ಸಾಧಕರಲ್ಲಿ ಸಾಧಕತ್ವ ನಿರ್ಮಾಣವಾಗಬೇಕೆಂದು ತಮ್ಮ ಪ್ರತಿಯೊಂದು ಕೃತಿಯಿಂದ, ಮಾತುಗಳಿಂದ ಮತ್ತು ಅಮೂಲ್ಯ ಕಲಿಕೆಯಿಂದ ಸಾಧಕರನ್ನು ಕ್ಷಣಕ್ಷಣಕ್ಕೂ ರೂಪಿಸುವ ಸರ್ವೋತ್ತಮ ಗುರು ಪರಾತ್ಪರ ಗುರು ಡಾ. ಆಠವಲೆ !

ಶ್ರೀ. ಸುಧೀಷ ಪುಥಲತ

೧. ಸಾಧಕರ ಮನಸ್ಸಿನ ಮೇಲೆ ಪರಿಪೂರ್ಣ ಸೇವೆಯನ್ನು ಮಾಡುವ ಸಂಸ್ಕಾರವನ್ನು ಮಾಡುವುದು

‘ನಾನು ಮೊದಲು ಮುಂಬಯಿಯಲ್ಲಿನ ಸೇವಾ ಕೇಂದ್ರದಲ್ಲಿ ಸೇವೆಯನ್ನು ಮಾಡುತ್ತಿದ್ದೆನು. ಒಂದು ಬಾರಿ ನಾನು ಸೇವೆಯನ್ನು ಮಾಡುವಾಗ ಪರಊರಿಗೆ ಕಳುಹಿಸಬೇಕಾದ ಒಂದು ‘ಪಾರ್ಸಲನ್ನು ವ್ಯವಸ್ಥಿತವಾಗಿ ಕಟ್ಟಿರಲಿಲ್ಲ. ಆಗ ರಾತ್ರಿಯ ೧೧ ಗಂಟೆಯಾಗಿತ್ತು ಮತ್ತು ನನಗೆ ಒಂದು ಗಂಟೆ ಪ್ರಯಾಣ ಮಾಡಿ ಮನೆಗೆ ಹೋಗುವುದಿತ್ತು. ಆಗ ಪರಾತ್ಪರ ಗುರು ಡಾಕ್ಟರರು, “ನೀನು ಈ ಪೆಟ್ಟಿಗೆಯನ್ನು ವ್ಯವಸ್ಥಿತವಾಗಿ ಕಟ್ಟಿ ನಂತರ ಮನೆಗೆ ಹೋಗು”, ಎಂದು ಹೇಳಿದರು. ಹೀಗೆ ಹೇಳಿ ಅವರು ನನ್ನ ಮನಸ್ಸಿನ ಮೇಲೆ ಪರಿಪೂರ್ಣ ಸೇವೆಯನ್ನು ಮಾಡುವ ಸಂಸ್ಕಾರವನ್ನು ಮಾಡಿದರು.

೨. ಸೇವೆಯನ್ನು ತಾರತಮ್ಯದಿಂದ ಮಾಡಲು ಕಲಿಸುವುದು

ಒಂದು ಸಲ ನಾನು ಪ್ರವಚನದ ಆಮಂತ್ರಣವನ್ನು ಬರೆಯಲು ಬಟ್ಟೆಯ ಫಲಕಗಳನ್ನು ತಯಾರಿಸುತ್ತಿದ್ದೆನು. ಅವುಗಳನ್ನು ಕೆಲವು ಸ್ಥಳಗಳಲ್ಲಿ ಹಾಕುವುದಿತ್ತು. ನಾನು ಫಲಕದ ಮೇಲಿನ ಅಕ್ಷರಗಳ ಹೊರಗಿನ ಪಟ್ಟಿಯನ್ನು ಬಿಡಿಸಿ ಅದರ ಮೇಲೆ ಗಮನವಿಟ್ಟು ಬಣ್ಣವನ್ನು ತುಂಬುತ್ತಿದ್ದೆನು. ಆಗ ಪರಾತ್ಪರ ಗುರುದೇವರು ನನಗೆ, “ಈ ಫಲಕಗಳನ್ನು ಜನರು ೨೦ ರಿಂದ ೨೫ ಅಡಿಗಳಷ್ಟು ದೂರದಿಂದ ನೋಡುವರು. ಆದುದರಿಂದ ಇಷ್ಟು ಅಚ್ಚುಕಟ್ಟಾಗಿ ಅಕ್ಷರಗಳನ್ನು ಬಿಡಿಸುವ ಆವಶ್ಯಕತೆಯಿಲ್ಲ”, ಎಂದು ಹೇಳಿದರು. ಆಗ ನನಗೆ, ‘ಸೇವೆಯನ್ನು ತಾರತಮ್ಯದಿಂದ ಮಾಡಬೇಕು. ಅದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಸೇವೆಯನ್ನು ಮಾಡಬಹುದು’, ಎಂಬುದು ಕಲಿಯಲು ಸಿಕ್ಕಿತು.

೩. ಸಾಧಕರಿಗೆ ಸಮಯದ ಮಹತ್ವವನ್ನು ಗಮನಕ್ಕೆ ತಂದು ಕೊಡುವುದು

೩ ಅ. ‘ಸೇವಾಕೇಂದ್ರಕ್ಕೆ ಬರುವ ಸಾಧಕರ ಸಮಯ ವ್ಯರ್ಥವಾಗಬಾರದೆಂದು’, ಕಾಳಜಿ ವಹಿಸುವುದು : ಸಾಧಕರು ಮುಂಬಯಿಯ ಸೇವಾಕೇಂದ್ರಕ್ಕೆ ಸೇವೆಯನ್ನು ಮಾಡಲು ಬರುವ ಮೊದಲೇ, ಅವರ ಸಮಯ ವ್ಯರ್ಥವಾಗಬಾರದೆಂದು, ಪರಾತ್ಪರ ಗುರುದೇವರು ಅವರಿಗಾಗಿ ಬೇರೆ ಸೇವೆಯನ್ನು ತೆಗೆದಿಡುತ್ತಿದ್ದರು. ಅವರು ಹೊರಗಡೆಯಿಂದ ಸೇವೆಗಾಗಿ ಬರುವ ಸಾಧಕರಿಗಾಗಿ ಮೊದಲೇ ಸೇವೆಯನ್ನು ತೆಗೆದಿಡಲು ನಮಗೂ ಹೇಳುತ್ತಿದ್ದರು. ‘ಸಾಧಕರ ಸಮಯ ವ್ಯರ್ಥವಾಗಬಾರದು ಮತ್ತು ಅವರಿಗೆ ಸೇವಾಕೇಂದ್ರದ ಹೆಚ್ಚೆಚ್ಚು ಲಾಭವಾಗಬೇಕೆಂದು’, ಕಾಳಜಿ ವಹಿಸುತ್ತಿದ್ದರು. ಒಂದು ಸಲ ಓರ್ವ ಸಾಧಕನಿಗೆ ಯಾವುದೇ ಸೇವೆ ಇರಲಿಲ್ಲ. ಆಗ ಅವರು ಅವನಿಗೆ ಹಳೆಯ ಕೀಲಿಕೈಗಳನ್ನು ಇಟ್ಟಿರುವ ಡಬ್ಬವನ್ನು ಕೊಟ್ಟು ಕೀಲಿಕೈಗಳ ವರ್ಗೀಕರಣ ಮಾಡಲು ಹೇಳಿದರು.

೩ ಆ. ಗಂಭೀರ ಮುಖಮಾಡಿ ಸಾಧಕನಿಗೆ ಸಮಯವನ್ನು ವ್ಯರ್ಥ ಮಾಡುತ್ತಿರುವುದರ ಬಗ್ಗೆ ಅರಿವು ಮಾಡಿಕೊಡುವುದು ಮತ್ತು ಸಾಧಕನು ತಪ್ಪನ್ನು ಸುಧಾರಿಸಿದಾಗ ಅವನ ಕಡೆಗೆ ನೋಡಿ ಮಧುರ ಹಾಸ್ಯವನ್ನು ಬೀರಿ ಅವನಿಗೆ ಆನಂದವನ್ನು ಕೊಡುವುದು : ಒಂದು ಸಲ ಒಂದು ಕಾರ್ಯಕ್ರಮದ ಸಮಯದಲ್ಲಿ ಬಹಳ ಸೇವೆಯನ್ನು ಮಾಡುವುದು ಬಾಕಿ ಇರುವಾಗಲೂ ನಾನು ಮತ್ತು ಇತರ ಕೆಲವು ಸಾಧಕರು ಹರಟೆ ಹೊಡೆಯುತ್ತಾ ನಿಂತಿದ್ದೆವು. ಗುರುದೇವರು ನಮ್ಮನ್ನು ನೋಡಿದರು. ಅವರು ನನ್ನ ಕಡೆಗೆ ನೋಡಿ ಏನನ್ನೂ ಹೇಳದೇ ಗಂಭೀರ ಮುಖ ಮಾಡಿ ಅಲ್ಲಿಂದ ಹೋದರು. ಆಗ ನನಗೆ ನನ್ನ ತಪ್ಪು ಗಮನಕ್ಕೆ ಬಂದಿತು. ನಂತರ ನನಗೆ ಯಾರೋ ಪಾತ್ರೆಗಳನ್ನು ತೊಳೆಯಲು ಹೇಳಿದರು. ಪಾತ್ರೆಗಳನ್ನು ತೊಳೆಯುವಾಗ ನನಗೆ ಬಹಳ ಆನಂದವಾಗುತ್ತಿತ್ತು. ಅದು ನನಗಾಗಿ ಒಂದು ವಿಶೇಷ ಅನುಭವವಾಗಿತ್ತು. ನಂತರ ನಾನು ಆ ತಪ್ಪನ್ನು ಮರೆತೆನು. ನಾನು ಮನೆಗೆ ಹೋಗುವ ಸಿದ್ಧತೆಯಲ್ಲಿರುವಾಗ ಪರಾತ್ಪರ ಗುರುದೇವರು ನನ್ನ ಕಡೆಗೆ ನೋಡಿ ನಗುತ್ತಾ ಅಲ್ಲಿಂದ ಹೊರಟು ಹೋದರು. ಅವರ ಆ ನಗು ಸಂಪೂರ್ಣ ‘ಈಶ್ವರೀ ನಗು’ವಾಗಿತ್ತು. ನಾನು ಅದೇ ಆನಂದದಲ್ಲಿ ಮನೆಯನ್ನು ತಲುಪಿದೆ. ಅವರ ಆ ಮಧುರ ನಗುವು ನನಗಾಗಿ ಮರೆಯಲಾರದಂತಹ ಪ್ರಸಾದವಾಗಿತ್ತು.

೪. ನಿರಪೇಕ್ಷ ಪ್ರೀತಿ

ಒಮ್ಮೆ ಪರಾತ್ಪರ ಗುರುದೇವರು, “ನನಗೆ ಜನರಿಗೆ ಪ್ರೀತಿಯನ್ನು ಕೊಡಲು ಇಷ್ಟವಾಗುತ್ತದೆ”, ಎಂದು ಹೇಳಿದರು.

೪ ಅ. ಪರಾತ್ಪರ ಗುರುದೇವರು ಓರ್ವ ಜಿಜ್ಞಾಸುವನ್ನು ಲಿಫ್ಟ್‌ನಿಂದ ಕೆಳಗಿನ ವರೆಗೆ ತಲುಪಿಸಲು ಹೋಗುವುದು ಮತ್ತು ಅವರ ಈ ಕೃತಿಯಿಂದ ಜಿಜ್ಞಾಸು ಭಾವುಕವಾಗುವುದು : ಕೆಲವು ವರ್ಷಗಳ ಹಿಂದೆ ಓರ್ವ ಜಿಜ್ಞಾಸು ಪರಾತ್ಪರ ಗುರುದೇವರನ್ನು ಭೇಟಿಯಾಗಲು ಬಂದಿದ್ದರು. ಆ ಭೇಟಿಯ ನಂತರ ‘ಅವರು ಪ್ರಭಾವಿತರಾಗಿದ್ದಾರೆ’, ಎಂದು ನನಗನಿಸಿತು. ಆದುದರಿಂದ ನಾನು ಅವರನ್ನು, “ಏನಾಯಿತು ?”, ಎಂದು ಕೇಳಿದೆ. ಆಗ ಅವರು ಭಾವುಕರಾಗಿ ನನಗೆ, “ಪರಾತ್ಪರ ಗುರುದೇವರು ನನ್ನನ್ನು ಲಿಫ್ಟ್‌ನ ಮೂಲಕ ಎರಡನೇ ಮಹಡಿಯಿಂದ ಕೆಳಗಿನ ವರೆಗೆ ತಲುಪಿಸಲು ಬಂದಿದ್ದರು”, ಎಂದು ಹೇಳಿದರು. ಅವರ ಮನಸ್ಸಿನ ಮೇಲೆ ಈ ವಿಷಯವು ಆಳವಾಗಿ ಮೂಡಿತ್ತು.

೪ ಆ. ಗ್ರಂಥಗಳ ಬರವಣಿಗೆಯಿಂದ ಸಮಯ ತೆಗೆದು ಸಾಧಕರ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವುದು : ಸಾಧಕರಿಗೆ ಬಹಳಷ್ಟು ತಾತ್ತ್ವಿಕ ಪ್ರಶ್ನೆಗಳಿರುತ್ತಿದ್ದವು. ಆಗ ಪರಾತ್ಪರ ಗುರುದೇವರು ಗ್ರಂಥಗಳ ಬರವಣಿಗೆಯಿಂದ ಸಮಯ ತೆಗೆದು ಸಾಧಕರಿಗೆ ಉತ್ತರಗಳನ್ನು ಕೊಡುತ್ತಿದ್ದರು. ಸಾಧಕರಿಗೆ ಆ ತಾತ್ತ್ವಿಕ ಪ್ರಶ್ನೆಗಳ ವಿಶೇಷ ಲಾಭವಾಗುತ್ತಿರಲಿಲ್ಲ, ಆದರೂ ಗುರುದೇವರು ಸಾಧಕರಿಗೆ ಅತ್ಯಂತ ಪ್ರೇಮದಿಂದ ಉತ್ತರಗಳನ್ನು ನೀಡಿ ಅವರನ್ನು ಸಮಾಧಾನ ಮಾಡುತ್ತಿದ್ದರು.

೪ ಇ. ಸಾಧಕರಿಂದ ತಪ್ಪುಗಳಾದಾಗ ಅವರ ಮೇಲೆ ಸಿಟ್ಟು ಮಾಡದೇ ಶಾಂತವಾಗಿ ಉಪಾಯಯೋಜನೆಯನ್ನು ಹೇಳುವುದು : ಒಂದು ಸಲ ಒಂದು ತುರ್ತು ಸೇವೆಯು ನಡೆಯುತ್ತುತ್ತು. ಓರ್ವ ಸಾಧಕನು ‘ಸ್ಪ್ರೇ ಪೇಂಟಿಂಗ್’ ಮಾಡುವ ಯಂತ್ರವನ್ನು ಸಂಬಂಧಿತ ಸಾಧಕನಿಗೆ ಕೊಡುವ ಮೊದಲು ಅದನ್ನು ಹಸ್ತಪ್ರಕ್ಷಾಲನ ಪಾತ್ರೆಯಲ್ಲಿ (ಬೇಸಿನ್‌ನಲ್ಲಿ) ತೊಳೆಯುತ್ತಿದ್ದನು. ಆಗ ಆ ಯಂತ್ರದ ‘ನಾಝಲ್’ (ತುದಿ) ಹಸ್ತಪ್ರಕ್ಷಾಲನ ಪಾತ್ರೆಯಿಂದ ನೀರಿನ ಪೈಪ್‌ನಲ್ಲಿ ಹೋಯಿತು. ಇದರಿಂದ ಸಾಧಕನಿಗೆ ಬಹಳ ಕೆಟ್ಟದೆನಿಸಿತು ಮತ್ತು ‘ಪರಾತ್ಪರ ಗುರುದೇವರು ಏನು ಹೇಳಬಹುದು ?’, ಎಂಬ ವಿಚಾರದಿಂದ ಅವನು ಗಾಬರಿಯಾದನು. ಅವನ ಸ್ಥಿತಿಯನ್ನು ನೋಡಿ ಪರಾತ್ಪರ ಗುರುದೇವರು ಶಾಂತ ರೀತಿಯಲ್ಲಿ ಅವನಿಗೆ, “ಆ ‘ನೊಝಲ್’ನ್ನು ನೀರಿನ ಪೈಪ್‌ನಿಂದ ಹೊರಗೆ ತೆಗೆಯಬಹುದೇ ? ನೋಡು”, ಎಂದು ಹೇಳಿದರು. ಗುರುದೇವರ ಈ ಮಾತುಗಳಿಂದ ಆ ಸಾಧಕನು ಶಾಂತನಾದನು. ಕೆಲವು ಸಮಯದ ನಂತರ ಅವನು ಆ ‘ನೊಝಲ್’ನ್ನು ಹೊರಗೆ ತೆಗೆದನು.

೫. ‘ಸಾಧಕರಲ್ಲಿ ಆತ್ಮೀಯತೆ ನಿರ್ಮಾಣವಾಗಬೇಕು’, ಅಂತಹ ಕೃತಿಗಳನ್ನು ಮಾಡಲು ಹೇಳುವುದು

ಒಂದು ಸಲ ಓರ್ವ ಸಾಧಕಿಯು ಕೆಲವು ಸಾಧಕರನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದಳು. ನಾವು ಸಾಧಕಿಯ ಮನೆಯಿಂದ ಹಿಂದಿರುಗಿ ಬಂದ ಮೇಲೆ ಪರಾತ್ಪರ ಗುರುದೇವರು, “ನಿಮಗೆ ಆ ಸಾಧಕಿಯ ಮನೆಯಲ್ಲಿ ಹೇಗನಿಸಿತು ?” ಎಂದು ಕೇಳಿದರು. ಆಗ ನಾವು, “ಆ ಸಾಧಕಿಯು ಎಲ್ಲ ಪದಾರ್ಥಗಳನ್ನು ಹೊರಗಡೆಯಿಂದ ತರಿಸಿದ್ದಳು”, ಎಂದು ಹೇಳಿದೆವು. ಆಗ ಪರಾತ್ಪರ ಗುರುದೇವರು, “ಅವಳು ತಪ್ಪು ಮಾಡಿದಳು. ಅವಳು ತಾನೇ ಪದಾರ್ಥಗಳನ್ನು ತಯಾರಿಸಿ ನಿಮಗೆ ಊಟ ಮಾಡಲು ಕೊಡಬೇಕಿತ್ತು”, ಎಂದು ಹೇಳಿದರು. ಈ ಪ್ರಸಂಗದಿಂದ, ‘ಸಾಧಕರಿಗೆ ಮನೆಯಲ್ಲಿ ಸಾದಾ ಪದಾರ್ಥಗಳನ್ನು ಮಾಡಿಕೊಟ್ಟರೂ, ಅದರಿಂದ ನಮ್ಮಲ್ಲಿ ಪ್ರೇಮಭಾವ ಮತ್ತು ಸಾಧಕತ್ವ ಗುಣವು ಬರುತ್ತದೆ’, ಎಂಬುದು ಕಲಿಯಲು ಸಿಕ್ಕಿತು.

– ಶ್ರೀ. ಸುಧೀಷ ಪುಥಲತ, ಕೇರಳ