ಮಹರ್ಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ಜೀವಗಳ ವ್ಯಾಪಕ ಸ್ತರದಲ್ಲಿ ಸಮಷ್ಟಿ ಸಾಧನೆಯಾಗಬೇಕೆಂದು, ಅವರಿಗೆ ಕಲೆಯ ವಿಷಯಗಳ ಶಿಕ್ಷಣವನ್ನು ನೀಡದೇ ‘ಸಂತರಾಗಲು ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು

ಕು. ಪ್ರಿಯಾಂಕಾ ಲೋಟಲೀಕರ

ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಮಕ್ಕಳಲ್ಲಿ ಜನ್ಮದಿಂದಲೇ ವಿವಿಧ ಕಲೆಗಳನ್ನು ಕಲಿಯುವ ಸಾಮರ್ಥ್ಯವಿರುವುದರಿಂದ ಅವರಿಗೆ ಅನೇಕ ಕಲೆಗಳ ಜ್ಞಾನವಿರುತ್ತದೆ

‘ಆಧ್ಯಾತ್ಮಿಕ ಮಟ್ಟವು ಉತ್ತಮವಾಗಿರುವ, ಅಂದರೆ ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಮಕ್ಕಳಲ್ಲಿ ಮೂಲದಲ್ಲಿಯೇ ವಿವಿಧ ಗುಣಗಳಿರುತ್ತವೆ. ಅದೇ ರೀತಿ ಅವರಲ್ಲಿ ವಿವಿಧ ಕಲೆಗಳನ್ನು ಕಲಿಯುವ ಸಾಮರ್ಥ್ಯವೂ ಇರುವುದರಿಂದ ಅವರು ಸಹಜವಾಗಿಯೇ ಅನೇಕ ಕಲೆಗಳಲ್ಲಿ ಪಾರಾಂಗತರಾಗಿರುತ್ತಾರೆ. ಇದರ ಕೆಲವು ಉದಾಹರಣೆಗಳೆಂದರೆ ಕು. ಪ್ರಿಶಾ ಸಬರವಾಲ (ವಯಸ್ಸು ೧೧ ವರ್ಷ) ಇವಳು ಭರತನಾಟ್ಯಮ್, ತೈಕ್ವಾಂಡೋ (ಕರಾಟೆಯ ಒಂದು ಪ್ರಕಾರ), ಕೊಳಲು ನುಡಿಸುವುದು, ಪಿಯಾನೋ ನುಡಿಸುವುದು, ಚಿತ್ರಗಳನ್ನು ಬಿಡಿಸುವುದು ಮುಂತಾದ ಕಲೆಗಳಲ್ಲಿ ಪಾರಂಗತಳಾಗಿದ್ದಾಳೆ ಮತ್ತು ಕು. ಪೂರ್ತಿ ಲೋಟಲೀಕರ (ವಯಸ್ಸು ೬ ವರ್ಷ) ಇವಳು ಕಥ್ಥಕ್, ಜೂಡೋ, ಚಿತ್ರಕಲೆ, ಅಭಿನಯ, ವಾಕ್ಪಟುತ್ವ ಮುಂತಾದ ಕಲೆಗಳಲ್ಲಿ ಪಾರಂಗತಳಾಗಿದ್ದಾಳೆ.

ಸಮಷ್ಟಿ ಕಲ್ಯಾಣಕ್ಕಾಗಿ ದೈವೀ ಬಾಲಕರ ಜನ್ಮವು  ಆಗಿರುವುದರಿಂದ ಅವರಿಗೆ ವ್ಯಾಪಕ ಸ್ತರದಲ್ಲಿನ ಸಮಷ್ಟಿ ಸಾಧನೆಯನ್ನು ಮಾಡಲು ಹೇಳುವುದು

ಒಮ್ಮೆ ಕು. ಪ್ರಿಶಾಳು ಪರಾತ್ಪರ ಗುರು ಡಾಕ್ಟರರಿಗೆ, “ನಾನು ನೃತ್ಯಗಳ ಮಾಧ್ಯಮದಿಂದ ಸಾಧನೆಯನ್ನು ಮಾಡಲೇ ?” ಎಂದು ಕೇಳಿದಾಗ, ಪ್ರಿಶಾ ನೃತ್ಯದಲ್ಲಿ ಪಾರಂಗತಳಾಗಿದ್ದರೂ ಪರಾತ್ಪರ ಗುರು ಡಾಕ್ಟರರು ಅವಳಿಗೆ ‘ಬೇಡ’ ಎಂದು ಹೇಳಿದರು. ಸಮಷ್ಟಿಯ ಕಲ್ಯಾಣಕ್ಕಾಗಿ ದೈವೀ ಬಾಲಕರ ಜನ್ಮವಾಗಿದ್ದು ‘ಸಮಾಜದಲ್ಲಿ ಸಾತ್ತ್ವಿಕತೆಯನ್ನು ಪಸರಿಸುವ’ ಉದ್ದೇಶದಿಂದ ಈಶ್ವರನು ಅವರನ್ನು ಪೃಥ್ವಿಯ ಮೇಲೆ ಜನ್ಮಕ್ಕೆ ಹಾಕಿದ್ದಾನೆ. ಆದುದರಿಂದ ಅವರು ಆದಷ್ಟು ಹೆಚ್ಚು ಸಮಷ್ಟಿ ಸಾಧನೆಯನ್ನು ಮಾಡಿ ಬೇಗನೇ ಸಂತರಾಗಬೇಕು’, ಎಂಬುದು ಪರಾತ್ಪರ ಗುರು ಡಾಕ್ಟರರ ಉದ್ದೇಶವಾಗಿದೆ. ಅವರು ಯಾವುದಾದರೊಂದು ಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡಿದರೆ, ಅದು ಕೇವಲ ವ್ಯಷ್ಟಿ ಸಾಧನೆಯಾಗುವುದು; ಆದರೆ ವ್ಯಾಪಕ ಸಾಧನೆಯಾಗಲು ಅವರು ಕಲೆಗಳಲ್ಲಿ ಸಿಲುಕದೇ ಸಮಷ್ಟಿಯಲ್ಲಿದ್ದು ಕಲಿಯುವುದು ಆವಶ್ಯಕವಾಗಿರುತ್ತದೆ. ಹಾಗಾಗಿ ಪರಾತ್ಪರ ಗುರು ಡಾಕ್ಟರರು ಅವಳಿಗೆ ಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡದೇ ವ್ಯಾಪಕ ಸ್ತರದಲ್ಲಿ ಸಮಷ್ಟಿ ಸಾಧನೆ ಮಾಡಲು ಹೇಳಿದರು.’ –  ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧೧.೨೦೧೭).