ಗುರುಪೂರ್ಣಿಮೆಯ ನಿಮಿತ್ತ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಆಪತ್ಕಾಲವು ಸಾಧನೆಗಾಗಿ ಇಷ್ಟಕಾಲವಾಗಿರುವುದರಿಂದ ಸಾಧನೆಯನ್ನು ಪ್ರಾರಂಭಿಸಿ !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ. ವಿಜ್ಞಾನದಿಂದಾಗಿ ಅಹಂಕಾರ ಹೆಚ್ಚಿರುವ ಸಮಾಜವು ಮನೋ ಧೈರ್ಯವನ್ನು ಬೆಳೆಸಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವುದು, ಈಶ್ವರನಿಗೆ ಪ್ರಾರ್ಥನೆ  ಮಾಡುವುದು, ಯೋಗ ಸಾಧನೆ ಇತ್ಯಾದಿಗಳನ್ನು ಮಾಡಿ ಈಶ್ವರನಿಷ್ಠವಾಗತೊಡಗಿದೆ. ಇದನ್ನು ಆಪತ್ಕಾಲದ ಒಳ್ಳೆಯ ಪರಿಣಾಮವೆಂದೇ ಹೇಳಬಹುದು. ಆದುದರಿಂದ ಈ ಗುರು ಪೂರ್ಣಿಮೆಯಿಂದ ಗುರುತತ್ತ್ವಕ್ಕೆ ಅಥವಾ ಗುರುರೂಪದಲ್ಲಿನ ಸಂತರಿಗೆ ಶರಣಾಗಿ ಯೋಗ್ಯ ಸಾಧನೆ ಪ್ರಾರಂಭಿಸ ಬೇಕು. ಸರ್ವಶಕ್ತಿವಂತ ಈಶ್ವರನಿಗೆ ಅಥವಾ ಈಶ್ವರನ ಸಗುಣ ರೂಪವಾಗಿರುವ ಗುರುಗಳಿಗೆ ಶರಣಾಗದೇ ಆತ್ಮಶಾಂತಿ ಅಥವಾ ಮೋಕ್ಷವು ಲಭಿಸುವುದಿಲ್ಲವೆಂದು, ತಿಳಿಯಿರಿ.’ – ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೪.೨೦೨೦)

ಸೂಚನೆ : ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಎಂದು ಉಲ್ಲೇಖಿಸಲು ಮಹರ್ಷಿಗಳು ಹೇಳಿದ್ದಾರೆ. ಆದರೆ ಈ ವಾರದ ಕೆಲವು ಲೇಖನಗಳು ಮುಂಚಿನದ್ದಾಗಿರುವುದರಿಂದ ಅವರನ್ನು ಸದ್ಗುರು (ಸೌ.) ಬಿಂದಾ ಸಿಂಗಬಾಳ ಎಂದು ಉಲ್ಲೇಖಿಸಲಾಗಿದೆ. – ಸಂಪಾದಕರು.