ಚಿಕ್ಕ ವಯಸ್ಸಿನಲ್ಲಿಯೇ ಪರೇಚ್ಛೆಯಂತೆ ವರ್ತಿಸುವ ಮತ್ತು ಸಾತ್ತ್ವಿಕತೆಯ ಸೆಳೆತವಿರುವ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಭಾಗ್ಯನಗರದ (ತೆಲಂಗಾಣ) ಚಿ. ಬಲರಾಮ ಪ್ರಸನ್ನ ವೆಂಕಟಾಪುರ (೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ಮುನ್ನಡೆಸುವ ಪೀಳಿಗೆ ! ಈ ಪೀಳಿಗೆಯಲ್ಲಿ ಚಿ. ಬಲರಾಮ ಪ್ರಸನ್ನ ವೆಂಕಟಾಪುರ ಒಬ್ಬನಾಗಿದ್ದಾನೆ !

ಆಶ್ವಯುಜ ಶುಕ್ಲ ಪಕ್ಷ ನವಮಿ (೨೫.೧೦.೨೦೨೦) ರಂದು ಚಿ. ಬಲರಾಮ ವೆಂಕಟಾಪುರ ಇವನ ಹುಟ್ಟುಹಬ್ಬವಿತ್ತು. ಆ ನಿಮಿತ್ತ ಅವನ ಕುಟುಂಬದವರ ಗಮನಕ್ಕೆ ಬಂದಂತಹ ಅವನ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

ಚಿ. ಬಲರಾಮ ವೆಂಕಟಾಪುರ

(‘೨೦೧೯ ನೇ ವರ್ಷದಲ್ಲಿ ಚಿ. ಬಲರಾಮ ಪ್ರಸನ್ನ ವೆಂಕಟಾಪುರ ಇವರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟು ಇತ್ತು. – ಸಂಕಲನಕಾರರು)

೧. ‘ಚಿ. ಬಲರಾಮನು ಈಗ ತನ್ನ ವೈಯುಕ್ತಿಕಗಳನ್ನು ತಾನೇ ಮಾಡಲು ಪ್ರಯತ್ನಿಸುತ್ತಾನೆ.

೨. ಬಲರಾಮನಿಗೆ ತೆಲುಗು, ಕನ್ನಡ ಮತ್ತು ಸಂಸ್ಕೃತ  ಈ ಭಾಷೆಗಳು ಬರುತ್ತವೆ.

೩. ಸಹನಶೀಲತೆ

ಅವನಿಗೆ ಲಸಿಕೆ ಚುಚ್ಚುವಾಗ ಅಥವಾ ಅವನಿಗೆ ಜ್ವರ ಬಂದಾಗ ಅವನು ಬಹಳ ಅಳುವುದಿಲ್ಲ. ಒಮ್ಮೆ ಅವನಿಗೆ ಎರಡೂ ಕಾಲುಗಳ ಮೇಲೆ ‘ಇಂಜೆಕ್ಷನ್ ನೀಡಿದ್ದರು. ಆಗ ಅವನಿಗೆ ನಡೆಯಲು ಬರುತ್ತಿರಲಿಲ್ಲ. ಆ ಸಮಯದಲ್ಲಿಯೂ ಅವನು ಶಾಂತನಾಗಿದ್ದನು.

೪. ವಾದ್ಯಗಳನ್ನು ನುಡಿಸಲು ಇಷ್ಟವಾಗುವುದು

ಬಲರಾಮನಿಗೆ ತಬಲಾ ಬಾರಿಸಲು ಬಹಳ ಇಷ್ಟವಾಗು ತ್ತದೆ. ಅವನು ಬಕೇಟನ್ನು ಅಥವಾ ಭರಣಿಯನ್ನು ಮಗುಚಿ ಹಾಕಿ, ಅದರ ಮೇಲೆ ಕೈಯಿಂದ ಅಥವಾ ಚಮಚದಿಂದ ತಾಳ ಕುಟ್ಟುತ್ತಾನೆ. ಆ ಸಮಯದಲ್ಲಿ ಅವನು ಕೆಲವೊಮ್ಮೆ ಮನೆಯಲ್ಲಿರುವ ಯಾರಿಗಾದರೂ ತಾಳ ಕುಟ್ಟಲು ಅಥವಾ ಭಜನೆ ಹೇಳಲು ವಿನಂತಿಸುತ್ತಾನೆ. ಅವನು ವಿವಿಧ ವಾದ್ಯ ಗಳನ್ನು ಉದಾ, ‘ಕೊಳಲು, ಸಂತೂರ, ವೀಣೆ ಇತ್ಯಾದಿಗಳನ್ನು ಹೇಗೆ ಬಾರಿಸುತ್ತಾರೆ ? ಎಂದು ತೋರಿಸುತ್ತಾನೆ.

೫. ಸಮಂಜಸತೆ

ಅ. ನನಗೆ ದಡಾರ ಬಂದಾಗ ನಾನು ಅವನಿಗೆ ‘ನನ್ನ ಹತ್ತಿರ ಬರಬೇಡ, ಎಂದು ಹೇಳಿದ್ದೆನು. ಆಗ ಅವನು ನನ್ನ ಹತ್ತಿರ ಬರಲು ಹಠ ಮಾಡಲಿಲ್ಲ.

ಆ. ಅವನ ತಂದೆಯವರು ಕಚೇರಿಯ ಕೆಲಸ ಮಾಡುತ್ತಿರುವಾಗ ಅವನು ಅವರಿಗೆ ತೊಂದರೆ ಕೊಡುವುದಿಲ್ಲ.

ಇ. ನನಗೆ ಸತ್ಸಂಗ ಅಥವಾ ಸೇವೆಯಿದ್ದರೆ, ಆಗಲೂ ಅವನು ನನಗೆ ಸ್ವಲ್ಪವೂ ತೊಂದರೆ ಕೊಡುವುದಿಲ್ಲ. ಒಮ್ಮೆ ನನಗೆ ಒಂದು ಸೇವೆಯನ್ನು ಸಂಚಾರವಾಣಿಯ ಮುಖಾಂತರ ಮಾಡುವುದಿತ್ತು. ಆಗ ಬಲರಾಮ ನನ್ನ ಪಕ್ಕದಲ್ಲಿಯೇ ನನ್ನ ಸೇವೆ ಪೂರ್ಣ ಗೊಳ್ಳುವವರೆಗೆ ಶಾಂತವಾಗಿ ಕುಳಿತಿದ್ದನು.

ಈ. ಅವನು ಬಾಗಿಲಿನ ಮುಂದೆ ಬಿಡಿಸಿರುವ ರಂಗೋಲಿಗೆ ‘ತನ್ನ ಕಾಲು ತಗಲದಂತೆ ಎಚ್ಚರಿಕೆಯಿಂದ ನಡೆಯುತ್ತಾನೆ.

೬. ಪ್ರೇಮಭಾವ

ಅ. ಯಾರಾದರೂ ಅಳುತ್ತಿದ್ದರೆ, ಅವನು ಅವನನ್ನು ನಗಿಸಲು ಮತ್ತು ಸಂತೋಷಗೊಳಿಸಲು ಪ್ರಯತ್ನಿಸುತ್ತಾನೆ.

ಆ. ಮನೆಯ ಹೊರಗೆ ತುಳಸಿ ಇತ್ಯಾದಿ ಗಿಡಗಳಿವೆ. ಬಲರಾಮ ಅವುಗಳಿಗೆ ತಾನೇ ನೀರು ಹಾಕುತ್ತಾನೆ. ಕೊರೋನಾದ ಕಾಲದಲ್ಲಿ ನಮ್ಮ ನೆರೆ ಮನೆಯವರು ಊರಿಗೆ ಹೋಗಿದ್ದರು. ಅವರ ಮನೆಯ ಹೊರಗಿನ ತುಳಸಿ ಗಿಡ ಒಣಗಿ ಹೋಗಿತ್ತು, ಆದರೂ ಬಲರಾಮ ಪ್ರತಿದಿನ ಆ ತುಳಸಿಗೂ ನೀರು ಹಾಕುತ್ತಿದ್ದನು. ಈಗ ಆ ತುಳಸಿ ಚೆನ್ನಾಗಿ ಚಿಗುರಿದೆ.

೭. ಆಸಕ್ತಿರಹಿತ ಮತ್ತು ಪರೇಚ್ಛೆಯಿಂದ ವರ್ತಿಸುವುದು

ಅ. ನಾವು ಮೊದಲ ಬಾರಿಗೆ ಬಲರಾಮನಿಗಾಗಿ ಸೈಕಲ್ ತೆಗೆದುಕೊಂಡು ಬಂದಿದ್ದೆವು. ಆಗ ಅವನು ಕೇವಲ ಸ್ವಲ್ಪ ಸಮಯ ಆ ಸೈಕಲ್‌ನಲ್ಲಿ ಆಡಿದನು. ಬಳಿಕ ಅವನು ಅದರಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ನಾವು ಅವನನ್ನು ಸೈಕಲ್ ಮೇಲೆ ಕುಳ್ಳಿರಿಸಿದಾಗ  ಮಾತ್ರ ಅವನು ಸೈಕಲ್ ಓಡಿಸುತ್ತಾನೆ.

ಆ. ಬಲರಾಮನಿಗೆ ಹೊಸ ಬಟ್ಟೆ ಖರೀದಿಸಲು ನಾವು ಅವನನ್ನು ಅಂಗಡಿಗೆ ಕರೆದುಕೊಂಡು ಹೋಗುತ್ತೇವೆ. ಆ ಸಮಯದಲ್ಲಿ ಅವನಿಗೆ ಅದರಲ್ಲಿಯೂ ಆಸಕ್ತಿಯಿರುವುದಿಲ್ಲ. ಕೇವಲ ತಂದೆ-ತಾಯಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಅವನು ಬರುತ್ತಾನೆ. ಅವನು ಅಂಗಡಿಯಿಂದ ಬೇಗನೆ ಹೊರಗೆ ಬರುವಂತೆ ಹೇಳುತ್ತಾನೆ. ‘ಅವನು ಪರೇಚ್ಛೆಯಿಂದ ವರ್ತಿಸುತ್ತಾನೆ, ಎಂದು ನನಗೆ ಅನಿಸುತ್ತದೆ.

ಇ. ಅವನ ಹೊಸ ಆಟಿಗೆ ಅಥವಾ ವಸ್ತುಗಳನ್ನು ಯಾರಾದರೂ ತೆಗೆದುಕೊಂಡರೆ ಅಥವಾ ‘ತೆಗೆದುಕೊಂಡು ಹೋಗುತ್ತೇನೆ, ಎಂದು ಯಾರಾದರೂ ಹೇಳಿದರೂ ಅವನು ಶಾಂತವಾಗಿರುತ್ತಾನೆ.

ಈ. ಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಾವು ಬಲರಾಮನಿಗೆ ಶ್ರೀಕೃಷ್ಣನ ವೇಷಭೂಷಣವನ್ನು ಮಾಡುತ್ತಿದ್ದೆವು. ಆಗ ಅವನಿಗೆ ಆ ಬಟ್ಟೆ ಅಥವಾ ಅಲಂಕಾರದ ವಿಷಯದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ; ಆದರೆ  ಅವನು ಪರೇಚ್ಛೆಯೆಂದು ನಮಗೆ ಹೇಗೆ ಬೇಕೋ, ಹಾಗೆ ಬಟ್ಟೆ ಮತ್ತು ಅಲಂಕಾರವನ್ನು ಹಾಕಿಕೊಂಡನು.

೮. ಬಲರಾಮನು ಯಾರಿಗಾದರೂ ಹೊಡೆದರೆ ಅಥವಾ ಅವನಿಂದ ಏನಾದರೂ ತಪ್ಪಾದರೆ, ಅವನು ತಾನಾಗಿಯೇ ಮನೆಗೆ ಬಂದು ತನ್ನ ತಪ್ಪನ್ನು ಹೇಳುತ್ತಾನೆ ಮತ್ತು ಕ್ಷಮೆ ಕೇಳುತ್ತಾನೆ.

೯. ಸಾತ್ತ್ವಿಕತೆಯ ಸೆಳೆತ

ಅ. ಅವನು ಸ್ನಾನ ಮಾಡುವ ಮೊದಲು ಶ್ಲೋಕವನ್ನು ಹೇಳುತ್ತಾನೆ ಮತ್ತು ಸ್ನಾನವಾದ ಬಳಿಕ ತಿಲಕವನ್ನು ಹಚ್ಚಲು ಹೇಳುತ್ತಾನೆ.

ಆ. ಬಲರಾಮನಿಗೆ ‘ಜೀನ್ಸ್ ಬಟ್ಟೆ ಧರಿಸಲು ಇಷ್ಟವಾಗುವುದಿಲ್ಲ. ಅವನು ಸಾತ್ತ್ವಿಕ ಬಣ್ಣಗಳ, ಉದಾ. ನೀಲಿ ಅಥವಾ ಹಳದಿ ಬಣ್ಣಗಳ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾನೆ.

ಇ. ಅವನಿಗೆ ದೂರದರ್ಶನದಲ್ಲಿ ವಿಷ್ಣುಪುರಾಣ, ರಾಮಾಯಣ (ಕೇವಲ ರಾಮಾನಂದ ಸಾಗರ ನಿರ್ಮಾಣದ), ಮಹಾಭಾರತ ಇತ್ಯಾದಿ ಮಾಲಿಕೆ ನೋಡಲು ಇಷ್ಟವಾಗುತ್ತದೆ. ಒಮ್ಮೆ ಅವನು  ನಿದ್ದೆಯಲ್ಲಿರುವಾಗ ಅವನಿಗೆ ‘ರಾಮಾಯಣ ಪ್ರಾರಂಭವಾಗುತ್ತಿದೆ. ನೋಡುವಿಯಾ?, ಎಂದು ಕೇಳಿದಾಗ ಅವನು ತಕ್ಷಣವೇ ಎದ್ದನು.

ಈ. ಅವನು ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಅಥವಾ ಇತರ ಸಾತ್ತ್ವಿಕ ಭಜನೆಗಳನ್ನು ಹಾಕಲು ಹೇಳುತ್ತಾನೆ.

ಉ. ಅವನಿಗೆ ವಾಸ್ತುಶುದ್ಧಿ ಮಾಡಲು ಇಷ್ಟವಾಗುತ್ತದೆ. ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಶ್ಲೋಕವನ್ನು ಹೇಳುತ್ತ ಅವನು ನೀರು ಸಿಂಪಡಿಸುತ್ತಾನೆ.

ಊ. ಸಾಯಂಕಾಲ ಅವನ ಅಜ್ಜಿ ದೀಪ ಹಚ್ಚಿದಾಗ ಅವನು ತಕ್ಷಣವೇ ಸಾಷ್ಟಾಂಗ ನಮಸ್ಕಾರ ಹಾಕಿ ‘ಶುಭಂ ಕರೋತಿ ! ಹೇಳುತ್ತಾನೆ.

ಎ. ಬಲರಾಮನಿಗೆ ಸಂಸ್ಕೃತ ಭಾಷೆಯು ವಿಶೇಷವಾಗಿ ಇಷ್ಟ ವಾಗುತ್ತದೆ. ದೂರದರ್ಶನದಲ್ಲಿ ಸಂಸ್ಕೃತ ಶಿಕ್ಷಣವಿರುತ್ತದೆ, ಅದನ್ನು ಅವನು ಹಾಕಲು ಹೇಳುತ್ತಾನೆ. ಇಲ್ಲಿಯವರೆಗೆ ಅವನು ಎಷ್ಟು ಸಂಸ್ಕೃತ ಶಬ್ದಗಳನ್ನು ಕಲಿತಿದ್ದಾನೆಯೋ, ಅದನ್ನು ಅವನು ಮಧ್ಯ ಮಧ್ಯದಲ್ಲಿ ಉಚ್ಚರಿಸುತ್ತಾನೆ. ಆಟ ಆಡುವಾಗ, ಊಟ ಮಾಡುವಾಗ ಮತ್ತು ಇತರ ಸಮಯದಲ್ಲಿಯೂ ಅವನು ಸಂಸ್ಕೃತ ವಾಕ್ಯವನ್ನು ಹೇಳುತ್ತಾನೆ.

ಏ. ಯಾವುದೇ ಉತ್ಸವ, ಗುರುಪೂರ್ಣಿಮೆ ಅಥವಾ ಗುರುದೇವರ ಜನ್ಮೋತ್ಸವದ ಕಾರ್ಯಕ್ರಮದ ಸಮಯದಲ್ಲಿ ಬಲರಾಮನು ಶಾಂತವಾಗಿ ಕುಳಿತುಕೊಂಡು ಸಂಪೂರ್ಣ ಕಾರ್ಯಕ್ರಮವನ್ನು ನೋಡುತ್ತಾನೆ ಯಾವುದೇ ಸಾತ್ತ್ವಿಕ ಕಾರ್ಯಕ್ರಮವಿದ್ದರೂ, ಅವನು ಏಕಾಗ್ರಚಿತ್ತದಿಂದ ಮತ್ತು ಅಂತರ್ಮುಖನಾಗಿ ಅದರ ಆನಂದವನ್ನು ಸವಿಯುತ್ತಾನೆ. ಆ ಸಮಯದಲ್ಲಿ ಅವನು ಯಾರೊಂದಿಗೂ ಮಾತನಾಡುವುದಿಲ್ಲ ಮತ್ತು ಆಟವಾಡುವುದಿಲ್ಲ.

೧೦. ದೇವರ ಬಗ್ಗೆ ಸೆಳೆತ

ಅ. ನನ್ನ ತಂದೆ(ಬಲರಾಮನ ಅಜ್ಜ) ದಿನದಲ್ಲಿ ೨ ಸಲ ಪೂಜೆ ಮಾಡುತ್ತಾರೆ. ಆರತಿಯ ಸಮಯದಲ್ಲಿ ಬಲರಾಮ ಎಲ್ಲಿಯೇ ಇದ್ದರೂ, ಅವನು ಅಲ್ಲಿಂದ ತಕ್ಷಣವೇ ಆರತಿಗಾಗಿ ಹೋಗುತ್ತಾನೆ. ಯುಗಾದಿಗೆ ಬ್ರಹ್ಮಧ್ವಜ ನಿಲ್ಲಿಸಿದಾಗ ಮತ್ತು ಶ್ರೀ ಗಣೇಶಚತುರ್ಥಿಗೆ ಶ್ರೀ ಗಣೇಶಮೂರ್ತಿಗೆ ಅವನು ಹೂವುಗಳನ್ನು ಮತ್ತು ಅಕ್ಷತೆಯನ್ನು ಅರ್ಪಿಸಿ ಪೂಜೆಯನ್ನು ಮಾಡಿದನು.

ಆ. ದೂರದರ್ಶನದ ವಿಷ್ಣು ಪುರಾಣವನ್ನು ನೋಡಿ ಅವನು ‘ಓಂ ನಮೋ ಭಗವತೇ ವಾಸುದೇವಾಯ |  ಹಾಗೆಯೇ ನಾರದ ಪುರಾಣವನ್ನು ನೋಡಿ ‘ನಾರಾಯಣ, ನಾರಾಯಣ, ಹೀಗೆ ನಾಮಜಪವನ್ನು ಮಾಡುತ್ತಾನೆ.

ಇ. ಅವನು ಮಧ್ಯಮಧ್ಯದಲ್ಲಿ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಸ್ಮರಿಸುತ್ತಾನೆ.

– ಸೌ. ತೇಜಸ್ವಿ ವೆಂಕಟಾಪುರ(ತಾಯಿ), ಭಾಗ್ಯನಗರ, ತೇಲಂಗಾಣ.

೧೨. ಶ್ರೀ ಗುರುಗಳ ಚರಣಗಳಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ !

‘ಹೇ ಗುರುದೇವಾ, ನೀವು ಬಲರಾಮನಂತಹ ದೈವೀ ಬಾಲಕನನ್ನು ನಮಗೆ ಪ್ರಸಾದರೂಪದಲ್ಲಿ ನೀಡಿದ್ದೀರಿ ಮತ್ತು ಅವನ ಸೇವೆಯ ಮಾಧ್ಯಮದಿಂದ ನಮ್ಮನ್ನು ಆನಂದದಲ್ಲಿ ಇಟ್ಟಿದ್ದೀರಿ. ನಮ್ಮಿಂದ ಅವನ ಸೇವೆಯನ್ನು ಮಾಡುವಾಗ ತಿಳಿದೋ-ತಿಳಿಯದೆಯೋ ಏನಾದರೂ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕಾಗಿ ನೀವು ನಮ್ಮನ್ನು ಕ್ಷಮಿಸಬೇಕು. ‘ಸಂಸಾರ ಮತ್ತು ವ್ಯವಹಾರಗಳಲ್ಲಿ ಸಿಲುಕಿರುವ ನಮ್ಮ ಜೀವನಕ್ಕೆ ನೀವೇ ಸಾಧನೆಯ ಒಂದು ಹೊಸ ಮಾರ್ಗವನ್ನು ನೀಡಿದ್ದೀರಿ ಮತ್ತು ಸಾಧನೆಯ ಹೊಸ ಮಗ್ಗಲನ್ನು ಕಲಿಸಿದ್ದೀರಿ, ಇದಕ್ಕಾಗಿ ನಾವು ನಿಮ್ಮ ಶ್ರೀ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತೇವೆ.  – ಶ್ರೀ. ಪ್ರಸನ್ನ ಮತ್ತು ಸೌ. ತೇಜಸ್ವಿ ವೆಂಕಟಾಪುರ (ತಂದೆ-ತಾಯಿ), ಭಾಗ್ಯನಗರ, ತೆಲಂಗಾಣ (೯.೯.೨೦೨೦)