ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಕುಂಡಲಿಯ ಬಗ್ಗೆ ಹುಬ್ಬಳ್ಳಿಯ ಜ್ಯೋತಿಷಿ ಶ್ರೀ. ನಾಗರಾಜ ಸೊರಟೂರ ಇವರು ಮಾಡಿದ ವಿಶ್ಲೇಷಣೆ

ಪರಾತ್ಪರ ಗುರು ಡಾ. ಆಠವಲೆ

೨೧.೧೧.೨೦೧೯ ಈ ದಿನದಂದು ಮಹರ್ಷಿ ಅಧ್ಯಾತ್ಮ ವಿಶ್ಯವಿದ್ಯಾಲಯದ ಕು. ತೇಜಲ ಪಾತ್ರೀಕರ ಇವರು ಹುಬ್ಬಳ್ಳಿಯ ಜ್ಯೋತಿಷಿ ಶ್ರೀ. ನಾಗರಾಜ ಸೊರಟೂರ ಇವರನ್ನು ಭೇಟಿಯಾದರು. ಆಗ ಪರಾತ್ಪರ ಗುರು ಡಾ. ಆಠವಲೆಯವರ ಜಾತಕದ ಬಗ್ಗೆ  ಶ್ರೀ. ಸೊರಟೂರ ಇವರು ಮಾಡಿದ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಶ್ರೀ. ನಾಗರಾಜ ಸೊರಟೂರ

೧. ಉತ್ತರಾಷಾಢಾ ನಕ್ಷತ್ರದಲ್ಲಿ ಜನಿಸಿದುದರಿಂದ ಶ್ರೀ ಗುರುಗಳ ಆರೋಗ್ಯವು ಚೆನ್ನಾಗಿದೆ !

‘ಶ್ರೀ ಗುರುಜಿಯವರ (ಪರಾತ್ಪರ ಗುರು ಡಾ. ಆಠವಲೆಯವರ) ಭವಿಷ್ಯದ ಬಗ್ಗೆ ೪ ವಿಷಯಗಳನ್ನು ಹೇಳಲು ನಾನು ಪ್ರಯತ್ನಿಸುತ್ತಿದ್ದೇನೆ. ಅವರ ಲಗ್ನ ಸ್ಥಾನದಲ್ಲಿ ಮಿಥುನ ರಾಶಿಯಿದೆ. ಅವರದ್ದು ಮಕರ ರಾಶಿಯಾಗಿದ್ದು ನಕ್ಷತ್ರವು ಉತ್ತರಾಷಾಢಾ (೩ ನೇ ಚರಣ) ಇದೆ. ಉತ್ತರಾಷಾಢಾ (೩ ನೇ ಚರಣ) ನಕ್ಷತ್ರಕ್ಕನುಸಾರ ‘ಡಾಕಪ್ಪಾ’ ಎಂಬುದು ಅವರ ಜನ್ಮನಾಮವಾಗಿದೆ. ‘ಡಾಕಪ್ಪಾ’ ಇದು ವಾಯುದೇವರ ಹೆಸರಾಗಿದೆ. ಈ ನಕ್ಷತ್ರದಲ್ಲಿ ಜನ್ಮವಾದುದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಶ್ರೀ ಗುರೂಜಿಯವರು ಶತಾಯುಷಿಗಳಾಗಲಿ.

೨. ಜಾತಕದಲ್ಲಿನ ಗ್ರಹಗಳ ಸ್ಥಾನಗಳಿಗನುಸಾರ ಹೇಳಿದ ಅಂಶಗಳು

ಅ. ಶ್ರೀ ಗುರೂಜಿಯವರ ಜಾತಕದಲ್ಲಿ ಮೊದಲನೇ ಸ್ಥಾನದಲ್ಲಿ ಮಂಗಳ ಗ್ರಹವು ಇರುವುದರಿಂದ ಅವರು ಧೈರ್ಯಶಾಲಿಗಳಾಗಿದ್ದಾರೆ.

ಆ. ದ್ವಿತೀಯ ಸ್ಥಾನದಲ್ಲಿ ಕರ್ಕ ರಾಶಿಯು ಇರುವುದರಿಂದ ಅವರು ಉತ್ತಮ ಸ್ವಭಾವದವರಾಗಿದ್ದಾರೆ. ‘ಜನರ ಕಲ್ಯಾಣವಾಗಬೇಕು’ ಎಂದು, ಅವರು ಪ್ರಯತ್ನಿಸುತ್ತಾರೆ.

ಇ. ತೃತೀಯ ಸ್ಥಾನದಲ್ಲಿ ಸಿಂಹ ರಾಶಿಯಿದೆ. ಆದುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ.

ಈ ಚತುರ್ಥ ಸ್ಥಾನದಲ್ಲಿ ಕನ್ಯಾ ರಾಶಿಯಿದೆ. ಆದುದರಿಂದ ಉತ್ತಮ ವಿದ್ಯೆಯನ್ನು ಸಂಪಾದಿಸುತ್ತಾರೆ.

ಉ. ಪಂಚಮ ಸ್ಥಾನದಲ್ಲಿ ತುಲಾ ರಾಶಿಯಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾರೆ. ಗುರುಗಳ ಸ್ಮರಣೆ ಹಾಗೂ ಧನ್ವಂತರಿಯ ಜಪ ಮಾಡಿದರೆ ಆರೋಗ್ಯವು ಉತ್ತಮವಾಗುತ್ತದೆ.

ಊ. ಷಷ್ಠಮ ಸ್ಥಾನದಲ್ಲಿ, ಅಂದರೆ ರೋಗದ ಸ್ಥಾನದಲ್ಲಿ ವೃಶ್ಚಿಕ ರಾಶಿಯಿದ್ದು ಮಂಗಳನು ಅದರ ಸ್ವಾಮಿಯಾಗಿದ್ದಾನೆ. ಅವರಿಗೆ ಕಣ್ಣುಗಳ ತೊಂದರೆ (ದೃಷ್ಟಿದೋಷ) ಇದೆಯೇ ? (‘ಚಿಕ್ಕಂದಿನಿಂದಲೇ ಕನ್ನಡಕ ಇದೆ.’ – (ಪರಾತ್ಪರ ಗುರು) ಡಾ. ಆಠವಲೆ)

ಎ. ಸಪ್ತಮ ಸ್ಥಾನದಲ್ಲಿ ಧನು ರಾಶಿಯಿರುವುದರಿಂದ ಸಂಪೂರ್ಣ ಜೀವನವು ಅಧ್ಯಾತ್ಮಮಯವಾಗಿರುತ್ತದೆ.

ಐ. ಅಷ್ಟಮ ಸ್ಥಾನದಲ್ಲಿ ಚಂದ್ರ ಗ್ರಹವು ಇರುವುದರಿಂದ ಆಯುಷ್ಯವು ಚೆನ್ನಾಗಿದೆ ಎಂದು ದರ್ಶಿಸುತ್ತದೆ. ತೊಂದರೆಯಿಲ್ಲ.

ಓ. ಒಂಬತ್ತನೇ ಸ್ಥಾನದಲ್ಲಿ ಕೇತು ಗ್ರಹವು ಇರುವುದರಿಂದ ಅವರಿಗೆ ತಾಯಿ-ತಂದೆಯವರ ಕಡೆಯಿಂದ ಸ್ಥಿರ-ಚರ ಆಸ್ತಿಪಾಸ್ತಿ ಸಿಗುವುದಿಲ್ಲ. (‘ತಾಯಿ-ತಂದೆಯ ಬಳಿ ಸ್ಥಿರ-ಚರ ಆಸ್ತಿಪಾಸ್ತಿ ಇರಲಿಲ್ಲ, ಹಾಗಾಗಿ ಅದು ಯಾರಿಗೂ ಸಿಕ್ಕಿಲ್ಲ.’ – (ಪರಾತ್ಪರ ಗುರು) ಡಾ. ಆಠವಲೆ)

ಔ. ದಶಮ ಸ್ಥಾನದಲ್ಲಿ ಮೀನ ರಾಶಿಯಲ್ಲಿ ಶುಕ್ರ ಗ್ರಹವು ಇರುವುದರಿಂದ ಅವರು ಅಧ್ಯಾತ್ಮದಲ್ಲಿ ತುಂಬಾ ಮುಂದಿದ್ದಾರೆ. (ಅವರ ಜೀವನವು ಅಧ್ಯಾತ್ಮಮಯವಾಗಿದೆ) ಅವರು ಎಲ್ಲರನ್ನೂ ಮೋಕ್ಷದವರೆಗೆ ಕರೆದೊಯ್ಯುವರು. ಆ ರೀತಿಯ ಪ್ರಯತ್ನಗಳನ್ನು ಮಾಡುವರು.

ಅಂ. ಏಕಾದಶ ಸ್ಥಾನದಲ್ಲಿ ರವಿ ಗ್ರಹವು ಇರುವುದರಿಂದ ಅವರು ಸಮಾಜಕ್ಕೆ ಸಾಧನೆ, ವಿದ್ಯೆ ಹಾಗೂ ಅಧ್ಯಾತ್ಮವನ್ನು ತಿಳಿಸಿ ಮೋಕ್ಷಕ್ಕೆ ಕರೆದುಕೊಂಡು ಹೋಗುವರು. ಅವರು ಸೂರ್ಯನಿಗೆ ನಮಸ್ಕಾರ ಮಾಡಿದರೆ ಅವರಿಗೆ ಲಾಭವಾಗುವುದು.

ಕ. ಹನ್ನೆರಡನೇ (ಖರ್ಚು) ಸ್ಥಾನದಲ್ಲಿ ಗುರು, ಶನಿ ಹಾಗೂ ಬುಧ ಈ ಗ್ರಹಗಳಿವೆ. ಯಾರು ಅಧ್ಯಾತ್ಮದಲ್ಲಿದ್ದಾರೆಯೋ, ಯಾರು ಜೀವನದಲ್ಲಿ ತುಂಬಾ ಸಂಘರ್ಷ ಮಾಡಿದ್ದಾರೆಯೋ, ಯಾರು ಧರ್ಮದಿಂದ ವರ್ತಿಸುವರೋ, ಅವರಿಗೆ ಶನಿ ಗ್ರಹದಿಂದ ಲಾಭವಾಗುತ್ತದೆ. ಅವನು ಅವರಿಗೆ ಜ್ಞಾನವನ್ನು ನೀಡುತ್ತಾನೆ.

೩. ಶ್ರೀ ಗುರೂಜಿಯವರು ಜಗತ್ತಿನ ಎಲ್ಲರನ್ನೂ ಅಧ್ಯಾತ್ಮಕ್ಕೆ ಜೋಡಿಸಿ ಮುಂದೆ ಕರೆದುಕೊಂಡು ಹೋಗುವವರಿದ್ದಾರೆ !

ಅವರು ಅಕಸ್ಮಾತ್ತಾಗಿ ಹೋದರೆ, ಎಲ್ಲರಿಗೂ ಬಹಳ ದುಃಖವಾಗುತ್ತದೆ. ಮಹಾನ ವ್ಯಕ್ತಿಗೆ ಜನರ ಬಗ್ಗೆ ಬಹಳ ಕರುಣೆಯಿರುತ್ತದೆ. ಅವರಿಗೆ ಎಲ್ಲರನ್ನೂ ಮುಂದೆ ಕರೆದುಕೊಂಡು ಹೋಗುವ ಇಚ್ಛೆಯಿದೆ. ಮೃತ್ಯುಂಜಯ ಜಪ ಹಾಗೂ ಧನ್ವಂತರಿ ಹೋಮವನ್ನು ಮಾಡಿದರೆ ಅವರ ತೊಂದರೆಯು ಕಡಿಮೆಯಾಗುವುದು. ಅವರ ಆರೋಗ್ಯವು ಸುಧಾರಿಸುವುದು. ಅವರಿಗೆ ವಿಶೇಷ ತೊಂದರೆಯಿಲ್ಲ. ಸದ್ಯ ಅವರಿಗೆ ಶುಕ್ರದಶೆ ನಡೆದಿದೆ. ಅವರಿಗೆ ಜನರಿಗೆ ಉತ್ತಮ ಜ್ಞಾನವನ್ನು ನೀಡಲಿಕ್ಕಿದೆ. ಭಗವಂತನಿಗೆ ಶರಣಾದರೆ ಎಲ್ಲವೂ ವ್ಯವಸ್ಥಿತವಾಗುವುದು.

೪. ಶ್ರೀ ಗುರೂಜಿಯವರು ಜನರಿಗಾಗಿ ಜೀವಿಸುವುದರಿಂದ ಅವರು ಜಗತ್ತಿನವರೆಲ್ಲರನ್ನೂ ಮೋಕ್ಷಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ!

ಶ್ರೀ ಗುರೂಜಿಯವರು ಜನರಿಗಾಗಿ ಜೀವಿಸುವ ವ್ಯಕ್ತಿಗಳಾಗಿದ್ದಾರೆ. ವಯಸ್ಸಿಗನುಸಾರ ಅವರಿಗೆ ನಿಶ್ಶಕ್ತಿ ಮುಂತಾದ ತೊಂದರೆಗಳಿರುತ್ತದೆ. ನಾವೆಲ್ಲರೂ ಪ್ರಾರ್ಥನೆ ಮಾಡಿದರೆ ಅವರ ಆರೋಗ್ಯವು ಖಂಡಿತವಾಗಿಯೂ ಸುಧಾರಿಸುವುದು. ಇಂತಹ ವ್ಯಕ್ತಿಗಳ ಆಯುಷ್ಯವು ಚೆನ್ನಾಗಿಯೇ ಇರುತ್ತದೆ. ಜಾತಕದಲ್ಲಿ ಅವರ ಆಯಷ್ಯವು ೮೦ ವರ್ಷ ಎಂದು ಕಾಣಿಸುತ್ತದೆ; ಆದರೆ ಪ್ರಾರ್ಥನೆ, ಧನ್ವಂತರಿ ಹೋಮ, ಮೃತ್ಯುಂಜಯ ಜಪವನ್ನು ಮಾಡಿದರೆ ಅವರು ಶತಾಯುಷಿಗಳಾಗುವರು. ಇಂತಹ ವ್ಯಕ್ತಿಗಳು ನೋಡಲು ಸಿಗುವುದು, ಅವರನ್ನು ಭೇಟಿಯಾಗಲು ಸಿಗುವುದು, ದೊಡ್ಡ ಭಾಗ್ಯವೇ ಆಗಿದೆ. ನಿಮ್ಮ ಮಾಧ್ಯಮದಿಂದ ಅವರ ಜಾತಕವು ನನ್ನ ಬಳಿ ಬಂದಿತು. ಜನರು ತಮ್ಮ ಹಾಗೂ ತಮ್ಮ ಕುಟುಂಬದ ವಿಚಾರ ಮಾಡುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಜಗತ್ತಿನವರೆಲ್ಲರನ್ನೂ ಮೋಕ್ಷಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಗ್ಯವು ಸುಧಾರಿಸುವುದು. ಅವರ ಆಯುಷ್ಯವು ಚೆನ್ನಾಗಿದೆ. ಅವರು ೧೦೦ ವರ್ಷಗಳ ಕಾಲ ಪರಿಪೂರ್ಣ ಆಯುಷ್ಯವನ್ನು ಜೀವಿಸುವರು. ಅದಕ್ಕಾಗಿ ಪ್ರಾರ್ಥನೆ ಹಾಗೂ ಜಪ ಮಾಡಬೇಕು.

೫. ಉಪಾಯ

೧. ಲಕ್ಷ ಧನ್ವಂತರಿ, ಮೃತ್ಯುಂಜಯ ಜಪವನ್ನು ಮಾಡಿದ ನಂತರ ಧನ್ವಂತರಿ ಹೋಮವನ್ನು ಮಾಡಬೇಕು. ಅವರ ಹೆಸರು, ನಕ್ಷತ್ರ, ರಾಶಿಯನ್ನು ತೆಗೆದುಕೊಂಡು ನಂತರ ಜಪ ಮಾಡಬೇಕು ಹಾಗೂ ಅದನ್ನು ಸಮರ್ಪಿಸಬೇಕು.’ – ಶ್ರೀ. ನಾಗರಾಜ ಸೊರಟೂರ, ಹುಬ್ಬಳ್ಳಿ (೨೧.೧೧.೨೦೧೯)