ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ (೪೧ ವರ್ಷ)

ಶ್ರೀ. ಚಂದ್ರ ಮೊಗೇರ

ದಿನಾಂಕ ೨೫ ಜೂನ್ ೨೦೨೦ ರಂದು ದಕ್ಷಿಣಕನ್ನಡ ಜಿಲ್ಲೆಯ ಹಿಂದೂಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ (೪೧ ವರ್ಷ) ಇವರು ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿ ಜನನ-ಮರಣ ಚಕ್ರದಿಂದ ಮುಕ್ತರಾದರೆಂದು ಆಶ್ರಮದ ಫಲಕದಲ್ಲಿ ಬರೆದು ಘೋಷಿಸಲಾಯಿತು. ಅವರಿಗೆ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಶ್ರೀಕೃಷ್ಣನ ಭಾವಚಿತ್ರವನ್ನು ಉಡುಗೊರೆ ನೀಡಿದರು.

ಈ ವಿಷಯದ ಬಗ್ಗೆ ಫಲಕದಲ್ಲಿ ಬರೆದ ವಾರ್ತೆಯನ್ನು ಓದಿ ಎಲ್ಲಾ ಸಾಧಕರಿಗೆ ತುಂಬಾ ಆನಂದವಾಯಿತು. ಅವರ ಕುಟುಂಬದವರೊಂದಿಗೆ ಈ ವಿಷಯ ತಿಳಿದಾಗ ಅವರಿಗೂ ತುಂಬಾ ಆನಂದವಾಯಿತು.

ಅಣ್ಣನವರಲ್ಲಿ ಹೇಗೆ ತಮ್ಮ ಪ್ರಗತಿ ಮಾಡಿಸಿಕೊಂಡಿರೆಂದು ಕೇಳಿದಾಗ ಅವರು ಒಮ್ಮೆ ನಾನು ಹೇಗೆ ಸಾಧನೆಯಲ್ಲಿ ಮುಂದೆ ಪ್ರಯತ್ನ ಮಾಡಬೇಕೆಂದು ಜವಾಬ್ದಾರ ಸಾಧಕರಲ್ಲಿ ಕೇಳಿದಾಗ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಪ್ರಯತ್ನ ಮಾಡಬೇಕು. ಅದಕ್ಕೆ ಪ್ರತಿಯೊಂದು ಕಡೆ ಕಡಿಮೆತನ ತೆಗೆದುಕೊಳ್ಳಬೇಕು. ಪ್ರತಿಯೊಂದನ್ನು ಕೇಳಿ ಕೇಳಿ ಮಾಡಬೇಕು ಎಂದು ಹೇಳಿದ್ದರು. ಅದೇ ರೀತಿ ನಾನು ಪ್ರತಿಯೊಂದು ಸೇವೆಯ ಸಂದರ್ಭದಲ್ಲಿ ಪ್ರಯತ್ನ ಮಾಡಿದೆ. ಗುರುಗಳೇ ನನ್ನ ಪ್ರಗತಿಯನ್ನು ಮಾಡಿಸಿಕೊಂಡರು ಎಂದು ಕೃತಜ್ಞತಾಭಾವದಿಂದ ಹೇಳಿದರು.

ಅಣ್ಣನವರ ಕುಟುಂಬದವರು ಮತ್ತು ಸಾಧಕರು ಅವರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು

ನನ್ನ ಮಗ ಸಾಧನೆಗೆ ಬಂದು ತುಂಬಾ ವರ್ಷ ಆಯಿತು. ತುಂಬಾ ಗುರುಸೇವೆ ಮಾಡುತ್ತಾನೆ. ಅವನದ್ದೂ ಸಾಧನೆಯಲ್ಲಿ ಪ್ರಗತಿಯಾಗಬೇಕೆಂದು ತುಂಬಾ ಅನ್ನಿಸುತ್ತಿತ್ತು. ಅದಕ್ಕಾಗಿ ನಾನು ಗುರುಗಳೇ ನೀವೇ ನೋಡಿಕೊಳ್ಳಬೇಕು ಎಂದು ಆಗಾಗ ಪ್ರಾರ್ಥನೆ ಮಾಡುತ್ತಿದ್ದೆ . ಇವತ್ತು ಮಗನ ಆಧ್ಯಾತ್ಮಿಕ ಮಟ್ಟ ಶೇ. ೬೧ ಆಯಿತು ಎಂಬ ಸುದ್ದಿ ಕೇಳಿ ತುಂಬಾ ಆನಂದವಾಯಿತು. – ಶ್ರೀಮತಿ ಶಾಂತಿ ಮೊಗೇರ (ತಾಯಿ)

ನನ್ನ ಪತಿಯವರು ನನಗೆ ಕರೆ ಮಾಡುವಾಗ ಮೊದಲು ಅವರಿಂದ ಆದ ತಪ್ಪನ್ನು ಹೇಳಿ ಕ್ಷಮೆಯಾಚನೆ ಮಾಡುತ್ತಾರೆ. ಮನೆಗೆ ಹೋದರೆ ಆಶ್ರಮದಲ್ಲಿ ಹೇಗೆ ಸ್ವಚ್ಛತೆ ಸೇವೆಗಳನ್ನು ಮಾಡುತ್ತಾರೆಯೋ ಅದೇ ರೀತಿ ಮನೆಯಲ್ಲಿ ಕೂಡ ಆಯೋಜನೆ ಮಾಡಿಕೊಂಡು ಸೇವೆಗಳನ್ನು ಮಾಡುತ್ತಾರೆ. ಆಶ್ರಮದಲ್ಲಿ ಹೇಗೆ ವ್ಯಷ್ಟಿ ಆಯೋಜನೆ ಮಾಡುತ್ತಾರೆ ಹಾಗೆ ಮನೆಯಲ್ಲಿ ಕೂಡ ಪ್ರಯತ್ನ ಮಾಡುತ್ತಿದ್ದರು. – ಸೌ. ಶ್ರೀ ದೇವಿ ಮೊಗೇರ (ಪತ್ನಿ)

ಇತ್ತೀಚೆಗೆ ಚಂದ್ರನಿಗೆ ಕರೆ ಮಾಡುವಾಗ ತುಂಬಾ ಬದಲಾವಣೆ ಆಗಿದ್ದಾನೆ ಎಂದು ಅನಿಸುತ್ತಿತ್ತು ಎಲ್ಲವನ್ನು ಬಿಟ್ಟು ಸಾಧನೆ ಮಾಡುತ್ತಾನೆ ಆಧ್ಯಾತ್ಮಿಕ ಮಟ್ಟದ ಬಗ್ಗೆ ತಿಳಿದಾಗ ಆನಂದವಾಯಿತು. – ಶ್ರೀ. ವಿಘ್ನೇಶ ಮೊಗೇರ (ಅಣ್ಣ)

ಚಂದ್ರಣ್ಣ ಪ್ರತಿಯೊಂದು ವಿಷಯಗಳನ್ನು ಮನಮುಕ್ತವಾಗಿ ಹೇಳುವುದು, ಕಡಿಮೆತನ ತೆಗೆದುಕೊಳ್ಳುವುದು, ಹೀಗೆ ಪ್ರಯತ್ನ ಮಾಡುತ್ತಾರೆ. ಸಮಿತಿಯ ಪ್ರತಿಯೊಂದು ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆ. – ಶ್ರೀ. ಆನಂದ ಗೌಡ, ಸೌ. ಸಂಗೀತಾ ಪ್ರಭು

ಕಳೆದ ಕೆಲವು ಸಮಯಗಳಿಂದ  ಅವರೊಂದಿಗೆ ಸೇವೆ ಮಾಡುವಾಗ ತುಂಬ ಕಲಿಯಲು ಸಿಕ್ಕಿತ್ತು. ಅವರಲ್ಲಿನ ತಳಮಳ ಪರಿಶ್ರಮ ತೆಗೆದುಕೊಂಡು ಸೇವೆ ಮಾಡುವುದು, ಸಂತರ ಬಗ್ಗೆ ಭಾವ, ಸ್ವೀಕಾರವೃತ್ತಿ, ನಿರಂತರವಾಗಿ ಸೇವಾಭಾವದಲ್ಲಿ ಇರುವುದು, ದೋಷ ಅಹಂ ನಿರ್ಮೂಲನೆಗೆ ಗಂಭೀರತೆಯಿಂದ ಪ್ರಯತ್ನ ಮಾಡುತ್ತಿದ್ದರು. – ಶ್ರೀ. ವಿಜಯಕುಮಾರ, ಸಮಿತಿ ಸಮನ್ವಯಕರು, ಉಡುಪಿ.

ಚಂದ್ರಣ್ಣ  ಪ್ರತಿಯೊಂದು ಸೇವೆ ಮಾಡುವಾಗ ಚೆಕ್‌ಲಿಸ್ಟ್ ಇರುತ್ತದೆ. ಅಧ್ಯಾತ್ಮಿಕ ದೃಷ್ಟಿಯಿಂದ ವಿಚಾರ ಮಾಡುತ್ತಾರೆ ತುಂಬಾ ಸೇವೆಗಳ ಜವಾಬ್ದಾರಿ ಇದ್ದರೂ ಒತ್ತಡ ಮಾಡಿಕೊಳ್ಳುವುದಿಲ್ಲ. ಪ್ರತಿಕ್ಷಣ ಉತ್ಸಾಹದಿಂದ ಇರುತ್ತಾರೆ ಅಂತರ್ಮುಖರಾಗಿರುತ್ತಾರೆ. ಯಾರಿಂದಾದರೂ ತಪ್ಪಾದರೆ ತಕ್ಷಣ ಹೇಳುತ್ತಾರೆ. ಅವರಲ್ಲಿ ತುಂಬಾ ಪ್ರೇಮಭಾವ ಇದೆ. – ಶ್ರೀ. ಶರತ ಕುಮಾರ, ಸಮಿತಿ ಸಮನ್ವಯಕರು, ಉತ್ತರ ಕನ್ನಡ

ಅಣ್ಣನವರಿಗೆ ಮೊದಲು ಇತರರ ಬಗ್ಗೆ ವಿಚಾರ ಮಾಡುವುದು ಕಡಿಮೆ ಇತ್ತು. ಆದರೆ ಈಗ ತುಂಬಾ ವಿಚಾರ ಮಾಡುತ್ತಾರೆ. ಸಹಾಯ ಭೂಮಿಕೆ ಕೂಡ ಹೆಚ್ಚಾಗಿದೆ. ಈಗ ಯಾವುದೇ ಸೇವೆ ಹೇಳಿದರೂ ಮನಸ್ಸಿಟ್ಟು ತಕ್ಷಣ ಮಾಡುತ್ತಾರೆ ಪ್ರತಿಯೊಂದು ಸೇವೆಯ ವರದಿಯನ್ನು ಕೂಡ ಮಾಡುತ್ತಾರೆ ಮತ್ತು ನೇತೃತ್ವ ತೆಗೆದುಕೊಂಡು ಮಾಡುತ್ತಾರೆ. – ಸೌ. ವೈದೇಹಿ ಗುರುಪ್ರಸಾದ ಗೌಡ, ಕು. ರೂಪ ಗೌಡ