ಆಪತ್ಕಾಲದಲ್ಲಿ ಜಾಗೃತಗೊಳಿಸುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರು ಕೆಲವು ವರ್ಷಗಳ ಹಿಂದೆ ಆಪತ್ಕಾಲದ ಬಗ್ಗೆ ತೆಗೆದ ಉದ್ಗಾರವು ಸತ್ಯವಾಗಿರುವ ಬಗ್ಗೆ ಬಂದ ಅನುಭವ !

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ಅನೇಕ ವರ್ಷಗಳಿಂದ, “ಮುಂದೆ ತೀವ್ರ ಆಪತ್ಕಾಲವು ಬರುವುದಿದೆ. ಅದನ್ನು ಎದುರಿಸಲು ಸಾಧನೆಯನ್ನು ಹೆಚ್ಚಿಸಿರಿ. ಮುಂದೆ ಶಾಲೆಯೂ ಇರುವುದಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗೆ ಇಂದಿನಿಂದಲೇ ಸಾಧನೆಯ ಸಂಸ್ಕಾರಗಳನ್ನು ನೀಡಿರಿ, ಎಂದು ಹೇಳುತ್ತಿದ್ದರು.

೧. ‘ಆನ್‌ಲೈನ್ ಶಾಲೆಗಳು ಹಾಗೂ ಅದರ ದುಷ್ಪರಿಣಾಮಗಳು !

ಪ್ರಸ್ತುತ ಉದ್ಭವಿಸಿದ ಕೊರೋನಾ ವೈರಾಣುಗಳ ಸೋಂಕಿನಿಂದ ದೇಶದೆಲ್ಲೆಡೆ ಶಾಲೆ-ಮಹಾವಿದ್ಯಾಲಯಗಳು ಮುಚ್ಚಿವೆ. ಕೆಲವು ಸ್ಥಳಗಳಲ್ಲಿ ‘ಆನ್‌ಲೈನ್ ಶಾಲೆಗಳು ಪ್ರಾರಂಭವಾಗಿವೆ. ‘ಆನ್‌ಲೈನ್ ಶಾಲೆಯ ನಿಮಿತ್ತದಿಂದ ಮಕ್ಕಳಿಗೆ ಸಂಚಾರವಾಣಿ ಮತ್ತು ಸಂಚಾರಿಗಣಕಯಂತ್ರಗಳು ಉಪಲಬ್ಧವಾಗಿವೆ. ಆ ಕುರಿತು ಮಕ್ಕಳಲ್ಲಿ ಅದರ ಉಪಯೋಗವೂ ಹೆಚ್ಚಳವಾಗಿದೆ. ಮಕ್ಕಳು ಸಂಚಾರವಾಣಿ, ಸಂಚಾರಿಗಣಕಯಂತ್ರ ಇವುಗಳ ಮೇಲೆ ತುಂಬಾ ಹೊತ್ತು ‘ಗೇಮ್ ಆಡುತ್ತಾರೆ ಅಥವಾ ಭೀಭತ್ಸ ‘ವಿಡಿಯೋ ನೋಡುತ್ತಾರೆ. ಕೆಲವು ಮಕ್ಕಳು ತಮ್ಮ ಪಾಲಕರ ‘ಎ.ಟಿ.ಎಮ್. ಕಾರ್ಡನ್ನು ಬಳಸಿ ಅರ್ಥಿಕ ವ್ಯವಹಾರವನ್ನು ಮಾಡುತ್ತಾರೆ. ಪಾಲಕರು ಮಕ್ಕಳ ಮೇಲೆ ಸಾಧನೆಯ ಸಂಸ್ಕಾರಗಳನ್ನು ಮಾಡದ ಕಾರಣ ಇಂದು ಈ ದಿನಗಳು ಬಂದಿದೆ.

೨. ಪ.ಪೂ. ಗುರುದೇವರು ಸಮಾಜವನ್ನು ಜಾಗೃತಗೊಳಿಸುವುದು

‘ಮುಂದೆ ಶಾಲೆಗಳು ಇರಲಾರವು. ತಮ್ಮ ಮಕ್ಕಳಲ್ಲಿ ಸಾಧನೆಯ ಸಂಸ್ಕಾರಗಳನ್ನು ಮಾಡಿರಿ, ಎಂದು ಪ.ಪೂ. ಗುರುದೇವರು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿದ್ದರು. ಅವರ ಈ ಉದ್ಗಾರವು ಇಂದು ಸತ್ಯವಾಗಿರುವುದು ಕಂಡುಬರುತ್ತಿದೆ. ಪ.ಪೂ. ಗುರುದೇವರಿಗೆ ‘ಮುಂದೆ ಏನು ಆಗುವುದಿದೆ ?, ಎಂಬುದು ಮೊದಲೇ ತಿಳಿದಿರುತ್ತದೆ. ಪ.ಪೂ. ಗುರುದೇವರು, ಸಾಮಾನ್ಯ ಜೀವಿಗಳ ಉದ್ಧಾರಕ್ಕಾಗಿ ಮತ್ತು ಅವರಿಗೆ ಸಾಧನೆಯ ಮಾರ್ಗದತ್ತ ಹೊರಳಿಸಲು ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಇಂತಹ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! – ಶ್ರೀ. ಸಿದ್ಧೇಶ ಕರಂದೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೭.೨೦೨೦)

ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆ !

‘ಕೆಲವು ಮಕ್ಕಳಿಗೆ ಸಾಧನೆಯ ಸೆಳೆತ ಇರುವುದರಿಂದ ಅವರು ಶಾಲೆಯ ಶಿಕ್ಷಣವನ್ನು ಬಿಟ್ಟು ಸಾಧನೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಾಗ ಮೊದಲು ನನಗೆ ಅದರ ಬಗ್ಗೆ ಕೆಟ್ಟದೆನಿಸಿತ್ತು. ಇಂದು ಆಪತ್ಕಾಲದಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳು ಮುಚ್ಚಿವೆ. ಆಗ ಪರಾತ್ಪರ ಗುರು ಡಾಕ್ಟರರು ‘ಮುಂದೆ ಕೇವಲ ಸಾಧನೆಯೇ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದ್ದರು. ಆಗ ಮಕ್ಕಳ ನಿರ್ಧಾರವು ಯೋಗ್ಯವಾಗಿತ್ತು ಎಂಬುದು ಈಗ ನನ್ನ ಗಮನಕ್ಕೆ ಬರುತ್ತದೆ. ಗುರುದೇವರೇ, ಈ ಮೂರ್ಖ ಮತ್ತು ಅಜ್ಞಾನಿ ಜೀವವನ್ನು ಕ್ಷಮಿಸಿರಿ. – ಶ್ರೀಮತಿ ಶರ್ಮಿಲಾ ಪಳಣೀಟಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೭.೨೦೨೦)