ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಸಂಸ್ಕೃತಿಗೆ ಲಭಿಸಿದ ಗೌರವಶಾಲಿ ಗುರುಪರಂಪರೆಯನ್ನು ಕೃತಜ್ಞತಾಪೂರ್ವಕ ಸ್ಮರಿಸುವ ದಿನ ಎಂದರೆ ಗುರುಪೂರ್ಣಿಮೆ. ಸಮಾಜಕ್ಕೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಗುರುಗಳ ಕಾರ್ಯವಾಗಿದೆ, ಅದೇ ರೀತಿ ಸಮಾಜಕ್ಕೆ ಕಾಲಾನುಸಾರ ಮಾರ್ಗದರ್ಶನ ಮಾಡುವುದೂ ಗುರುಪರಂಪರೆಯ ಕಾರ್ಯವಾಗಿದೆ. ಪ್ರಸ್ತುತ ಭಾರತ ಸಹಿತ ಸಂಪೂರ್ಣ ಪೃಥ್ವಿ ಸಂಕಟಕಾಲವನ್ನು ಎದುರಿಸುತ್ತಿದೆ.

ಗುರುಕೃಪೆ ಅಪಾರ ಧಾರೆ  ಸದಾ ಇರಲಿ ಗುರುಕೃಪೆಯ ಛಾಯೆ

ಶಿಷ್ಯನ ಜೀವನದ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತ ಮೇಲಿನ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುಗಳೇ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಪ್ರತ್ಯಕ್ಷ ಸಾಧನೆಯನ್ನು ಕಲಿಸುತ್ತಾರೆ.

ವಸಿಷ್ಠ ಕುಂಡದ ಕಥೆ ಮತ್ತು ಆ ಸ್ಥಾನದ ಮಹತ್ವ

ವಿಶೇಷವೆಂದರೆ ಇದರ ಅಕ್ಕಪಕ್ಕದಲ್ಲಿ ಮಂಜುಗಡ್ಡೆ ಇದ್ದರೂ ಈ ನೀರು ಮಾತ್ರ ಮಂಜುಗಡ್ಡೆ (ಹಿಮಗಡ್ಡೆ) ಆಗುವುದಿಲ್ಲ ಮತ್ತು ಇಷ್ಟು ಕಡಿಮೆ ತಾಪಮಾನದಲ್ಲಿಯೂ ಈ ನೀರು ಬಿಸಿಯಾಗಿರುತ್ತದೆ ಈ ಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಬೆಂಗಳೂರಿನ ಓರ್ವ ಗೀತೆಯ ಅಧ್ಯಯನಕಾರರು ಗೀತಾವ್ರತಿ ಎಂಬ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಎಂಬ ಗ್ರಂಥದ ಬಗ್ಗೆ ಅವರ ಮನೋಗತ ಮತ್ತು ಪರಾತ್ಪರ ಗುರು ಡಾಕ್ಟರರು ಈ ಗ್ರಂಥದ ಬಗ್ಗೆ ತೆಗೆದ ಗೌರವೋದ್ಗಾರ !

ಗ್ರಂಥವನ್ನು ನೋಡುವಾಗ ಪರಾತ್ಪರ ಗುರು ಡಾಕ್ಟರರು, ಈ ಮಾಧ್ಯಮದಿಂದ ಅವರು ಪ್ರತ್ಯಕ್ಷ ಶ್ರೀಮದ್ಭಗವದ್ಗೀತೆಯನ್ನು ಜೀವಿಸಿದ್ದಾರೆ ! ಎಂದು ಹೇಳಿದರು. ಅವರು ಸಂಕಲನಕಾರರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿರುವುದಾಗಿ ಹೇಳಿ ಉತ್ತಮ ಆಧ್ಯಾತ್ಮಿಕ ಮಟ್ಟವಿಲ್ಲದೇ ಧರ್ಮಗ್ರಂಥಕ್ಕೆ ಸಂಬಂಧಿಸಿದ ಇಂತಹ ಕಾರ್ಯವು ಕೈಯಿಂದ ಆಗುವುದಿಲ್ಲ, ಎಂದೂ ಸ್ಪಷ್ಟಪಡಿಸಿದರು.

ಸಾಧನೆಯ ಬಗ್ಗೆ ಸದ್ಗುರು ರಾಜೇಂದ್ರ ಶಿಂದೆಯವರ ಮಾರ್ಗದರ್ಶನ

ನನ್ನ ಜನ್ಮದಿಂದ ಇಂದಿನವರೆಗೆ ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನು ನನಗೆ ಹೇಗೆ ಸಹಾಯ ಮಾಡಿದ್ದಾನೆ ? ಅವನು ನನಗೆ ಸಾಧನೆಯಲ್ಲಿಯೂ ಎಷ್ಟು ಸಹಾಯ ಮಾಡುತ್ತಿದ್ದಾನೆ ?’, ಇದನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಸತತವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ ‘ಭಗವಂತನು ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂಬ ಸಂಸ್ಕಾರವು ಅಂತರ್ಮನದ ಮೇಲೆ ಆಗಿ ಅಹಂಭಾವವು ಕಡಿಮೆಯಾಗಲು ಸಹಾಯವಾಗುತ್ತದೆ

ಮೈಸೂರು, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನ ೧೨ ಸಾಧಕರು ಜನನ-ಮರಣ ಚಕ್ರದಿಂದ ಮುಕ್ತ

ಗುರುಪೂರ್ಣಿಮೆಯ ನಿಮಿತ್ತ ಜಿಲ್ಲೆಗಳಲ್ಲಿ ಆಯೋಜಿಸಿದ ಆನ್‌ಲೈನ್ ಶಿಬಿರದಲ್ಲಿ ೬ ಜಿಲ್ಲೆಗಳ ೧೨ ಸಾಧಕರು ಜನನ-ಮರಣದ ಚಕ್ರದಿಂದ ಬಿಡುಗಡೆಯಾದರೆಂದು ಘೋಷಣೆ ಮಾಡಲಾಯಿತು ಮತ್ತು ಆ ನಿಮಿತ್ತ ಅವರಿಗೆ ಶ್ರೀಕೃಷ್ಣನ ಭಾವಚಿತ್ರದ ಉಡುಗೊರೆ ನೀಡಲಾಯಿತು.

ಕಲಿಯುವ ಸ್ಥಿತಿ ಇರುವ ಮೈಸೂರಿನ ಕು. ರೇವತಿ ಮೊಗೇರ

ಒಂದು ಸಲ ಭಾವಸತ್ಸಂಗ ಸೇವೆಯ ಸಂದರ್ಭದಲ್ಲಿ ಅವರಿಂದ ಒಂದು ಗಂಭೀರ ತಪ್ಪಾಗಿತ್ತು. ಸಂತರು ಅವರಿಗೆ ಅದನ್ನು ಅರಿವು ಮಾಡಿಕೊಟ್ಟರು. ಅದನ್ನು ಎಲ್ಲ ರಾಜ್ಯಸ್ತರದ ಸಭೆಗಳಲ್ಲಿ, ವ್ಯಷ್ಟಿ ವರದಿಯಲ್ಲಿ ಅದನ್ನು ಹೇಳಬೇಕು, ಸಂತರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೇ ಪಾಲಿಸಿದರು. ಎಲ್ಲೆಲ್ಲಿ ಅವಕಾಶ ಸಿಕ್ಕಿತೋ ಅಲ್ಲೆಲ್ಲ ತನ್ನ ತಪ್ಪನ್ನು ಹೇಳಿ ಕ್ಷಮೆ ಯಾಚನೆ ಮಾಡಿದರು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಕುಂಡಲಿಯ ಬಗ್ಗೆ ಹುಬ್ಬಳ್ಳಿಯ ಜ್ಯೋತಿಷಿ ಶ್ರೀ. ನಾಗರಾಜ ಸೊರಟೂರ ಇವರು ಮಾಡಿದ ವಿಶ್ಲೇಷಣೆ

‘ಶ್ರೀ ಗುರುಜಿಯವರ (ಪರಾತ್ಪರ ಗುರು ಡಾ. ಆಠವಲೆಯವರ) ಭವಿಷ್ಯದ ಬಗ್ಗೆ ೪ ವಿಷಯಗಳನ್ನು ಹೇಳಲು ನಾನು ಪ್ರಯತ್ನಿಸುತ್ತಿದ್ದೇನೆ. ಅವರ ಲಗ್ನ ಸ್ಥಾನದಲ್ಲಿ ಮಿಥುನ ರಾಶಿಯಿದೆ. ಅವರದ್ದು ಮಕರ ರಾಶಿಯಾಗಿದ್ದು ನಕ್ಷತ್ರವು ಉತ್ತರಾಷಾಢಾ (೩ ನೇ ಚರಣ) ಇದೆ. ಉತ್ತರಾಷಾಢಾ (೩ ನೇ ಚರಣ) ನಕ್ಷತ್ರಕ್ಕನುಸಾರ ‘ಡಾಕಪ್ಪಾ’ ಎಂಬುದು ಅವರ ಜನ್ಮನಾಮವಾಗಿದೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಭಾವಪೂರ್ಣ ನಾಮಜಪವಾಗಲು ಪ್ರತಿಯೊಂದು ನಾಮಜಪಕ್ಕೆ ಭಾವಯುಕ್ತ ವಿಚಾರಗಳನ್ನು ಜೋಡಿಸಬೇಕಾಗುತ್ತದೆ. ಭಾವಜಾಗೃತಿಯ ಪ್ರಯತ್ನಗಳಿಂದ ಏಕಕಾಲದಲ್ಲಿ ಮನಸ್ಸು ಮತ್ತು ಬುದ್ಧಿ ಇವು ಶುದ್ಧವಾಗುತ್ತವೆ. ನಾಮಜಪದ ಚೈತನ್ಯವು ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಚೈತನ್ಯದ ಸಹಾಯದಿಂದ ಗುಣವೃದ್ಧಿಯಾಗುತ್ತದೆ.

ಕೊರೋನಾ ವಿಷಾಣುವಿನಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ವಿವಿಧ ಸಂತರು ಹೇಳಿದ ಉಪಾಸನೆ !

‘ಭಾರತೀಯ ದರ್ಶನಶಾಸ್ತ್ರ’ಗಳಲ್ಲಿ ವಿದೇಶಿ ಆಹಾರ ಹಾಗೂ ವಿದೇಶ ಪ್ರವಾಸ ಇವೆರಡನ್ನು ವರ್ಜ್ಯ ಎಂದು ಹೇಳಲಾಗಿದೆ. ವಿಕಾಸದ ಹೆಸರಿನಲ್ಲಿ ಮನುಷ್ಯನು ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಹಾಗೂ ಪೃಥ್ವಿ, ನೀರು, ಅಗ್ನಿ, ವಾಯು ಹಾಗೂ ಆಕಾಶ ಇವುಗಳೊಂದಿಗೆ ಆಟವಾಡಿದ್ದಾನೆ.