ವೈದ್ಯಕೀಯ ಶಾಸ್ತ್ರದಲ್ಲಿನ ಹೊಸಹೊಸ ಮಾಹಿತಿಗಳನ್ನು ಪಡೆಯಲು ಪ್ರೋತ್ಸಾಹ ನೀಡುವ ಪ್ರೇರಣಾಸ್ರೋತ ಮತ್ತು ಆಧಾರಸ್ತಂಭವಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

‘ರಾಮನಾಥಿ ಆಶ್ರಮಕ್ಕೆ ಬೇರೆಬೇರೆ ಉಪಚಾರ ಪದ್ಧತಿಗಳನ್ನು ತಿಳಿದಿರುವ ವೈದ್ಯರು ಬರುತ್ತಿರುತ್ತಾರೆ. ಅವರ ಶಾಸ್ತ್ರಕ್ಕನುಸಾರ ಅವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ವಿವಿಧ ಉಪಚಾರಗಳನ್ನು ಮಾಡಲು ಹೇಳುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಅವರು ಹೇಳಿದಂತೆ ಅಕ್ಷರಶಃ ಪಾಲಿಸುತ್ತಾರೆ. ತಮ್ಮ ದೇಹದ ಕಡೆಗೆ ಸಾಕ್ಷಿ ಭಾವದಿಂದ ನೋಡಿ ಶರೀರದ ಮೇಲಾಗುವ ಉಪಚಾರಗಳ ಯಾವ ಒಳ್ಳೆಯ-ಕೆಟ್ಟ ಪರಿಣಾಮವಾಗುತ್ತದೆ ಮತ್ತು ಅದರಿಂದ ಶರೀರದಲ್ಲಿ ಏನು ಬದಲಾವಣೆಯಾಗುತ್ತದೆ, ಎಂಬ ಬಗ್ಗೆ ಅವರು ಸೂಕ್ಷ್ಮತೆಯಿಂದ ಮತ್ತು ಅಭ್ಯಾಸಪೂರ್ಣವಾಗಿ ಬರೆದಿಡುತ್ತಾರೆ. ಆಗಾಗ ಸಂಬಂಧಪಟ್ಟ ವೈದ್ಯರಿಗೆ ಲಕ್ಷಣಗಳನ್ನು ಮತ್ತು ಪರಿಣಾಮಗಳನ್ನು ತಿಳಿಸುತ್ತಾರೆ ಮತ್ತು ಸಂದೇಹವನ್ನೂ ಕೇಳುತ್ತಾರೆ. ಹೀಗೆ ಮಾಡುವುದರಿಂದ ಅವರ ಪ್ರಕೃತಿ, ಅವರಿಗಾದ ಕಾಯಿಲೆ ಮತ್ತು ವಿವಿಧ ಉಪಚಾರಪದ್ಧತಿಗಳ ಕುರಿತು ಅಧ್ಯಯನ ಮಾಡಲು ನಮಗೆ ತುಂಬಾ ಸಹಾಯವಾಗುತ್ತದೆ.

ನಿಜವಾಗಿಯೂ ಹೊಸ ಹೊಸ ಉಪಚಾರ ಪದ್ಧತಿಗಳನ್ನು ಕಲಿಯುವ ಕ್ಷಮತೆಯು ನಮ್ಮಲ್ಲಿ ಯಾರಿಗೂ ಇಲ್ಲ. ಸಾಧಕರಿಗೆ ವೈದ್ಯಕೀಯ ಶಾಸ್ತ್ರದಲ್ಲಿನ ಹೊಸ ಮಾಹಿತಿಯನ್ನು ಪಡೆಯಲು ಪ್ರೋತ್ಸಾಹ ನೀಡುವ ಪ್ರೇರಣಾಸ್ರೋತ ಮತ್ತು ಆಧಾರಸ್ತಂಭ ಕೇವಲ ಪರಾತ್ಪರ ಗುರು ಡಾ. ಆಠವಲೆಯವರೇ ಆಗಿರುವರು ! – ಶ್ರೀ. ನಿಮಿಷ ತ್ರಿಭುವನ ಮ್ಹಾತ್ರೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೮.೨೦೧೬)