ಜ್ಞಾನಚಕ್ಷುಗಳು ನಿನ್ನವು | ಜ್ಞಾನದ ಸ್ವರೂಪವು | ಆಂತರ್ಯದ ಜ್ಞಾನರಾಜ ||

೧. ಸಾಧಕರನ್ನು ಸಾಧನೆಯ ಕಡೆಗೆ ಹೊರಳಿಸಲು ಪ.ಪೂ. ಗುರುದೇವರು ರಚಿಸಿದ ಶ್ರೇಷ್ಠ ಹಾಗೂ ಅದ್ಭುತ ಪದ್ಧತಿ !

‘ಗುರುದೇವರು ನಮ್ಮನ್ನು ಸಾಧನೆಯತ್ತ ಆಕರ್ಷಿಸಿಕೊಂಡ ಸರ್ವಶ್ರೇಷ್ಠ ಪದ್ಧತಿ ! ಹಂತಹಂತವಾಗಿ ಸತ್ಸಂಗದಿಂದ ಸತ್ಸೇವೆ, ಗ್ರಂಥಪ್ರದರ್ಶನ, ಕೇಂದ್ರಸೇವೆ, ಜಿಲ್ಲಾಸೇವೆ, ಗುರುಪೂರ್ಣಿಮೆಗಳ ಸೇವೆ, ಧರ್ಮಜಾಗೃತಿ ಸಭೆ, ಪ್ರಾದೇಶಿಕ ಹಿಂದೂ ಸಮ್ಮೇಳನ, ಸನಾತನ ಪ್ರಭಾತ, ಪಂಚಾಂಗ ಹಾಗೂ ಅದಕ್ಕಾಗಿ ಜಾಹೀರಾತು ಪಡೆದುಕೊಳ್ಳುವ ಸೇವೆ, ಈ ರೀತಿಯ ಅನೇಕ ಸೇವೆಗಳನ್ನು ನಮಗೆ ತಿಳಿಯದಂತೆ ನೀಡಿ ನಮ್ಮಿಂದ ಸಾಧನೆಯನ್ನು ಮಾಡಿಸಿಕೊಳ್ಳುವ ಅವರ ಪದ್ಧತಿಯು ಅದ್ಭುತವೇ ಆಗಿದೆ ಎನ್ನಬಹುದು ! ಸಾಧನೆಯಲ್ಲಿ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆ, ಗುಣಸಂವರ್ಧನೆ ಹಾಗೂ ಭಾವವೃದ್ಧಿಯಂತಹ ಅಷ್ಟಾಂಗ ಸಾಧನೆಯನ್ನು ನಮ್ಮಿಂದ ಮಾಡಿಸಿಕೊಳ್ಳುವ ಈ ಪದ್ಧತಿಯು ‘ನ ಭೂತೋ, ನ ಭವಿಷ್ಯತಿ’ ಎಂಬಂತಿದೆ. ಯಾವುದೇ ಆಧ್ಯಾತ್ಮಿಕ ಸಂಸ್ಥೆಯಲ್ಲಿಲ್ಲದಂತಹ ಈ ಸಾಧನೆಯು ಸಾಧಕರಿಗಾಗಿ ಸಂಜೀವಿನಿಯೇ ಆಗಿದೆ.

೨. ಸಾಧಕರನ್ನು ನಿರ್ಮಿಸುವ ಅದ್ವಿತೀಯ ಪದ್ಧತಿಯೇ ಗುರುದೇವರ ಅವತಾರಿ ಕಾರ್ಯದ ದರ್ಶಕ !

ನಮಗೆ ತಿಳಿಯದಂತೆ ‘ಗುರುದೇವರು ನಮ್ಮನ್ನು ಮಾಯೆ ಹಾಗೂ ಸಂಸಾರಗಳ ಬಂಧನದಿಂದ ಹೇಗೆ ಮುಕ್ತಗೊಳಿಸಿದರು ?’, ಎಂಬ ವಿಚಾರ ಮಾಡುವುದು ಅಸಾಧ್ಯವಿದೆ. ಯೋಗ್ಯ ಸಮಯದಲ್ಲಿ ಮಾರ್ಗದರ್ಶನ, ಶುದ್ಧಿಸತ್ಸಂಗ, ಭಾವಸತ್ಸಂಗ ಮುಂತಾದ ಮಾಧ್ಯಮಗಳಿಂದ ಸಾಧನೆಯ ಜ್ಞಾನವನ್ನು ನೀಡಿ ನಮ್ಮನ್ನು ಸುಧಾರಿಸುವ ಪದ್ಧತಿಯು ಅವರ ಅವತಾರಿ ಕಾರ್ಯದ ದರ್ಶಕವಾಗಿದೆ. ಘಟಿಸಿದ ತಪ್ಪುಗಳ ಪರಿಮಾರ್ಜನೆಗಾಗಿ ಕ್ಷಮಾಯಾಚನೆ ಹಾಗೂ ಶಿಕ್ಷಾಪದ್ಧತಿ ಇವುಗಳನ್ನು ಉಪಯೋಗಿಸಿ ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ದೂರ ಮಾಡುವ ಪದ್ಧತಿಯು ಅಪ್ರತಿಮವಾಗಿದೆ. ಆಶ್ರಮ ಹಾಗೂ ಸೇವಾಕೇಂದ್ರಗಳು ಇವುಗಳ ಮಾಧ್ಯಮಗಳಿಂದ ಸಾಧಕರಿಗೆ ಸೇವೆ ಹಾಗೂ ಸಾಧನೆಗಾಗಿ ಬೇಕಾದ ಅನುಕೂಲ ಮಾಡಿ ಪೂರಕ ವ್ಯವಸ್ಥೆಯಿಂದ ಅವರ ಸಾಧನೆಯನ್ನು ಮಾಡಿಸಿಕೊಳ್ಳುವುದು, ಇದು ಯಾವ ಆಧ್ಯಾತ್ಮಿಕ ಸಂಸ್ಥೆಯಲ್ಲಿದೆ ? ಪ್ರತಿಯೊಂದು ಆಶ್ರಮವೆಂದರೆ ಹಿಂದೂ ರಾಷ್ಟ್ರದ ಪ್ರತಿಕೃತಿಯೇ ಆಗಿದೆ. ವೇದಪಾಠಶಾಲೆ, ಗುರುಕುಲ ಹಾಗೂ ಯಜ್ಞಶಾಲೆ ಇವುಗಳ ಸ್ಥಾಪನೆ ಅವರ ಹಿಂದೂ ರಾಷ್ಟ್ರದ ನಿಶ್ಚಿತದ ಪೂರಕ ವ್ಯವಸ್ಥೆಯಾಗಿದೆ. ಇಂತಹ ಗುರುಗಳ ಆಶ್ರಯದಲ್ಲಿ ಸಾಧನೆಯನ್ನು ಮಾಡುವ ನಾವೆಷ್ಟು ಭಾಗ್ಯವಂತರಾಗಿದ್ದೇವೆ ! ಇಂತಹ ಗುರುದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ. ಗುರುದೇವರು ನಮ್ಮನ್ನು ಸಾಧನೆಗೆ ತಂದ ರೀತಿ ಹಾಗೂ ಅವರು ಮಾಡುತ್ತಿರುವ ಕಾರ್ಯ ಇವುಗಳ ಬಗ್ಗೆ ಪ್ರತಿದಿನ ೧-೨ ಬಾರಿ ಶಾಂತವಾಗಿದ್ದು ವಿಚಾರ ಮಾಡಿದರೂ ನಾವು ಭಾವಾವಸ್ಥೆಗೆ ಹೋಗಬಹುದು.’ – (ಪೂ.) ಕೆ. ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ.

ಭಗವಂತನು ಕಲಿಸಿದ ವಿವಿಧ ವಿಷಯಗಳ ಬಗ್ಗೆ ವ್ಯಕ್ತಪಡಿಸಿದ ಕೃತಜ್ಞತೆ ಹಾಗೂ ಕಲಿತ ಪ್ರತಿಯೊಂದು ವಿಷಯವು ಕೃತಿಯಲ್ಲಿ ಬರಬೇಕೆಂದು ಮಾಡಿದ ಪ್ರಾರ್ಥನೆ !

ಹೇ ಭಗವಂತಾ, ನಾವು ನಿನಗೆ ಎಷ್ಟು ತೊಂದರೆಯನ್ನು ಕೊಡುತ್ತೇವೆ ! ಆದರೂ ನೀನು ಅತ್ಯಂತ ಸಂಯಮದಿಂದ ನಮಗೆ ಸೂಕ್ಷ್ಮ ಹಾಗೂ ಸ್ಥೂಲ ಹೀಗೆ ಎಲ್ಲ ವಿಷಯಗಳನ್ನು ಕಲಿಸಿರುವೆ. ನೀನು ನಮಗೆ ಆಳವಾದ ಚಿಂತನೆ ಹಾಗೂ ಪ್ರತಿಯೊಂದು ಕ್ಷಣದ ಆಯೋಜನೆ ಮಾಡುವ ಕೌಶಲ್ಯವನ್ನು ಕಲಿಸಿದೆ, ಮಾತ್ರವಲ್ಲ ಸರ್ವಸಮಾವೇಶಕ ಹಾಗೂ ವ್ಯಾಪಕವಾಗುವ ಅಂಶಗಳನ್ನೂ ಕಲಿಸಿದೆ.

ನೀನು ನಮಗೆ ಕೇವಲ ಕಲಿಸುವುದಕ್ಕಷ್ಟೇ ಸೀಮಿತವಾಗಿರದೇ ಯಾರನ್ನು ನೋಡಿ ನಾವು ಕಲಿಯಬಹುದೋ, ಅಂತಹ ಆದರ್ಶ ಸಾಧಕ ಹಾಗೂ ಸಂತರನ್ನು ನಿರ್ಮಿಸಿರುವೆ. ಹೇ ಪ್ರಭು ! ನಿನ್ನಿಂದ ನಾವು ಏನೆಲ್ಲವನ್ನು ಕಲಿತೆವೋ, ಆ ಬಗ್ಗೆ ವಿಚಾರ ಮಾಡುವ ಬದಲು ಅದನ್ನು ನಾವು ಪ್ರತ್ಯಕ್ಷ ಕೃತಿಯಲ್ಲಿ ತರುವಂತಾಗಲಿ, ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.  – (ಪೂ.) ಸೌ. ಉಮಾ ರವಿಚಂದನ, ಚೆನ್ನೈ, ತಮಿಳುನಾಡು. (ಪೂ.) ಸೌ. ಉಮಾ ರವಿಚಂದ್ರನ್

ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ | ಪಾಪಂ ತಾಪಂ ಚ ದೈನ್ಯಂ ಚ ಹರೇಚ್ಛಿ ಗುರುದರ್ಶನಮ್ ||

-ಶ್ರೀಗುರುಚರಿತ್ರೆ, ಅಧ್ಯಾಯ ೧೩, ಶ್ಲೋಕ ೧೩೦

ಅರ್ಥ : ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ (ಮಾನಸಿಕ ಒತ್ತಡ) ಮತ್ತು ಕಲ್ಪತರುವಿನಿಂದ ದೈನ್ಯ (ದಾರಿದ್ರ್ಯ) ದೂರವಾಗುತ್ತದೆ. ಆದರೆ ಶ್ರೀಗುರುಗಳ ದರ್ಶನದಿಂದ ಪಾಪ, ತಾಪ ಮತ್ತು ದೈನ್ಯ ಈ ಮೂರೂ ವಿಷಯಗಳ ಹರಣವಾಗುತ್ತದೆ, ಅಂದರೆ ಈ ಮೂರೂ ತೊಂದರೆಗಳು ದೂರವಾಗುತ್ತವೆ.

ಒಂದೇ ಸಮಯದಲ್ಲಿ ಅನೇಕ ಜೀವಗಳಲ್ಲಿ ಸಾಧನೆಯ ಬೀಜವನ್ನು ಬಿತ್ತಿ ಅವರ ಜೀವನವನ್ನು ಬಂಗಾರವನ್ನಾಗಿ ಮಾಡುವ ಮಹಾನ ಅವತಾರಿ ಪುರುಷ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರ ಶ್ರೇಷ್ಠತೆಯಿಂದಾಗಿ ಅನೇಕ ಉಚ್ಚಪದವೀಧರರು ಅವರತ್ತ ಆಕರ್ಷಿತರಾಗಿ ಪೂರ್ಣವೇಳೆ ಸಾಧನೆ ಮಾಡುವುದು

‘ಸನಾತನ ಸಂಸ್ಥೆಯಲ್ಲಿ ತಮ್ಮನ್ನು ಬುದ್ಧಿವಂತರೆಂದು ತಿಳಿದುಕೊಂಡ ನನ್ನ ಹಾಗೆ ಅನೇಕ ಸಾಧಕರಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಆ ಎಲ್ಲ ಸಾಧಕರ ಪ್ರಶ್ನೆಗಳಿಗೆ ಅವರ ಭಾಷೆಯಲ್ಲಿಯೇ ಉತ್ತರಗಳನ್ನು ನೀಡುತ್ತಿದ್ದರು. ಸನಾತನ ಸಂಸ್ಥೆಗೆ ಪೂರ್ಣವೇಳೆ ಸಾಧನೆ ಮಾಡಲು ಬರುವವರ ಸಾಲನ್ನು ನೋಡಿ ಪರಾತ್ಪರ ಗುರು ಡಾ. ಆಠವಲೆಯವರ ಅಸಾಮಾನ್ಯತ್ವವು ಗಮನಕ್ಕೆ ಬರುತ್ತದೆ.

ಸನಾತನ ಸಂಸ್ಥೆಯಲ್ಲಿನ ಅನೇಕ ಸಾಧಕರು ನೌಕರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು ಮತ್ತು ಕೆಲವು ಜನರು ವಿಶೇಷವಾಗಿ ಕೆತ್ತಿ ಕಸೂರಿ ಮಾಡಿದ ವಜ್ರದಂತೆಯೂ ಇದ್ದಾರೆ. ಪ್ರತಿಯೊಬ್ಬರಲ್ಲಿ ಏನಾದರೊಂದು ವಿಶೇಷ ಗುಣವಿದೆ. ಪರಾತ್ಪರ ಗುರು ಡಾ. ಆಠವಲೆಯವರ ಶ್ರೇಷ್ಠತೆಯಿಂದಾಗಿ ಸಮಾಜದಲ್ಲಿನ ಇಂತಹ ವಜ್ರರೂಪಿ ಸಾಧಕರು ಅವರತ್ತ ಆಕರ್ಷಿತರಾಗಿದ್ದಾರೆ. ಅನೇಕ ಸಾಧಕರು ಡಾಕ್ಟರ್, ಇಂಜಿನಿಯರುಗಳು, ಪ್ರಸಿದ್ಧ ವಕೀಲರು, ಪರಿಣಿತ ವ್ಯಾಪಾರಿಗಳು ಹಾಗೂ ವಿದೇಶದಿಂದ ಬಂದವರೂ ಇದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಈ ಸಾಧಕರ ಬುದ್ಧಿಯ ಸ್ತರದಲ್ಲಿನ ಎಲ್ಲ ಸಂದೇಹಗಳನ್ನು ಹಾಗೂ ಪ್ರಶ್ನೆಗಳನ್ನು ನಿವಾರಣೆ ಮಾಡಿದರು. ಇಂದಿಗೂ ಅನೇಕ ಜನರು ‘ಇದೇ ಜನ್ಮದಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಬೇಕು, ಎಂದು ನಿರ್ಧರಿಸಿ ಸಾಧನೆಯನ್ನು ಮಾಡುತ್ತಿದ್ದಾರೆ. ಇದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಅಧ್ಯಾತ್ಮದ, ಈಶ್ವರೀ ತತ್ತ್ವದ ಶ್ರೇಷ್ಠತೆಯು ಅನುಭವಕ್ಕೆ ಬರುತ್ತದೆ. – ಶ್ರೀ. ನೀಲೇಶ ನಾಗರೆ, ನಾಶಿಕ.