ಶಿಷ್ಯನ ಜೀವನದ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತ ಮೇಲಿನ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುಗಳೇ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಪ್ರತ್ಯಕ್ಷ ಸಾಧನೆಯನ್ನು ಕಲಿಸುತ್ತಾರೆ. ಅವರಿಂದ ಅದನ್ನು ಮಾಡಿಸಿಕೊಳ್ಳುತ್ತಾರೆ. ಪಿತನು ಪುತ್ರನಿಗೆ ಕೇವಲ ಜನ್ಮ ನೀಡುತ್ತಾನೆ. ಆದರೆ ಗುರುಗಳು ಅವನನ್ನು ಜನನ-ಮರಣದಿಂದ ಬಿಡಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳು ಶ್ರೇಷ್ಠ ಎಂದು ಹೇಳಲಾಗಿದೆ. ಶ್ರೀ ಗುರುಗಳೇ ತಂದೆ, ತಾಯಿ, ಬಂಧು, ಮಿತ್ರ ಹೀಗೆ ಅನೇಕ ಪಾತ್ರಗಳಲ್ಲಿ ಶಿಷ್ಯನ ಯೋಗಕ್ಷೇಮವನ್ನು ವಹಿಸುತ್ತಾರೆ. ಈ ಘೋರ ಕಲಿಯುಗದಲ್ಲಿ ಈಶ್ವರಸ್ವರೂಪ ಶ್ರೀಗುರು ಮತ್ತು ಅವರ ನಿರ್ಗುಣ ರೂಪವಿರುವ ಚೈತನ್ಯಮಯ ಗುರುಗಳ ಗುಣ ಸಂಕೀರ್ತನೆ ಮಾಡಲು ಮತ್ತು ಅವರ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡಲು ಈ ವಿಶೇಷಾಂಕ ಪ್ರಕಟಿಸಲಾಗಿದೆ.
ನಾನೊಬ್ಬ ಪರಮ ಭಾಗ್ಯವಂತ ಸದ್ಗುರುರೂಪಿ ನೋಡಿದೆ ಭಗವಂತ
ಇಂದು ಸನಾತನದ ಸಾಧಕರ ಆದರ್ಶ ಆಚಾರ-ಚಾರಗಳಿಂದ ಅವರನ್ನು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಹಾಗೆ ಪರಾತ್ಪರ ಗುರು ಡಾ. ಆಠವಲೆಯವರು ತುಂಬಾ ಪರಿಶ್ರಮಪಟ್ಟು ಸಾಧಕರನ್ನು ಎಲ್ಲ ರೀತಿಯಿಂದ ಸಿದ್ಧಪಡಿಸಿದರು. ಕೇವಲ ‘ಅಧ್ಯಾತ್ಮಪ್ರಸಾರ ಹೇಗೆ ಮಾಡುವುದು ಇಷ್ಟೇ ಅಲ್ಲದೆ ಅನೇಕ ಸಣ್ಣ ಸಣ್ಣ ಕೃತಿಗಳ ಬಗ್ಗೆ ಮಾರ್ಗದರ್ಶನ ಮಾಡಿ ಪರಾತ್ಪರ ಗುರು ಡಾಕ್ಟರರು ನಮ್ಮ ಜೀವನವನ್ನು ಸುಂದರಗೊಳಿಸಿದ್ದಾರೆ. ಈಗ ಕಾಲಾನುಸಾರ ಶ್ರೀಗುರುಗಳ ಸಹವಾಸ ಎಲ್ಲೆಡೆಯ ಸಾಧಕರಿಗೆ ಸ್ಥೂಲದಿಂದ ಸಿಗದಿದ್ದರೂ ಸಂಸ್ಥೆಯ ಆರಂಭದ ಕಾಲದಲ್ಲಿ ಗುರುದೇವರ ಪ್ರತ್ಯಕ್ಷ ಕೃತಿಯಿಂದ ಕೆಲವೊಮ್ಮೆ ಮಾರ್ಗದರ್ಶನದಿಂದ ಸಾಧಕರನ್ನು ಹೇಗೆ ಸಿದ್ಧಪಡಿಸಿದರು. ಇದಕ್ಕಾಗಿ ಈ ವಿಶೇಷಾಂಕವನ್ನು ಪ್ರಕಟಿಸುತ್ತಿದ್ದೇವೆ. ಇಲ್ಲಿ ಹೇಳಿದ ಲೇಖನ ಸ್ಥೂಲದ್ದಾಗಿದೆ. ಗುರುದೇವರು ಸಾಧಕರನ್ನು ಮುಂದಿನ ಹಂತಕ್ಕೆ ಕರೆದೊಯ್ಯಲು ಸೂಕ್ಷ್ಮದಿಂದ ಎಷ್ಟು ಪ್ರಯತ್ನ ಮಾಡಿರಬಹುದು ಇದನ್ನು ಕೇವಲ ಈಶ್ವರನೇ ತಿಳಿಯಬಹುದು.