ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ವರ್ಧಿನಿ ಗೋರಲ್ ಇವರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯಲ್ಲಿ ಅರಿವಾದ ಅಂಶಗಳು

ಸೌ. ವರ್ಧಿನಿ ಗೋರಲ್

‘೨೪ ವರ್ಷ ವಯಸ್ಸಿನ ಸೌ. ವರ್ಧಿನಿ ಗೋರಲ್ ಇವಳು ಬರೆದ ಲೇಖನವನ್ನು ಓದಿ ‘ನನಗೆ ಇಂತಹ ಲೇಖನವನ್ನು ಬರೆಯಲು ಸಾಧ್ಯವಾಗಲಾರದು’, ಎಂಬ ವಿಚಾರವು ನನ್ನ ಮನಸ್ಸಿನಲ್ಲಿ ಬಂದಿತು. ಈ ಲೇಖನದ ಬಗ್ಗೆ ಅವಳನ್ನು ಎಷ್ಟು ಹೊಗಳಿದರೂ, ಅದು ಕಡಿಮೆಯೇ ಆಗಿದೆ ! ಅವಳ ಲೇಖನದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೃತಿಯಲ್ಲಿ ತಂದರೆ ಅನೇಕ ಸಾಧಕರು ಶೀಘ್ರವಾಗಿ ಪ್ರಗತಿ ಮಾಡಿಕೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಈ ರೀತಿ ಪ್ರಯತ್ನಿಸುವುದು ಅಪೇಕ್ಷಿತವಾಗಿದೆ.’ – (ಪರಾತ್ಪರ ಗುರು) ಡಾ. ಆಠವಲೆ

೧. ಅರಿವಾದ ವೈಶಿಷ್ಟ್ಯಪೂರ್ಣ ಅಂಶಗಳು

೧ ಅ. ಮನಸ್ಸನ್ನು ರೂಪಿಸುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ

೧ ಅ ೧. ಮನಸ್ಸು ಬಿಚ್ಚಿ ಮಾತ ನಾಡುವುದು : ‘ಸೇವೆಯನ್ನು ಮಾಡುವಾಗ ನಮಗೇನಾದರೂ ಅಡಚಣೆಗಳು ಬಂದರೆ, ಕೂಡಲೇ ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಬೇಕು. ವರದಿಯನ್ನು ಕೊಡುವಾಗ ‘ನನ್ನ ಪ್ರಯತ್ನಗಳನ್ನು ನೋಡಿ ವರದಿ ತೆಗೆದುಕೊಳ್ಳುವ ಸಾಧಕರಿಗೆ ಏನೆನಿಸಬಹುದು ? ನನ್ನ ಜೊತೆಗಿದ್ದ ಸಾಧಕರಿಗೆ ನನ್ನ ಬಗ್ಗೆ ಏನು ಅನಿಸಬಹುದು ?’, ಎಂಬ ವಿಚಾರಗಳಿಂದ ನಾವು ವರದಿಯನ್ನು ಕೊಡುವಾಗ ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಇದರಿಂದ ವರದಿ ಸೇವಕರಿಗೆ ಯೋಗ್ಯ ಉಪಾಯಯೋಜನೆಯನ್ನು ಹೇಳಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಾವು ಎಲ್ಲವನ್ನೂ ‘ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದೇನೆ’, ಎಂಬ ಭಾವವನ್ನಿಟ್ಟುಕೊಂಡು ಹೇಳಿದರೆ ಮನಸ್ಸು ಹಗುರಾಗುತ್ತದೆ.

೧ ಅ ೨. ನಮ್ಮ ಮನಸ್ಸಿನ ವರದಿಯನ್ನು ತೆಗೆದುಕೊಳ್ಳುವುದು : ನಮ್ಮ ಅಂತರ್ಮುಖತೆಯನ್ನು ಉಳಿಸಿಕೊಳ್ಳಲು ಗಂಟೆಗೊಮ್ಮೆ ಮನಸ್ಸಿನ ವರದಿಯನ್ನು ತೆಗೆದುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ನಾವು ಎಷ್ಟು ಬಾರಿ ಮನಸ್ಸಿನ ವರದಿಯನ್ನು ತೆಗೆದುಕೊಳ್ಳುತ್ತೇವೆಯೋ, ಅಷ್ಟು ಸಮಯ ನಮ್ಮ ಮನಸ್ಸಿನ ಮೇಲೆ ನಮ್ಮ ನಿಯಂತ್ರಣ ಉಳಿಯುತ್ತದೆ. ಇದರಿಂದ ನಮ್ಮ ಪ್ರಯತ್ನಗಳ ಕಡೆಗೆ ಗಮನವನ್ನಿಡಬಹುದು. ತನ್ನ ಕಡೆಗೆ ನೋಡುವ ದೃಷ್ಟಿಯಿಲ್ಲದಿದ್ದರೆ, ಪ್ರಯತ್ನಗಳೂ ಕಡಿಮೆ ಆಗುತ್ತವೆ.

೧ ಅ ೩. ಸ್ವಯಂಸೂಚನೆಯ ಸತ್ರಗಳನ್ನು ಮಾಡುವುದು : ನಾವು ನಮ್ಮಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ಸ್ವಯಂಸೂಚನೆಯ ಸತ್ರಗಳನ್ನು ಮಾಡುತ್ತೇವೆ. ‘ಸ್ವಯಂಸೂಚನೆಗಳ ಪರಿಣಾಮ ನಮ್ಮ ಮೇಲೆ ಆಗುತ್ತಿದೆಯೇ ?’, ಎಂಬುದರ ನಿರೀಕ್ಷಣೆಯನ್ನು ಮಾಡುವುದು ಮಹತ್ವದ್ದಾಗಿದೆ. ೮ ದಿನಗಳ ನಂತರ ನಮಗೆ ಎರಡನೆಯ ಸ್ವಭಾವ ದೋಷಕ್ಕೆ ಸ್ವಯಂಸೂಚನೆಯ ಸತ್ರಗಳನ್ನು ನೀಡಬೇಕಾಗಿರುತ್ತದೆ. ನಾವು ಈ ರೀತಿ ಧ್ಯೇಯವನ್ನಿಟ್ಟು ಪ್ರಯತ್ನಿಸಬೇಕು.

೧ ಅ ೪. ಅನಾವಶ್ಯಕ ವಿಚಾರಗಳನ್ನು ದೂರಗೊಳಿಸುವುದು : ಸೇವೆಯನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಬರುತ್ತವೆ. ಇಂತಹ ಸಮಯದಲ್ಲಿ ವೈಖರಿ ವಾಣಿಯಲ್ಲಿ ನಮಗೆ ಕೇಳಿಸುವಂತೆ ನಾಮಜಪ ಮಾಡಿದರೆ ಅನಾವಶ್ಯಕ ವಿಚಾರಗಳು ಕಡಿಮೆಯಾಗುತ್ತವೆ. ‘ಮನಸ್ಸಿನ ವಿಚಾರಗಳ ಪ್ರಮಾಣ ಹೆಚ್ಚಾಗುತ್ತಿದೆ’, ಎಂದು ಗಮನಕ್ಕೆ ಬಂದರೆ ಕೂಡಲೇ ನಾವು ಆ ವಿಚಾರಗಳನ್ನು ಬರೆದಿಟ್ಟುಕೊಳ್ಳಬೇಕು ಮತ್ತು ಅವುಗಳ ಬಗ್ಗೆ ಚಿಂತನೆ ಮಾಡಿ ಸ್ವಯಂಸೂಚನೆ ಕೊಟ್ಟರೆ ನಮಗೆ ಹೆಚ್ಚು ಲಾಭವಾಗುತ್ತದೆ.

೧ ಅ ೫. ನಾವು ನಮ್ಮನ್ನು ಶ್ರೇಷ್ಠರೆಂದು ತಿಳಿದುಕೊಳ್ಳುತ್ತಿದ್ದರೆ, ಇತರರೊಂದಿಗಿನ ನಮ್ಮ ತುಲನೆ ಹೆಚ್ಚಾಗುತ್ತದೆ. ಇತರರೊಂದಿಗೆ ತುಲನೆ ಮಾಡಿದರೆ ನಮ್ಮ ಪ್ರಯತ್ನಗಳು ಕಡಿಮೆಯಾಗುತ್ತವೆ.

೧ ಅ ೬. ಸೇವೆಯ ಫಲನಿಷ್ಪತ್ತಿ : ಸೇವೆಯು ಅಪೂರ್ಣವಾಗಿದ್ದರೆ ಸೇವೆಯ ಫಲನಿಷ್ಪತ್ತಿ ಕಡಿಮೆಯಾಗುತ್ತದೆ; ಆದ್ದರಿಂದ ಆಯೋಜನೆಯಲ್ಲಿನ ಪ್ರತಿಯೊಂದು ಸೇವೆಯನ್ನು ನಿರ್ದಿಷ್ಟ ಸಮಯದಲ್ಲಿ  ಪೂರ್ಣಗೊಳಿಸಲು ಪ್ರಯತ್ನಿಸಬೇಕು. ನಾವು ಯಾವುದಾದರೊಂದು ಕೃತಿ ಮಾಡುವಾಗ ಅದರಲ್ಲಾಗುವ ತಪ್ಪುಗಳ ಪರಿಣಾಮಗಳ ವಿಚಾರ ಮಾಡಿ ಕೃತಿಯನ್ನು ಮಾಡಿದರೆ, ಅದರಿಂದ ತಪ್ಪುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

೧ ಅ ೭. ತಪ್ಪುಗಳಿಂದ ಕಲಿಯುವುದು : ನಮಗೆ ಯಾರಾದರೂ ನಮ್ಮ ತಪ್ಪುಗಳನ್ನು ಹೇಳುತ್ತಿದ್ದರೆ, ಅವುಗಳನ್ನು ಸ್ವೀಕರಿಸಿ ಅವುಗಳನ್ನು ತಡೆ ಗಟ್ಟಲು ಕೃತಿಯನ್ನು ಮಾಡಬೇಕು. ನಮ್ಮಿಂದಾದ ತಪ್ಪುಗಳನ್ನು ನಾವು ವಹಿಯಲ್ಲಿ ಬರೆಯುತ್ತೇವೆ ಮತ್ತು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳುತ್ತೇವೆ, ಆದರೆ ನಮ್ಮ ಚಿಂತನೆ ಆಗಬೇಕು. ‘ನಾವು ಅವುಗಳಿಂದ ಏನು ಕಲಿತೆವು ? ಅವುಗಳಿಗನುಸಾರ ನಮ್ಮ ಪ್ರಯತ್ನಗಳಾಗುತ್ತವೆಯೇ ? ನಾವು ತಪ್ಪುಗಳನ್ನು ಪ್ರಾಮಾಣಿಕವಾಗಿ ಬರೆಯುತ್ತೇವೆಯೇ ?’, ಇದರ ಅಭ್ಯಾಸವನ್ನು ಮಾಡಬೇಕು. ಸೇವೆಯನ್ನು ಮಾಡುವಾಗ ಕೆಲವೊಮ್ಮೆ ನಮ್ಮಿಂದಾದ ಯಾವುದಾದರೊಂದು ತಪ್ಪನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ನಮಗೆ ನಿರಾಶೆ ಬರುತ್ತದೆ. ಇಂತಹ ಸಮಯದಲ್ಲಿ ನಾವು ನಿರಾಶರಾಗದೇ ‘ಅದರಿಂದ ಏನು ಕಲಿತೆವು ?’, ಇದರ ಅಧ್ಯಯನವನ್ನು ಮಾಡಿ ಮುಂದಿನ ಬಾರಿ ಆ ತಪ್ಪು ಆಗದಂತೆ ಪ್ರಯತ್ನಿಸಬೇಕು. ಜವಾಬ್ದಾರ ಸಾಧಕರಲ್ಲಿ ವಿಚಾರಿಸಿ ಕೇಳಿ ಮಾಡುವ ರೂಢಿಯನ್ನು ಇಟ್ಟುಕೊಳ್ಳಬೇಕು. ಇದರಿಂದ ತಪ್ಪುಗಳು ಕಡಿಮೆಯಾಗುತ್ತವೆ.

ನಾವು ಸಮಷ್ಟಿಯಲ್ಲಿ ತಪ್ಪುಗಳನ್ನು ಹೇಳುತ್ತೇವೆ ಮತ್ತು ಕೇಳುತ್ತೇವೆ. ಇದರಿಂದ ನಮ್ಮ ತಪ್ಪುಗಳ ಪಾಪಕ್ಷಾಲನೆಯಾಗುತ್ತದೆ ಮತ್ತು ನಮಗೆ ಸಮಷ್ಟಿಯಿಂದ ಸಹಾಯ ಸಿಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಗಮನಕ್ಕೆ ಬರದ ತಪ್ಪುಗಳೂ ಗಮನಕ್ಕೆ ಬರುತ್ತವೆ.

೧ ಅ ೭. ನಮ್ಮ ಪ್ರತಿಷ್ಠೆಯನ್ನು ಕಾಪಾಡುವುದು : ಸೇವೆಯನ್ನು ಮಾಡುವಾಗ ನಮಗೆ ಹೊಸದೇನಾದರೂ ಹೊಳೆದರೆ ನಾವು ಅದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಂಡರೆ, ನಮ್ಮ ಸೇವೆಯು ಪರಿಪೂರ್ಣವಾಗುತ್ತದೆ. ಈಶ್ವರನೇ ನಮಗೆ ಹೊಸ ಕಲ್ಪನೆಗಳನ್ನು ಸೂಚಿಸುತ್ತಿರುತ್ತಾನೆ. ನಾವು ದೇವರ ಸೇವೆಯನ್ನು ಮಾಡುತ್ತೇವೆ; ಆದುದರಿಂದ ನಾವು ಭಗವಂತನ ಚರಣಗಳಲ್ಲಿ ಕೃತಜ್ಞರಾಗಿರಬೇಕು. ಎದುರಿನ ವ್ಯಕ್ತಿಗೆ ನಮ್ಮ ಬಗ್ಗೆ ಒಳ್ಳೆಯದೆನಿಸಬೇಕೆಂದು, ನಾವು ತೋರಿಕೆಯ ಕೃತಿಗಳನ್ನು ಮಾಡುತ್ತಿದ್ದರೆ ನಮ್ಮ ಅಹಂ ಹೆಚ್ಚಾಗುತ್ತದೆ. ಆಗ ‘ನಾವು ನಮ್ಮ ಪ್ರತಿಯೊಂದು ಕೃತಿಯನ್ನು ದೇವರಿಗಾಗಿಯೇ ಮಾಡುತ್ತೇವೆ ಮತ್ತು ಅದನ್ನು ಈಶ್ವರನು ನೋಡುತ್ತಿರುತ್ತಾನೆ’, ಎಂಬ ಭಾವವಿಟ್ಟು ಕೃತಿ ಮಾಡಬೇಕು.

೨. ವ್ಯಷ್ಟಿ ಸಾಧನೆಯ ವರದಿಯ ಸಮಯದಲ್ಲಿ ಕಲಿಯಲು ಸಿಕ್ಕಿರುವ ಅಂಶಗಳು

೨ ಅ. ಕೇಳುವ ವೃತ್ತಿಯನ್ನು ಹೆಚ್ಚಿಸುವುದು : ನಾವು ಯಾವುದಾದರೊಂದು ಕೃತಿಯನ್ನು ಅಥವಾ ಸೇವೆಯನ್ನು ಮಾಡುತ್ತಿರುವಾಗ ಆಗಾಗ  ಜವಾಬ್ದಾರ ಸಾಧಕರಲ್ಲಿ ವಿಚಾರಿಸುತ್ತಿದ್ದರೆ, ಆ ಕೃತಿ ಅಥವಾ ಆ ಸೇವೆಯು ಪರಿಪೂರ್ಣವಾಗುತ್ತದೆ. ನಮ್ಮ ಮನಸ್ಸಿನಂತೆ ಮಾಡಿದರೆ  ಅಹಂ ಹೆಚ್ಚಾಗಬಹುದು. ನಮ್ಮ ಪ್ರತಿಯೊಂದು ಕೃತಿ ದೇವರಿಗೆ ಅಪೇಕ್ಷಿತ ರೀತಿಯಲ್ಲಾಗಲು ನಾವು ಕೇಳಿ ಮಾಡಬೇಕು.

೨ ಆ. ನಿರಪೇಕ್ಷಭಾವದಿಂದ ಪ್ರಯತ್ನಿಸುವುದು : ಸೇವೆಯನ್ನು ಮಾಡುವಾಗ ಮನಸ್ಸು ಏಕಾಗ್ರವಾಗಲು ನಾವು ನಾಮಜಪ ಅಥವಾ ಭಾವದ ಸ್ತರದಲ್ಲಿ ಪ್ರಯತ್ನಿಸಬಹುದು. ಕೆಲವೊಮ್ಮೆ ನಾವು ‘ನಮಗೆ ಆ ಸೇವೆಯನ್ನು ಮಾಡಲು ಬರಲೇಬೇಕು’, ಎಂಬ ಅಪೇಕ್ಷೆಯನ್ನು ಇಟ್ಟುಕೊಳ್ಳುತ್ತೇವೆ. ನಾವು ನಿರಪೇಕ್ಷ ಭಾವದಿಂದ ಪ್ರಯತ್ನಿಸಿದರೆ, ‘ಪ್ರತಿಯೊಂದು ಕೃತಿಯನ್ನು ಭಗವಂತನೇ ಮಾಡುತ್ತಿರುತ್ತಾನೆ’, ಎಂಬ ಭಾವ ನಿರ್ಮಾಣವಾಗುವುದು.

೨ ಇ. ತಪ್ಪುಗಳು ಕಡಿಮೆಯಾಗಲು ಮಾಡಬೇಕಾದ ಪ್ರಯತ್ನಗಳು

೨ ಇ ೧. ತಪ್ಪುಗಳ ಬಗ್ಗೆ ಖೇದವೆನಿಸುವುದು : ಸಾಧಕರಿಂದ ತಪ್ಪುಗಳಾಗುವುದರ ಹಿಂದೆ ‘ಗಾಂಭೀರ್ಯ ಇಲ್ಲದಿರುವುದು ಮತ್ತು ಮನಃಪೂರ್ವಕ ಖೇದವೆನಿಸದಿರುವುದು’, ಈ ಸ್ವಭಾವದೋಷಗಳಿರುತ್ತವೆ. ಈ ಸ್ವಭಾವದೋಷಗಳನ್ನು ದೂರಮಾಡಲು ಪ್ರಯತ್ನಿಸಿದರೆ ತಪ್ಪುಗಳಾಗುವ ಪ್ರಮಾಣವು ಕಡಿಮೆಯಾಗುತ್ತದೆ.

೨ ಇ ೨. ತಪ್ಪುಗಳನ್ನು ಶುದ್ಧ ಮನಸ್ಸಿನಿಂದ ಮತ್ತು ಮನಸ್ಸು ಬಿಚ್ಚಿ ಹೇಳುವುದು : ವರದಿಯಲ್ಲಿ ತಪ್ಪುಗಳನ್ನು ಶುದ್ಧ ಮನಸ್ಸಿನಿಂದ ಮತ್ತು ಮನಸ್ಸುಬಿಚ್ಚಿ ಹೇಳಿದರೆ, ವರದಿ ತೆಗೆದುಕೊಳ್ಳುವ ಸೇವಕರಿಂದ ಯೋಗ್ಯ ಉಪಾಯಯೋಜನೆಸಿಗುತ್ತದೆ. ಇದರಿಂದ ನಮಗೆ ಮುಂದಿನ ಪ್ರಯತ್ನಗಳನ್ನು ಮಾಡಲು ಸುಲಭವಾಗುತ್ತದೆ.

೨ ಈ. ಕಲಿಯುವ ವೃತ್ತಿ : ವರದಿಯಲ್ಲಿನ ಸಹಸಾಧಕರ ಪ್ರಯತ್ನಗಳನ್ನು ನೋಡಿ ನಮ್ಮ ಮನಸ್ಸಿನಲ್ಲಿ ‘ನನ್ನಿಂದ ಪ್ರಯತ್ನಗಳಾಗುವುದಿಲ್ಲ’, ಎಂಬ ನಕಾರಾತ್ಮಕ ವಿಚಾರಗಳು ಬರುತ್ತವೆ. ಆಗ ‘ನಾವು ಅವರ ಹಾಗೆ ಪ್ರಯತ್ನ ಮಾಡಲು ಎಲ್ಲಿ ಕಡಿಮೆ ಬೀಳುತ್ತೇವೆ ? ಎಂಬುದರ ಚಿಂತನೆಯನ್ನು ಮಾಡಬೇಕು. ನಮ್ಮಲ್ಲಿ ಕಲಿಯುವ ವೃತ್ತಿ ಇದ್ದರೆ, ಪ್ರಯತ್ನ ಮಾಡಲು ಸುಲಭವಾಗುತ್ತದೆ.

೨ ಉ. ಕೇಳುವ ಮತ್ತು ಸ್ವೀಕರಿಸುವ ವೃತ್ತಿ : ನಾವು ಸೇವೆಯನ್ನು ಮಾಡುವಾಗ ಯಾರಾದರೂ ಏನಾದರೂ ತಿದ್ದುಪಡಿ ಸೂಚಿಸಿದರೆ, ನಾವು ಅದನ್ನು ಸ್ವೀಕರಿಸದೇ ನಮ್ಮ ಮನಸ್ಸಿನಂತೆ ಮಾಡುತ್ತೇವೆ. ಆಗ ಕೇಳುವ ವೃತ್ತಿ ಇಲ್ಲ, ಸ್ವೀಕರಿಸುವ ವೃತ್ತಿ ಇಲ್ಲ, ಕಲಿಯುವ ತಳಮಳವಿಲ್ಲ ಮತ್ತು ‘ನನಗೆ ಹೆಚ್ಚು ತಿಳಿಯುತ್ತದೆ’, ಎಂಬ ಅಹಂ ಇರುತ್ತದೆ. ನಾವು ಆ ಸಾಧಕನು ಹೇಳುವುದನ್ನು ಕೇಳಿಕೊಳ್ಳಬೇಕು ಮತ್ತು ಸದಾ ಕಲಿಯುವ ಸ್ಥಿತಿಯಲ್ಲಿರಬೇಕು.

೨ ಊ. ಸಮಯವನ್ನು ವ್ಯರ್ಥಗೊಳಿಸದಿರುವುದು : ಬೆಳಗಿನಿಂದ ರಾತ್ರಿಯವರೆಗಿನ ನಮ್ಮ ಸಮಯವು ಕೇವಲ ದೇವರಿಗಾಗಿ ಇದೆ. ಅದನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು. ದೇವರು ನೀಡಿದ ಸಮಯದ ಸದುಪಯೋಗ ಮಾಡಬೇಕು.

೨ ಎ. ನಾವು ವ್ಯಷ್ಟಿಸಾಧನೆಯ ಪ್ರಯತ್ನ ಮತ್ತು ಸಮಷ್ಟಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ, ನಮ್ಮಲ್ಲಿ ಗುಣಗಳ ವೃದ್ಧಿಯಾಗುತ್ತದೆ. ನಾವು ನಮ್ಮ ಮನಸ್ಸಿನ ವಿರುದ್ಧ ಹೋರಾಡುವವರೆಗೆ ನಮ್ಮ ಸಾಧನೆಯ ಪ್ರವಾಸಕ್ಕೆ ದಿಶೆ ಸಿಗುವುದಿಲ್ಲ.

೨ ಏ. ಕೃತಜ್ಞತಾಭಾವದಲ್ಲಿರುವುದು : ‘ನನಗೆ ಸೇವೆಯನ್ನು ಮಾಡಲು ಸಾಧ್ಯವಾಗತೊಡಗಿದೆ’, ಎಂದು ಅನಿಸತೊಡಗಿದರೆ, ನಮ್ಮ ಅಹಂ ಹೆಚ್ಚಾಗಬಹುದು. ‘ನನಗೆ ಕೇವಲ ದೇವರಿಂದಾಗಿಯೇ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ’, ಎಂಬ ಅರಿವನ್ನು ಮನಸ್ಸಿನಲ್ಲಿಟ್ಟುಕೊಂಡು ಸತತವಾಗಿ ಕೃತಜ್ಞತಾಭಾವದಲ್ಲಿರಬೇಕು.

೩. ಪ್ರಕ್ರಿಯೆಗೆ ಭಾವದ ಜೊತೆ ನೀಡುವುದರ ಮಹತ್ವ

ನಾವು ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ನಿಯಮಿತವಾಗಿ ಮಾಡಿಯೂ ನಮ್ಮಲ್ಲಿ ಯಾವುದೇ ಬದಲಾವಣೆ ಕಾಣಿಸದಿದ್ದರೆ, ನಮಗೆ ನಿರಾಶೆ ಬರುತ್ತದೆ. ಇಂತಹ ಸಮಯದಲ್ಲಿ, ನಾವು ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮುಂದುವರಿಸಬೇಕು ಮತ್ತು ‘ದೇವರು ನನ್ನನ್ನು ತನ್ನ ಚರಣಗಳ ಬಳಿ ಕರೆದುಕೊಂಡು ಹೋಗುವವನೇ ಇದ್ದಾನೆ’, ಎಂಬ ಭಾವವನ್ನಿಟ್ಟು ಪ್ರಯತ್ನಿಸಬೇಕು. ಮನಸ್ಸಿಗೆ ಕಡಿಮೆತನವನ್ನು ತೆಗೆದುಕೊಳ್ಳುವ ಅಭ್ಯಾಸ ಇಲ್ಲದಿದ್ದರೆ, ಸಂಘರ್ಷವಾಗುತ್ತದೆ. ಪ್ರತಿಯೊಂದನ್ನು ‘ಭಗವಂತನೇ ಕಲಿಸುತ್ತಿದ್ದಾನೆ’, ಎಂಬ ಭಾವವನ್ನಿಟ್ಟು ಪ್ರಯತ್ನಿಸಬೇಕು.’ – ಸೌ. ವರ್ಧಿನಿ ಗೋರಲ್, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೧೨.೨೦೧೮)