ವೈದ್ಯಕೀಯ ಶಾಸ್ತ್ರದಲ್ಲಿನ ಹೊಸಹೊಸ ಮಾಹಿತಿಗಳನ್ನು ಪಡೆಯಲು ಪ್ರೋತ್ಸಾಹ ನೀಡುವ ಪ್ರೇರಣಾಸ್ರೋತ ಮತ್ತು ಆಧಾರಸ್ತಂಭವಾಗಿರುವ ಪರಾತ್ಪರ ಗುರು ಡಾ. ಆಠವಲೆ !

ರಾಮನಾಥಿ ಆಶ್ರಮಕ್ಕೆ ಬೇರೆಬೇರೆ ಉಪಚಾರ ಪದ್ಧತಿಗಳನ್ನು ತಿಳಿದಿರುವ ವೈದ್ಯರು ಬರುತ್ತಿರುತ್ತಾರೆ. ಅವರ ಶಾಸ್ತ್ರಕ್ಕನುಸಾರ ಅವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ವಿವಿಧ ಉಪಚಾರಗಳನ್ನು ಮಾಡಲು ಹೇಳುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಅವರು ಹೇಳಿದಂತೆ ಅಕ್ಷರಶಃ ಪಾಲಿಸುತ್ತಾರೆ.

ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ (೪೧ ವರ್ಷ)

ಚಂದ್ರಣ್ಣ  ಪ್ರತಿಯೊಂದು ಸೇವೆ ಮಾಡುವಾಗ ಚೆಕ್‌ಲಿಸ್ಟ್ ಇರುತ್ತದೆ. ಅಧ್ಯಾತ್ಮಿಕ ದೃಷ್ಟಿಯಿಂದ ವಿಚಾರ ಮಾಡುತ್ತಾರೆ ತುಂಬಾ ಸೇವೆಗಳ ಜವಾಬ್ದಾರಿ ಇದ್ದರೂ ಒತ್ತಡ ಮಾಡಿಕೊಳ್ಳುವುದಿಲ್ಲ. ಪ್ರತಿಕ್ಷಣ ಉತ್ಸಾಹದಿಂದ ಇರುತ್ತಾರೆ ಅಂತರ್ಮುಖರಾಗಿರುತ್ತಾರೆ. ಯಾರಿಂದಾದರೂ ತಪ್ಪಾದರೆ ತಕ್ಷಣ ಹೇಳುತ್ತಾರೆ. ಅವರಲ್ಲಿ ತುಂಬಾ ಪ್ರೇಮಭಾವ ಇದೆ.

ಸಾಧಕರಲ್ಲಿ ಸಾಧಕತ್ವ ನಿರ್ಮಾಣವಾಗಬೇಕೆಂದು ತಮ್ಮ ಪ್ರತಿಯೊಂದು ಕೃತಿಯಿಂದ, ಮಾತುಗಳಿಂದ ಮತ್ತು ಅಮೂಲ್ಯ ಕಲಿಕೆಯಿಂದ ಸಾಧಕರನ್ನು ಕ್ಷಣಕ್ಷಣಕ್ಕೂ ರೂಪಿಸುವ ಸರ್ವೋತ್ತಮ ಗುರು ಪರಾತ್ಪರ ಗುರು ಡಾ. ಆಠವಲೆ !

‘ಸಾಧಕರ ಸಮಯ ವ್ಯರ್ಥವಾಗಬಾರದು ಮತ್ತು ಅವರಿಗೆ ಸೇವಾಕೇಂದ್ರದ ಹೆಚ್ಚೆಚ್ಚು ಲಾಭವಾಗಬೇಕೆಂದು’, ಕಾಳಜಿ ವಹಿಸುತ್ತಿದ್ದರು. ಒಂದು ಸಲ ಓರ್ವ ಸಾಧಕನಿಗೆ ಯಾವುದೇ ಸೇವೆ ಇರಲಿಲ್ಲ. ಆಗ ಅವರು ಅವನಿಗೆ ಹಳೆಯ ಕೀಲಿಕೈಗಳನ್ನು ಇಟ್ಟಿರುವ ಡಬ್ಬವನ್ನು ಕೊಟ್ಟು ಕೀಲಿಕೈಗಳ ವರ್ಗೀಕರಣ ಮಾಡಲು ಹೇಳಿದರು.

ಜ್ಞಾನಚಕ್ಷುಗಳು ನಿನ್ನವು | ಜ್ಞಾನದ ಸ್ವರೂಪವು | ಆಂತರ್ಯದ ಜ್ಞಾನರಾಜ ||

ನಮಗೆ ತಿಳಿಯದಂತೆ ‘ಗುರುದೇವರು ನಮ್ಮನ್ನು ಮಾಯೆ ಹಾಗೂ ಸಂಸಾರಗಳ ಬಂಧನದಿಂದ ಹೇಗೆ ಮುಕ್ತಗೊಳಿಸಿದರು ?’, ಎಂಬ ವಿಚಾರ ಮಾಡುವುದು ಅಸಾಧ್ಯವಿದೆ. ಯೋಗ್ಯ ಸಮಯದಲ್ಲಿ ಮಾರ್ಗದರ್ಶನ, ಶುದ್ಧಿಸತ್ಸಂಗ, ಭಾವಸತ್ಸಂಗ ಮುಂತಾದ ಮಾಧ್ಯಮಗಳಿಂದ ಸಾಧನೆಯ ಜ್ಞಾನವನ್ನು ನೀಡಿ ನಮ್ಮನ್ನು ಸುಧಾರಿಸುವ ಪದ್ಧತಿಯು ಅವರ ಅವತಾರಿ ಕಾರ್ಯದ ದರ್ಶಕವಾಗಿದೆ.

ಇಂದಿನ ಹುಟ್ಟುಹಬ್ಬ

ಕು. ಗುರುದಾಸ ರಮಾನಂದ ಗೌಡ(೧೨ ವರ್ಷ), ಮಂಗಳೂರು, ಕರ್ನಾಟಕ ಆಷಾಢ ಶುಕ್ಲ ಪಕ್ಷ ಚತುರ್ದಶಿಯಂದು (೪.೭.೨೦೨೦) ಹುಟ್ಟು ಹಬ್ಬ ಇದೆ. ಈ ನಿಮಿತ್ತ ಆತನ ಕುಟುಂಬದವರಿಗೆ ಹಾಗೂ ಸಾಧಕರಿಗೆ ಗಮನಕ್ಕೆ ಬಂದ ಗುಣ ವೈಶಿಷ್ಟ್ಯಗಳನ್ನು ಆದಷ್ಟು ಬೇಗನೆ ಪ್ರಕಟಿಸಲಾಗುವುದು.

ಪ್ರತಿಯೊಂದು ಕಲಾಕೃತಿಯನ್ನು ಜಿಜ್ಞಾಸುವೃತ್ತಿಯಿಂದ ಅಭ್ಯಾಸ ಮಾಡಲು ಕಲಿಸಿಕೊಟ್ಟು ಕಲೆಯ ಮೂಲಕ ಸಾಧನೆ ಮಾಡುವ ವಿಷಯದಲ್ಲಿ ದಿಕ್ಕುತೋರುವ ಪರಾತ್ಪರ ಗುರು ಡಾ. ಆಠವಲೆ !

‘೨೦೦೭ರಲ್ಲಿ ‘ಸಾತ್ತ್ವಿಕ ರಂಗೋಲಿಗಳು ಎಂಬ ಲಘುಗ್ರಂಥಕ್ಕಾಗಿ ನಾನು ‘ಗಾಯತ್ರೀ ಪದ್ಮ ರಂಗೋಲಿಯನ್ನು ಬಿಡಿಸಿದೆ ಹಾಗೂ ಪರಾತ್ಪರ ಗುರುದೇವರಿಗೆ ಈ ರಂಗೋಲಿಯ ವೈಶಿಷ್ಟ್ಯವನ್ನು ಹೇಳಿದೆ, “ಈ ರಂಗೋಲಿಯ ಮಧ್ಯದ ಬಿಂದುವಿನಿಂದ ೮ ದಿಕ್ಕುಗಳಲ್ಲಿ ೫ ಚುಕ್ಕೆಗಳಿದೆ,  ಹಾಗೂ ಇದು ಬೇರೆ ರಂಗೋಲಿಗಳಿಗಿಂತ ಬೇರೆಯಾಗಿದೆ.

ಗುರುಗಳಿಲ್ಲದ ಜನ್ಮವೇ ವ್ಯರ್ಥ

ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ- ಮೃತ್ಯುವಿನ  ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !

ಚಿಕ್ಕ ಚಿಕ್ಕ ವಿಷಯಗಳನ್ನೂ ಜಿಜ್ಞಾಸೆಯಿಂದ ಕೇಳಿ ಅದರಿಂದ ಸಾಧಕರನ್ನು ರೂಪಿಸುವ ಗುರುದೇವರು !

ಪರಾತ್ಪರ ಗುರುದೇವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಾಧಕರ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೆಯೇ ಅವರು ಮಾಡುತ್ತಿರುವ ಸೇವೆ ಅಥವಾ ಕೃತಿಗಳನ್ನೂ ಹೆಚ್ಚೆಚ್ಚು ಸಾತ್ತ್ವಿಕ ಮತ್ತು ಪರಿಪೂರ್ಣ ಮಾಡುವ ಮಾರ್ಗವನ್ನು ಅವರು ಅವರಿಗೆ ತೋರಿಸುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ವಿವಿಧ ಸೇವೆಗಳಿಗೆ ದಿಶೆ ಸಿಕ್ಕಿತು ಮತ್ತು ಸಮಷ್ಟಿಗೆ ಅದರಿಂದ ಲಾಭವಾಯಿತು. 

ಗುರುಪೂರ್ಣಿಮೆಯ ನಿಮಿತ್ತ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಂದೇಶ

‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ,  ಮೊದಲಿಗೆ ಸಾಧನೆ ಪ್ರಾರಂಭಿಸಿ.

ಗುರುಪೂರ್ಣಿಮೆಯ ನಿಮಿತ್ತ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ.