ಸಾಧನೆ ಕಲಿಸಿ ಸಾಧಕರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುವ ಮತ್ತು ಸಂತರನ್ನು ತಯಾರಿಸುವ ಸನಾತನ ಸಂಸ್ಥೆ
ಸಾಧಕರೇ, ಭೀಕರ ಆಪತ್ಕಾಲ ನಮ್ಮೆದುರು ಇರುವಾಗ ‘ವಾಟ್ಸ್‌ಆಪ್ನಲ್ಲಿ ಗುಂಪು ಮಾಡಿ ಸಂದೇಶವನ್ನು ನೋಡಲು ಸಮಯ ವ್ಯರ್ಥ ಮಾಡಬೇಡಿ ! ಇಂತಹ ಎಲ್ಲ ಅನಾವಶ್ಯಕ ಗುಂಪುಗಳಿಂದ ಬೇಗನೆ ಹೊರಬಂದು ಸಂಧಿಕಾಲದ ಅಮೂಲ್ಯ ಕ್ಷಣಗಳನ್ನು ನಮ್ಮ ಸಾಧನೆಗಾಗಿ ಉಪಯೋಗಿಸಿರಿ ! – (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ (೧೯.೪.೨೦೨೦)
ಸದ್ಯ ಮನುಷ್ಯನು ‘ವಾಟ್ಸ್‌ಆಪ್’, ‘ಫೇಸ್‌ಬುಕ್’, ‘ಟ್ವಿಟರ್’, ‘ಟೆಲಿಗ್ರಾಮ್’, ‘ಇನ್ಸ್‌ಟಾಗ್ರಾಮ್’ ಮುಂತಾದ ಸಾಮಾಜಿಕ ಮಾಧ್ಯಮಗಳ ಗುಲಾಮನಾಗುತ್ತಿದ್ದಾನೆ. ಇವುಗಳ ಮೂಲಕ ಅವನು ತನ್ನ ಜೀವನದ ಅಮೂಲ್ಯ ಸಮಯವನ್ನು ಅನಾವಶ್ಯಕ ಮತ್ತು ನಿರರ್ಥಕ ವಿಷಯಗಳನ್ನು ನೋಡುವುದರಲ್ಲಿ ಅಥವಾ ಓದುವುದರಲ್ಲಿ ವ್ಯರ್ಥ ಮಾಡುತ್ತಿದ್ದಾನೆ.
೧. ‘ವಾಟ್ಸ್‌ಆಪ್’ನ ಸಂದೇಶಗಳನ್ನು ಸತತವಾಗಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳು
೧ ಅ. ಬೇರೆ ಬೇರೆ ಗುಂಪುಗಳನ್ನು ಮಾಡುವುದು : ‘ವಾಟ್ಸ್‌ಆಪ್’ನಲ್ಲಿ ಸಾಮಾನ್ಯವಾಗಿ ಕೆಳಗೆ ನೀಡಿದ ಸಂಬಂಧಿಕರ ಗುಂಪುಗಳನ್ನು ಮಾಡಲಾಗುತ್ತದೆ. ಇವುಗಳಲ್ಲಿ ಮುಂದಿನಂತಹ ಗುಂಪುಗಳು ಇರುತ್ತವೆ.
೧. ಕುಟುಂಬದವರ ಗುಂಪು (ತವರು ಮನೆ, ಅತ್ತೆ ಮನೆ, ಅಣ್ಣತಮ್ಮಂದಿರು ಇತ್ಯಾದಿ.)
೨ ಶಾಲೆಯ ಗೆಳೆಯ-ಗೆಳತಿಯರ ಒಂದು ಗುಂಪು
೩. ಕಾಲೇಜ್‌ನ ಗೆಳೆಯ-ಗೆಳತಿಯರ ಒಂದು ಬೇರೆ ಗುಂಪು
೪. ಕಾರ್ಯಾಲಯದಲ್ಲಿನ ಗೆಳೆಯ-ಗೆಳತಿಯರ ಇನ್ನೊಂದು ಗುಂಪು
೫. ಸಹಚರರ ಗುಂಪು
೬. ಗೃಹನಿರ್ಮಾಣ ಸಂಕಿರಣದಲ್ಲಿ ವಾಸಿಸುವವರ ಒಂದು ಗುಂಪು
೭. ಎಲ್ಲಿಯಾದರೂ ವಿಹಾರಕ್ಕೆ ಹೋದಾಗ ಅಲ್ಲಿ ಗೆಳೆತನವಾದವರ ಒಂದು ಗುಂಪು
೮. ಇಷ್ಟವಾದ ವಿಷಯಗಳೊಂದಿಗೆ ಸಂಬಂಧಿಸಿದ ವ್ಯಕ್ತಿಗಳ, ಉದಾ. ಆಧುನಿಕ ವೈದ್ಯರು, ವಿವಿಧ ವಿಷಯಗಳ ಕಲಾವಿದರು, ವಿತರಕರು, ಒಂದು ಊರಿನ ಜನರ ಒಂದು ಗುಂಪು, ಇತ್ಯಾದಿ. ಹೀಗೆ ಅನೇಕ ಗುಂಪುಗಳನ್ನು ಮಾಡಲಾಗುತ್ತದೆ. ಈ ಪ್ರತಿಯೊಂದು ಗುಂಪಿನಲ್ಲಿ ಸುಮಾರು ೧೦ ರಿಂದ ೧೦೦ ಅಥವಾ ಅದಕ್ಕಿಂತಲೂ ಹೆಚ್ಚು ಜನರ ಸಹಭಾಗವಿರುತ್ತದೆ.
ಪ್ರತಿಯೊಂದು ಗುಂಪಿನಲ್ಲಿ ಯಾರಾದರೂ ಯಾವುದಾದರೊಂದು ಸಂದೇಶವನ್ನು ಕಳುಹಿಸುತ್ತಲೇ ಇರುತ್ತಾರೆ. ನೋಡುವವರಿಗೂ ಇದರ ಅಭ್ಯಾಸವಾಗಿರುತ್ತದೆ. ಅವರೂ ಸ್ವಲ್ಪ ಸ್ವಲ್ಪ ಸಮಯದ ನಂತರ ‘ಯಾವುದಾದರೂ ಸಂದೇಶ ಬಂದಿದೆಯೇ ?’, ಎಂದು ನೋಡುತ್ತಿರುತ್ತಾರೆ.
೧ ಆ. ಗುಂಪುಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವುದು : ಅನೇಕ ಜನರು ಸಮಯವನ್ನು ಕಳೆಯಲು ಈ ಗುಂಪುಗಳಲ್ಲಿ ‘ಸುಪ್ರಭಾತ’, ‘ಶುಭ ರಾತ್ರಿ’, ‘ಶುಭ ಸೋಮವಾರ’.., ‘ಚತುರ್ಥಿಯ ಅಥವಾ ಏಕಾದಶಿಯ ಶುಭಾಶಯಗಳು’, ‘ವಿವಿಧ ರೀತಿಯ ಸುವಚನಗಳು’, ‘ವಿವಿಧ ವಿಷಯಗಳ ಕುರಿತು ಹಾಸ್ಯಚಟಾಕಿ’, ‘ಕವಿತೆಗಳು’, ‘ಭಾಷಣಗಳು, ‘ಅನೇಕ ವಿಷಯಗಳ ಚಲನಚಿತ್ರಗಳು’, ‘ವಿವಿಧ ಕಾರ್ಯಕ್ರಮಗಳ ಛಾಯಾಚಿತ್ರಗಳು’, ಮುಂತಾದವುಗಳನ್ನು ದಿನವಿಡಿ ಕಳುಹಿಸುತ್ತಿರುತ್ತಾರೆ. ‘ಹೊಸ-ಹಳೆಯ ಹಾಡುಗಳು’ ಮತ್ತು ಅನೇಕ ‘ರೀತಿಯ ಒಳ್ಳೆಯ-ಕೆಟ್ಟ ಛಾಯಾಚಿತ್ರಗಳು’, ಇವುಗಳ ಸತತ ಕೊಡು-ಕೊಳ್ಳುವಿಕೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಸದ್ಯದಲ್ಲಿ ಇನ್ನೊಂದು ದೊಡ್ಡ ಹುಚ್ಚೆಂದರೆ ‘ತಾವೇ ತೆಗೆದ ತಮ್ಮ ಛಾಯಾಚಿತ್ರಗಳನ್ನು (ಸೆಲ್ಫಿ)’ ಸತತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ‘ಪೋಸ್ಟ್’ ಮಾಡುವುದು.
(‘ಇಂತಹ ಪೋಸ್ಟ್‌ನಿಂದ ಅನೇಕ ಹೆಣ್ಣು ಮಕ್ಕಳ ಛಾಯಾಚಿತ್ರಗಳನ್ನು ದುರುಪಯೋಗಿಸಿ ಅವರೊಂದಿಗೆ ಗೆಳೆತನ ಬೆಳೆಸಿ, ಅವರನ್ನು ಮೋಸಗೊಳಿಸಿದ ಅನೇಕ ಘಟನೆಗಳು ಪ್ರತಿದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.’ – ಸಂಕಲನಕಾರರು)
೧ ಇ. ಗುಂಪಿನಲ್ಲಿ ಸಹಭಾಗಿ ಇರುವುದರ ಬಗ್ಗೆ ಪೈಪೋಟಿ ಇರುವುದು : ಅನೇಕರಲ್ಲಿ ‘ತಮ್ಮ ಸಂದೇಶವು ಆದಷ್ಟು ಬೇಗನೆ ಮುಂದೆ ಹೋಗಬೇಕು’, ಎಂಬ ಪೈಪೋಟಿ ಇರುತ್ತದೆ. ಬಹಳಷ್ಟು ಜನರು ನಿರಂತರವಾಗಿ ‘ಆನ್‌ಲೈನ್’ನಲ್ಲಿರುತ್ತಾರೆ. ನೀವು ಸಂದೇಶವನ್ನು ಕಳುಹಿಸಿದ ತಕ್ಷಣ, ಎದುರಿನ ವ್ಯಕ್ತಿಯು ನಿಮ್ಮ ಸಂದೇಶದ ದಾರಿಯನ್ನೇ ಕಾಯುತ್ತಿರುವಂತೆ ಅವರು ನೋಡಿದ ಬಗ್ಗೆ ನೀಲಿ ಗುರುತು ಕಾಣಿಸುತ್ತದೆ.
೨. ಸಾಮಾಜಿಕ ಮಧ್ಯಮಗಳ ಅನವಶ್ಯಕ ಬಳಕೆ, ಎಂದರೆ ಒಂದು ಭಯಾನಕ ಅಭ್ಯಾಸವೇ ಆಗಿದೆ !
ಸಾರಾಯಿ ಅಥವಾ ಇತರ ಚಟಗಳು(ವ್ಯಸನಗಳು) ಹೇಗಿರುತ್ತವೆಯೋ, ಹಾಗೆಯೇ ಇದೂ ಒಂದು ಚಟವೇ ಆಗಿದೆ. ಚಿಕ್ಕ ಮಕ್ಕಳು ಹಾಗೂ ದೊಡ್ಡವರೂ ಈ ಚಟದ ಗುಲಾಮರಾಗುತ್ತಿದ್ದಾರೆ. ಮನೆಯ ವ್ಯಕ್ತಿಗಳಲ್ಲಿ ಪರಸ್ಪರರಲ್ಲಿನ ಸಂವಾದವು ಕಡಿಮೆಯಾಗುತ್ತಿದೆ. ಇದರಿಂದ ಪತಿ-ಪತ್ನಿಯರಲ್ಲಿ ಜಗಳಗಳಾಗುವುದು ಹಾಗೂ ಕೆಲವು ಕಡೆಗಳಲ್ಲಿ ವಿವಾಹ ವಿಚ್ಛೇದನಗಳೂ ಆಗುತ್ತಿವೆ. ಈ ಚಟ ಇಷ್ಟು ಭಯಂಕರ ರೂಪವನ್ನು ತಾಳಿದೆ.
ಇದರಿಂದ ಎಲ್ಲೆಡೆಯಲ್ಲಿ ಪ್ರಚಂಡ ಮನುಷ್ಯಬಲ ವ್ಯರ್ಥವಾಗುತ್ತಿದೆ. ಅದರೊಂದಿಗೆ ಸಮಾಜದ ಅಧೋಗತಿಯಾಗುತ್ತಿದೆ. ಈ ಮೋಹ-ಮಾಯಾಜಾಲದಲ್ಲಿ ಸಿಲುಕಿ ಸಮಾಜಕ್ಕೆ ‘ಯಾವುದನ್ನು ನೋಡಬಾರದೋ ಅವುಗಳನ್ನು ನೋಡುವ ಇಚ್ಛೆಯಾಗುತ್ತಿದೆ. ‘ದ್ರಷ್ಟಾ ದೃಶ್ಯವಶಾತ್ ಬದ್ಧಃ |’ ಈ ಉಕ್ತಿಗನುಸಾರ ಕೈಯಲ್ಲಿ ಬಂದಿರುವ ಸಂಚಾರವಾಣಿಯ ಉಪಯೋಗ ಲಾಭದಾಯಕವಾಗುವುದಕ್ಕಿಂತ ಹಾನಿಕರವಾಗುತ್ತಿದೆ.
೩. ಸಾಮಾಜಿಕ ಪ್ರಸಾರಮಾಧ್ಯಮಗಳ ಅನಾವಶ್ಯಕ ಬಳಕೆಯಿಂದ ಮನುಷ್ಯನ ಮೇಲಾಗುವ ಗಂಭೀರ ಪರಿಣಾಮಗಳು
ಅ. ಸತತವಾಗಿ ಸಂಚಾರವಾಣಿಯನ್ನು ಬಳಸುವುದರಿಂದ ಮನುಷ್ಯನಿಗೆ ತಲೆನೋವು, ಕುತ್ತಿಗೆ ಮತ್ತು ಕಣ್ಣುಗಳ ಕಾಯಿಲೆ ಇತ್ಯಾದಿ ಶಾರೀರಿಕ ಕಾಯಿಲೆಗಳು ಹಾಗೂ ಅನೇಕ ರೀತಿಯ ಮಾನಸಿಕ ಕಾಯಿಲೆಗಳೂ ಜಾಸ್ತಿಯಾಗುತ್ತಿವೆ.
ಆ. ಅವನು ಒಬ್ಬಂಟಿಗನಾಗುತ್ತಾನೆ.
ಇ. ಮನೆಯಲ್ಲಿ ಮಕ್ಕಳು ಮತ್ತು ಇತರ ಸದಸ್ಯರು ಯಾವಾಗಲೂ ಸಂಚಾರವಾಣಿಯನ್ನು ಉಪಯೋಗಿಸುತ್ತಿರುವುದರಿಂದ ಅವರಲ್ಲಿ ಸತತವಾಗಿ ಜಗಳಗಳಾಗುತ್ತವೆ ಹಾಗೂ ಪಾಲಕರು ಮತ್ತು ಮಕ್ಕಳಲ್ಲಿ ಅಂತರ ನಿರ್ಮಾಣವಾಗುತ್ತಿದೆ.
ಈ. ಪಾಲಕರು ಸಂಚಾರವಾಣಿಯನ್ನು ಖರೀದಿಸಿ ಕೊಡದ ಕಾರಣ ಆತ್ಮಹತ್ಯೆಯನ್ನು ಮಾಡಿಕೊಂಡ ಮಕ್ಕಳ ಬಗ್ಗೆ ವಾರ್ತೆಗಳು ದಿನಪತ್ರಿಕೆಗಳಲ್ಲಿ ನೋಡಲು ಸಿಗುತ್ತವೆ.
ಉ. ಪತಿ ಅಥವಾ ಪತ್ನಿಯು ಹೆಚ್ಚು ಸಮಯ ಸಂಚಾರವಾಣಿಯಲ್ಲಿ ಸಮಯವನ್ನು ಕಳೆಯತ್ತಿರುವುದರಿಂದ ಅವರ ನಡುವಿನ ಸಂಬಂಧವು ವಿವಾಹ ವಿಚ್ಛೇದನೆಯವರೆಗೂ ಹೋಗಿವೆ.
ಊ. ಪ್ರಸಾರಮಾಧ್ಯಮಗಳ ನಿರಂತರ ಬಳಕೆಯಿಂದ ಮನುಷ್ಯನು ಎಲ್ಲೆಡೆಯಿಂದ ಸುತ್ತುವರಿಯಲ್ಪಟ್ಟಿದ್ದು ಅವನ ಕಾರ್ಯ ಕ್ಷಮತೆಯೇ ಕಡಿಮೆಯಾಗುತ್ತಿದೆ.
೪. ಸಾಧಕರು ಗಮನದಲ್ಲಿಡಬೇಕಾದ ಅಂಶಗಳು
೪ ಅ. ಸಾಧಕರೇ ‘ಪ್ರಸಾರಮಾಧ್ಯಮಗಳ ಗುಂಪುಗಳಲ್ಲಿ ಸಹಚರರಿಗಾಗಿ ಸಮಯ ಕೊಡುವುದು’, ಆವಶ್ಯಕವಿಲ್ಲ !
೧. ಸಾಧಕರು ಸ್ಥೂಲದಲ್ಲಿ ಮಾಯೆಯನ್ನು ತ್ಯಜಿಸಿ ಸಾಧನೆಯನ್ನು ಮಾಡುತ್ತಾರೆ; ಆದರೆ ಕೆಲವರು ಸ್ವಂತಮನಸ್ಸಿನಂತೆ ಇಂತಹ ಗುಂಪುಗಳಲ್ಲಿ ಸಿಲುಕಿಕೊಂಡಿರುತ್ತಾರೆ. ‘ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ’, ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು.
‘ಹಾಸ್ಯ, ಮನೋರಂಜನೆ, ಅನವಶ್ಯಕ ಬರವಣಿಗೆ, ವಾರ್ತೆ ಇತ್ಯಾದಿಗಳನ್ನು ಓದುವುದು ಮತ್ತು ನೋಡುವುದು’, ಇವುಗಳಿಂದ ನಮ್ಮ ಮೇಲೆ ಒಂದು ಹೊಸ ಸಂಸ್ಕಾರವಾಗುತ್ತಿರುತ್ತದೆ. ನಾವು ಹೊಸ ವಿಚಾರಗಳನ್ನು ಹುಟ್ಟುಹಾಕುತ್ತಿರುತ್ತೇವೆ. ಇವುಗಳಿಂದ ನಮ್ಮ ಸಾಧನೆಯ ಬಹಳಷ್ಟು ಸಮಯವು ವ್ಯರ್ಥವಾಗುತ್ತದೆ.
೨. ಇಂತಹ ಗುಂಪುಗಳಲ್ಲಿ ‘ಯಾರದ್ದಾದರೂ ಹುಟ್ಟುಹಬ್ಬವಿರುತ್ತದೆ ಮತ್ತು ಯಾರಿಗಾದರು ನೌಕರಿ ಸಿಗುತ್ತದೆ, ಯಾರಿಗಾದರು ಪ್ರಮೋಶನ್ ಸಿಗುತ್ತದೆ ಮತ್ತು ಕೆಲವರಿಗೆ ಪಾರಿತೋಷಕಗಳು ಸಿಗುತ್ತವೆ ! ಇವುಗಳ ಬಗ್ಗೆ ‘ಪೋಸ್ಟ್’ಗಳು ಇರುತ್ತವೆ. ನಾವು ಗುಂಪಿನಲ್ಲಿರುವುದರಿಂದ ‘ಅವುಗಳನ್ನು ನೋಡುವುದು ಮತ್ತು ಅವುಗಳಿಗೆ ಸ್ಪಂದಿಸುವುದು’, ಇದರಲ್ಲಿ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ ! ಇದರಲ್ಲಿ ‘ಯಾರಾದರೂ ಕಾಯಿಲೆಯಿಂದ ಬಳಲುತ್ತಿರುತ್ತಾರೆ, ಯಾರಾದರೂ ಮರಣ ಹೊಂದಿರುತ್ತಾರೆ’, ಈ ಬಗ್ಗೆ ನಮಗೆ ತಿಳಿದಾಗ ಅದಕ್ಕೆ ಸ್ಪಂದಿಸಬೇಕಾಗುತ್ತದೆ.
೩. ‘ನಾವು ಆ ಗುಂಪಿನಲ್ಲಿ ಇದ್ದೇವೆ ಎಂಬುದನ್ನು ನೋಡಿ ಕೆಲವರ ಮನಸ್ಸಿನಲ್ಲಿ ನಮ್ಮಿಂದ ಯಾವುದಾದರೊಂದು ಅಪೇಕ್ಷೆ ಸಹ ಬರತೊಡಗುತ್ತದೆ. ‘ಆ ಅಪೇಕ್ಷೆಯನ್ನು ನಾವು ಪೂರ್ಣಗೊಳಿಸಲು’, ಸಾಧ್ಯವಾಗುತ್ತದೆ, ಎಂದೇನಿಲ್ಲ. ಅದರಿಂದ ನಮಗೆ ತೊಂದರೆಯೂ ಆಗಬಹುದು.
‘ಸಾಧನೆಯನ್ನು ಮಾಡುವಾಗ ಇದು ಎಷ್ಟು ಆವಶ್ಯಕವಾಗಿದೆ’, ಎಂಬುದನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕು. ನಮ್ಮ ಎಲ್ಲ ಸಮಯವು ಸತ್ಕಾರ್ಯಕ್ಕಾಗಿ ಉಪಯೋಗವಾಗಬೇಕು.
೪ ಆ. ರಾತ್ರಿಯ ಸಮಯದಲ್ಲಿ ಸಂಚಾರವಾಣಿಯ ಸಂದೇಶಗಳನ್ನು ಓದುವುದರಿಂದ ಸಾಧಕರ ಮೇಲಾಗುವ ಪರಿಣಾಮಗಳು
೧. ಬಹಳಷ್ಟು ಸಲ ರಾತ್ರಿಯ ಸಮಯದಲ್ಲಿ ಈ ಸಂದೇಶಗಳನ್ನು ನೋಡಲು ಕೆಲವು ಜನರ ಅರ್ಧದಿಂದ ಒಂದು ಗಂಟೆ ಮತ್ತು ಕೆಲವು ಜನರ ಅದಕ್ಕಿಂತಲೂ ಹೆಚ್ಚು ಸಮಯ ವ್ಯರ್ಥವಾಗುತ್ತದೆ.
೨. ರಾತ್ರಿ ಸಂದೇಶಗಳನ್ನು ನೋಡುವುದರಿಂದ ಮಲಗುವವರೆಗೆ ಆ ವಿಚಾರಗಳಲ್ಲಿಯೇ ಇರುತ್ತೇವೆ ಮತ್ತು ಕೆಲವೊಮ್ಮೆ ಕೆಲವು ಸಂದೇಶಗಳಿಂದ ಕೆಲವರಿಗೆ ಒತ್ತಡ ಉಂಟಾಗುತ್ತದೆ.
೪ ಇ. ಸಾಧನೆಗಾಗಿ ಉಪಯೋಗವಿಲ್ಲದ ಸಂದೇಶಗಳು, ವಿಡಿಯೋ ಇತ್ಯಾದಿಗಳನ್ನು ನೋಡಲು ನಮ್ಮ ಸಮಯ ವ್ಯರ್ಥವಾಗುವುದರಿಂದ ಮತ್ತು ನಂತರ ಬರುವ ವಿಚಾರಗಳಿಂದ ನಮ್ಮ ಮೇಲೆ ಕೆಟ್ಟ ಶಕ್ತಿಗಳ ಆವರಣ ಬರುತ್ತದೆ. ಈ ಸ್ಥಿತಿಯಲ್ಲಿ ಮಲಗುವುದರಿಂದ ರಾತ್ರಿಯಿಡಿ ಕೆಟ್ಟ ಶಕ್ತಿಗಳ ತೊಂದರೆಗಳು ಹೆಚ್ಚಾಗುತ್ತವೆ. ಅದರಿಂದ ಬೆಳಗ್ಗೆ ಎದ್ದಾಗಿನಿಂದ ದಿನವಿಡೀ ಎಲ್ಲ ಸಂಪೂರ್ಣ ಸೇವೆಗಳ ಮೇಲೆ ಅದರ ಪರಿಣಾಮವಾಗುತ್ತದೆ.’
– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೯.೪.೨೦೨೦)