ಚಿಕ್ಕ ಚಿಕ್ಕ ವಿಷಯಗಳನ್ನೂ ಜಿಜ್ಞಾಸೆಯಿಂದ ಕೇಳಿ ಅದರಿಂದ ಸಾಧಕರನ್ನು ರೂಪಿಸುವ ಗುರುದೇವರು !

ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಅದರ ಅಧ್ಯಯನ ಮಾಡಲು ಮನುಷ್ಯನು ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ನಿತ್ಯದ ಜೀವನದಲ್ಲಿನ ಚಿಕ್ಕ ಚಿಕ್ಕ ವಿಷಯ ಗಳಲ್ಲಿಯೂ ಅಧ್ಯಾತ್ಮವು ಅಡಗಿದೆ. ಸತತ ಕಲಿಯುವ ಸ್ಥಿತಿಯಲ್ಲಿದ್ದು ಅದನ್ನು ಅರಿತು ಕೊಂಡರೆ, ಇಂತಹ ಚಿಕ್ಕ ಚಿಕ್ಕ ವಿಷಯ ಗಳಲ್ಲಿಯೂ ನಮಗೆ ಆನಂದವು ಸಿಗುತ್ತದೆ. ಈ ಬೋಧನೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ನೀಡಿದ್ದಾರೆ ಮತ್ತು ಅದರಿಂದ ಅವರು ನಿರಂತರವಾಗಿ ಸಾಧಕರನ್ನು ರೂಪಿಸಿದ್ದಾರೆ.

ಪರಾತ್ಪರ ಗುರುದೇವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಾಧಕರ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೆಯೇ ಅವರು ಮಾಡುತ್ತಿರುವ ಸೇವೆ ಅಥವಾ ಕೃತಿಗಳನ್ನೂ ಹೆಚ್ಚೆಚ್ಚು ಸಾತ್ತ್ವಿಕ ಮತ್ತು ಪರಿಪೂರ್ಣ ಮಾಡುವ ಮಾರ್ಗವನ್ನು ಅವರು ಅವರಿಗೆ ತೋರಿಸುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ವಿವಿಧ ಸೇವೆಗಳಿಗೆ ದಿಶೆ ಸಿಕ್ಕಿತು ಮತ್ತು ಸಮಷ್ಟಿಗೆ ಅದರಿಂದ ಲಾಭವಾಯಿತು. ‘ಅದು ಹೇಗೆ ಆಯಿತು ?, ಎಂಬುದನ್ನು ಈ ಲೇಖನದಲ್ಲಿ ನೋಡೋಣ.

 

ಪ.ಪೂ. ಡಾಕ್ಟರರು ಜಿಜ್ಞಾಸೆಯಿಂದಾಗಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳ ಅರ್ಥವನ್ನು ಅವರಲ್ಲಿ ಕೇಳಿ ಬರೆಯುವುದು

ಯಾವುದೊಂದು ಜಟಿಲ ವಿಷಯ ತಿಳಿಯದಿದ್ದರೆ ಪ.ಪೂ. ಡಾಕ್ಟರರು ನನ್ನಲ್ಲಿ ಆ ಕುರಿತು ಕೇಳುತ್ತಿದ್ದರು. ತಮಗೆ ತಿಳಿಯದಿದ್ದರೆ, ಪ.ಪೂ. ಡಾಕ್ಟರರುಅದನ್ನು ಇನ್ನೊಬ್ಬರಲ್ಲಿ ಕೇಳಿಕೊಳ್ಳುತ್ತಿದ್ದರು; ಆದರೆ ಆ ರೀತಿ ಕೆಲವೊಮ್ಮೆ ಆಗುತ್ತಿತ್ತು. ಮೊದಲಿನಿಂದಲೂ ಅವರ ಗ್ರಹಿಸುವ ಕ್ಷಮತೆಯು ಚೆನ್ನಾಗಿದೆ. ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳ ದೊಡ್ಡ ಪುಸ್ತಕವಿದೆ. ಅದರಲ್ಲಿನ ಭಜನೆಗಳ ಅರ್ಥವು ಸರ್ವಸಾಮಾನ್ಯರಿಗೆ ತಿಳಿಯುವುದಿಲ್ಲ. ಅವರ ಭಜನೆಗಳ ಅರ್ಥವನ್ನು ಪ.ಪೂ. ಡಾಕ್ಟರರು ಅವರಲ್ಲಿ ಕೇಳಿ ಬರೆದರು. – ದಿ. (ಸದ್ಗುರು) ಡಾ. ವಸಂತ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ಅಣ್ಣ) ಈ ಭಜನೆಗಳ ಅರ್ಥವು ತಿಳಿದುದರಿಂದ ಅದನ್ನು ಕೇಳುತ್ತಿರುವಾಗ ಸಾಧಕರು ಒಂದು ಬೇರೆಯೇ ಆದ ಭಾವಸ್ಥಿತಿಯನ್ನು ಅನುಭವಿಸಬಹುದು. ಪರಾತ್ಪರ ಗುರುದೇವರ ಜಿಜ್ಞಾಸು ವೃತ್ತಿಯಿಂದ ಮತ್ತು ಸಮಷ್ಟಿ ಕಲ್ಯಾಣದ ತೀವ್ರ ತಳಮಳ ದಿಂದಾಗಿ ಇದು ಸಾಧ್ಯವಾಯಿತು.

ಪ್ರತಿಯೊಂದು ವಿಷಯದ ಹಿಂದಿನ ಕಾರ್ಯಕಾರಣ ಭಾವವನ್ನು ಹುಡುಕಿ ಆ ಕುರಿತು ಸಾಧಕರಿಗೂ ಅರಿವು ಮಾಡಿಕೊಡುವುದು

ಡಾ. ಅಜಯ ಗಣಪತರಾವ್ ಜೋಶಿ

‘ಸನಾತನದ ಆಶ್ರಮಗಳಲ್ಲಿ ಹಾಸುಗಲ್ಲಿನ ಮೇಲೆ ‘ಓಂ ಮೂಡುವುದು, ವಿವಿಧ ನಾದಗಳು ಕೇಳಿ ಬರುವುದು, ಇಂತಹ ಅನೇಕ ವೈಶಿಷ್ಟ್ಯಪೂರ್ಣ ಘಟನೆಗಳು ಘಟಿಸುತ್ತವೆ. ಆಶ್ರಮದಲ್ಲಿ ಕೆಲವೊಮ್ಮೆ ಕೀಟಗಳು, ಚಿಟ್ಟೆಗಳು, ಪಕ್ಷಿ ಇತ್ಯಾದಿಗಳು ಬರುತ್ತವೆ ಅವು ಆಶ್ರಮದಿಂದ ಹೊರಗೆ ಹೋಗುವುದಿಲ್ಲ. ರಾಮನಾಥಿಯಲ್ಲಿನ ಆಶ್ರಮದಲ್ಲಿ ಇದೇ ರೀತಿ ಒಂದು ನೊಣದ ಆಕಾರದ ಕೀಟವು ಅವರ ಕೋಣೆಯಲ್ಲಿ ಬಂದಿತ್ತು. ಅದು ೨-೩ ದಿನ ಒಂದೇ ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಂಡಿತ್ತು. ೨-೩ ದಿನಗಳ ನಂತರ ಅದರ ಆಕಾರವು ದೊಡ್ಡದಾಯಿತು. ಈ ಘಟನೆಯು ಪರಾತ್ಪರ ಡಾ. ಆಠವಲೆಯವರ ಗಮನಕ್ಕೆ ಬಂದಾಗ ಅವರು ‘ಹೀಗೆ ಆಗಲು ಕಾರಣವೇನು ?, ಎಂದು ಸಾಧಕರಿಗೆ ಕಂಡು ಹಿಡಿಯಲು ಹೇಳಿದರು. ಈ ಘಟನೆಯಿಂದ, ‘ಪ.ಪೂ. ಗುರುದೇವರು ಪ್ರತಿಯೊಂದು ವಿಷಯದ ಹಿಂದಿನ ಕಾರ್ಯಕಾರಣಭಾವವನ್ನು ಹುಡುಕುತ್ತಾರೆ, ಹಾಗೆಯೇ ಅಧ್ಯಾತ್ಮದ ದೃಷ್ಟಿ ಯಿಂದ ಏನಾದರೂ ಹೊಸದಿದ್ದರೆ ಸಾಧಕರಿಗೆ ಅದರ  ಅರಿವುಮಾಡಿಕೊಡುತ್ತಾರೆ. ಈ ರೀತಿ ಅವರು ಸಾಧಕರನ್ನು ರೂಪಿಸು ತ್ತಾರೆ, ಎಂಬುದು ಗಮನಕ್ಕೆ ಬಂದಿತು. – ಡಾ. ಅಜಯ ಗಣಪತರಾವ್ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೫.೨೦೧೭)

ಮುಂಬರುವ ಆಪತ್ಕಾಲದಲ್ಲಿ ಆಹಾರಧಾನ್ಯದ ಕೊರತೆಯಾಗುವುದು. ಆ ಸಮಯದಲ್ಲಿಯೂ ಸಾಧಕರಿಗೆ ಉಳಿಯುವಂತಹ ತಿಂಡಿ ತಿನಿಸು  ದೊರಕಬೇಕೆಂದು, ಸಾಧಕರಿಗೆ ಬೇಕರಿಯಲ್ಲಿ ತಯಾರಾಗುವ ಪದಾರ್ಥಗಳನ್ನು ಮಾಡಲು ಕಲಿಸಲಾಗುತ್ತದೆ. ಇದರ ಹಿಂದೆಯೂ ಪರಾತ್ಪರ ಗುರುದೇವರ ದೂರದೃಷ್ಟಿಯು ಕಂಡುಬರುತ್ತದೆ.

ತಿಳಿಯದಿರುವ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳುವುದು ಮತ್ತು ಆ ಬಗ್ಗೆ ವ್ಯಾಪಕ ಸ್ತರದಲ್ಲಿ ವಿಚಾರ ಮಾಡುವುದು

ಶ್ರೀ. ನಾಗೇಶ ಗಾಡೆ

ಪ.ಪೂ. ಡಾಕ್ಟರರು ಓದುವಾಗ ವಿವಿಧ ವಿಷಯ ಗಳು ಬರುತ್ತಿರುತ್ತವೆ. ಅವುಗಳಲ್ಲಿನ ಕೆಲವು ಅಂಶಗಳ ಬಗ್ಗೆ ಅವರಿಗೆ ಗೊತ್ತಿಲ್ಲದಿದ್ದರೆ ಅವುಗಳನ್ನು ಅವರು ತಿಳಿದುಕೊಳ್ಳುತ್ತಿದ್ದರು. ಇದರಲ್ಲಿ ಕಾನೂನಿನ ಅರ್ಥ, ಸರಕಾರದ ಕಾರ್ಯಪದ್ಧತಿ ಮುಂತಾದ ವಿವಿಧ ವಿಷಯಗಳ ಸಮಾವೇಶವಿರುತ್ತಿದ್ದವು. ಒಮ್ಮೆ ಅವರು ಓದುವಾಗ ಮಹಾಬಲೇಶ್ವರದಲ್ಲಿನ ‘ಬಗದಾದಿ ಪಾಯಿಂಟ್ನ ಉಲ್ಲೇಖ ಬಂದಿತು. ಅದರಿಂದ ‘ಈ ಸ್ಥಳಕ್ಕೆ ‘ಬಗದಾದಿ ಪಾಯಿಂಟ್ ಎಂಬ ಹೆಸರು ಏಕೆ ಬಂದಿತು ?, ಎಂದು ಅವರು ತಿಳಿದುಕೊಂಡರು. ‘ರಸ್ತೆಯ ದೀಪಗಳು ಬೆಳಗ್ಗೆ ಬೆಳಕು ಹರಿದ ನಂತರವೂ ಉರಿಯುತ್ತಿರುತ್ತವೆ ಮತ್ತು ಅದರಿಂದ ವಿದ್ಯುತ್ತಿನ ದುಂದುವೆಚ್ಚಾಗುತ್ತದೆ, ಎಂದು ಗಮನಕ್ಕೆ ಬಂದನಂತರ ಅವರು ‘ರಸ್ತೆಯ ದೀಪಗಳು ಎಷ್ಟು ಗಂಟೆಗೆ ಹಚ್ಚುವುದು-ತೆಗೆಯುವುದು ಮಾಡಬೇಕು ?, ಎಂಬ ಬಗ್ಗೆ ಸರಕಾರದ ಆದೇಶವೇನಿದೆ, ಎಂಬ ಮಾಹಿತಿಯನ್ನು ಪಡೆಯಲು ಹೇಳಿದರು. ಈ ಮಾಹಿತಿ ಪಡೆದ ನಂತರ ಅದರಲ್ಲಿ ಸರಕಾರದ ಅಜಾಗರೂಕತೆ ಮತ್ತು ವ್ಯವಸ್ಥಾಪನೆಯಲ್ಲಿ ಯಾವ ಕೊರತೆಗಳಿವೆ, ಎಂದು ತಿಳಿಯಿತು. ಪ.ಪೂ. ಡಾಕ್ಟರರು ಆ ವಿಷಯದ ಬಗ್ಗೆ ಲೇಖನ ಬರೆಯಲು ಹೇಳಿದರು. ಅದರಂತೆ ‘ರಸ್ತೆಯ ದೀಪಗಳ ಕಂಬದ ಮೇಲೆ ದೀಪಗಳನ್ನು ಕೂರಿಸುವ ಪ್ರಚಲಿತ ಪದ್ಧತಿಯಲ್ಲಿನ ಕೊರತೆಗಳಾವುವು ಮತ್ತು ಯಾವ ರೀತಿ ಅದನ್ನು ಹಚ್ಚಿದರೆ ಹೆಚ್ಚು ಬೆಳಕು ಸಿಗುವುದು ಮತ್ತು ವಿದ್ಯುತ್ತಿನ ಉಳಿತಾಯವಾಗುವುದು, ಎಂದು ಪ.ಪೂ. ಡಾಕ್ಟರರು ವೈಜ್ಞಾನಿಕ ಭಾಷೆಯಲ್ಲಿ ಆಕೃತಿಗಳನ್ನು ತೆಗೆದು ಸ್ಪಷ್ಟಪಡಿಸಿದರು ಮತ್ತು ಅದನ್ನು ದೈನಿಕದಲ್ಲಿ ಪ್ರಕಟಿಸಲು ಹೇಳಿದರು. ಅದರಂತೆ ರಸ್ತೆಯ ಮೇಲೆ ಹಚ್ಚುವ ಸೂಚನೆ, ಎರಡು ಸೂಚನೆಗಳ ನಡುವಿನ ಅಂತರ, ಅವುಗಳನ್ನು ಹಚ್ಚುವ ಪದ್ಧತಿ, ರಸ್ತೆಯ ಮೇಲೆ ಕನ್ನಡಿ ಹಚ್ಚುವ ನಿರ್ಣಾಯಕ ಅಂಶ ಇಂತಹ ಅನೇಕ ವಿಷಯಗಳನ್ನು ಅವರು ತಿಳಿದುಕೊಂಡರು ಮತ್ತು ಅವುಗಳಲ್ಲಿನ ಕೊರತೆಗಳನ್ನು ಹುಡುಕಿ ಅವುಗಳ ಬಗ್ಗೆ ‘ಸನಾತನ ಪ್ರಭಾತದಲ್ಲಿ ತಿಳುವಳಿಕೆ ನೀಡುವಂತಹ ಲೇಖನವನ್ನು ಬರೆದರು. – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ.

ಗಣ್ಯ ವ್ಯಕ್ತಿಯನ್ನು ಭೇಟಿ ಮಾಡುವಾಗಲೂ ಆಧ್ಯಾತ್ಮಿಕ ದೃಷ್ಟಿಯನ್ನಿಡಲು ಹೇಳುವ ಪ.ಪೂ. ಡಾಕ್ಟರ್ !

ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ

‘ದೈನಿಕದಲ್ಲಿನ ಸೇವೆಗಳ ಜವಾಬ್ದಾರಿಯನ್ನು ನಿರ್ವಹಿ ಸುವಾಗ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶವು ಸಿಗುತ್ತಿತ್ತು. ಭೇಟಿ ಮಾಡಿದ ನಂತರ ಆ ಕುರಿತು ಪ. ಪೂ. ಡಾಕ್ಟರರೊಂದಿಗೆ ಮಾತನಾಡುವಾಗ ಅವರು, ‘ಅವರ ಅಹಂ ಎಷ್ಟಿತ್ತು ? ಅವರಿಗೆ ಏನೆನಿಸಿತು ? ಮುಂತಾದವುಗಳನ್ನು ನೆನಪಿನಿಂದ ಕೇಳುತ್ತಿದ್ದರು. ಇದರಿಂದ ಈ ಭೇಟಿಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ನೋಡಲು ಕಲಿಯಬೇಕು, ಎಂಬುದು ಗಮನಕ್ಕೆ ಬಂದಿತು. – ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ, ಮಾಜಿ ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ.

ಪ.ಪೂ. ಡಾಕ್ಟರರು ಇದುವರೆಗೆ ೧೦ ಸಾವಿರಕ್ಕಿಂತಲೂ ಹೆಚ್ಚು ನಿಯತಕಾಲಿಕೆಗಳ ಅಧ್ಯಯನ ಮಾಡಿ ಅವುಗಳಲ್ಲಿನ ಕೆಲವು ಲೇಖನಗಳನ್ನು ಗ್ರಂಥಗಳಲ್ಲಿ ತೆಗೆದು ಕೊಳ್ಳಲು ಆಯ್ಕೆ ಮಾಡಿದ್ದಾರೆ. ಆ ಲೇಖನಗಳಲ್ಲಿ ಪೃಥ್ವಿಯ ಮೇಲೆ ಇಲ್ಲದ ಜ್ಞಾನವಿದೆ. ಪ.ಪೂ. ಡಾಕ್ಟರರು ಅದಕ್ಕಿಂತ ಮುಂದೆ ಹೋಗಿ ಆ ಜ್ಞಾನಕ್ಕೆ ಸಂಬಂಧಿಸಿದ ‘ಏಕೆ ಮತ್ತು ಹೇಗೆ ?, ಎಂಬ ಜ್ಞಾನವನ್ನು ಪಡೆದರು ಮತ್ತು ಆ ಜ್ಞಾನದ ಹೊರತಾಗಿ ಅನೇಕ ಹೊಸ ವಿಷಯಗಳ ಜ್ಞಾನವನ್ನೂ ದೊರಕಿಸಿಕೊಂಡರು.