ಪರಾತ್ಪರ ಗುರು ಡಾ. ಆಠವಲೆಯವರು ಆಶ್ರಮದ ಸ್ವಚ್ಛತೆ ಮತ್ತು ಸಾಧನೆ ಇವುಗಳ ಕುರಿತು ಮಾಡಿದ ಮಾರ್ಗದರ್ಶನ

ಪರಾತ್ಪರ ಗುರು ಡಾ. ಆಠವಲೆ

೧. ಆಶ್ರಮದ ಕೋಣೆಗಳಲ್ಲಿ ನಿಯಮಿತವಾಗಿ ಸ್ವಚ್ಛತೆ ಆಗುತ್ತಿರಲಿಲ್ಲ, ಮೇಲಿಂದ ಮೇಲೆ ಆದ ತಪ್ಪುಗಳೇ ಪುನಃ ಪುನಃ ಆಗುತ್ತಿದ್ದವು, ಈ ರೀತಿ ಆಶ್ರಮದ ಇತರ ಕಾರ್ಯಗಳಲ್ಲಿಯೂ ಆಗುತ್ತಿತ್ತು, ‘ಅದಕ್ಕಾಗಿ ಸಾಧನೆಯ ದೃಷ್ಟಿಯಿಂದ ಏನು ಮಾಡಬೇಕು ?’, ಎಂಬುದು ನನಗೆ ತಿಳಿಯುತ್ತಿರಲಿಲ್ಲ:

ಒಂದು ದಿನ ನಾನು ‘ದೈನಿಕ ಸನಾತನ ಪ್ರಭಾತದಲ್ಲಿ, ‘ಸ್ವಚ್ಛತೆ ಇದ್ದರೆ ದೇವರೂ ಅಲ್ಲಿ ಬರುತ್ತಾರೆ’, ಎಂಬ ಒಂದು ಚೌಕಟ್ಟನ್ನು ಓದಿದೆ. ಅದನ್ನು ಓದಿದಾಗ, ‘ನಾನು ಯಾವ ಕೋಣೆಯಲ್ಲಿರುತ್ತೇನೆಯೋ, ಅಲ್ಲಿಯೂ ನಿಯಮಿತವಾಗಿ ಸ್ವಚ್ಛತೆಯಾಗುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬಂದಿತು. ಇದರ ಬಗ್ಗೆ ಕಾರ್ಯಪದ್ಧತಿಯನ್ನು ನಿಶ್ಚಯಿಸಿದ್ದರೂ ಅದು ಹಾಗೆಯೇ ಆಗುತ್ತದೆ. ಸಾಧಕಿಯರಿಗೆ ಹೇಳಿದರೂ ಮೇಲಿಂದ ಮೇಲೆ ಆ ತಪ್ಪುಗಳೇ ಪುನಃ ಪುನಃ ಆಗುತ್ತವೆ ಅಥವಾ ಅಸ್ವಚ್ಛತೆ ಹಾಗೇ ಇರುತ್ತದೆ. ಜವಾಬ್ದಾರ ಸಾಧಕಿಯರೂ ಈ ಬಗ್ಗೆ ಅನೇಕ ಬಾರಿ ಸ್ವಭಾವದೋಷ ನಿರ್ಮೂಲನೆ ಸತ್ಸಂಗವನ್ನು ತೆಗೆದುಕೊಂಡರೂ, ಆ ತಪ್ಪುಗಳೇ ಪುನಃ ಪುನಃ ಆಗುತ್ತಿರುತ್ತವೆ. ಇದರ ಬಗ್ಗೆ ‘ಇನ್ನೂ ಏನು ಮಾಡಬೇಕು ?’, ಎಂಬುದು ನನಗೆ ನಿರ್ದಿಷ್ಟವಾಗಿ ತಿಳಿಯುತ್ತಿರಲಿಲ್ಲ. ಇದು ಕೇವಲ ಈ ಸ್ವಚ್ಛತೆಯ ಬಗ್ಗೆಯಷ್ಟೇ ಅಲ್ಲ,  ಆಶ್ರಮದಲ್ಲಿ ಇತರ ಕೃತಿಗಳ ಬಗ್ಗೆ ಮತ್ತು ಕಾರ್ಯಪದ್ಧತಿಗಳ ಸಂದರ್ಭದಲ್ಲಿಯೂ ಹೀಗೆ ಆಗುತ್ತದೆ. ಇಂತಹ ಸಮಯದಲ್ಲಿ ‘ಸಾಧನೆಯೆಂದು ನಾವು ಏನು ಮಾಡ ಬೇಕು ?’, ಎಂಬುದು ತಿಳಿಯುತ್ತಿರಲಿಲ್ಲ.

೨. ಪರಾತ್ಪರ ಗುರು ಡಾ. ಆಠವಲೆಯವರು ಸ್ವಚ್ಛತೆಯ  ಅಡಚಣೆಗಳ ಬಗ್ಗೆ ಹೇಳಿದ ಮಹತ್ವಪೂರ್ಣ ಅಂಶಗಳು

ಅ. ಕೋಣೆಯ ಸ್ವಚ್ಛತೆ ಒಂದು ವೇಳೆ ಗಡಿಬಿಡಿಯ ಸಮಯದಲ್ಲಿ, ಉದಾ. ಅಧಿವೇಶನ ಅಥವಾ ಯಾವುದಾದರೊಂದು  ಸಮಾರಂಭ ಇತ್ಯಾದಿ ಆಗದಿದ್ದರೆ, ಆ ಸಮಯದಲ್ಲಿ ತಾರತಮ್ಯದಿಂದ ನೋಡಬೇಕು. ಎಷ್ಟು ಸಾಧ್ಯವಿದೆಯೋ, ಅಷ್ಟು ಸ್ವಚ್ಛ, ಅಚ್ಚುಕಟ್ಟಾಗಿ ಇಡಲು ಪ್ರಯತ್ನವನ್ನು ಮಾಡಬೇಕು. ಈಗ ಇಂತಹ ಸಮಾರಂಭಗಳು ನಿರಂತರವಾಗಿ ನಡೆಯುತ್ತಿರುತ್ತವೆ, ಇವುಗಳಿಗಾಗಿಯೂ ಒಂದು ಕಾರ್ಯಪದ್ಧತಿಯನ್ನು ನಿಶ್ಚಯಿಸಬಹುದು.

ಆ. ಕಾರ್ಯಪದ್ದತಿಯನ್ನು ನಿಶ್ಚಯಿಸಿದರೂ ಪಾಲನೆಯಾಗದಿದ್ದರೆ, ಮುಂದೆ ಜವಾಬ್ದಾರ ಸಾಧಕರಿಗೆ ಬರೆದು ಕೊಡಬೇಕು,  ಹೀಗೆ ಮಾಡುವುದು ನಮ್ಮ ಸಾಧನೆಯಾಗಿದೆ.

ಇ. ಜವಾಬ್ದಾರ ಸಾಧಕರು ಸತ್ಸಂಗ ತೆಗೆದುಕೊಂಡರೂ ಆ ತಪ್ಪುಗಳೇ ಪುನಃ ಪುನಃ ಆಗುತ್ತಿದ್ದರೆ ಅವುಗಳಿಗೆ ಸಂಬಂಧಿಸಿದ ಸಾಧಕರಿಗೆ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಲು ಹೇಳಬೇಕು, ಹೀಗೆ ಮಾಡುವುದು ನಮ್ಮ ಸಾಧನೆಯಾಗಿದೆ.

ಈ. ಪ್ರಾಯಶ್ಚಿತ್ತ ಪದ್ಧತಿಯನ್ನು ಅವಲಂಬಿಸಿದರೂ ಅವರಲ್ಲಿ ಬದಲಾವಣೆ ಆಗದಿದ್ದರೆ, ಅವರ ಸಾಧನೆಯ ಹಾನಿಯಾಗುವುದು ಮತ್ತು ದೇವರು ಅವರಿಗೆ ಕರ್ಮಫಲನ್ಯಾಯಕ್ಕನುಸಾರ ಫಲಗಳನ್ನು ನೀಡುವನು.

೩. ಯಾವುದಾದರೊಂದು ಅಯೋಗ್ಯ ಘಟನೆ ಘಟಿಸುತ್ತಿರುವುದು ಕಾಣಿಸಿದರೆ, ‘ಏನು ಮಾಡುವುದು ಯೋಗ್ಯವಾಗಿದೆ ?’, ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಹಾಗೆ ಆಗಲು ಮುಂದುಮುಂದಿನ ಹಂತಕ್ಕೆ ಹೋಗಿ ಪ್ರಯತ್ನಿಸಬೇಕು. ಹೀಗೆ ಮಾಡುವುದು ನಮ್ಮ ಸಾಧನೆಯಾಗಿದೆ  ಹಾಗೆಯೇ ಅದರ ಸಂಸ್ಕಾರವು ನಮ್ಮ ಮನಸ್ಸಿನ ಮೇಲಾಗಿ ಆ ರೀತಿಯ ವೃತ್ತಿ ನಿರ್ಮಾಣವಾಗುವುದು ಆವಶ್ಯಕವಾಗಿದೆ

ಅಯೋಗ್ಯ ಕೃತಿಗಳನ್ನು ತಡೆಯುವ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನಂತೆ ಹೇಳಿದರು, ‘ಮುಂದೆ ಮುಂದೆ ಹೇಗೆ ಹೇಳುವುದು ?’, ಎಂಬ ಸಂದೇಹ ನಮ್ಮ ಮನಸ್ಸಿನಲ್ಲಿ ಬರಬಾರದು, ವ್ಯವಸ್ಥೆಯಲ್ಲಿ ಬದಲಾವಣೆ ಆಗದಿದ್ದರೆ, ಏನಾದರೂ ಮಾಡಬೇಕೋ ಅಥವಾ ಬೇಡವೋ ? ದೇಶದಾದ್ಯಂತ ಅನೇಕ ಅಯೋಗ್ಯ ಘಟನೆಗಳು ಘಟಿಸುತ್ತಿರುತ್ತವೆ. ಅವುಗಳ ಬಗ್ಗೆ ಸಾಧಕರು, ಹಿಂದುತ್ವನಿಷ್ಠರು ಇತ್ಯಾದಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಾರೆ. ಕೆಲವೊಮ್ಮೆ ‘ದೂರು ದಾಖಲಿಸಿದರೂ ಏನೂ ಆಗುವುದಿಲ್ಲ’, ಎಂಬುದೂ ಅವರಿಗೂ ಗೊತ್ತಿರುತ್ತದೆ, ಆದರೂ ಹಾಗೆ ಮಾಡುತ್ತಾರೆ. ನಮ್ಮ ಸುತ್ತಲೂ ‘ಯಾವ ಅಯೋಗ್ಯ ಘಟನೆಗಳು ಘಟಿಸುತ್ತಿವೆ ? ಅವುಗಳಲ್ಲಿ ಏನು ಮಾಡುವುದು ಯೋಗ್ಯವಾಗಿದೆ ? ಮತ್ತು ಅವುಗಳನ್ನು ಮಾಡಲು ನಾನೇನು ಮಾಡಬೇಕು ?’, ಎಂಬುದನ್ನು ತಿಳಿದುಕೊಳ್ಳುವ  ಮತ್ತು ತಿಳಿದ ನಂತರ ಅದನ್ನು ಮಾಡುವ ವೃತ್ತಿ ನಮ್ಮಲ್ಲಿ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಈ ‘ಸಂಸ್ಕಾರ’ವಾಗುವುದು ಮಹತ್ವದ್ದಾಗಿದೆ. ಇದು ಒಂದು ಬೀಜವಾಗಿದೆ, ಅದು ಸಣ್ಣ ಸಣ್ಣ ಕೃತಿಗಳಿಂದ ನಮ್ಮಲ್ಲಿ ಬಂದು ಒಂದು ವೃತ್ತಿಯಾಗಲಿದೆ. ಇದಕ್ಕಾಗಿ ಇದೆಲ್ಲವನ್ನು ನಮಗೆ ಮಾಡಬೇಕಾಗುತ್ತದೆ. ಇತರರಲ್ಲಿ ಬದಲಾವಣೆ ಯಾಗುವುದೋ, ಅಥವಾ ಇಲ್ಲವೋ ?’, ಇದಕ್ಕಾಗಿ ಅಲ್ಲ ‘ನನ್ನಲ್ಲಿ ಆ ಸಂಸ್ಕಾರ ನಿರ್ಮಾಣವಾಗಬೇಕು’, ಎಂಬುದಕ್ಕಾಗಿ  ಇದನ್ನು ಮಾಡಬೇಕಾಗಿದೆ.  ಇದನ್ನು ಮಾಡುವಾಗ ಅಕ್ಕಪಕ್ಕದಲ್ಲಿ ಬದಲಾವಣೆಯಾಗುತ್ತಾ ಹೋಗಿ ಅದರಿಂದಲೇ ಮುಂದೆ ಹಿಂದೂ ರಾಷ್ಟ್ರವು ಬರಲಿದೆ’.

– ಹೊಮೀಯೋಪಥಿ ವೈದ್ಯೆ (ಕು.) ಆರತಿ ತಿವಾರಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧೨.೨೦೧೭)