೧. ಪರಾತ್ಪರ ಗುರುದೇವರಿಗೆ ಒಂದು ವೈಶಿಷ್ಟ್ಯಪೂರ್ಣ ರಂಗೋಲಿಯನ್ನು ತೋರಿಸಿದ ಬಳಿಕ ಅವರು ಜಿಜ್ಞಾಸೆಯಿಂದ ಆ ರಂಗೋಲಿಯನ್ನು ಸ್ವತಃ ಬಿಡಿಸಿ ನೋಡುವುದು.
‘೨೦೦೭ರಲ್ಲಿ ‘ಸಾತ್ತ್ವಿಕ ರಂಗೋಲಿಗಳು ಎಂಬ ಲಘುಗ್ರಂಥಕ್ಕಾಗಿ ನಾನು ‘ಗಾಯತ್ರೀ ಪದ್ಮ ರಂಗೋಲಿಯನ್ನು ಬಿಡಿಸಿದೆ ಹಾಗೂ ಪರಾತ್ಪರ ಗುರುದೇವರಿಗೆ ಈ ರಂಗೋಲಿಯ ವೈಶಿಷ್ಟ್ಯವನ್ನು ಹೇಳಿದೆ, “ಈ ರಂಗೋಲಿಯ ಮಧ್ಯದ ಬಿಂದುವಿನಿಂದ ೮ ದಿಕ್ಕುಗಳಲ್ಲಿ ೫ ಚುಕ್ಕೆಗಳಿದೆ, ಹಾಗೂ ಇದು ಬೇರೆ ರಂಗೋಲಿಗಳಿಗಿಂತ ಬೇರೆಯಾಗಿದೆ. ಈ ರಂಗೋಲಿ ಯಾವ ಚುಕ್ಕೆಯಿಂದ ಆರಂಭವಾತ್ತದೆಯೋ ಅಲ್ಲಿಂದ ಕೈ ತೆಗೆಯದೆ ಸಂಪೂರ್ಣ ರೇಷೆಯಾಗಿ ಮತ್ತೆ ಅದೇ ಚುಕ್ಕೆಗೆ ಬರುತ್ತದೆ. ಆಗ ಅವರು ಜಿಜ್ಞಾಸೆಯಿಂದ ಸ್ವತಃ ರಂಗೋಲಿ ಬಿಡಿಸಿ ನೋಡಿದರು. -ಕು. ಸಂಧ್ಯಾ ಮಾಳಿ, ಚಾಳೀಸ್‌ಗಾವ್, ಜಳಗಾವ್ ಜಿಲ್ಲೆ.
೧ ಅ. ಮೇಲಿನ ಪ್ರಸಂಗದ ವಿಷಯದಲ್ಲಿ ಸಾಧಕಿಗಾದ ವಿಚಾರ ಪ್ರಕ್ರಿಯೆ ಹಾಗೂ ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು
೧ ಅ ೧. ‘ಕಲಾವಿದರು ಜಿಜ್ಞಾಸೆಯಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಾಗ ಅವರಲ್ಲಿ ಕಲಿಯುವ ವೃತ್ತಿ, ಪ್ರಯೋಗಶೀಲತೆ ಹಾಗೂ ಜಿಗುಟುತನ ಈ ಗುಣಗಳ ಸಂಗ್ರಹವು ಕಾಣಿಸುತ್ತದೆ, ಎಂಬುದನ್ನು ಪರಾತ್ಪರ ಗುರುದೇವರು ತಮ್ಮ ಕೃತಿಯಿಂದ ಅಂತರ್ಮನಸ್ಸಿನಲ್ಲಿ ಬಿಂಬಿಸುವುದು : ‘ಪ್ರತಿಯೊಂದು ಕ್ಷೇತ್ರದಲ್ಲಿನ ತಜ್ಞರು, ಗಾಢ ಅಭ್ಯಾಸಕರು ಹಾಗೂ ಸಂಶೋಧಕರಲ್ಲಿರುವ ಮಹತ್ವವಾದ ಗುಣವೆಂದರೆ ಜಿಜ್ಞಾಸೆ. ಆದ್ದರಿಂದ ಅವರು ಒಂದೇ ಸ್ಥಳದಲ್ಲಿ ನಿಲ್ಲುವುದಿಲ್ಲ, ಸತತವಾಗಿ ಮುಂದೆ-ಮುಂದೆ ಹೋಗುತ್ತಿರುತ್ತಾರೆ. ಕಲಾವಿದರಲ್ಲಿ ಜಿಜ್ಞಾಸೆ ಇರುವುದು ಅತ್ಯಗತ್ಯ. ‘ಚಿತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವಾಗ ಕಲಾವಿದನು ಎಷ್ಟೋಬಾರಿ ಕಚ್ಚಾ ಚಿತ್ರಗಳನ್ನು ಬಿಡಿಸುತ್ತಾನೆ. ಆಗ ಅವನಲ್ಲಿನ ಕಲಿಯುವ ವೃತ್ತಿ, ಪ್ರಯೋಗಶೀಲತೆ ಹಾಗೂ ಜಿಗುಟುತನ ಈ ಗುಣಗಳ ಸಂಗ್ರಹವು ಕಾಣಿಸುತ್ತದೆ, ಎಂಬುದನ್ನು ಪರಾತ್ಪರ ಗುರುಗಳು ನಮಗೆ ತಮ್ಮ ಕೃತಿ ಯಿಂದ ಕಲಿಸಿಕೊಟ್ಟರು, ಅದೇ ರೀತಿ ‘ನಮ್ಮ ಅಂತರ್ಮನಸ್ಸಿನ ಮೇಲೆ ಅದನ್ನು ಬಿಂಬಿಸಲು ಅವರು ಕೃತಿ ಮಾಡಿ ತೋರಿಸಿದರು, ಎಂಬುದು ನಮ್ಮ ಗಮನಕ್ಕೆ ಬಂದಿತು.
೨. ಕಲಾವಿದರು ಸ್ವತಃ ತಮ್ಮ ವಿಶ್ವದಲ್ಲಿರದೆ ಅಹಂ-ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅಗತ್ಯವಾಗಿರುವುದು
ಪರಾತ್ಪರ ಗುರುಗಳು ಈ ಪ್ರಸಂಗದಿಂದ ನಮಗೆ ‘ಅಹಂ ಅಲ್ಪವಿರುವುದು, ಎಂಬ ಅಧ್ಯಾತ್ಮದಲ್ಲಿನ ಮಹತ್ವವಾದ ಅಂಶವನ್ನು ಕಲಿಸಿಕೊಟ್ಟರು. ಆದ್ದರಿಂದ ‘ಕಲಾವಿದರು ಸ್ವತಃ ತಮ್ಮ ವಿಶ್ವದಲ್ಲಿ ಮಾತ್ರವೇ ಇರುವುದು ಬೇಡ. ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕೃತಿ ಮಾಡುವುದು, ಬೇರೆಯವ ರೊಂದಿಗೆ ಸಾಮರಸ್ಯವಿರುವುದು, ಬೇರೆಯವರನ್ನು ಪ್ರಶಂಸಿಸುವುದು, ‘ನನಗೆ ಏನೂ ತಿಳಿಯುವುದಿಲ್ಲ ಮತ್ತು ನನಗೇನೂ ಬರುವುದಿಲ್ಲ, ಎಂದು ವಿಚಾರಪ್ರಕ್ರಿಯೆ ಇಡಬೇಕು, ಎಂಬುದನ್ನು ನಮ್ಮ ಮನಸ್ಸಿನಲ್ಲಿ ಬಿಂಬಿಸಿದರು. – ಕು. ಕುಶಾವಾರ್ತಾ ಹಾಗೂ ಕು. ಸಂಧ್ಯಾ ಮಾಳಿ, ಚಾಳೀಸಗಾವ್, ಜಳಗಾವ್ ಜಿಲ್ಲೆ.