ಮೈಸೂರು, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನ ೧೨ ಸಾಧಕರು ಜನನ-ಮರಣ ಚಕ್ರದಿಂದ ಮುಕ್ತ

ಗುರುಪೂರ್ಣಿಮೆಯ ನಿಮಿತ್ತ ಜಿಲ್ಲೆಗಳಲ್ಲಿ ಆಯೋಜಿಸಿದ ಆನ್‌ಲೈನ್ ಶಿಬಿರದಲ್ಲಿ ೬ ಜಿಲ್ಲೆಗಳ ೧೨ ಸಾಧಕರು ಜನನ-ಮರಣದ ಚಕ್ರದಿಂದ ಬಿಡುಗಡೆಯಾದರೆಂದು ಘೋಷಣೆ ಮಾಡಲಾಯಿತು ಮತ್ತು ಆ ನಿಮಿತ್ತ ಅವರಿಗೆ ಶ್ರೀಕೃಷ್ಣನ ಭಾವಚಿತ್ರದ ಉಡುಗೊರೆ ನೀಡಲಾಯಿತು.

೧೮.೬.೨೦೨೦ ರಂದು ಶೇ. ೬೮ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ಕಾರವಾರದ ಸೌ. ಸುರೇಖಾ ಗುರವ (೬೨ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಘೋಷಿಸಿದರು. ಇವರಿಗೆ ಶೇ. ೬೫ ಮಟ್ಟದ ಶ್ರೀ. ಸೊಮೇಶ ಗುರವ ಇವರು ಉಡುಗೊರೆ ನೀಡಿದರು. ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮೈಸೂರಿನ ಸಾಧಕಿ ಕು. ರೇವತಿ ಮೊಗೇರ (೨೯ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಘೋಷಿಸಿದರು. ಇವರಿಗೆ ಶೇ. ೬೩ ಮಟ್ಟದ ಪೊನ್ನಮ್ಮ ಇವರು ಉಡುಗೊರೆ ನೀಡಿದರು.

೨೦.೬.೨೦೨೦ ರಂದು ಶ್ರೀ. ಕಾಶಿನಾಥ ಪ್ರಭು ಇವರು ಉಡುಪಿಯ ಸಾಧಕರಾದ  ಶ್ರೀಮತಿ ಸಾವಿತ್ರಿ ಐತಾಳ್ (೭೧ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೩ ತಲುಪಿದರೆಂದು ಘೋಷಿಸಿದರು. ಇವರಿಗೆ ಸೌ. ವಸಂತಿ ಪೂಜಾರಿ ಇವರು ಉಡುಗೊರೆ ನೀಡಿದರು. ಶ್ರೀ. ರಾಧಾಕೃಷ್ಣ ಭಟ್ (೬೧ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಶ್ರೀ. ಕಾಶಿನಾಥ ಪ್ರಭು ಇವರು ಘೋಷಿಸಿದರು. ಇವರಿಗೆ ಶೇ. ೬೧ ಮಟ್ಟದ ಸೌ. ಶೋಭಾ ಇವರು ಉಡುಗೊರೆ ನೀಡಿದರು.

ದಿನಾಂಕ ೨೦.೬.೨೦೨೦ ಬಳ್ಳಾರಿಯ ಶಿರಗುಪ್ಪದ ಸಾಧಕಿ ಸೌ. ಲಕ್ಷ್ಮೀದೇವಿ ಗವಿಸಿದ್ದಪ್ಪ (೭೩ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ಮತ್ತು ಸೌ. ವಿನೋದಾ ಮುಳ್ಳೂರ (೫೧ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಶ್ರೀ. ಕಾಶಿನಾಥ ಪ್ರಭು ಘೋಷಣೆ ಮಾಡಿದರು ಸೌ. ಲಕ್ಷ್ಮೀದೇವಿ ಗವಿಸಿದ್ದಪ್ಪ ಇವರಿಗೆ ಸೌ. ವಿನೋದಾ ಮುಳ್ಳೂರ ಇವರು ಹಾಗೂ ಸೌ. ವಿನೋದಾ ಮುಳ್ಳೂರ ಇವರಿಗೆ ಸೌ. ಲಕ್ಷ್ಮೀದೇವಿ ಗವಿಸಿದ್ದಪ್ಪ ಇವರು ಉಡುಗೊರೆ ನೀಡಿದರು.

೨೧.೬.೨೦೨೦ ರಂದು ಬೆಂಗಳೂರಿನ ಸಾಧಕರಾದ ಶ್ರೀ. ಗುರುರಾಜ ಶರ್ಮಾ (೪೦ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಪೂ. ರಮಾನಂದ ಗೌಡ ಇವರು ಘೋಷಿಸಿದರು. ಇವರಿಗೆ ಶೇ. ೬೩ ಮಟ್ಟದ ಶ್ರೀಮತಿ ಲಲಿತಮ್ಮ ಇವರು ಉಡುಗೊರೆ ನೀಡಿದರು. ಸೌ. ಕವಿತಾ ಸಕ್ರಿ (೫೦ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಪೂ. ರಮಾನಂದ ಗೌಡ ಇವರು ಘೋಷಿಸಿದರು. ಇವರಿಗೆ ಸೌ. ಶಾರದಾ ಯೋಗೀಶ ಇವರು ಉಡುಗೊರೆ ನೀಡಿದರು.

ದಿನಾಂಕ ೨೨.೬.೨೦೨೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರಾದ ಘೋಷಣೆಯನ್ನು ಪೂ. ರಮಾನಂದ ಗೌಡ ಇವರು ಸೌ. ಶಾರದಾ ಭಂಡಾರಕರ್ (೬೦ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧, ಶ್ರೀ. ಆನಂದ ಗೌಡ (೫೩ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧, ಶ್ರೀ. ಯೋಗೀಶ ಸಫಲ್ಯ (೫೫ ವರ್ಷ)ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಘೋಷಿಸಿದರು. ಇವರೆಲ್ಲರಿಗೆ ಶೇ. ೬೧ ಮಟ್ಟದ ಶ್ರೀ. ಕರುಣಾಕರ ಅಭ್ಯಂಕರ ಇವರು ಉಡುಗೊರೆ ನೀಡಿದರು. ಶ್ರೀ. ದಯಾನಂದ ಹೆಗ್ಡೆ (೪೯ ವರ್ಷ)  ಆಧ್ಯಾತ್ಮಿಕ ಮಟ್ಟ ಶೇ. ೬೧ ತಲುಪಿದರೆಂದು ಪೂ.ರಮಾನಂದ ಗೌಡ ಇವರು ಘೋಷಿಸಿದರು. ಇವರಿಗೆ ಶೇ. ೬೫ ಮಟ್ಟದ ಶ್ರೀ. ಸಾಂತಪ್ಪ ಗೌಡ ಇವರು ಉಡುಗೊರೆ ನೀಡಿದರು.