ಗುರುಪೂರ್ಣಿಮೆಯ ನಿಮಿತ್ತ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಂದೇಶ

ಸಾಧನೆಯನ್ನು ಮಾಡಿ ಮನುಷ್ಯಜನ್ಮದ ಕಲ್ಯಾಣ ಮಾಡಿಕೊಳ್ಳಿ !

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ,  ಮೊದಲಿಗೆ ಸಾಧನೆ ಪ್ರಾರಂಭಿಸಿ. ಈಶ್ವರನ ಭಕ್ತಿ ಅಥವಾ ಸಾಧನೆ ಮಾಡಿದರೆ ಈಶ್ವರನಕೃಪೆಯು ಆಗುವುದಷ್ಟೇಅಲ್ಲ; ಮನುಷ್ಯ ಜನ್ಮದ ಕಲ್ಯಾಣವಾಗು ತ್ತದೆ. ಹಾಗಾಗಿ ಈ ಗುರುಪೂರ್ಣಿಮೆ ಯಿಂದ ಪ್ರತಿದಿನ ಸಾಧನೆ ಮಾಡಲು ನಿಶ್ಚಯಿಸಿ.’  – ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೮.೪.೨೦೨೦)

ಸೂಚನೆ : ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ ಎಂದು ಉಲ್ಲೇಖಿಸಲು ಮಹರ್ಷಿಗಳು ಹೇಳಿದ್ದಾರೆ. ಆದರೆ ಈ ವಾರದ ಕೆಲವು ಲೇಖನಗಳು ಮುಂಚಿನದ್ದಾಗಿರುವುದರಿಂದ ಅವರನ್ನು ಸದ್ಗುರು (ಸೌ.) ಅಂಜಲಿ ಗಾಡಗೀಳ ಎಂದು ಉಲ್ಲೇಖಿಸಲಾಗಿದೆ. – ಸಂಪಾದಕರು.