ಬೆಂಗಳೂರಿನ ಓರ್ವ ಗೀತೆಯ ಅಧ್ಯಯನಕಾರರು ಗೀತಾವ್ರತಿ ಎಂಬ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಎಂಬ ಗ್ರಂಥದ ಬಗ್ಗೆ ಅವರ ಮನೋಗತ ಮತ್ತು ಪರಾತ್ಪರ ಗುರು ಡಾಕ್ಟರರು ಈ ಗ್ರಂಥದ ಬಗ್ಗೆ ತೆಗೆದ ಗೌರವೋದ್ಗಾರ !

ಶ್ರೀ. ಸತ್ಯಕಾಮ ಕಣಗಲೇಕರ

ಬೆಂಗಳೂರಿನ ಓರ್ವ ಅಧ್ಯಯನಕಾರರು ತಮ್ಮ ಗ್ರಂಥರಚನೆ ಗೀತಾಭ್ಯಾಸಯಾತ್ರೆಯ ಹಿಂದಿನ ಪ್ರೇರಣೆಯ ಬಗ್ಗೆ ಹಾಗೂ ಗ್ರಂಥ ಕರ್ತರ ಸಾಧನಾಪ್ರವಾಸದ ಬಗ್ಗೆ ಅವರ ಹಿರಿಯ ಸಹೋದರರು ಹೇಳಿದ ಅಂಶಗಳು ಮತ್ತು ಶ್ರೀ. ಸತ್ಯಕಾಮ ಕಣಗಲೇಕರ ಎಂಬ ಸಾಧಕನು ಗೀತಾಭ್ಯಾಸಯಾತ್ರೆ ಈ ಗ್ರಂಥವನ್ನು ಪರಾತ್ಪರ ಗುರು ಡಾಕ್ಟರರಿಗೆ ತೋರಿಸಿದಾಗ ಗ್ರಂಥದ ಬಗ್ಗೆ ಅವರ ಗೌರವೋದ್ಗಾರ ಇವುಗಳ ಬಗ್ಗೆ ಈ ಲೇಖನದಲ್ಲಿ ಮಂಡಿಸುತ್ತಿದ್ದೇವೆ.

೧. ಗೀತಾಭ್ಯಾಸಯಾತ್ರೆ ಈ ಗ್ರಂಥ ರಚನೆಯ ಪ್ರೇರಣೆ

೧ ಅ. ಸೇವಾನಿವೃತ್ತಿಯ ನಂತರ ಆರಂಭವಾದ ಸಾಧನೆ : ೧೯೯೫ ನೇ ಇಸವಿಯಿಂದ ನನ್ನ ಶ್ರೀಮದ್ಭಗವದ್ಗೀತೆಯ ಅಧ್ಯಯನವು ಆರಂಭವಾಯಿತು. ಸೇವಾನಿವೃತ್ತಿಯ ನಂತರ, ಅಂದರೆ ೨೦೦೭ ನೇ ಇಸವಿಯವರೆಗೆ ನನ್ನ ಈ ಅಧ್ಯಯನವು ಹಾಗೆಯೇ ಮಂದಗತಿಯಲ್ಲಿಯೇ ನಡೆದಿತ್ತು; ಆದರೆ ನಂತರ ಅದು ನನ್ನ ಜೀವನದ ಮುಖ್ಯ ವಿಷಯವಾಯಿತು. ಈ ಕಾಲಾವಧಿಯಲ್ಲಿ ಗೀತಾಧರ್ಮ ಮಂಡಳ ಪುಣೆ ಈ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದ್ದ ಶ್ರೀಮದ್ಭಗವದ್ಗೀತಾ, ಜ್ಞಾನೇಶ್ವರಿ, ತುಕಾರಾಮ ಗಾಥಾ ಈ ಗ್ರಂಥಗಳಿಗೆ ಸಂಬಂಧಿಸಿದ ಪರೀಕ್ಷೆ, ಹಾಗೆಯೇ ದಾಸಬೋಧ ಅಭ್ಯಾಸ ಮಂಡಳದಿಂದ ತೆಗೆದುಕೊಳ್ಳಲಾಗುತ್ತಿದ್ದ ಮನೋಬೋಧ, ದಾಸಬೋಧ ಪ್ರವೇಶ, ಪರಿಚಯ ಮತ್ತು ಪ್ರಬೋಧ ಈ ಪರೀಕ್ಷೆಯನ್ನು ನಾನು ಕಟ್ಟಿದೆನು. ನಂತರ ನಾನು ದಾಸಬೋಧದ ಆಳವಾದ ಅಧ್ಯಯನವನ್ನು ಆರಂಭಿಸಿದೆನು.

೧ ಆ. ಅಧ್ಯಯನಕ್ಕಾಗಿ ಮಾಡಿದಂತಹ ಟಿಪ್ಪಣಿಗಳಿಂದ ಇತರ ಅಧ್ಯಯನಕಾರರಿಗೆ ಉಪಯೋಗ ಆಗಬೇಕೆಂಬ’, ವಿಚಾರದಿಂದ ಸಂತ ಸಾಹಿತ್ಯದ ಆಳವಾದ ಅಧ್ಯಯನ ಮಾಡುವುದು ಮತ್ತು ಆ ಲೇಖನವನ್ನು ಗ್ರಂಥದಲ್ಲಿ ರೂಪಾಂತರಿಸಿ ಪರಮಾರ್ಥವನ್ನು ಸಾಧಿಸುವುದು : ಒಮ್ಮೆ ನನ್ನ ಕಿರಿಯ ಸಹೋದರ ಸಹೋದರಿಯರೊಂದಿಗೆ ಮಾತನಾಡುತ್ತಿರುವಾಗ, ವಿದ್ಯಾರ್ಥಿ ದೆಶೆಯಲ್ಲಿ ನಾನು ನನ್ನ ಅಧ್ಯಯನಕ್ಕಾಗಿ ಯಾವ ಟಿಪ್ಪಣಿಗಳನ್ನು ತೆಗೆದಿದ್ದೆನೋ, ಅವುಗಳನ್ನು ನಂತರ ವಿದ್ಯಾರ್ಥಿಗಳ ಮುಂದಿನ ೫-೬ ಗುಂಪುಗಳೂ (ಬ್ಯಾಚ್‌ಗಳೂ) ಉಪಯೋಗಿಸುತ್ತಿದ್ದವು, ಎಂದು ನನ್ನ ಗಮನಕ್ಕೆ ಬಂದಿತು. ನನ್ನ ಬಳಿ ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ ಮತ್ತು ದಾಸಬೋಧ ಈ ಗ್ರಂಥಗಳದ್ದೂ ಅದೇ ರೀತಿ ಟಿಪ್ಪಣಿ (ಸ್ಟಡಿ ನೋಟ್ಸ್)ಗಳಿವೆ. ಈ ಟಿಪ್ಪಣಿಗಳು ಯಾರಿಗಾದರೂ ಉಪಯುಕ್ತವಾಗಬಹುದೇ ?, ಎಂದೆನಿಸಿ ನಾನು ಮೊದಲು ಮಾಡಿಟ್ಟಿದ್ದ ಟಿಪ್ಪಣಿಗಳ ಮತ್ತೊಮ್ಮೆ ಅಧ್ಯಯನ ಆರಂಭವಾಯಿತು ಅಲ್ಲಿಯವರೆಗೆ ಆದಂತಹ ಅಭ್ಯಾಸದಿಂದ ನನಗೆ ಒಂದು ವಿಷಯವು ತಿಳಿದಿತ್ತು, ಸಂತ ಜ್ಞಾನೇಶ್ವರ ಮಹಾರಾಜರು, ಸಂತ ನಾಮದೇವ ಮಹಾರಾಜರು, ಸಂತ ಏಕನಾಥ ಮಹಾರಾಜರು, ಸಂತ ತುಕಾರಾಮ ಮಹಾರಾಜರು ಮತ್ತು ಸಮರ್ಥ ರಾಮದಾಸಸ್ವಾಮಿ ಈ ಐದು ಸಂತರ ಎಲ್ಲ ಸಾಹಿತ್ಯಗಳಿಗೆ ಶ್ರೀಮದ್ಭಗವದ್ಗೀತೆ’ಯೇ ಆಧಾರವಾಗಿದೆ. ಅದರ ನಂತರ ನಾನು ಶ್ರೀಮದ್ಭಗವದ್ಗೀತೆಯನ್ನು ಮುಖ್ಯ ಆಧಾರವನ್ನಾಗಿಟ್ಟುಕೊಂಡು ಈ ಐದು ಸಂತರ ಸಾಹಿತ್ಯಗಳ ಅಧ್ಯಯನ ಆರಂಭಿಸಿದೆನು. ಇದರ ಜೊತೆಗೆ ಇಂತಹ ಅನುಭವಗಳು ಯಾವುದಾದರೂ ಇತರ ಸಾಹಿತ್ಯದಲ್ಲಿದೆಯೇ ? ಎಂದೂ ಅಧ್ಯಯನ ಮಾಡಲು ಆರಂಭಿಸಿದೆನು.

ಅಧ್ಯಯನ ಮಾಡುವಾಗ ಬರೆದಿಟ್ಟಂತಹ ಅಂಶಗಳನ್ನು ಟಿಪ್ಪಣಿಗಳ ಸ್ವರೂಪದಲ್ಲಿ ಬರೆಯಬೇಕು ಮತ್ತು ಮಾಡಿದಂತಹ ಈ ಅಧ್ಯಯನದಿಂದ ನಮ್ಮ ಮುಂದಿನ ಜೀವನದಲ್ಲಿ ಪುನರಧ್ಯಯನ ಮಾಡಲು ಸುಲಭವಾಗಲಿ ಎಂದು ಈ ಪ್ರಯತ್ನ ! ಈ ಬರವಣಿಗೆಯಿಂದ ನಮ್ಮ ಮಕ್ಕಳು – ಮೊಮ್ಮಕ್ಕಳು, ಸ್ನೇಹಿತರು ಮತ್ತು ಸಂಬಂಧಿಕರು ಹೀಗೆ ಎಲ್ಲರಿಗೂ ಉಪಯೋಗವಾಗಲೆಂದು ಈ ಲೇಖನವನ್ನು ಗ್ರಂಥದಲ್ಲಿ ರೂಪಾಂತರಗೊಳಿಸಿ ಪರಮಾರ್ಥವನ್ನು ಸಾಧಿಸಿದೆನು.- ಗೀತಾಭ್ಯಾಸಯಾತ್ರೆ ಈ ಗ್ರಂಥದ ಸಂಕಲನಕಾರರು, ಬೆಂಗಳೂರು, ಕರ್ನಾಟಕ.

೨. ಗೀತಾಭ್ಯಾಸಯಾತ್ರೆ ಈ ಗ್ರಂಥವನ್ನು ನೋಡಿದಾಗ ಸಹೋದರನ ಅಧ್ಯಾತ್ಮದೆಡೆಗಿನ ಮಾರ್ಗಕ್ರಮಣ ಮತ್ತು ಗ್ರಂಥದ ರಚನೆಗೆ ಅವರು ತೆಗೆದುಕೊಂಡ ಪರಿಶ್ರಮ ಇವುಗಳ ಬಗ್ಗೆ ಸಂಕಲನಕಾರರ ಹಿರಿಯ ಸಹೋದರನಿಗೆ ಅರಿವಾದ ಅಂಶಗಳು

ನನ್ನ ಕಿರಿಯ ಸಹೋದರನು ಗೀತಾವ್ರತಿ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಈ ಗ್ರಂಥದ ಮೂರು ಖಂಡಗಳನ್ನು (ಆವೃತ್ತಿ/ ಅಧ್ಯಾಯ) ನನಗೆ ಉಡುಗೊರೆಯಾಗಿ ನೀಡಿದನು. ಅವರ ಈ ಪ್ರಯತ್ನವನ್ನು ನೋಡಿ ನನಗೆ ಆಶ್ಚರ್ಯವಾಯಿತು. ಗ್ರಂಥವನ್ನು ನೋಡಿ ಅದನ್ನು ಪರಾತ್ಪರ ಗುರು ಡಾಕ್ಟರರಿಗೆ ತೋರಿಸಲು ರಾಮನಾಥಿ ಆಶ್ರಮಕ್ಕೆ ಕಳುಹಿಸಬೇಕು, ಎಂಬ ವಿಚಾರವು ನನ್ನ ಮನಸ್ಸಿನಲ್ಲಿ ಬಂದಿತು. ಸಹೋದರನೂ ಅದಕ್ಕೆ ಒಪ್ಪಿಗೆ ನೀಡಿದಾಗ ನಾನು ಆ ಗ್ರಂಥವನ್ನು ಆಶ್ರಮಕ್ಕೆ ಕಳುಹಿಸಿದೆನು. ಈ ಗ್ರಂಥ ರಚಿಸಲು ಸಹೋದರನು ತೆಗೆದುಕೊಂಡ ಪರಿಶ್ರಮದ ಬಗ್ಗೆ ನನಗೆ ತಿಳಿದಿರುವ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.

೨ ಅ. ಧ್ಯೇಯವನ್ನು ಸಾಧಿಸುವ ಸ್ವಭಾವ (ಛಲಗಾರ) : ನಮ್ಮ ಕುಟುಂಬದ ಆರ್ಥಿಕ ಸ್ಥಿತಿಯು ಉತ್ತಮವಿರಲಿಲ್ಲ. ಹಾಗಾಗಿ ಚಿಕ್ಕಂದಿನಿಂದಲೇ ಕಿರಿಯ ಸಹೋದರನ ಮನಸ್ಸಿನಲ್ಲಿ ಕೇವಲ ಶಿಕ್ಷಣ ಪಡೆದು ದೊಡ್ಡವರಾಗುವುದು, ಹಣ ಸಂಪಾದಿಸಿ ಕುಟುಂಬಕ್ಕೆ ಸಹಾಯ ಮಾಡುವುದು, ಇಷ್ಟೇ ವಿಚಾರವಿರುತ್ತಿತ್ತು. ಅವನ ದಿನನಿತ್ಯದ ಜೀವನದಲ್ಲಿ ದೇವರು, ಧರ್ಮ, ಅಧ್ಯಾತ್ಮ ಮುಂತಾದ ವಿಷಯಗಳಿಗೆ ಎಲ್ಲಿಯೂ ಸ್ಥಾನವಿರಲಿಲ್ಲ. ರಾಜಸ್ಥಾನದ ಕೋಟಾದಲ್ಲಿನ ಪಿಲಾನೀ ವಿದ್ಯಾಪೀಠದಿಂದ ಅವನು ತನ್ನ ಪರಿಶ್ರಮದಿಂದ ವಿದ್ಯಾರ್ಥಿವೇತನವನ್ನು ಪಡೆದು ಎಮ್.ಟೆಕ್. ಪದವಿ ಪಡೆದನು ನಮ್ಮ ಕುಟುಂಬಕ್ಕೆ ಇಷ್ಟು ಶಿಕ್ಷಣವನ್ನು ಕೊಡಿಸುವಷ್ಟು ಆರ್ಥಿಕ ಸ್ಥಿತಿಯಿರಲಿಲ್ಲ. ಕೇವಲ ಅವನ ಪ್ರಯತ್ನದಿಂದಲೇ ಇದು ಅವನಿಗೆ ಸಾಧ್ಯವಾಯಿತು. ರಾಜಸ್ಥಾನದಿಂದ ಮನೆಗೆ ಬಂದು ವಾಪಾಸು ಹೋಗುವ ಖರ್ಚು ಉಳಿಯಲೆಂದು ನಮ್ಮ ತಂದೆಯವರ ಮೃತ್ಯುವಿನ ಸಮಯದಲ್ಲಿಯೂ ಅವನು ಬಂದಿರಲಿಲ. ಅವನು ಚಿಕ್ಕಂದಿನಿಂದಲೇ ಈ ರೀತಿ ಛಲಗಾರನಾಗಿದ್ದಾನೆ.

೨ ಆ. ದೊಡ್ಡ ಕಂಪನಿಗಳಲ್ಲಿ ನೌಕರಿ ಮಾಡುವುದು : ತನ್ನ ಕ್ಷಮತೆಯಿಂದಾಗಿ ಅವನು ಅನೇಕ ದೊಡ್ಡ ಕಂಪನಿಗಳಲ್ಲಿ ನೌಕರಿ ಮಾಡಿದನು. ಅವನು ಸೇವಾನಿವೃತ್ತನಾದಾಗ ಅವನು ಬೆಂಗಳೂರಿನ ಎ.ಬಿ.ಬಿ. (ಏಷಿಯಾ ಬ್ರಾವುನ್ ಬ್ರೋವರೀಜ್) ಎಂಬ ಕಂಪನಿಯಲ್ಲಿ ಏಕ್ಸಿಕ್ಯುಟಿವ್ ಡೈರೆಕ್ಟರ ಪದವಿಯದಲ್ಲಿದ್ದನು.

೨ ಇ. ಸೇವಾನಿವೃತ್ತಿಯ ನಂತರ ಪ್ರಾರಂಭವಾದ ಸಾಧನೆ : ಸೇವಾ ನಿವೃತ್ತಿಯಾದ ನಂತರ ಅವನು ತನ್ನ ಮನಸ್ಸಿಗನುಸಾರ ವಾರಕರಿ ಸಂಪ್ರದಾಯದಲ್ಲಿ ಸಹಭಾಗಿಯಾದನು. ವಾರಕರಿ ಸಂಪ್ರದಾಯದಲ್ಲಿ ಅವನಿಗೆ ತುಕಾರಾಮ ಗಾಥಾ, ಏಕನಾಥಿ ಭಾಗವತ, ಜ್ಞಾನೇಶ್ವರಿ ಮುಂತಾದ ಗ್ರಂಥಗಳ ಅಧ್ಯಯನವಾಯಿತು. ವರ್ಷದಲ್ಲಿ ಎರಡು ಸಲ (ಆಷಾಢ ಮತ್ತು ಕಾರ್ತಿಕ ಏಕಾದಶಿಗೆ) ಅವನು ಕಾಲ್ನಡಿಗೆಯಲ್ಲಿ ವಾರಿಗೆ ಹೋಗತೊಡಗಿದನು. ಅವನ ಈ ನೇಮವು ಈಗಲೂ ನಡೆಯುತ್ತಿದೆ. ಸೇವಾನಿವೃತ್ತಿಯ ನಂತರ ಅವನು ದಾಸಬೋಧದ ಅಧ್ಯಯನ ಮಾಡಿ ಪರೀಕ್ಷೆಯನ್ನು ನೀಡಿದನು. ಮೂರು ವರ್ಷಗಳ ಹಿಂದೆ ಅವನಿಗೆ ಗೀತೆಯ ಅಧ್ಯಯನ ಮಾಡುವ ತೀವ್ರ ಇಚ್ಛೆಯುಂಟಾಯಿತು ಮತ್ತು ಅವನು ನಿಯಮಿತವಾಗಿ ಸಂಪೂರ್ಣ ಗೀತಾ ವಾಚನವನ್ನು ಮಾಡತೊಡಗಿದನು.

೨ ಈ. ಸಹೋದರನಿಂದಾದ ಗೀತಾಭ್ಯಾಸ

೨ ಈ ೧. ಸಂತವಾಙ್ಮಯದಲ್ಲಿ ಗೀತೆಯಲ್ಲಿನ ಶ್ಲೋಕಗಳ ಭಾವಾರ್ಥವು ಹೇಗೆ ಅಡಗಿದೆ ?, ಎಂಬ ಬಗ್ಗೆ ಅಧ್ಯಯನ ಮಾಡಿ ಅದರ ಟಿಪ್ಪಣಿಯನ್ನು ಮಾಡುವುದು ಮತ್ತು ಈ ಅಧ್ಯಯನದಿಂದ ಗ್ರಂಥದ ಸಂಕಲನ ಮಾಡುವುದು : ಎರಡು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಸಹೋದರನ ಮನೆಗೆ ಹೋಗಿದ್ದಾಗ, ಅವನ ಅಧ್ಯಯನ ಕಕ್ಷೆಯಲ್ಲಿನ ಆಧ್ಯಾತ್ಮಿಕ ಗ್ರಂಥಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವನು ನನಗೆ ಎರಡೂವರೆ ಗಂಟೆಗಳಲ್ಲಿ ಸಂಪೂರ್ಣ ಗೀತೆಯನ್ನು ಹೇಳಿದನು. ಅವನು ಗೀತೆಯ ಪ್ರತಿಯೊಂದು ಶ್ಲೋಕದ ಅರ್ಥ ಇತರ ಸಂತರ ವಾಙ್ಮಯದಲ್ಲಿ ಹೇಗೆ ಅಡಗಿದೆ, ಎಂದು ಸ್ಪಷ್ಟಪಡಿಸುವ ಕೆಲವು ಬರವಣಿಗೆ ಮಾಡಿರುವುದನ್ನೂ ನನಗೆ ತೋರಿಸಿದನು. ಅವನ ಅಧ್ಯಯನ ನೋಡಿ ನಾನು ಆಶ್ವರ್ಯಚಕಿತನಾದೆನು. ಅವನು ಜ್ಞಾನೇಶ್ವರಿ, ತುಕಾರಾಮ ಗಾಥಾ, ಏಕನಾಥಿ ಭಾಗವತ, ಮೋರೋಪಂತರ ಆರ್ಯಾ, ವಾಮನ ಪಂಡಿತರ ವಾಙ್ಮಯ, ವಿನೋಬಾರ ಗೀತಾಯಿ ಮುಂತಾದ ಗ್ರಂಥಗಳಲ್ಲಿನ ದ್ವಿಪದಿ ಮತ್ತು ಶ್ಲೋಕಗಳು ಗೀತೆಯಲ್ಲಿನ ಶ್ಲೋಕಗಳೊಂದಿಗೆ ಹೇಗೆ ಸಮಾನವಾಗಿವೆ, ಎಂದು ತೋರಿಸುವ ಪ್ರಯತ್ನವನ್ನು ಮಾಡಿದ್ದನು. ಅದನ್ನು ನೋಡಿ ನಾನು ಅವನಿಗೆ ಈ ಅಧ್ಯಯನದ ಸಂಕಲನ ಮಾಡಿ ಅದನ್ನು ಬೆರಳಚ್ಚು ಮಾಡಿಡಲು ಹೇಳಿದ್ದೆನು. ಅವನು ಹಾಗೆ ಮಾಡಿ ಅದನ್ನು ಇಂದು ನನಗೆ ಈ ಗ್ರಂಥಗಳ ರೂಪದಲ್ಲಿ ತೋರಿಸಿದನು.

೨ ಈ ೨. ಶ್ರೀಕೃಷ್ಣ ಮತ್ತು ಅರ್ಜುನರೆಂದರೆ ಗುರುತತ್ತ್ವ ಮತ್ತು ಶಿಷ್ಯ, ಇದು ಒಟ್ಟಾಗಿ ಕಾರ್ಯ ಮಾಡಿದರೆ, ಜೀವನದಲ್ಲಿ ಪರಾಜಯವು ಬರುವುದೇ ಇಲ್ಲವೆಂದು ಹೇಳುವುದು : ನಾನು ಅವನಿಗೆ, ನಿನಗೆ ಗೀತೆಯಲ್ಲಿನ ಯಾವ ಶ್ಲೋಕವು ಹೆಚ್ಚು ಇಷ್ಟವಾಗುತ್ತದೆ ? ಎಂದು ಕೇಳಿದೆನು. ಅದಕ್ಕೆ ಅವನು ಇದನ್ನೇ ನನಗೆ ಮರುಪ್ರಶ್ನಿಸಿದನು. ನಾನು ಅನನ್ಯಾಶ್ಚಿಂತಯನ್ತೋ ಮಾಂ … ಯೋಗಕ್ಷೇಮಂ ವಹಾಮ್ಯಹಂ |

ಈ ಶ್ಲೋಕವು ಇಷ್ಟವಾಗುತ್ತದೆ ಎಂದು ಅವನಿಗೆ ಹೇಳಿದೆನು. ಯೋಗಕ್ಷೇಮಂ ವಹಾಮ್ಯಹಮ್ |, ಅಂದರೆ ನಾನು ಸ್ವತಃ ಅವರಿಗೆ ಯೋಗಕ್ಷೇಮವನ್ನು ಪ್ರಾಪ್ತ ಮಾಡಿಕೊಡುತ್ತೇನೆ. ಈ ಶ್ರೀಕೃಷ್ಣನ ಆಶ್ವಾಸನೆಯನ್ನು ನಾನು ಅನುಭವಿಸುತ್ತಿದ್ದೇನೆ; ಆದುದರಿಂದ ನನಗೆ ಆ ಶ್ಲೋಕವು ಇಷ್ಟವಾಗುತ್ತದೆ’, ಎಂದು ನಾನು ಅವನಿಗೆ ಹೇಳಿದೆನು. ಆಗ ಅವನು ನನಗೆ ಈ ಶ್ಲೋಕವು ಇಷ್ಟವಾಗುತ್ತದೆ; ಆದರೆ ಅದಕ್ಕಿಂತಲೂ ಹೆಚ್ಚು ಇಷ್ಟವಾಗುವ ಶ್ಲೋಕವೆಂದರೆ, ಯತ್ರ ಯೋಗೇಶ್ವರಃ ಕೃಷ್ಣೋ.. |

ಎಂದರೆ ಎಲ್ಲಿ ಯೋಗೇಶ್ವರ ಭಗವಾನ ಶ್ರೀಕೃಷ್ಣನಿರುವನೋ; ಇದರ ಕಾರಣವನ್ನು ಹೇಳುವಾಗ ಅವನು ಶ್ರೀಕೃಷ್ಣ ಮತ್ತು ಅರ್ಜುನರೆಂದರೆ ಗುರು-ಶಿಷ್ಯರು ! ಇವರಿಬ್ಬರೂ ನಿರ್ಗುಣದಿಂದ (ತತ್ತ್ವರೂಪದಲ್ಲಿ) ನಮ್ಮೊಳಗೆ ವಾಸಿಸುತ್ತಾರೆ. ಅವರಿಬ್ಬರು ಒಟ್ಟಿಗೆ ಇರುತ್ತಾರೆ, ಆಗಲೇ ಜೀವನದಲ್ಲಿ ವಿಜಯವು ಪ್ರಾಪ್ತವಾಗುತ್ತದೆ. ಕಲಿಸುವುದು ಗುರುಗಳ ಕಾರ್ಯವಾಗಿದ್ದು ಕಲಿಯುವುದು ಶಿಷ್ಯನ ಕಾರ್ಯವಾಗಿದೆ ನಾವು ಕಲಿಯುವುದು ಮತ್ತು ಕಲಿಸುವುದು ಈ ಎರಡನ್ನು ಒಟ್ಟಾಗಿ ಮಾಡುತ್ತಾ ಹೋದರೆ, ಜೀವನದಲ್ಲಿ ಎಂದಿಗೂ ಪರಾಜಯವಾಗುವುದಿಲ್ಲ, ಎಂದು ಶ್ರೀಕೃಷ್ಣನ ವಚನವಾಗಿದೆ ಮತ್ತು ಇದುವೇ ಗೀತೆಯ ಸಾರವಾಗಿದೆ, ಎಂದು ಹೇಳಿದನು. – ಗೀತಾಭ್ಯಾಸಯಾತ್ರೆ ಈ ಗ್ರಂಥದ ಸಂಕಲನಕಾರರ ಹಿರಿಯ ಸಹೋದರ, ಬೆಳಗಾವ, ಕರ್ನಾಟಕ

೩. ಗೀತಾಭ್ಯಾಸಯಾತ್ರೆ ಈ ಗ್ರಂಥವನ್ನು ನೋಡಿ ಪರಾತ್ಪರ ಗುರು ಡಾಕ್ಟರರು ಆ ಸಂದರ್ಭದಲ್ಲಿ ಮಾಡಿದ ಪ್ರಯೋಗ ಮತ್ತು ಅವರ ಗೌರವೋದ್ಗಾರ !

೩ ಅ. ಗ್ರಂಥದ ಮೂರೂ ಖಂಡಗಳಿಂದ ಬರುವ ಸ್ಪಂದನಗಳು ಬೇರೆ ಬೇರೆಯಾಗಿದ್ದು ಗ್ರಂಥದ ಮೇಲೆ ಕೈಯಿಟ್ಟ ತಕ್ಷಣವೇ ಶರೀರದಲ್ಲಿ ದೈವೀ ಸ್ಪಂದನಗಳು ಹರಡುತ್ತಿರುವುದಾಗಿ ಪರಾತ್ಪರ ಗುರು ಡಾಕ್ಟರರು ಹೇಳುವುದು : ಗೀತಾವ್ರತಿ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಈ ಗ್ರಂಥದ ಮೂರೂ ಖಂಡಗಳನ್ನು ಸಂಕಲನಕಾರರು ತಮ್ಮ ಹಿರಿಯ ಸಹೋದರನಿಗೆ ಉಡುಗೊರೆಯಾಗಿ ನೀಡಿದರು. ಅವರು ಅದನ್ನು ಪರಾತ್ಪರ ಗುರು ಡಾ. ಆಠವಲೆಯವರಿಗೆ ತೋರಿಸಲು ನನಗೆಕೊಟ್ಟರು. ನಾನು ಅದನ್ನು ಪರಾತ್ಪರ ಗುರು ಡಾ. ಆಠವಲೆಯವರಿಗೆ ತೋರಿಸಿದೆನು. ಗ್ರಂಥವನ್ನು ನೋಡಿದ ತಕ್ಷಣ ಅವರು ಈ ಗ್ರಂಥದಲ್ಲಿ ಬಹಳಷ್ಟು ಚೈತನ್ಯವಿರುವುದಾಗಿ ಹೇಳಿದರು ಈ ಗ್ರಂಥದ ಒಟ್ಟು ಮೂರು ಭಾಗಗಳಿವೆ. ಪರಾತ್ಪರ ಗುರು ಡಾಕ್ಟರರು ಆ ಮೂರೂ ಭಾಗಗಳನ್ನು ಬೇರೆ ಬೇರೆ ಇಟ್ಟರು ಮತ್ತು ಪ್ರತಿಯೊಂದು ಗ್ರಂಥದ ಮೇಲೆ ಕೈಯಿಟ್ಟು ಸೂಕ್ಷ್ಮದಿಂದ ಪ್ರಯೋಗ ಮಾಡಿದರು. ಗ್ರಂಥದ ಪ್ರತಿಯೊಂದು ಖಂಡದಿಂದ ಬರುವ ಸ್ಪಂದನಗಳು ಬೇರೆಬೇರೆ ಇವೆ. ನಮ್ಮ ಕೈಯನ್ನು ಗ್ರಂಥದ ಮೇಲಿಟ್ಟ ತಕ್ಷಣ ಶರೀರದಲ್ಲಿ ದೈವೀ ಸ್ಪಂದನಗಳು ಹರಡುತ್ತವೆ, ಎಂದು ಅವರು ಹೇಳಿದರು. ನನ್ನಿಂದಲೂ ಅವರು ಈ ಪ್ರಯೋಗವನ್ನು ಮಾಡಿಸಿಕೊಂಡರು. ಭಾಗ ೨ ರ ಮೇಲೆ ಕೈಯಿಟ್ಟಾಗ ತನ್ನಿಂದ ತಾನೆ ನಾಮಸ್ಮರಣೆಯು ಆರಂಭವಾದ ಅನುಭೂತಿಯನ್ನು ದೇವರು ನನಗೆ ನೀಡಿದನು.

೩ ಆ. ತಮ್ಮ ಹೆಸರಿನ ಬದಲು ಗೀತಾವ್ರತಿ ಈ ಹೆಸರಿನಲ್ಲಿ ಸಂಕಲನ ಮಾಡಿದ್ದನ್ನು ನೋಡಿ ಪರಾತ್ಪರ ಗುರು ಡಾಕ್ಟರರಿಗೆ ಆನಂದವಾಗುವುದು ಮತ್ತು ಅವರು ಸಂಕಲನಕಾರರ ಸಂಪರ್ಕ ವಿಳಾಸ ಹಾಗೂ ಸಂಪರ್ಕ ಕ್ರಮಾಂಕವನ್ನು ಗ್ರಂಥದಲ್ಲಿ ಬರೆಯಲು ಹೇಳುವುದು : ತದನಂತರ ಪರಾತ್ಪರ ಗುರು ಡಾಕ್ಟರರು, ಗ್ರಂಥಗಳ ಸಂಕಲನವನ್ನು ಯಾವ ರೀತಿ ಮಾಡಿದ್ದಾರೆ, ಎಂದು ಜಿಜ್ಞಾಸೆಯಿಂದ ತಿಳಿದುಕೊಂಡರು. ಗ್ರಂಥದ ಮುಖಪುಟದ ಮೇಲೆ ಸಂಕಲನಕಾರರು ತಮ್ಮ ಹೆಸರನ್ನು ಹಾಕದೇ ಗೀತಾವ್ರತಿ ಎಂದು ಬರೆದಿರುವುದನ್ನು ನೋಡಿ ಗುರುದೇವರಿಗೆ ತುಂಬಾ ಆನಂದವಾಯಿತು. ಅವರು ‘ಗ್ರಂಥದ ಒಳಗಿನ ಪುಟಗಳಲ್ಲಿ ಸಂಕಲನಕಾರರು ತಮ್ಮ ಹೆಸರು, ಸಂಪರ್ಕಕ್ಕಾಗಿ ಪ್ರಕಾಶಕರ ವಿಳಾಸ ಅಥವಾ ದೂರವಾಣಿ ಕ್ರಮಾಂಕ, ಇಂತಹುದೇನಾದರೂ ಮುದ್ರಿಸಲಾಗಿದೆಯೇ ?, ಎಂದು ತುಂಬಾ ಹೊತ್ತು ಹುಡುಕಿದರು. ಹಾಗೇನು ಇಲ್ಲವೆಂದು ತಿಳಿದಾಗ ಅವರು ಗ್ರಂಥಗಳಲ್ಲಿ ಮಾಹಿತಿಗಾಗಿ ಸಂಕಲನಕಾರರ ವಿಳಾಸ ಮತ್ತು ದೂರವಾಣಿ ಕ್ರಮಾಂಕವನ್ನು ಬರೆಯಲು ಹೇಳಿದರು.

೩ ಇ. ಗ್ರಂಥವನ್ನು ಯೂಎಎಸ್ ಉಪಕರಣದ ಮೂಲಕ ಪರೀಕ್ಷಿಸಲು ಹೇಳುವುದು : ಇದರ ನಂತರ ಪರಾತ್ಪರ ಗುರುದೇವರು ಗ್ರಂಥದಲ್ಲಿನ ಚೈತನ್ಯ ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಯನಕ್ಕಾಗಿ ಅದರ ಯೂಎಎಸ್ ಉಪಕರಣದ ಮೂಲಕ ಪರೀಕ್ಷೆ ಮಾಡಲು, ಹಾಗೆಯೇ ಇತರ ಕೆಲವು ಪ್ರಯೋಗಗಳನ್ನು ಮಾಡಲು ಹೇಳಿದರು.

೩ ಈ. ಸಂಕಲನಕಾರರು ವೈಶಿಷ್ಟ್ಯಪೂರ್ಣ ಪದ್ಧತಿಯಲ್ಲಿ ಸಂಕಲನ ಮಾಡಿದುದರಿಂದ ಅವರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯೂ ಆಗುವುದು : ಈ ಗ್ರಂಥಗಳ ಬಗ್ಗೆ ಪರಾತ್ಪರ ಗುರು ಡಾಕ್ಟರರು ಹೇಳಿದ ಅಂಶಗಳಿಂದ ಗೀತಾವ್ರತಿ ಇವರು ಈ ಗ್ರಂಥವನ್ನು ಅತ್ಯಂತ ಭಾವಪೂರ್ಣ ಪದ್ಧತಿಯಲ್ಲಿ ಸಂಕಲನ ಮಾಡಿದ್ದಾರೆ, ಎಂದು ನನ್ನ ಗಮನಕ್ಕೆ ಬಂದಿತು. ಅವರು ಭಗವಂತ ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದಂತಹ ಶ್ಲೋಕಗಳ ಸಂಸ್ಕೃತ ವಿಚ್ಛೇದವನ್ನು ಮರಾಠಿ ಭಾಷೆಯಲ್ಲಿ ಅದರ ಸುಲಭ ಅರ್ಥ, ಇತರ ಆಧ್ಯಾತ್ಮಿಕ ಸಾಹಿತ್ಯಗಳಲ್ಲಿ ಸಂತರು ಮಾಡಿದ ವಿಶ್ಲೇಷಣೆ ಮತ್ತು ಸಂಕಲನಕಾರರಿಗೆ ಆ ಶ್ಲೋಕಗಳ ಬಗ್ಗೆ ತಮ್ಮ ಗಮನಕ್ಕೆ ಬಂದ ಅರ್ಥ, ಈ ರೀತಿ ವೈಶಿಷ್ಟ್ಯಪೂರ್ಣ ಪದ್ಧತಿಯಲ್ಲಿ ಇದನ್ನು ಸಂಕಲನ ಮಾಡಲಾಗಿದೆ. ಒಂದೇ ಸ್ಥಳದಲ್ಲಿ ಓದುಗರಿಗೆ ಆಧಾರವಾಗಿರುವ ಭಗವದ್ಗೀತೆ ಮತ್ತು ೫ ಬೇರೆಬೇರೆ ಸಂತರು ಮಾಡಿದ ಅದರ ವಿಶ್ಲೇಷಣೆಯನ್ನು ಲಭ್ಯ ಮಾಡಿ ಕೊಟ್ಟು ಅವರು ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯನ್ನೂ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

೩ ಉ. ಸಂಕಲನಕಾರರು ಕೇವಲ ಗ್ರಂಥವನ್ನು ಬರೆಯದೇ ಅವರು ಭಗವದ್ಗೀತೆಯನ್ನು ಜೀವಿಸಿದ್ದಾರೆ – ಪರಾತ್ಪರ ಗುರು ಡಾಕ್ಟರರು : ಗ್ರಂಥವನ್ನು ನೋಡುವಾಗ ಪರಾತ್ಪರ ಗುರು ಡಾಕ್ಟರರು, ಈ ಮಾಧ್ಯಮದಿಂದ ಅವರು ಪ್ರತ್ಯಕ್ಷ ಶ್ರೀಮದ್ಭಗವದ್ಗೀತೆಯನ್ನು ಜೀವಿಸಿದ್ದಾರೆ ! ಎಂದು ಹೇಳಿದರು. ಅವರು ಸಂಕಲನಕಾರರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿರುವುದಾಗಿ ಹೇಳಿ ಉತ್ತಮ ಆಧ್ಯಾತ್ಮಿಕ ಮಟ್ಟವಿಲ್ಲದೇ ಧರ್ಮಗ್ರಂಥಕ್ಕೆ ಸಂಬಂಧಿಸಿದ ಇಂತಹ ಕಾರ್ಯವು ಕೈಯಿಂದ ಆಗುವುದಿಲ್ಲ, ಎಂದೂ ಸ್ಪಷ್ಟಪಡಿಸಿದರು. ಪರಾತ್ಪರ ಗುರು ಡಾಕ್ಟರರು ಗ್ರಂಥವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ತಮ್ಮ ಮಸ್ತಕಕ್ಕೆ ಹಚ್ಚಿಕೊಂಡು ಅದಕ್ಕೆ ನಮಸ್ಕಾರ ಮಾಡಿದರು.

ಶ್ರೀ ಗುರುಗಳ ಕೃಪೆಯಿಂದ ನಮಗೆ ಈ ಗ್ರಂಥದ ಮಾಧ್ಯಮದಿಂದ ಆಧ್ಯಾತ್ಮಿಕ ಸ್ತರದಲ್ಲಿನ ಅನೇಕ ವಿಷಯಗಳು ಕಲಿಯಲು ಸಿಕ್ಕಿದವು. ಇದಕ್ಕಾಗಿ ನಾನು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ !

– ಶ್ರೀ. ಸತ್ಯಕಾಮ ಕಣಗಲೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.