ಕಲಿಯುವ ಸ್ಥಿತಿ ಇರುವ ಮೈಸೂರಿನ ಕು. ರೇವತಿ ಮೊಗೇರ

ಕು. ರೇವತಿ ಮೊಗೇರ

೧. ಸ್ವಭಾವ

ರೇವತಿ ಅಕ್ಕನವರು ಸದಾ ಹಸನ್ಮುಖಿಯಾಗಿರುತ್ತಾರೆ. ಚಟುವಟಿಕೆಯಿಂದ ಇರುತ್ತಾರೆ. ಮಾತಿನಲ್ಲಿ ನಮ್ರತೆ ಇರುತ್ತದೆ.

೨. ಸ್ವೀಕಾರ ಮಾಡುವ ಮತ್ತು ಕಲಿಯುವ ವೃತ್ತಿ

ಅಕ್ಕನವರು ಕಳೆದ ೧೩ ವರ್ಷಗಳಿಂದ ಸಾಧನೆಯಲ್ಲಿದ್ದಾರೆ. ಅವರು ಸೇವೆಯನ್ನು ಸಹ ತುಂಬಾ ಪರಿಶ್ರಮ ವಹಿಸಿ ಮಾಡುತ್ತಾರೆ. ಯಾವುದೇ ಸೇವೆಯನ್ನು ಹೇಳಿದರೂ ತಕ್ಷಣ ಒಪ್ಪಿಕೊಳ್ಳುತ್ತಾರೆ. ಅದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಅಥವಾ ಜ್ಞಾನ ಇಲ್ಲದಿದ್ದರೂ ಅದನ್ನು ಕಲಿಯಲು ಪ್ರಯತ್ನ ಮಾಡಿ ಅದನ್ನು ಪೂರ್ಣ ಮಾಡುತ್ತಾರೆ. ಉದಾ. : ಗೂಗಲ್ ಫಾರ್ಮ್ ತಯಾರಿಸುವುದು. ರಾಜ್ಯಸ್ತರದಲ್ಲಿ ಪೂಜ್ಯ ಅಣ್ಣನವರ ಒಂದು ಸತ್ಸಂಗವಾಗಿತ್ತು. ಅದರ ಲೇಖನವನ್ನು ಮಾಡಲು ಅಕ್ಕನಿಗೆ ಹೇಳಿದಾಗ ತಕ್ಷಣ ಒಪ್ಪಿಕೊಂಡರು ಮತ್ತು ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸಿ ಆ ಸೇವೆಯನ್ನು ಪೂರ್ಣ ಮಾಡಿದರು.

೩. ತಪ್ಪುಗಳನ್ನು ಮನಃಪೂರ್ವಕ ಸ್ವೀಕಾರ ಮಾಡುವುದು

ಗುರುಸೇವೆಯಲ್ಲಿ ಏನಾದರೂ ತಪ್ಪುಗಳಾದಾಗ ಬಹಳ ಪಶ್ಚಾತ್ತಾಪ ಪಡುತ್ತಾರೆ. ಮನಮುಕ್ತವಾಗಿ ಸಾಧಕರಿಗೆ ತನ್ನಿಂದಾದ ತಪ್ಪನ್ನು ಹೇಳುವುದು, ಕ್ಷಮೆಯಾಚನೆ ಮಾಡುವುದು, ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಹೀಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಒಂದು ಸಲ ಭಾವಸತ್ಸಂಗ ಸೇವೆಯ ಸಂದರ್ಭದಲ್ಲಿ ಅವರಿಂದ ಒಂದು ಗಂಭೀರ ತಪ್ಪಾಗಿತ್ತು. ಸಂತರು ಅವರಿಗೆ ಅದನ್ನು ಅರಿವು ಮಾಡಿಕೊಟ್ಟರು. ಅದನ್ನು ಎಲ್ಲ ರಾಜ್ಯಸ್ತರದ ಸಭೆಗಳಲ್ಲಿ, ವ್ಯಷ್ಟಿ ವರದಿಯಲ್ಲಿ ಅದನ್ನು ಹೇಳಬೇಕು, ಸಂತರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೇ ಪಾಲಿಸಿದರು. ಎಲ್ಲೆಲ್ಲಿ ಅವಕಾಶ ಸಿಕ್ಕಿತೋ ಅಲ್ಲೆಲ್ಲ ತನ್ನ ತಪ್ಪನ್ನು ಹೇಳಿ ಕ್ಷಮೆ ಯಾಚನೆ ಮಾಡಿದರು.

೪. ದೇವರು, ಧರ್ಮಗಳಿಗಾಗುವ ವಿರೋಧವನ್ನು ಖಂಡಿಸುವುದು

ಅಕ್ಕನ ಎದುರು ಯಾರಾದರೂ ಸಾಧನೆಗೆ ವಿರುದ್ಧ ಹಾಗೂ ದೇವರು, ಧರ್ಮದ ವಿರುದ್ಧ ಮಾತನಾಡಿದರೆ ಅಕ್ಕನಿಗೆ ಸಹನೆಯಾಗುವುದಿಲ್ಲ. ಅದನ್ನು ತಕ್ಷಣ ಖಂಡಿಸುತ್ತಾರೆ. ಒಂದು ಬಾರಿ ಧರ್ಮಶಿಕ್ಷಣ ವರ್ಗವನ್ನು ತೆಗೆದುಕೊಳ್ಳುತ್ತಿದ್ದಾಗ ಅಲ್ಲಿ ಒಬ್ಬರು ಬುದ್ಧಿಯಿಂದ ತುಂಬಾ ವಿಚಾರ ಮಾಡಿ ವೈಜ್ಞಾನಿಕ ಸ್ತರದಲ್ಲಿ ಮಾತನಾಡುತ್ತಿದ್ದರು. ಆಗ ಅಕ್ಕನವರು ಕೂಡಲೇ ಎದ್ದು ನಿಂತು ಅದನ್ನು ಖಂಡಿಸಿದರು ಮತ್ತು ಸತ್ಯ ಏನು ಎಂದು ವಿವರಿಸಿ ಹೇಳಿದರು. ಅದರಿಂದ ಅಲ್ಲಿಗೆ ಬಂದ ಎಲ್ಲ ಧರ್ಮಪ್ರೇಮಿಗಳಿಗೆ ತುಂಬಾ ಒಳ್ಳೆಯದೆನಿಸಿತು.

೫. ಸೇವೆಯನ್ನು ಸರಿಯಾದ ಸಮಯಕ್ಕೆ ಮತ್ತು ಪರಿಪೂರ್ಣ ಮಾಡುವುದು

ಅ. ರಾತ್ರಿ ಎಷ್ಟು ತಡವಾದರೂ ಅಕ್ಕನವರು ಹೇಳಿದ ಸೇವೆಯನ್ನು ಪೂರ್ಣ ಮಾಡಿಯೇ ಕಳುಹಿಸುತ್ತಾರೆ.

ಆ. ಮೈಸೂರು ಜಿಲ್ಲೆಯಲ್ಲಿ ಸಾಧಕರ ಸಂಖ್ಯೆಯು ಕಡಿಮೆಯಿದೆ. ಆದರೂ ಧರ್ಮಸಭೆಗಳಂತಹ ದೊಡ್ಡ ಸೇವೆಗಳ ಆಯೋಜನೆಯನ್ನು ಉತ್ತಮ ರೀತಿಯಲ್ಲಿ ಮಾಡಿದರು.

ಇ. ಸಂತರ ಸತ್ಸಂಗವಾದಾಗ ಅದರಲ್ಲಿನ ಮಾರ್ಗದರ್ಶನದ ಅಂಶಗಳನ್ನು ತತ್ಪರತೆಯಿಂದ ಮತ್ತು ತಳವಳದಿಂದ ಜಿಲ್ಲೆಯ ಸಾಧಕರಿಗೆ ತಲುಪಿಸುವ ಆಯೋಜನೆಯನ್ನು ಮಾಡುತ್ತಾರೆ.

ಈ. ಅಕ್ಕನಿಗೆ ಯಾವುದಾದರೂ ಸೇವೆಯನ್ನು ಹೇಳಿದ ನಂತರ ಅದರಲ್ಲಿ ಜವಾಬ್ದಾರ ಸಾಧಕರು ಪುನಃ ಕೇಳಬೇಕಾಗಿರುವುದಿಲ್ಲ.

ಉ. ಅದರಲ್ಲಿ ತಪ್ಪುಗಳ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.

೬. ಭಾವ

 ಅಕ್ಕನವರು ಕನ್ನಡ ಭಾವಸತ್ಸಂಗ ತೆಗೆದುಕೊಳ್ಳುವ ಸೇವೆಯನ್ನು ಮಾಡುತ್ತಾರೆ. ಈ ಸತ್ಸಂಗದಲ್ಲಿ ತುಂಬಾ ಭಾವದಿಂದ ಪ್ರಾರ್ಥನೆಯನ್ನು ಮಾಡಿಸುತ್ತಾರೆ. ಅವರು ಪ್ರಾರ್ಥನೆಯನ್ನು ಮಾಡಿಸುವಾಗ, ಭಾವಪ್ರಯೋಗಗಳನ್ನು ಮಾಡಿಸುವಾಗ ಎಲ್ಲ ಸಾಧಕರಿಗೆ ಭಾವಜಾಗೃತಿಯಾಗುತ್ತದೆ.

೭. ಪರಾತ್ಪರ ಗುರು ಡಾಕ್ಟರರ ಮತ್ತು ಸಂತರ ಬಗ್ಗೆ ಅಪಾರ ಭಾವ

ಅ. ಯಾವುದೇ ಪ್ರಸಂಗದಲ್ಲಿ ಪರಾತ್ಪರ ಗುರುದೇವರು ನಮ್ಮ ಜೊತೆಗಿದ್ದಾರೆ ಮತ್ತು  ಅವರೇ ಮಾಡಿಸಿಕೊಳ್ಳುತ್ತಾರೆ ಎಂಬ ದೃಢ ಶ್ರದ್ಧೆ ಯಿಂದ ಹೇಳುತ್ತಾರೆ. ಅಕ್ಕನಿಗೆ ಸಂತರ ಬಗ್ಗೆಯೂ ತುಂಬಾ ಭಾವವಿದೆ. ಏನು ಹೇಳಿದರೂ ತಕ್ಷಣ ಆಜ್ಞಾಪಾಲನೆಯನ್ನು ಮಾಡುತ್ತಾರೆ.

ಮೇಲಿನ ಎಲ್ಲ ಗುಣಗಳೊಂದಿಗೆ ಅಕ್ಕನಲ್ಲಿ ತುಂಬಾ ‘ಪ್ರೇಮಭಾವ, ಸಾಧಕರಿಗೆ ಆಧಾರ ಕೊಡುವುದು, ಶಿಸ್ತನ್ನು ಕಲಿಸುವುದು, ಸಾಧಕರಿಗೆ ಸಹಾಯ ಮಾಡುವುದು, ಸಾಧಕರ ಸಹಾಯ ಮಾಡುವುದು, ಸಹ ಸಾಧಕರಿಗೆ ತಪ್ಪಿನ ಅರಿವು ಮಾಡಿಕೊಡುವುದು ಕೇಳಿಕೊಂಡು ಮಾಡುವ ವೃತ್ತಿ, ಅಪಾರ ಕೃತಜ್ಞತಾಭಾವ ಮುಂತಾದ ಗುಣಗಳು ಇವೆ. – ಸೌ. ಮಂಜುಳಾ ಗೌಡ, ಮಂಗಳೂರು.