ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

ಪರಾತ್ಪರ ಗುರು ಡಾ. ಆಠವಲೆ

ಆಪತ್ಕಾಲದಲ್ಲಿ ಜೀವಂತವಾಗಿರಲು ಸಾಧನೆಯನ್ನು ಮಾಡಿರಿ !

‘ಸನಾತನ ಸಂಸ್ಕೃತಿಗೆ ಲಭಿಸಿದ ಗೌರವಶಾಲಿ ಗುರುಪರಂಪರೆಯನ್ನು ಕೃತಜ್ಞತಾಪೂರ್ವಕ ಸ್ಮರಿಸುವ ದಿನ ಎಂದರೆ ಗುರುಪೂರ್ಣಿಮೆ. ಸಮಾಜಕ್ಕೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಗುರುಗಳ ಕಾರ್ಯವಾಗಿದೆ, ಅದೇ ರೀತಿ ಸಮಾಜಕ್ಕೆ ಕಾಲಾನುಸಾರ ಮಾರ್ಗದರ್ಶನ ಮಾಡುವುದೂ ಗುರುಪರಂಪರೆಯ ಕಾರ್ಯವಾಗಿದೆ. ಪ್ರಸ್ತುತ ಭಾರತ ಸಹಿತ ಸಂಪೂರ್ಣ ಪೃಥ್ವಿ ಸಂಕಟಕಾಲವನ್ನು ಎದುರಿಸುತ್ತಿದೆ. ಈ ವರ್ಷವಿಡಿ ನೆರೆಹಾವಳಿ, ಗಲಭೆ, ಮಹಾಮಾರಿ, ಆರ್ಥಿಕ ಮುಗ್ಗಟ್ಟು ಇತ್ಯಾದಿ ಸಂಕಟಗಳ ಪರಿಣಾಮವನ್ನು ದೇಶವು ಭೋಗಿಸಬೇಕಾಯಿತು. ೨೦೨೦ ರಿಂದ  ೨೦೨೩ ರ ವರೆಗಿನ ಕಾಲವು ಭಾರತಕ್ಕಷ್ಟೇ ಅಲ್ಲ, ಸಂಪೂರ್ಣ ಜಗತ್ತಿಗಾಗಿ ಆಪತ್ತುಗಳ ಕಾಲವಾಗಿರಲಿದೆ. ಈ ಕಾಲದಲ್ಲಿ ಆರ್ಥಿಕ ಮುಗ್ಗಟ್ಟು, ಗೃಹಯುದ್ಧ, ಗಡಿಯಲ್ಲಿ ಯುದ್ಧ, ಪೃಥ್ವಿಯಲ್ಲಿ ಯುದ್ಧ ಹಾಗೂ ನೈಸರ್ಗಿಕ ಆಪತ್ತುಗಳು ಇವೆಲ್ಲವುಗಳನ್ನು ಜನಸಾಮಾನ್ಯರು ಎದುರಿಸಬೇಕಾಗಲಿದೆ. ಇಂತಹ ಆಪತ್ಕಾಲದಲ್ಲಿ ಜೀವಂತವಾಗಿರಲು ಹಾಗೂ ಸಮಾಧಾನ ದಿಂದ ಜೀವನ ನಡೆಸುವುದು ಒಂದು ಸವಾಲೇ ಆಗಲಿದೆ.

ಶ್ರೀಮದ್ಭಗವದ್ಗೀತೆಯಲ್ಲಿ, ‘ನ ಮೇ ಭಕ್ತಃ ಪ್ರಣಶ್ಯತಿ |’,

ಅಂದರೆ ‘ನನ್ನ ಭಕ್ತನ ನಾಶವಾಗುವುದಿಲ್ಲ’, ಎಂದು ಹೇಳಲಾಗಿದೆ.

ಜನಸಾಮಾನ್ಯರು ಸಾಧನೆ ಮಾಡದ ಕಾರಣ ಸಂಕಟಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗುತ್ತದೆ. ಭಗವಂತನು ಸಾಧನೆಯನ್ನು ಮಾಡುವ ಭಕ್ತನನ್ನು ಮಾತ್ರ ಸಂಕಟಕಾಲದಲ್ಲಿ ತಾನೇ ರಕ್ಷಣೆ ಮಾಡುತ್ತಾನೆ. ಪ್ರಸ್ತುತ ನಡೆಯುತ್ತಿರುವ ಆಪತ್ಕಾಲದಿಂದ ಪಾರಾಗಲು ಪ್ರತಿಯೊಬ್ಬರು ಸಾಧನೆ ಮಾಡುವುದು ಆವಶ್ಯಕವಿದೆ. ಗುರು ಇವರು ಕೇವಲ ದೇಹಧಾರಿ ರೂಪದಲ್ಲಿ ಮಾತ್ರವಲ್ಲ, ತತ್ತ್ವರೂಪದಲ್ಲಿಯೂ ಕಾರ್ಯನಿರತರಾಗಿರು ತ್ತಾರೆ. ಸಾಧನೆಯನ್ನು ಮಾಡುವವರ ಮೇಲೆ ಪ್ರತ್ಯಕ್ಷದಲ್ಲಿ ದೇಹಧಾರಿ ಗುರುಗಳ ಅಥವಾ ಪರೋಕ್ಷವಾಗಿ ಗುರುತತ್ತ್ವದ ಕೃಪೆಯು ಆಗುತ್ತಿರುತ್ತದೆ. ಸಾಧನೆಯನ್ನು ಪ್ರಾರಂಭಿಸಿದರೆ ಪ್ರತಿಯೊಬ್ಬರೂ ಗುರುತತ್ತ್ವದ ಕೃಪೆಯನ್ನು ಅನುಭವಿಸಲು ಸಾಧ್ಯವಾಗುವುದು. ಕೇವಲ ಆಪತ್ಕಾಲದಿಂದ ಪಾರಾಗಲು ಮಾತ್ರವಲ್ಲ ಜನ್ಮಜನ್ಮಾಂತರಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿಯೊಬ್ಬರು ಸಾಧನೆಯನ್ನು ಮಾಡಲೇಬೇಕು. ‘ಗುರುಪೂರ್ಣಿಮೆಯಿಂದ ತಮ್ಮೆಲ್ಲರಿಗೂ ಸಾಧನೆಯನ್ನು ಮಾಡುವ ಬುದ್ಧಿಯು ಪ್ರಾಪ್ತವಾಗಲಿ’, ಎಂದು ನಾನು ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ.’ – ಪರಾತ್ಪರ ಗುರು ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.