ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಈ ಲೇಖನದಿಂದ ಪಂಚತಾರಾ ಉಪಾಹಾರಗೃಹಗಳ ಪಾಕಶಾಲೆಯಲ್ಲಿ ಅಡುಗೆ ತಯಾರಿಸುವವರಿಗೆ ಎಷ್ಟು ತೊಂದರೆಯಾಗುತ್ತದೆ, ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಆ ಅಡುಗೆಯನ್ನು ಸೇವಿಸುವವರಿಗೆ ಎಷ್ಟು ತೊಂದರೆಯಾಗುತ್ತಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !- (ಪರಾತ್ಪರ ಗುರು) ಡಾ. ಆಠವಲೆ
ಅನುಭೂತಿ
ಅ. ‘ಉಪಾಹಾರಗೃಹ ಮತ್ತು ಆಶ್ರಮಗಳ ಪಾಕಶಾಲೆಗಳಲ್ಲಿ ವ್ಯತ್ಯಾಸ ಈ ಲೇಖನವನ್ನು ಬರೆಯುವಾಗ ಗುರುದೇವರು ನೀಡಿರುವ (ಲೇಖನಿ) ಪೆನ್ ಮತ್ತು ಸದ್ಗುರು ಸ್ವಾತಿ ಖಾಡ್ಯೆಯವರು ನೀಡಿರುವ ಪುಸ್ತಕವನ್ನು ಉಪಯೋಗಿಸಿರುವುದರಿಂದ ಬರೆಯುವಾಗ ನೆನಪಾಗದಿರುವ ಅನೇಕ ವಿಷಯಗಳು ನೆನಪಾಗಲು ಆರಂಭವಾದವು.
ಆ. ಉಪಾಹಾರಗೃಹದಲ್ಲಿ ಒಂದೇ ಪಾತ್ರೆಯಲ್ಲಿ ಶಾಕಾಹಾರ ಮತ್ತು ಮಾಂಸಾಹಾರ ಭೋಜನವನ್ನು ತಯಾರಿಸುತ್ತಾರೆ, ಎನ್ನುವ ವಿಷಯವನ್ನು ಬರೆಯುವಾಗ ನನಗೆ ಆ ಪಾತ್ರೆ ಕಾಣಿಸಿತು.
ಮಾಂಸಾಹಾರವನ್ನು ಬೇಯಿಸಿದ ಪಾತ್ರೆಯ ತಳದಲ್ಲಿ ಕಪ್ಪುಶಕ್ತಿಯು ಸಂಗ್ರಹವಾಗಿ ‘ಅದು ಪಾತ್ರೆಯ ಅಂಚಿನಿಂದ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುತ್ತಿದೆ, ಎಂದು ಅರಿವಾಯಿತು. ‘ದೇವರೇ ಇದನ್ನು ಬರೆಯಲು ನೀವೇ ಬುದ್ಧಿಯನ್ನು ಕೊಟ್ಟು ಬರೆಯಿಸಿಕೊಂಡಿರಿ, ಅದನ್ನು ನಿಮ್ಮ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ಅದೇರೀತಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರು ಸ್ವಾತಿ ಖಾಡ್ಯೆ ಇವರು ಅನುಭೂತಿಯನ್ನು ನೀಡಿದರು; ಅದಕ್ಕಾಗಿ ಅವರ ಚರಣಗಳಿಗೂ ಅನೇಕ ಕೃತಜ್ಞತೆಗಳು !
– ಶ್ರೀ. ಋತ್ವಿಜ ಢವಣ, ಸನಾತನ ಆಶ್ರಮ, ರಾಮನಾಥಿ ಗೋವಾ. (೪.೬.೨೦೧೯)