೧. ‘ಪ್ರತಿದಿನ ಸಾಧಕರಿಗೆ ಸಾಧನೆಯ ಚಿಕ್ಕ-ಚಿಕ್ಕ ಧ್ಯೇಯಗಳನ್ನು ಕೊಟ್ಟು ಅವರ ಉತ್ಸಾಹ ಹಾಗೆಯೇ ಉಳಿಯಬೇಕು ಮತ್ತು ಅವರಿಗೆ ಪ್ರೇರಣೆಯನ್ನು ನೀಡಿ ಸಾಧನೆಗೆ ದಿಶೆ ನೀಡಲು ಸಾಧ್ಯವಾಗಬೇಕೆಂದು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಅಂಶಗಳು
‘ನಾನು ದೇವದ ಆಶ್ರಮದಲ್ಲಿನ ಕೆಲವು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿವಾರ ತೆಗೆದುಕೊಳ್ಳುತ್ತೇನೆ. ಸಾಧಕರಿಗೆ ಸಾಧನೆಯಲ್ಲಿ ಸತತವಾಗಿ ಚಿಕ್ಕ-ಚಿಕ್ಕ ಧ್ಯೇಯಗಳನ್ನು ನೀಡಿ ಅವರ ಉತ್ಸಾಹ ವನ್ನು ಉಳಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಇನ್ನೂ ಏನು ಮಾಡಬಹುದು ?’, ಎಂಬ ವಿಚಾರ ಮಾಡುತ್ತಿರುವಾಗ ಈಶ್ವರನು, ಅವರಿಗೆ ಪ್ರತಿದಿನ ಏನಾದರೂ ಪ್ರೇರಣೆಯನ್ನು ನೀಡುವ ಹಾಗೂ ಸಾಧನೆಗೆ ದಿಶೆ ನೀಡುವ ಧ್ಯೇಯವನ್ನು ನೀಡಿದರೆ ಒಳ್ಳೆಯದಾಗು ತ್ತದೆ’, ಎಂದು ಸೂಚಿಸಿದನು. ಈ ದೃಷ್ಟಿಯಿಂದ ವರದಿಕೊಡುವ ಸಾಧಕರಿಗಾಗಿ ‘ವಾಟ್ಸಪ್’ನಲ್ಲಿ ಗುಂಪುಗಳನ್ನು ಮಾಡಿ ಅದರಲ್ಲಿ ಪ್ರತಿದಿನ ‘ಈಶ್ವರನು ಸೂಚಿಸಿದಂತೆ’, ಚಿಕ್ಕ-ಚಿಕ್ಕ ಸಂದೇಶಗಳನ್ನು ಕಳುಹಿಸಲು ಆರಂಭಿಸಿದೆ. ಇದಕ್ಕೆ ಸಾಧಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ಆಗ ‘ಇದರ ಲಾಭವು ಇತರ ಸಾಧಕರಿಗೂ ಆಗಬೇಕೆಂಬ’ ಉದ್ದೇಶದಿಂದ ಆ ಸಂದೇಶವನ್ನು ‘ವಾಟ್ಸಪ್’ನ ‘ಸ್ಟೇಟಸ್’ನಲ್ಲಿಯೂ ಇಡಲು ಪ್ರಾರಂಭಿಸಿದೆನು. ಅದರಿಂದ ಅನೇಕ ಸಾಧಕರವರೆಗೆ ಆ ಸಂದೇಶಗಳು ತಲುಪಲು ಸಾಧ್ಯವಾಯಿತು ಹಾಗೂ ‘ಬಹಳಷ್ಟು ಸಾಧಕರಿಗೆ ಇದರ ಲಾಭವಾಗುತ್ತಿದೆ’, ಎಂದು ಸಾಧಕರಿಂದ ತಿಳಿಯಿತು. ಪೂ. ವಟಕರಕಾಕಾರವರು ‘ಈ ಸಂದೇಶವನ್ನು ನಾವು ಗೋವಾಗೆ ಕಳಿಸೋಣ ! ಅದು ‘ಸನಾತನ ಪ್ರಭಾತ’ ನಿಯತಕಾಲಿಕೆಗಳಲ್ಲಿ ಮುದ್ರಣವಾದರೆ, ಅದು ಅನೇಕ ಸಾಧಕರವರೆಗೆ ತಲುಪಬಹುದು’, ಎಂದು ಹೇಳಿದಾಗ ಅದರ ಸಂಕಲನವನ್ನು ಮಾಡಲು ಪ್ರಾರಂಭಿಸಿದೆ.
ಮುಂದೆ ಕೆಲವು ಧ್ಯೇಯಗಳನ್ನು ಕೊಡಲಾಗಿದೆ. ಅದರಲ್ಲಿನ ಕೆಲವು ಧ್ಯೇಯಗಳು ಒಂದು ದಿನಕ್ಕಾಗಿದ್ದು ಕೆಲವು ಧ್ಯೇಯಗಳು ೩ ರಿಂದ ೫ ದಿನಗಳಿಗಾಗಿವೆ. ಧ್ಯೇಯದ ಕಾಲಾವಧಿಯನ್ನು ಮುಂದೆ ಕಂಸದಲ್ಲಿ ಕೊಡಲಾಗಿದೆ. ಅದಕ್ಕನುಸಾರ ಸಾಧಕರು ತಮ್ಮ ಸ್ಥಿತಿಗನುಸಾರ ಒಂದೊಂದು ಧ್ಯೇಯವನ್ನು ತೆಗೆದುಕೊಳ್ಳಬಹುದು. ಹಾಗೆಯೇ ವ್ಯಷ್ಟಿ ವರದಿ ತೆಗೆದುಕೊಳ್ಳುವ ಸೇವಕರು ತಮ್ಮ ಗುಂಪಿನಲ್ಲಿನ ಸಾಧಕರಿಗೆ ಮುಂದಿನಂತೆ ಧ್ಯೇಯಗಳನ್ನು ನೀಡಿ ಅವರ ವರದಿಯನ್ನು ತೆಗೆದುಕೊಳ್ಳಬಹುದು.
೨. ಅಹಂನ ಪ್ರಕಟೀಕರಣದ ಕಡೆಗೆ ಗಮನ ಕೊಡುವುದು (ಧ್ಯೇಯ : ೫ ದಿನಗಳಿಗಾಗಿ)
ಅಹಂನ ಪ್ರಕಟೀಕರಣದ ಕಡೆಗೆ ಗಮನ ಕೊಡುವುದು, ಅದರ ಮೇಲೆ ವಿಜಯಸಾಧಿಸುವುದು ಮತ್ತು ‘ಮುಂದೆ ಕೊಡಲಾದ ಅಂಶಗಳಿಗನುಸಾರ ಬರುವ ವಿಚಾರಗಳು ದಿನದಲ್ಲಿ ಎಷ್ಟಿರುತ್ತವೆ ?’ ಎಂಬುದರ ನಿರೀಕ್ಷಣೆ ಮಾಡುವುದು
೨ ಅ. ಅಹಂನ ಲಕ್ಷಣಗಳು : ೧. ಸ್ವಕರ್ತೃತ್ವದ ವಿಚಾರ,
೨. ತಮ್ಮನ್ನು ಹೊಗಳಬೇಕೆಂದು ಅನಿಸುವುದು,
೩. ಅಪೇಕ್ಷೆಯನ್ನು ಇಟ್ಟುಕೊಳ್ಳುವುದು,
೪. ತಮ್ಮ ಪ್ರತಿಷ್ಠಿಯನ್ನು ಕಾಪಾಡುವುದು
೨ ಅ ೧. ‘ನಮ್ಮ ಮಾತುಗಳು, ನಮ್ಮ ವರ್ತನೆ ಹಾಗೆಯೇ ನಮ್ಮ ನಡೆದಾಡುವುದರಲ್ಲಿ ನಮ್ಮ ಅಹಂ ಎಲ್ಲಿ ಪ್ರಕಟವಾಗುತ್ತದೆ’, ಎಂಬುದನ್ನು ಕಂಡು ಹಿಡಿಯುವುದು
೨ ಅ ೨. ಅಹಂನ ವಿಚಾರಗಳಿಂದ ಮುಕ್ತವಾಗಲು ಮನಸ್ಸಿಗೆ ಯೋಗ್ಯ ದೃಷ್ಟಿಕೋನ ಕೊಡುವುದು ಹಾಗೂ ಪ್ರಾರ್ಥನೆ ಮಾಡುವುದು
೨ ಅ ೩. ಕರ್ತೃತ್ವದ ಮೇಲೆ ವಿಜಯ ಸಾಧಿಸಲು ಕ್ಷಮೆ ಯಾಚನೆ ಮಾಡಿ ಕೃತಜ್ಞತೆಯನ್ನು ಹೆಚ್ಚಿಸುವುದು
೩. ಈಶ್ವರನ ಧ್ವನಿಚಿತ್ರೀಕರಣ ಅಖಂಡವಾಗಿ ನಡೆದಿದೆ (ಧ್ಯೇಯ : ೫ ದಿನಗಳಿಗಾಗಿ)
ಅ. ‘ಈಶ್ವರನು ಪ್ರತಿಯೊಂದು ವಿಷಯವನ್ನು ನೋಂದಣಿ ಮಾಡುತ್ತಿರುತ್ತಾನೆ’, ಅಂದರೆ ‘ಈಶ್ವರನ ಧ್ವನಿಚಿತ್ರೀಕರಣವು ಅಖಂಡವಾಗಿ ನಡೆದಿರುತ್ತದೆ’, ಎಂಬುದರ ಅರಿವನ್ನು ಸತತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುವುದು
ಆ. ‘ಧ್ವನಿಚಿತ್ರೀಕರಣ ನಡೆದಿದೆ’ ಮತ್ತು ಈ ಮಾಧ್ಯಮದಿಂದ ‘ಈಶ್ವರನು ನನ್ನ ಕೇವಲ ನಿರೀಕ್ಷಣೆಯನ್ನಷ್ಟೇ ಮಾಡದೇ ಅವನು ನನಗೆ ಸಾಧನೆಯಲ್ಲಿ ಅಖಂಡ ಸಹಾಯ ಮಾಡುತ್ತಿದ್ದಾನೆ’, ಎಂದು ತಿಳಿದು ಕೊಳ್ಳುವುದು ಹಾಗೂ ಈ ಮಾಧ್ಯಮದಿಂದ ಈಶ್ವರನ ಪ್ರೀತಿಯನ್ನು ಅನುಭವಿಸುವುದು
೪. ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಕೃತಜ್ಞತಾಭಾವವನ್ನು ಹೆಚ್ಚಿಸುವುದು (ಧ್ಯೇಯ- ೩ ದಿನಗಳಿಗಾಗಿ)
ಅ. ನನ್ನ ಜನ್ಮದಿಂದ ಇಂದಿನವರೆಗೆ ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನು ನನಗೆ ಹೇಗೆ ಸಹಾಯ ಮಾಡಿದ್ದಾನೆ ? ಅವನು ನನಗೆ ಸಾಧನೆಯಲ್ಲಿಯೂ ಎಷ್ಟು ಸಹಾಯ ಮಾಡುತ್ತಿದ್ದಾನೆ ?’, ಇದನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಸತತವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ ‘ಭಗವಂತನು ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂಬ ಸಂಸ್ಕಾರವು ಅಂತರ್ಮನದ ಮೇಲೆ ಆಗಿ ಅಹಂಭಾವವು ಕಡಿಮೆಯಾಗಲು ಸಹಾಯವಾಗುತ್ತದೆ.
ಆ. ಸಿಕ್ಕಿದ ಪ್ರತಿಯೊಂದು ಸೇವೆಯು ಗುರುದೇವರ ಕೃಪೆಯಿಂದ ಸಿಕ್ಕಿದ ಬಗ್ಗೆ ಹಾಗೂ ಅದನ್ನು ಅವರೇ ಮಾಡಿಸಿಕೊಂಡ ಬಗ್ಗೆ ಹೆಚ್ಚೆಚ್ಚು ಕೃತಜ್ಞತೆಯನ್ನು ವ್ಯಕ್ತಪಡಿಸುವುದು
ಇ. ರಾತ್ರಿ ಮಲಗುವ ಮೊದಲು ೫ ನಿಮಿಷಗಳ ಕಾಲ ಗುರುದೇವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು
ಈ. ‘ಈಶ್ವರನು ದಿನವಿಡಿ ಎಷ್ಟು ಸಹಾಯ ಮಾಡಿದನು ?’, ಎಂಬುದನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸುವುದು.
ಉ. ಭಗವಂತನು ಸೇವೆಯನ್ನು ನೀಡಿದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಭಗವಂತನು ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾನೆ, ಇದರ ಬಗ್ಗೆ ಹಾಗೂ ಸೇವೆಯಾದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ ಕೃತಜ್ಞತಾ ಭಾವವು ಹೆಚ್ಚಾಗುವುದರೊಂದಿಗೆ ಅಹಂ ಸಹ ಕಡಿಮೆಯಾಗುತ್ತದೆ.
೫. ಭಾವಪೂರ್ಣ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು (ಧ್ಯೇಯ : ೩ ದಿನಗಳಿಗಾಗಿ)
ಅ. ದಿನವಿಡಿ ಮಾಡುತ್ತಿರುವ ಪ್ರತಿಯೊಂದು ಪ್ರಾರ್ಥನೆ (ಹಾಗೂ ಕೃತಜ್ಞತೆ) ಹೆಚ್ಚೆಚ್ಚು ಭಾವಪೂರ್ಣವಾಗಿ ಆಗಲು ಪ್ರಯತ್ನಿಸುವುದು, ಪ್ರತಿಯೊಂದು ಬಾರಿ ‘ಪ್ರಾರ್ಥನೆಯನ್ನು (ಹಾಗೂ ಕೃತಜ್ಞತೆಯನ್ನು) ಗುರುದೇವರ/ಶ್ರೀಕೃಷ್ಣನ ಚರಣಗಳ ಬಳಿ ಕುಳಿತು ಮಾಡುತ್ತಿದ್ದೇನೆ’, ಎಂಬ ಭಾವವನ್ನಿಡುವುದು
ಆ. ಶರಣಾಗತಭಾವದಿಂದ ಭಾವಪೂರ್ಣ ಹಾಗೂ ಪರಿಪೂರ್ಣ ಸೇವೆಯನ್ನು ಮಾಡಿಸಿಕೊಳ್ಳುವ ಬಗ್ಗೆ ಪ್ರಾರ್ಥನೆ ಮಾಡುವುದು
೬. ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸುವುದು (ಧ್ಯೇಯ : ೩ ದಿನಗಳಿಗಾಗಿ)
ಅ. ಹೆಚ್ಚೆಚ್ಚು ಚಿಕ್ಕ-ಚಿಕ್ಕ ಭಾವಪ್ರಯೋಗಗಳನ್ನು ಮಾಡುವುದು ಅಥವಾ ಗುರುಸ್ಮರಣೆಯನ್ನು ಮಾಡುವುದು
ಆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಆಗುತ್ತಿರುವ ಹೆಚ್ಚೆಚ್ಚು ಕೃತಿಗಳಿಗೆ ಭಾವವನ್ನು ಜೋಡಿಸಲು ಪ್ರಯತ್ನ ಮಾಡುವುದು
ಇ. ದಿನದಲ್ಲಿ ಕನಿಷ್ಠ ೫ ಬಾರಿಯಾದರೂ ಆತ್ಮನಿವೇದನೆ ಮಾಡುವುದು
ಈ. ಆಚೀಚೆ ಓಡಾಡುವಾಗ ಹಾಗೂ ಸೇವೆಯನ್ನು ಮಾಡದೇ ಇರುವಾಗ ಹೆಚ್ಚೆಚ್ಚು ನಾಮಜಪ ಮಾಡುವುದು
೭. ನಾಮಜಪ (ಧ್ಯೇಯ : ೩ ದಿನಗಳಿಗಾಗಿ)
ಅ. ದಿನವಿಡಿ ಹೆಚ್ಚೆಚ್ಚು ನಾಮಜಪ ಮಾಡಲು ಪ್ರಯತ್ನಿಸುವುದು
ಆ. ಬೆಳಗ್ಗೆ ಎದ್ದಾಗಿನಿಂದ ಸ್ನಾನ ಮಾಡುವುದು, ತಯಾರಾಗುವುದು ಇವುಗಳಂತಹ ಕೃತಿಗಳನ್ನು ಮಾಡುವಾಗ ಹಾಗೆಯೇ ಪ್ರಸಾದ, ಮಹಾಪ್ರಸಾದವನ್ನು ಸೇವಿಸುವಾಗ, ಸೇವೆಗೆ ಹೋಗುವಾಗ-ಬರುವಾಗ ಹಾಗೂ ಇತರ ಸಮಯದಲ್ಲಿ ಹೆಚ್ಚೆಚ್ಚು ನಾಮಜಪ ಮಾಡಲು ಪ್ರಯತ್ನ ಮಾಡುವುದು
ಇ. ಮಲಗುವಾಗ ನಾಮದ ಪೆಟ್ಟಿಗೆಯನ್ನು ಮಾಡುವುದು ಮತ್ತು ೧೫ ನಿಮಿಷ ನಾಮಜಪ ಮಾಡಲು ಪ್ರಯತ್ನಿಸುವುದು
೮. ಪ್ರೇಮಭಾವ
‘ಅಹಂಭಾವವೆಂದರೆ ತಮ್ಮ (ಸ್ವಂತದ) ವಿಚಾರ ಮಾಡುವುದು ಹಾಗೂ ಪ್ರೇಮಭಾವವೆಂದರೆ ಇತರರ ವಿಚಾರ ಮಾಡುವುದು.’
೮ ಅ. ಪ್ರೇಮಭಾವವನ್ನು ಹೆಚ್ಚಿಸುವುದು (ಧ್ಯೇಯ : ೩ ದಿನಗಳಿಗಾಗಿ)
೧. ಪ್ರೇಮಭಾವವನ್ನು ಹೆಚ್ಚಿಸಲು ಈಶ್ವರನು ಕೊಡುತ್ತಿರುವ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆಯುವುದು
೨. ಪರಮದಯಾಳು ಹಾಗೂ ಪರಮ ಕೃಪಾಳು ಭಗವಂತನು ಗುಣಸಂವರ್ಧನೆಗಾಗಿ ನನಗೆ ಹೇಗೆ ಸಹಾಯ ಮಾಡುತ್ತಿದ್ದಾನೆ’, ಎಂಬುದನ್ನು ಅನುಭವಿಸುವುದು
೩. ಪ್ರೇಮಭಾವವನ್ನು ಹೆಚ್ಚಿಸಲು ಇತರರ ವಿಚಾರ ಮಾಡುವುದು, ಇತರರನ್ನು ಅರಿತುಕೊಳ್ಳುವುದು, ಇತರರಿಗೆ ಮಹತ್ವ ಕೊಡುವುದು ಹಾಗೂ ಇತರರಿಗಾಗಿ ಕೃತಿಗಳನ್ನು ಮಾಡುವುದು, ಇಂತಹ ಹೆಚ್ಚೆಚ್ಚು ಕೃತಿಗಳನ್ನು ಮಾಡುವುದು
೮ ಆ. ತಮ್ಮಲ್ಲಿನ ಪ್ರೇಮಭಾವದ ಅಧ್ಯಯನ ಮಾಡುವುದು (ಧ್ಯೇಯ : ೧ ದಿನಕ್ಕಾಗಿ)
೧. ‘ದಿನವಿಡಿ ನನ್ನ ಮನಸ್ಸಿನಲ್ಲಿ ನನ್ನ ಬಗೆಗಿನ ವಿಚಾರಗಳು ಎಷ್ಟಿರುತ್ತವೆ’, ಎಂಬುದರ ಅಧ್ಯಯನ ಮಾಡುವುದು
೨. ‘ದಿನವಿಡಿ ಪ್ರೇಮಭಾವದ ಬಗೆಗಿನ ತುಂಬಾ ಕೃತಿಗಳನ್ನು ಮಾಡುವುದು ಮತ್ತು ‘ಅವುಗಳನ್ನು ಮಾಡುತ್ತಿರುವಾಗ ಕೃತಿಗಳ ಬಗ್ಗೆ ಮನಸ್ಸಿನಲ್ಲಿ ಯಾವ ವಿಚಾರಗಳಿರುತ್ತವೆ ?’ ಇದರ ಅಧ್ಯಯನ ಮಾಡುವುದು
೩. ‘ದಿನವಿಡಿ ನಾವು ನಮ್ಮ ಬಗ್ಗೆ ಎಷ್ಟು ಹಾಗೂ ಇತರರ ಬಗ್ಗೆ ಎಷ್ಟು ವಿಚಾರಗಳನ್ನು ಮಾಡಿ ಕೃತಿಗಳನ್ನು ಮಾಡುತ್ತೇವೆ ?’, ಎಂಬುದರ ಅಧ್ಯಯನ ಮಾಡಿ ಅದರಿಂದ ‘ನಮ್ಮಲ್ಲಿ ಎಷ್ಟು ಪ್ರೇಮಭಾವವಿದೆ ?’, ಎಂಬುದರ ಅಧ್ಯಯನ ಮಾಡುವುದು
೮ ಇ. ‘ಪ್ರೇಮಭಾವವನ್ನು ಹೆಚ್ಚಿಸುವ ಅವಕಾಶ ಎಲ್ಲೆಲ್ಲಿದೆ’, ಇದರ ವ್ಯಾಪ್ತಿಯನ್ನು ತೆಗೆಯುವುದು (ಧ್ಯೇಯ ೨ ದಿನಗಳಿಗಾಗಿ)
೧. ಆಶ್ರಮದಲ್ಲಿನ ಸಾಧಕರ ಕೋಣೆಗಳು, ಸೇವೆಯ ಜಾಗದಲ್ಲಿ ಹಾಗೂ ಆಶ್ರಮದ ಸ್ತರದಲ್ಲಿ ವ್ಯಾಪ್ತಿಯನ್ನು ತೆಗೆಯುವುದು, ಹಾಗೆಯೇ ಪ್ರಸಾರದಲ್ಲಿನ ಸಾಧಕರು ಮನೆಯಲ್ಲಿರುವಾಗ, ಸಾಧಕರ ಜೊತೆಗಿರುವಾಗ ಹಾಗೂ ಹೊರಗೆ ಪ್ರಸಾರದ ಸೇವೆಯಲ್ಲಿರುವಾಗ ಎಲ್ಲಿ ಪ್ರೇಮಭಾವವನ್ನು ಹೆಚ್ಚಿಸುವ ಅವಕಾಶವಿದೆ, ಎಂಬುದರ ವ್ಯಾಪ್ತಿಯನ್ನು ತೆಗೆಯುವುದು.
೨. ಪ್ರೇಮಭಾವವನ್ನು ಹೆಚ್ಚಿಸಲು ಈಶ್ವರನು ನೀಡುತ್ತಿರುವ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆದುಕೊಳ್ಳುವುದು.
೯. ಶ್ರೀಮನ್ನಾರಾಯಣ ಸ್ವರೂಪ ಶ್ರೀ ಗುರುದೇವರ ಬಗ್ಗೆ ಭಾವವನ್ನಿಡುವುದು (ಧ್ಯೇಯ : ೨ ದಿನಗಳಿಗಾಗಿ)
ಅ. ‘ಶ್ರೀಮನ್ನಾರಾಯಣ ಸ್ವರೂಪ ಶ್ರೀ ಗುರು ದೇವರು ನನ್ನ ಹೃದಯದಲ್ಲಿ ಇದ್ದಾರೆ, ಎಂಬ ಭಾವವನ್ನಿಡುವುದು
ಆ. ಪ್ರತಿಯೊಂದು ಕೃತಿಯನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕರಿಸುವುದು
ಇ. ಶ್ರೀಮನ್ನಾರಾಯಣ ಸ್ವರೂಪ ಶ್ರೀಗುರುದೇವರಿಗೆ ಪ್ರದಕ್ಷಿಣೆಗಳನ್ನು ಹಾಕುವುದು
ಈ. ದಿನದಲ್ಲಿ ಹೆಚ್ಚೆಚ್ಚು ಸಮಯ ಶ್ರೀಮನ್ನಾರಾಯಣ ಸ್ವರೂಪ ಶ್ರೀ ಗುರುದೇವರೆದುರು ಕುಳಿತು ತಮ್ಮಿಂದ ಗೊತ್ತಿದ್ದು-ಗೊತ್ತಿಲ್ಲದೇ ಆಗಿರುವ ಎಲ್ಲ ತಪ್ಪುಗಳಿಗಾಗಿ ಕ್ಷಮಾಯಾಚನೆ ಮಾಡುವುದು
೧೦. ಸಹಸಾಧಕರ ಬಗ್ಗೆ ಇಡಬೇಕಾದ ಭಾವ (ಧ್ಯೇಯ : ೧ ದಿನಕ್ಕಾಗಿ)
ಅ. ‘ಸಹಸಾಧಕರೆಂದರೆ ನನಗೆ ಸಾಧನೆಯಲ್ಲಿ ಸಹಾಯ ಮಾಡಲು ಈಶ್ವರನು ಕಳುಹಿಸಿದ ಅವನ ಒಂದು ರೂಪವಾಗಿದೆ, ಎಂಬ ಭಾವವಿಟ್ಟು ದಿನವಿಡಿ ಏನು ಅನುಭವಿಸಲು ಸಿಗುತ್ತದೆ, ಎಂದು ನೋಡುವುದು
ಆ. ‘ಸಹಸಾಧಕರ ಮಾಧ್ಯಮದಿಂದ ಈಶ್ವರನು ನನಗೆ ಸಾಧನೆಯಲ್ಲಿ ಎಷ್ಟು ಸಹಾಯ ಮಾಡುತ್ತಾನೆ, ಎಂಬುದರ ಅಧ್ಯಯನ ಮಾಡುವುದು
೧೧. ‘ಗುರುತತ್ತ್ವವು ನನಗೆ ಹೇಗೆ ಸತತವಾಗಿ ಕಲಿಸುತ್ತಿದೆ’, ಎಂಬುದನ್ನು ಹುಡುಕುವುದು (ಧ್ಯೇಯ : ೧ ದಿನಕ್ಕಾಗಿ)
‘ದಿನವಿಡಿ ಗುರುತತ್ತ್ವವು, ಅಂದರೆ ಗುರುದೇವರು ನನಗೆ ಅನೇಕ ಮಾಧ್ಯಮಗಳಿಂದ ಹೇಗೆ ಸತತವಾಗಿ ಕಲಿಸುತ್ತಿದ್ದಾರೆ’, ಎಂಬುದನ್ನು ಕಂಡು ಹಿಡಿಯುವ ಪ್ರಯತ್ನ ಮಾಡುವುದು
೧೨. ದೇವರೊಂದಿಗೆ ಮಾತನಾಡುವುದು (ಧ್ಯೇಯ : ೨ ದಿನಗಳಿಗಾಗಿ)
ದೇವರೊಂದಿಗೆ ಮಾತನಾಡುವುದೆಂದರೆ ದೇವರ ಅನುಸಂಧಾನದಲ್ಲಿರುವುದು. ಇದರಿಂದ ಭಾವವೃದ್ಧಿಯಾಗಲು ಸಹಾಯವಾಗುತ್ತದೆ ಮತ್ತು ಅಂತರ್ಮುಖತೆ ಹೆಚ್ಚಾಗುತ್ತದೆ. ದಿನವಿಡಿ ನನ್ನ ಮನಸ್ಸಿನಲ್ಲಿ ಯಾವ ವಿಚಾರಗಳು ಬರುತ್ತವೆಯೋ, ಯಾವ ಕೃತಿಗಳನ್ನು ನಾನು ಮಾಡುತ್ತೇನೆಯೋ, ಆ ಪ್ರತಿಯೊಂದು ಕೃತಿಯನ್ನು ದೇವರಿಗೆ ಹೇಳುವುದು ಹಾಗೂ ಅವನೊಂದಿಗೆ ಮಾತನಾಡುವುದು
೧೩. ಈಶ್ವರೇಚ್ಛೆ (ಧ್ಯೇಯ : ೧ ದಿನಕ್ಕಾಗಿ)
‘ದಿನವಿಡಿ ಘಟಿಸುತ್ತಿರುವ ಪ್ರಸಂಗಗಳು ಈಶ್ವರೇಚ್ಛೆಯಿಂದ ಘಟಿಸುತ್ತಿರುತ್ತವೆ’, ಎಂಬುದನ್ನು ಗಮನದಲ್ಲಿರಿಸಿ, ಅದನ್ನು ಸಂಪೂರ್ಣ ಸ್ವೀಕರಿಸಿ, ‘ದೇವರಿಗೆ ಅದರಿಂದ ನನಗೆ ಏನು ಕಲಿಸುವುದಿದೆ ?’, ಎಂಬುದರ ಚಿಂತನೆ ಮಾಡುವುದು
೧೪. ಗುರುಪೂರ್ಣಿಮೆಯ ಧ್ಯೇಯ
ಗುರುಪೂರ್ಣಿಮೆಯ ಲಾಭವು ಹೆಚ್ಚೆಚ್ಚು ಆಗಲು ಶ್ರೀಗುರುಗಳೊಂದಿಗೆ ಅನುಸಂಧಾನವನ್ನು ಹೆಚ್ಚಿಸೋಣ. ಶ್ರೀಗುರುಗಳೊಂದಿಗೆ ಮಾತನಾಡುವುದು, ಭಾವಪ್ರಯೋಗ ಮಾಡುವುದು, ಮಾನಸ ಪೂಜೆ ಮಾಡುವುದು ಹಾಗೂ ಹೆಚ್ಚೆಚ್ಚು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಬಿಡುವಿನ ಸಮಯದಲ್ಲಿ ಹಾಗೂ ಇತರ ಸಮಯದಲ್ಲಿ ಹೆಚ್ಚೆಚ್ಚು ನಾಮಜಪ ಮಾಡೋಣ.’
– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, (೨೦.೧೦.೨೦೧೯)