ವಸಿಷ್ಠ ಕುಂಡದ ಕಥೆ ಮತ್ತು ಆ ಸ್ಥಾನದ ಮಹತ್ವ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಹಿಮಾಚಲ ಪದೇಶದಲ್ಲಿನ ಮನಾಲಿಯಲ್ಲಿ ಸಾಧಾರಣ ೧೦ ಸಾವಿರ ಅಡಿ ಎತ್ತರದ ಮೇಲೆ ವಸಿಷ್ಠಋಷಿಗಳ ತಪೋಸ್ಥಾನವಿದೆ. ಇಲ್ಲಿ ಒಂದು ಬಿಸಿನೀರಿನ ಕುಂಡವೂ ಇದೆ. ಇದನ್ನೇ ವಸಿಷ್ಠ ಕುಂಡ ಎಂದು ಹೇಳುತ್ತಾರೆ. ವಿಶೇಷವೆಂದರೆ ಇದರ ಅಕ್ಕಪಕ್ಕದಲ್ಲಿ ಮಂಜುಗಡ್ಡೆ ಇದ್ದರೂ ಈ ನೀರು ಮಾತ್ರ ಮಂಜುಗಡ್ಡೆ (ಹಿಮಗಡ್ಡೆ) ಆಗುವುದಿಲ್ಲ ಮತ್ತು ಇಷ್ಟು ಕಡಿಮೆ ತಾಪಮಾನದಲ್ಲಿಯೂ ಈ ನೀರು ಬಿಸಿಯಾಗಿರುತ್ತದೆ ಈ ಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರ ಕಥೆ ಮುಂದಿನಂತಿದೆ.

ಹಿಂದೆ ಇದೇ ವಿಪಾಶಾ ನದಿಯ ದಡದಲ್ಲಿ ವಸಿಷ್ಠಋಷಿಗಳು ತಪಸ್ಸನ್ನು ಮಾಡಿ ಅವರು ಆತ್ಮಗ್ಲಾನಿ ಬರುವುದರಿಂದ ಮುಕ್ತರಾಗಿದ್ದರು. ರಾವಣನನ್ನು ಕೊಂದ ನಂತರ ಪ್ರಭು ಶ್ರೀರಾಮಚಂದ್ರನಿಗೆ ಬ್ರಹ್ಮಹತ್ಯೆಯ ಪಾಪ ತಗುಲಿತು. ಈ ಪಾಪದಿಂದ ಮುಕ್ತನಾಗಲು ಶ್ರೀರಾಮನು ಅಶ್ವಮೇಧ ಯಜ್ಞವನ್ನು ಮಾಡುವುದರ ಆಯೋಜನೆಯನ್ನು ಮಾಡಿದನು. ಇತರ ಋಷಿಮುನಿಗಳೊಂದಿಗೆ ಚರ್ಚೆಯನ್ನು ಮಾಡುವಾಗ ವಸಿಷ್ಠಋಷಿಗಳನ್ನು ಹುಡುಕುವ ಕಾರ್ಯವನ್ನು ಲಕ್ಷ್ಮಣನಿಗೆ ನೀಡಲಾಯಿತು. ಲಕ್ಷ್ಮಣನು ಇದೇ ಪ್ರದೇಶದಲ್ಲಿ, ಅಂದರೆ ಕುಲ್ಲೂ ಬೆಟ್ಟುಗಳ ಸಾಲಿನಲ್ಲಿ ವಸಿಷ್ಠಋಷಿಗಳನ್ನು ಹುಡುಕಿದನು. ಅದು ಚಳಿಗಾಲವಾಗಿತ್ತು. ತಮ್ಮ ಗುರುಗಳ ಸ್ನಾನಕ್ಕಾಗಿ ತನ್ನಲ್ಲಿರುವ ಅಗ್ನಿಬಾಣವನ್ನು ಬಿಟ್ಟು ಲಕ್ಷ್ಮಣನು ಅಲ್ಲಿನ ಭೂಮಿಯಿಂದ ಬಿಸಿನೀರನ್ನು ತೆಗೆದನು. ವಸಿಷ್ಠಋಷಿಗಳು ತಪಸ್ವಿಗಳಾಗಿದ್ದರು. ಅವರಿಗೆ ಬಿಸಿನೀರಿನ ಆವಶ್ಯಕತೆಯಿರಲಿಲ್ಲ. ಲಕ್ಷ್ಮಣನು ದಣಿದಿರುವುದನ್ನು ನೋಡಿ ವಸಿಷ್ಠರು ಅವನಿಗೆ ಮೊದಲು ಈ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಲು ಆಜ್ಞೆಯನ್ನು ಮಾಡಿದರು ಹಾಗೂ ಯಾವ ಭಕ್ತನು ಇಲ್ಲಿ ಸ್ನಾನ ಮಾಡುತ್ತಾನೆಯೋ, ಅವನ ಎಲ್ಲ ಪಾಪಗಳು ನಾಶವಾಗುವವು, ಚರ್ಮರೋಗಗಳು ಗುಣವಾಗುವವು, ಹಾಗೆಯೇ ಅವನ ದಣಿವೂ ದೂರವಾಗುವುದು ಎಂಬ ವರದಾನವನ್ನೂ ನೀಡಿದರು.

ಶ್ರೀರಾಮ ಮಂದಿರದ ಸ್ಥಾಪನೆಯ ಇತಿಹಾಸ

ಮನಾಲಿಯಲ್ಲಿನ ಶ್ರೀ ವಸಿಷ್ಠಋಷಿಗಳ ತಪೋಸ್ಥಾನ (ವಸಿಷ್ಠ ಕುಂಡ)

ವಸಿಷ್ಠ ಕುಂಡದ ಹತ್ತಿರವೇ ಶ್ರೀರಾಮನ ಮಂದಿರವಿದೆ. ಸರಿಸುಮಾರು ೪ ಸಾವಿರ ವರ್ಷಗಳ ಹಿಂದೆ ಈ ಮಂದಿರವನ್ನು ಜನಮೇಜಯ ರಾಜನು ಕಟ್ಟಿಸಿದ್ದನು. ತಂದೆ ಪರೀಕ್ಷಿತರಾಜನ ಮೃತ್ಯುವಿನ ನಂತರ ಅವನ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಜನಮೇಜಯ ರಾಜನು ಅನೇಕ ಸ್ಥಳಗಳಲ್ಲಿ ಶ್ರೀರಾಮನ ಮಂದಿರಗಳನ್ನು ಕಟ್ಟಿಸಿದನು, ಇದು ಅದರಲ್ಲಿನ ಒಂದು ಮಂದಿರವಾಗಿದೆ. ಕಾಲಾಂತರದಲ್ಲಿ ಈ ಮಂದಿರದಲ್ಲಿನ ಮೂರ್ತಿಗಳು ಕಳುವಾದವು. ೧೬೦೦ ನೇ ಇಸವಿಯಲ್ಲಿ ಜಗತಸಿಂಹ ರಾಜನು ಕುಲ್ಲೂವಿನಲ್ಲಿ ವೈಷ್ಣವ ಧರ್ಮದ ಪ್ರಸಾರವನ್ನು ಆರಂಭಿಸಿದನು. ಅಯೋಧ್ಯೆಯಲ್ಲಿ ಶ್ರೀರಾಮನ ಅಶ್ವಮೇಧ ಯಜ್ಞಕ್ಕಾಗಿ ತಯಾರಿಸಿದ ಮೂರ್ತಿಗಳನ್ನು ತೆಗೆದುಕೊಂಡು ಬರಲು ರಾಜನು ಅಲ್ಲಿಗೆ ತನ್ನ ದೂತರನ್ನು ಕಳುಹಿಸಿದನು; ಆದರೆ ಅವರಿಗೆ ಶ್ರೀರಾಮನ ಮೂರ್ತಿಗಳನ್ನು ಗುರುತಿಸಲಾಗಲಿಲ್ಲ. ಅವರು ಎರಡು ಬಾರಿ ಬೇರೆ ಬೇರೆ ಎರಡು ಮೂರ್ತಿಗಳನ್ನು ತಂದರು. ಈ ಮೂರ್ತಿಗಳ ಸ್ಥಾಪನೆಯನ್ನು ರಾಜನು ವಸಿಷ್ಠ, ಹಾಗೆಯೇ ಮಣಿಕರ್ಣ ಈ ಸ್ಥಾನಗಳಲ್ಲಿನ ಶ್ರೀರಾಮಮಂದಿರಗಳಲ್ಲಿ ಮಾಡಿದನು ಮತ್ತು ಮಂದಿರಗಳ ಹೆಸರಿನಲ್ಲಿ ಮಾಲೀಕತ್ವಹಕ್ಕಿನ ಮುದ್ರೆಯನ್ನು ಹಾಕಿದನು. ಅದಕ್ಕನುಸಾರ ಇಲ್ಲಿ ಮಂದಿರದ ವ್ಯವಸ್ಥೆಯನ್ನು ನೋಡಲಾಗುತ್ತದೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಋಷಿಮುನಿಗಳ ಬೋಧನೆ ಮತ್ತು ಅವರ ಹೆಸರುಗಳು ಚಿರಂತನವಾಗಿರುವುದರ ಕಾರಣಗಳು

ವಸಿಷ್ಠಋಷಿ, ವಿಶ್ವಾಮಿತ್ರಋಷಿ, ಭೃಗುಋಷಿ, ಅತ್ರಿಋಷಿ, ಅಗಸ್ತಿಋಷಿ, ನಾರದ ಮುನಿ ಮುಂತಾದವರ ಬೋಧನೆಗಳು ಮತ್ತು ಹೆಸರುಗಳು ಯುಗಾನುಯುಗಗಳಿಂದ ಚಿರಂತನವಾಗಿವೆ. ಇದಕ್ಕೆ ವಿರುದ್ಧ ಬುದ್ಧಿವಂತರು, ಧರ್ಮದ್ರೋಹಿಗಳು ಮತ್ತು ಬುದ್ಧಿಜೀವಿಗಳ ಹೆಸರುಗಳು ೧-೨ ಪೀಳಿಗೆಗಳಲ್ಲಿಯೇ ಮರೆತು ಹೋಗುತ್ತವೆ. ಇದರ ಕಾರಣವೆಂದರೆ, ಋಷಿಮುನಿಗಳು ಸತ್ಯವನ್ನು ಹೇಳುತ್ತಾರೆ; ಆದುದರಿಂದ ಕಾಲವು ಅವರ ಹೆಸರುಗಳನ್ನು ಮತ್ತು ಬೋಧನೆಯನ್ನು ಸ್ಪರ್ಶಿಸುವುದಿಲ್ಲ. ಇದಕ್ಕೆ ವಿರುದ್ಧ ಬುದ್ಧಿವಂತ ಹಾಗೂ ಧರ್ಮದ್ರೋಹಿ ಮತ್ತು ಬುದ್ಧಿಜೀವಿಗಳು ಹೇಳುವುದು ಸತ್ಯವಾಗಿರುವುದಿಲ್ಲ. ಆದುದರಿಂದ ಕಾಲದ ಪ್ರವಾಹದಲ್ಲಿ ಅವರ ಹೆಸರುಗಳನ್ನು ಮತ್ತು ಬೋಧನೆಗಳನ್ನು ಮರೆತು ಹೋಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ