ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

ದೇವರ ಪ್ರತಿಯೊಂದು ನಾಮಕ್ಕೆ ಭಾವವನ್ನು ಜೋಡಿಸಿದರೆ ನಾಮದಿಂದ ವಿವಿಧ ಕಾರ್ಯಗಳಾಗುವ ಪದ್ಧತಿ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಭಾವಪೂರ್ಣ ನಾಮಜಪವಾಗಲು ಪ್ರತಿಯೊಂದು ನಾಮಜಪಕ್ಕೆ ಭಾವಯುಕ್ತ ವಿಚಾರಗಳನ್ನು ಜೋಡಿಸಬೇಕಾಗುತ್ತದೆ. ಭಾವಜಾಗೃತಿಯ ಪ್ರಯತ್ನಗಳಿಂದ ಏಕಕಾಲದಲ್ಲಿ ಮನಸ್ಸು ಮತ್ತು ಬುದ್ಧಿ ಇವು ಶುದ್ಧವಾಗುತ್ತವೆ. ನಾಮಜಪದ ಚೈತನ್ಯವು ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಚೈತನ್ಯದ ಸಹಾಯದಿಂದ ಗುಣವೃದ್ಧಿಯಾಗುತ್ತದೆ. ಒಳ್ಳೆಯ ಗುಣದಿಂದಾಗಿ ನಮ್ಮಿಂದ ಒಳ್ಳೆಯ ಕರ್ಮವಾಗುತ್ತದೆ. ಆ ಕರ್ಮಕ್ಕೆ ನಾಮವನ್ನು ಜೋಡಿಸಿದರೆ, ‘ಕರ್ಮಯೋಗ’ ಸಾಧ್ಯವಾಗುತ್ತದೆ. ನಾಮಜಪಿಸುವಾಗ ಮನಸ್ಸು ಭಗವಂತನ ಕುರಿತಾದ ದೃಶ್ಯಗಳಲ್ಲಿ ತಲ್ಲೀನವಾದರೆ, ಅದು ‘ಭಕ್ತಿಯೋಗ’ವಾಗುತ್ತದೆ. ನಾಮಸ್ಮರಣೆಯನ್ನು ಮಾಡುವಾಗ ನಮಗೆ ‘ಸೇವೆಯನ್ನು ಪರಿಪೂರ್ಣ ಹೇಗೆ ಮಾಡುವುದು ?’, ಈ ಬಗ್ಗೆ ಸಾತ್ತ್ವಿಕ ವಿಚಾರಗಳು ಹೊಳೆಯುತ್ತವೆ, ಆ ಸಮಯದಲ್ಲಿ ‘ಜ್ಞಾನಯೋಗ’ವು ಸಾಧ್ಯವಾಗುತ್ತದೆ.

‘ಏಕ ಸಾಧೇ, ಸಬ ಸಧೈ |’ ಈ ವಚನಕ್ಕನುಸಾರ ಕೇವಲ ಭಾವಯುಕ್ತ ನಾಮಜಪ ಒಂದರಿಂದಲೇ ನಾವು ಎಲ್ಲವನ್ನೂ ಸಾಧಿಸಬಹುದು. ಹೀಗಿರುವಾಗ ಈ ನಾಮಜಪದ ಮೂಲವಾಗಿರುವಂತಹ ಆ ಈಶ್ವರನಿಗೆ ಸಾಧ್ಯವಿಲ್ಲವೇನು ?- (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೧೯.೪.೨೦೨೦)