ಕೊರೋನಾ ವಿಷಾಣುವಿನಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ವಿವಿಧ ಸಂತರು ಹೇಳಿದ ಉಪಾಸನೆ !

ಜಗದ್ಗುರು ಶ್ರೀ ನಿಶ್ಚಲಾನಂದ ಸರಸ್ವತಿ

೧. ಜಗದ್ಗುರು ಶ್ರೀ ನಿಶ್ಚಲಾನಂದ ಸರಸ್ವತಿ, ಗೋವರ್ಧನ ಮಠ, ಪುರಿ, ಓಡಿಶಾ

ಅ. ‘ಕೊರೋನಾ’ ವಿಷಾಣು ಎಂದರೆ ಮನುಷ್ಯನು ನಿಸರ್ಗದೊಂದಿಗೆ ಆಡಿದ ಆಟಕ್ಕೆ   (ನಿಸರ್ಗದ ನಿಯಮಗಳ ಉಲ್ಲಂಘನೆ ಮಾಡಿದ ಬಗ್ಗೆ) ನಿಸರ್ಗವು ನೀಡಿದ ಫಲವಾಗಿದೆ. ‘ಕೊರೋನಾ’ ವಿಷಾಣುಗಳಿಂದ ಉಂಟಾದ ಸ್ಥಿತಿಯು ಒಂದು ವಿಶ್ವಯುದ್ಧವೇ ಆಗಿದೆ. ಪ್ರತ್ಯಕ್ಷ ಯುದ್ಧವು ನಡೆಯದೇ ಎಲ್ಲರಿಗೂ ಮೃತ್ಯುವಿನ ಭಯ ಕಾಡುತ್ತಿದೆ.

ಆ. ಸನಾತನ ಧರ್ಮದಲ್ಲಿ ಹಿಂದಿನ ಕಾಲದಲ್ಲಿ ಪರಸ್ಪರರಿಂದ ದೂರವಿರಲು ಹಾಗೂ ಪ್ರತಿಯೊಬ್ಬರು (ಉಪಯೋಗಿಸಿದ) ಪಾತ್ರೆಗಳನ್ನು ಬೇರೆ ಇಡಲು ಹೇಳಲಾಗುತ್ತಿತ್ತು. ಪ್ರಸ್ತುತ ‘ಕೊರೋನಾ’ ವಿಷಾಣುಗಳಿಂದಾದ ಪರಿಸ್ಥಿತಿಯಲ್ಲಿ ಆಧುನಿಕ ವೈದ್ಯರು ಜನರಿಗೆ ‘ಸಾಮಾಜಿಕ ಅಂತರ’ (ಸೋಶಿಯಲ್ ಡಿಸ್ಟೆನ್ಸಿಂಗ್) ಇಟ್ಟುಕೊಳ್ಳಲು ಹೇಳುತ್ತಿದ್ದಾರೆ. ಇದರಿಂದ ‘ಸಮಾಜವು ಪುನಃ ಸನಾತನ ಧರ್ಮದ ಕಡೆಗೆ ಹೊರಳಬೇಕಾಗಿ ಬಂದಿದೆ’, ಎಂಬುದು ಗಮನಕ್ಕೆ ಬರುತ್ತದೆ.

ಇ. ಇಂದು ಭಾರತಕ್ಕೆ ಆಸ್ಟ್ರೇಲಿಯಾದಿಂದ ಹಣ್ಣುಗಳು ಬರುತ್ತವೆ. ಅಮೇರಿಕದಿಂದ ಹಣ್ಣುಗಳು ಹಾಗೂ ಧಾನ್ಯ ಬರುತ್ತವೆ. ಇದರಿಂದಲೂ ಆ ಪ್ರದೇಶಗಳ ವಿಷಾಣು ನಮ್ಮ ಕಡೆಗೆ ಬಂದೇ ಬರುತ್ತವೆ. ಹಿಂದಿನ ಕಾಲದಲ್ಲಿ ಪ್ರಾದೇಶಿಕ ಆಹಾರ-ಧಾನ್ಯ ಇವುಗಳಿಗೆ ಮಹತ್ವ ನೀಡಲಾಗಿತ್ತು. ಆದುದರಿಂದ ಒಂದು ಪ್ರದೇಶದ ಆಹಾರವು ಇನ್ನೊಂದು ಸ್ಥಳಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

ಈ. ನಮ್ಮ ಧರ್ಮಶಾಸ್ತ್ರದಲ್ಲಿ ನಿರ್ದಿಷ್ಟವಾದ ಜಲಪ್ರದೇಶದಲ್ಲಿರುವವರಿಗೆ ನಿರ್ದಿಷ್ಟವಾದ ೫ ವಿಧದ ಮಾಂಸವನ್ನು ತಿನ್ನಲು ಅನುಮತಿ ನೀಡಲಾಗಿದೆ. ಇಂದು ಜಗತ್ತಿನಾದ್ಯಂತ ಜನರು ಮಾಂಸಾಹಾರವನ್ನು ಸೇವಿಸುತ್ತಿದ್ದಾರೆ ಹಾಗೂ ಅದಕ್ಕಾಗಿ ಯಾವುದೇ ನಿಯಮವನ್ನು ಪಾಲಿಸುತ್ತಿಲ್ಲ. ಅಷ್ಟೇ ಅಲ್ಲದೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮಾಂಸವನ್ನು ರಫ್ತು ಸಹ ಮಾಡಲಾಗುತ್ತದೆ. ಇದರಿಂದಲೂ ವಿಷಾಣುಗಳು ಹರಡುತ್ತವೆ.

ಉ. ‘ಭಾರತೀಯ ದರ್ಶನಶಾಸ್ತ್ರ’ಗಳಲ್ಲಿ ವಿದೇಶಿ ಆಹಾರ ಹಾಗೂ ವಿದೇಶ ಪ್ರವಾಸ ಇವೆರಡನ್ನು ವರ್ಜ್ಯ ಎಂದು ಹೇಳಲಾಗಿದೆ. ವಿಕಾಸದ ಹೆಸರಿನಲ್ಲಿ ಮನುಷ್ಯನು ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಹಾಗೂ ಪೃಥ್ವಿ, ನೀರು, ಅಗ್ನಿ, ವಾಯು ಹಾಗೂ ಆಕಾಶ ಇವುಗಳೊಂದಿಗೆ ಆಟವಾಡಿದ್ದಾನೆ.

ಊ. ಭಾರತವು ಮುಖ್ಯವಾಗಿ ಜೈವಿಕಕೃಷಿ ಹಾಗೂ ಜೈವಿಕ ಖಾದ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಎಲ್ಲ ವಿಧದ ರಾಸಾಯನಿಕ ಖಾದ್ಯಗಳನ್ನು ನಿಲ್ಲಿಸಬೇಕು. ಹೀಗೆ ಮಾಡಿದರೆ ಪ್ರತಿಯೊಂದು ಹಣ್ಣು ಹಾಗೂ ಪ್ರತಿಯೊಂದು ಧಾನ್ಯವು ಅಮೃತವಾಗುವುದು.

ಎ. ವಿಕಾಸದ ಹೆಸರಿನಲ್ಲಿ ನದಿಯ ನೀರಿನಲ್ಲಿ ರಾಸಾಯನಿಕಗಳನ್ನು ಬಿಡಲಾಗುತ್ತದೆ ಹಾಗೂ ನಗರಗಳ ತ್ಯಾಜ್ಯವನ್ನು ಅವುಗಳಲ್ಲಿ ಬಿಡಲಾಗುತ್ತದೆ. ಇದರಿಂದ (ಕುಡಿಯಲು) ಶುದ್ಧ ನೀರಿಲ್ಲ. ಹಿಂದಿನ ಕಾಲದ ಜನರಲ್ಲಿ ಕಬ್ಬಿಣವನ್ನೂ ಜೀರ್ಣ ಮಾಡಿಕೊಳ್ಳುತ್ತಿದ್ದರು, ಆದರೆ ಈಗ ಕೇವಲ ನೀರು ಕುಡಿಯುವುದರಿಂದ ಜನರಿಗೆ ‘ಗ್ಯಾಸಸ್’ (ಹೊಟ್ಟೆಯಲ್ಲಿ ವಾಯು) ಆಗುತ್ತಿದೆ.

ಐ. ‘ಗಂಗೆಯ ದಡದಲ್ಲಿ ಅಥವಾ ಸಮುದ್ರದ ತೀರದಲ್ಲಿ ಕುಳಿತರೆ ಅಲ್ಲಿನ ಗಾಳಿಯಿಂದ ಎಲ್ಲ ರೋಗಗಳು ದೂರವಾಗುತ್ತಿದ್ದವು’, ಎಂದು ಹೇಳಲಾಗುತ್ತಿತ್ತು. ಈಗ ವಿಕಾಸದ ಹೆಸರಿನಲ್ಲಿ ಮನುಷ್ಯನು ನಿಸರ್ಗವನ್ನು ನಾಶ ಮಾಡಿರುವುದರಿಂದ ಗಾಳಿಯೂ ಕಲುಷಿತಗೊಂಡಿದೆ.

ಒ. ಪ್ರಸ್ತುತ ‘ಕೊರೋನಾ’ ವಿಷಾಣುಗಳಿಂದ ಉದ್ಭವಿಸಿರುವ ಸ್ಥಿತಿಯಲ್ಲಿ ಜಗದ್ಗುರು ಶಂಕರಾಚಾರ್ಯ ನಿಶ್ಚಲಾನಂದ ಇವರು ಭಕ್ತರಿಗೆ, ‘ಶ್ರೀ ಅಚ್ಯುತಾಯ ನಮಃ | ಶ್ರೀ ಅನಂತಾಯ ನಮಃ | ಶ್ರೀ ಗೋವಿಂದಾಯ ನಮಃ |’ ಈ ೩ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು’, ಎಂದು ಹೇಳಿದ್ದಾರೆ. (ಜಗದ್ಗುರು ಶ್ರೀ ನಿಶ್ಚಲಾನಂದ ಸರಸ್ವತಿಯವರ ಕಾರ್ಯದರ್ಶಿಗಳಾದ ಶ್ರೀ. ಜಿತೇಂದ್ರ ಮೊಹೊಪಾತ್ರಾ ಇವರು ನೀಡಿದ ಮಾಹಿತಿ)

೨. ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ, ಕಾಂಚಿ ಕಾಮಕೋಟಿಪೀಠ, ಕಾಂಚಿಪುರಮ್

ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ

ಅ. ‘ಪ್ರಸ್ತುತ ಕಾಂಚಿ ಕಾಮಕೋಟಿ ಮಠ ಹಾಗೂ ಕಾಂಚಿ ಕಾಮಾಕ್ಷಿ ದೇವಿಯ ದೇವಸ್ಥಾನ ಇವುಗಳನ್ನು ಮುಚ್ಚಲಾಗಿದೆ. ಕೇಂದ್ರ ಸರಕಾರದ ಆದೇಶಕ್ಕನುಸಾರ ಕಾಂಚಿ ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿಯವರನ್ನು ಚೆನ್ನೈನಲ್ಲಿನ ಥೆನಂಬಾಕ್ಕಮ್ ಪರಿಸರದಲ್ಲಿರುವ ಒಂದು ದೇವಸ್ಥಾನದ ಪರಿಸರಕ್ಕೆ ಸ್ಥಳಾಂತರಿಸಲಾಗಿದೆ. ಹೊರಗಿನ ಜನರಿಗೆ ಅವರನ್ನು ಭೇಟಿಯಾಗಲು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಆ. ಆಚಾರ್ಯರು ಭಕ್ತರಿಗೆ, ‘ಭಕ್ತರು ಹೆಚ್ಚೆಚ್ಚು ನಾಮಜಪ, ಸ್ತೋತ್ರಪಠಣ ಮುಂತಾದವುಗಳನ್ನು ಮಾಡಬೇಕು. ವಿವಿಧ ಸ್ಥಳಗಳಲ್ಲಿರುವ ಪುರೋಹಿತರು ವೈಯಕ್ತಿಕ ಸ್ತರದಲ್ಲಿ ಲೋಕಕಲ್ಯಾಣಕ್ಕಾಗಿ ಹೋಮ ಮಾಡಬೇಕು. ಇಂದ್ರಾಕ್ಷಿ ಸ್ತೋತ್ರ, ಶಿವಕವಚ ಸ್ತೋತ್ರ, ದ್ವಾದಶ ಸೂರ್ಯನಾಮಾವಳಿ, ಶಿತಲಾಷ್ಟಕಮ್, ವೈದ್ಯನಾಥಷ್ಟಕಮ್ ಮುಂತಾದ ಸ್ತೋತ್ರಗಳ ಪಠಣವನ್ನು ಮಾಡಬಹುದು’, ಎಂದು ಕರೆ ನೀಡಿದ್ದಾರೆ.

ಇ. ಕಾಂಚಿ ಮಠದ ಶಾಖೆಗಳಿರುವಲ್ಲಿ ಚಂಡಿಪಾಠ ಹಾಗೂ ‘ಸುಬ್ರಹ್ಮಣ್ಯ ಭುಜಂಗಮ್’ ಇವುಗಳ ಪಾರಾಯಣವು ನಡೆಯುತ್ತಿದೆ.

ಈ. ಯಾವ ಭಕ್ತರಿಗೆ ಹೋಮ, ಚಂಡಿಪಾಠ, ಸ್ತೋತ್ರಪಠಣ ಮುಂತಾದವುಗಳನ್ನು ಮಾಡಲು ಸಾಧ್ಯವಿಲ್ಲವೋ, ಅವರು ‘ಶ್ರೀ ಅಚ್ಯುತಾಯ ನಮಃ | ಶ್ರೀ ಅನಂತಾಯ ನಮಃ | ಶ್ರೀ ಗೋವಿಂದಾಯ ನಮಃ |’ ಈ ೩ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು. (ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿಯವರ ಕಾರ್ಯದರ್ಶಿಗಳಾದ ಶ್ರೀ. ಅರವಿಂದ ಸೀತಾರಾಮನ್ ಇವರು ನೀಡಿದ ಮಾಹಿತಿ)

೩. ಶ್ರೀ ಶ್ರೀ ರವಿಶಂಕರ ಗುರುಜಿ, ಆರ್ಟ ಆಫ್ ಲಿವಿಂಗ್, ಬೆಂಗಳೂರು

ಶ್ರೀ ಶ್ರೀ ರವಿಶಂಕರ ಗುರುಜಿ

ಅ. ‘ಶ್ರೀ ಶ್ರೀ ರವಿಶಂಕರ ಗುರುಜಿಯವರು ಜಗತ್ತಿನಾದ್ಯಂತದ ತಮ್ಮ ಭಕ್ತರಿಗಾಗಿ ೨೨.೩.೨೦೨೦ ರಿಂದ ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಹಾಗೂ ಸಾಯಂಕಾಲ ೭.೩೦ ಗಂಟೆಗೆ ‘ಆನಲೈನ್’ ಧ್ಯಾನ ವರ್ಗವನ್ನು ತೆಗೆದುಕೊಳ್ಳಲು ಆರಂಭಿಸಿದರು. ಈ ವರ್ಗವು ಅರ್ಧ ಗಂಟೆಯದ್ದಾಗಿತ್ತು. ಈ ವರ್ಗಗಳನ್ನು (‘ಲೈವ್ ಟೆಲಿಕಾಸ್ಟ್’) ಯು-ಟ್ಯೂಬ್ ಹಾಗೂ ಜಾಲತಾಣ ಇವುಗಳ ಮಾಧ್ಯಮದಿಂದ ನೇರ ಪ್ರಕ್ಷೇಪಣೆ ಮಾಡಲಾಯಿತು.

ಆ. ಆಶ್ರಮದಲ್ಲಿನ ಭಕ್ತರು ಭೋಜನಕ್ಕಾಗಿ ಒಟ್ಟಾಗಿ ಬರುವುದನ್ನು ನಿಲ್ಲಿಸಿದರು ಮತ್ತು ಇತರ ಸಮಯದಲ್ಲಿ ಕೋಣೆಯಲ್ಲಿ ಕುಳಿತುಕೊಂಡು ಧ್ಯಾನ-ಧಾರಣೆ, ಸಾಧನೆ ಹಾಗೂ ಗುರುಜಿಯವರ ಆನಲೈನ್ ವರ್ಗದಲ್ಲಿ ಸಹಭಾಗಿಯಾಗಲು ಹೇಳಿದರು.’ (ಶ್ರೀ ಶ್ರೀ ರವಿಶಂಕರ ಗುರುಜಿಯವರ ಕಾರ್ಯದರ್ಶಿಗಳಾದ ಶ್ರೀ. ಮಯಾಂಕ ಅಗರವಾಲ ಇವರು ನೀಡಿದ ಮಾಹಿತಿ)

೪. ಮೈಸೂರಿನ ನಾದಯೋಗದ ಪ್ರವರ್ತಕರಾದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರ ಭಕ್ತ ಹಾಗೂ ಸಂಗೀತ ನಿರ್ದೇಶಕರಾದ ಶ್ರೀ. ಸುಂದರ ಬಾಬು ಇವರು ಹೇಳಿದ ಅಂಶಗಳು

೧. ‘ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರು ‘ಕೊರೋನಾ’ ವಿಷಾಣುವಿನೊಂದಿಗೆ ಹೋರಾಡಲು ಸಂಗೀತದಲ್ಲಿನ ‘ರಾಗ ಚಾರುಕೇಶಿ’ (ಕೇಳುವುದು) ತುಂಬಾ ಉಪಯುಕ್ತವಾಗಿದೆ’, ಎಂದು ಹೇಳಿದ್ದಾರೆ.

೨. ಚೆನ್ನೈಯ ಸಂಗೀತ ನಿರ್ದೇಶಕರಾದ ಶ್ರೀ. ಸುಂದರ ಬಾಬು ಇವರು, ‘ರಾಗ ಚಾರುಕೇಶಿ’ಯಲ್ಲಿ ಸಿದ್ಧ ಪಡಿಸಿದ ಚೀಜ್ (ಬಂದೀಶ)ವನ್ನು ಸನಾತನ ಸಂಸ್ಥೆಗೆ ಅಧ್ಯಯನಕ್ಕಾಗಿ ಕಳುಹಿಸಿದ್ದಾರೆ.’