೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ; ಆದರೆ ಸಾಧಕರು ಈ ಬಗ್ಗೆ ಕೃತಜ್ಞತೆಯನ್ನು ಖಂಡಿತವಾಗಿಯೂ ವ್ಯಕ್ತಪಡಿಸಬಹುದು. ಈ ಕೃತಜ್ಞತೆ ಕೇವಲ ಶಬ್ದಗಳಿಂದ ವ್ಯಕ್ತವಾಗುವಂತೆ ಇರದೇ, ಕೃತಿಯಿಂದ ಅವರಿಗೆ ಇಷ್ಟವಿರುವ ಕೃತಜ್ಞತೆ ಅಂದರೆ ‘ಧರ್ಮಪ್ರಸಾರ ! ಧರ್ಮಪ್ರಸಾರದಿಂದ ನೂತನವಾಗಿ ಆರಂಭವಾಗುವ ಕಾರ್ಯದಲ್ಲಿ ಸಹಭಾಗಿಯಾಗಿ ಈ ಅಮೂಲ್ಯ ಸದಾವಕಾಶದ ಲಾಭವನ್ನು ಪಡೆದುಕೊಂಡು ಗುರುಕೃಪೆಗಾಗಿ ಪಾತ್ರರಾಗೋಣ !

ಇದಕ್ಕಾಗಿ ‘ನಿಮಗೆಲ್ಲರಿಗೂ ಶಕ್ತಿ ಸಿಗಲಿ, ಎಂದು ಗುರುಗಳ ಚರಣಗಳಲ್ಲಿ ಪ್ರಾರ್ಥನೆ !

– (ಶ್ರೀಸತ್‌ಶಕ್ತಿ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೨.೧.೨೦೨೧)