ವಿದ್ಯುತ್ ತಂಪುಪೆಟ್ಟಿಗೆ (ರೆಫ್ರಿಜರೇಟರ) ಹಾಗೂ ಮಣ್ಣಿನಿಂದ ತಯಾರಿಸಿದ ತಂಪುಪೆಟ್ಟಿಗೆ ಇವುಗಳ ತುಲನಾತ್ಮಕ ಅಭ್ಯಾಸವನ್ನು ಮಾಡುವಾಗ ಅರಿವಾದ ಅಂಶಗಳು
‘ಇಂದಿನ ಆಧುನಿಕ ಯುಗದಲ್ಲಿ ಸಮಾಜದಲ್ಲಿನ ಜನರಿಗೆ ಕೆಲವು ವಿದ್ಯುತ್ ಉಪಕರಣಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿವೆ. ಅದರಲ್ಲಿ ಒಂದೆಂದರೆ ‘ವಿದ್ಯುತ್ ತಂಪುಪೆಟ್ಟಿಗೆ (ರೆಫ್ರಿಜರೇಟರ). ಈ ಗಡಿಬಿಡಿಯ ಜೀವನದಲ್ಲಿ ಸಮಯದ ಅಭಾವದಿಂದ ಸ್ತ್ರೀಯರು ವಾರದಲ್ಲಿ ಒಮ್ಮೆ ಮಾರುಕಟ್ಟೆಯಿಂದ ಹಣ್ಣು, ತರಕಾರಿ ಅಥವಾ ಇತರ ಸಾಮಾನುಗಳನ್ನು ತಂದು ತಂಪುಪೆಟ್ಟಿಗೆಯಲ್ಲಿ ಇಡುತ್ತಾರೆ ಮತ್ತು ಆವಶ್ಯಕತೆಯನುಸಾರ ಅವುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಶಾರೀರಿಕ ಸ್ತರದಲ್ಲಿ ಹಾನಿಯಂತೂ ಆಗುತ್ತದೆ, ಅದರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಅದರ ದುಷ್ಪರಿಣಾಮಗಳು ಕಂಡುಬರುತ್ತವೆ. ನಿಸರ್ಗದ ವಿರುದ್ದ ಹೋಗಿ ತಂಪು ಮಾಡಿರುವ ಪದಾರ್ಥಗಳು ಹಾನಿಕರವಾಗಿರುತ್ತವೆ, ಹಾಗೆಯೇ ಅವು ತಂಗಳಾಗುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನಾಶವಾಗಿರುತ್ತವೆ. ಆದುದರಿಂದ ಪದಾರ್ಥಗಳನ್ನು ನೈಸರ್ಗಿಕ ರೀತಿಯಲ್ಲಿ ತಂಪಾಗಿಡಲು (ತಣ್ಣಗಾಗಿಡಲು) ಮೊದಲಿನಿಂದಲೂ ಉಪಯೋಗಿಸುತ್ತಿರುವ ಪ್ರಕ್ರಿಯೆಗಳನ್ನು ಅವಲಂಬಿಸುವುದು ಹೆಚ್ಚು ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ ಗಮನಕ್ಕೆ ಬಂದ ಅಂಶಗಳನ್ನು ಮತ್ತು ಕೈಕೊಂಡಿರುವ ಕೆಲವು ಪ್ರಯೋಗಗಳನ್ನು ಇಲ್ಲಿ ನೀಡಲಾಗಿದೆ. (ಭಾಗ ೨)
೨. ಮಣ್ಣಿನ ತಂಪುಪೆಟ್ಟಿಗೆಯಿಂದ ಆಹಾರದ ಮೇಲಾಗುವ ಪರಿಣಾಮಗಳು
೨ ಅ. ಮಣ್ಣಿನ ತಂಪುಪೆಟ್ಟಿಗೆಯ ವಿಧಗಳು : ‘ಮಣ್ಣಿನ ತಂಪು ಪೆಟ್ಟಿಗೆಗಳ ವಿವಿಧ ವಿಧಗಳಿವೆ. ಕೆಲವು ಸ್ಥಳಗಳಲ್ಲಿ ಮಣ್ಣಿಗೆ ಪೆಟ್ಟಿಗೆ ಆಕಾರವನ್ನು ನೀಡಲಾಗುತ್ತದೆ ಮತ್ತು ಇನ್ನು ಕೆಲವು ಸ್ಥಳಗಳಲ್ಲಿ ಭೂಮಿಯಲ್ಲಿ ಗುಂಡಿಯನ್ನು ತೋಡಿ ಅದರಲ್ಲಿ ಮಣ್ಣಿನ ಮಡಕೆಗಳನ್ನು ಇಡಲಾಗುತ್ತದೆ ಮತ್ತು ಅವುಗಳ ಪಕ್ಕದಲ್ಲಿ ಮರಳು ಹಾಕಿ ಆ ಗುಂಡಿಯನ್ನು ಮುಚ್ಚಲಾಗುತ್ತದೆ. ಆ ಮರಳಿನ ಮೇಲೆ ನೀರು ಹಾಕಿ ಅದನ್ನು ಒದ್ದೆ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ಒಳಗಿಟ್ಟಿರುವ ಪದಾರ್ಥಗಳಿಗೆ ನೈಸರ್ಗಿಕ ಶೀತಲತೆ ದೊರೆಯುತ್ತದೆ.
೨ ಆ. ಭೂಮಿಯ ನೈಸರ್ಗಿಕ ಶೀತಲತೆ ಮತ್ತು ಹಸಿಯಾಗಿರುವ ಮರಳು ಇವುಗಳಿಂದ ಮರಳಿನಲ್ಲಿರುವ ಗಾಳಿ ಅಧಿಕ ತಣ್ಣಗಾಗಿ ಮಡಕೆಯಲ್ಲಿರುವ ಪದಾರ್ಥಗಳು ಉತ್ತಮ ಸ್ಥಿತಿಯಲ್ಲಿರುವುದು : ಮಣ್ಣಿನ ಮಡಕೆಗಳನ್ನು ಉಪಯೋಗಿಸಿ ತಯಾರಿಸಿದ ತಂಪುಪೆಟ್ಟಿಗೆ ಹೆಚ್ಚು ಒಳ್ಳೆಯದೆನಿಸುತ್ತದೆ; ಏಕೆಂದರೆ ಮಡಕೆಗಳನ್ನು ಭೂಮಿಯಲ್ಲಿಡುವುದರಿಂದ ಅವುಗಳಿಗೆ ಅಧಿಕ ಶೀತಲತೆ ಸಿಗುತ್ತದೆ ಮತ್ತು ಈ ನೈಸರ್ಗಿಕ ಶೀತಲತೆ ಅಧಿಕ ಕಾಲ ಉಳಿಯುತ್ತದೆ. ಮಡಕೆಗಳ ಸುತ್ತಲೂ ಹಾಕಿರುವ ಮರಳಿನಿಂದ ಅದರಲ್ಲಿ ನೀರು ಅಧಿಕ ಕಾಲ ಉಳಿಯುತ್ತದೆ. ಮರಳಿನ ದಪ್ಪನೆಯ ಕಣಗಳಿಂದಾಗಿ ಅವುಗಳಲ್ಲಿ ಗಾಳಿಯಾಡುತ್ತಿರುತ್ತದೆ ಮತ್ತು ಮರಳು ಒದ್ದೆಯಾಗಿರುವುದರಿಂದ ಆ ಗಾಳಿ ಮತ್ತಷ್ಟು ತಣ್ಣಗಾಗುತ್ತದೆ. ಇದರಿಂದ ಮಡಕೆಗಳ ಒಳಗಿನ ಭಾಗದ ತಾಪಮಾನ ಕಡಿಮೆಯಾಗಲು ಸಹಾಯವಾಗುತ್ತದೆ. ಇದರಲ್ಲಿ ಮಡಕೆಗಳಲ್ಲಿನ ತಾಪಮಾನ ೧೦ ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುತ್ತದೆ.
೨ ಇ. ನೈಸರ್ಗಿಕ ಶೀತಲತೆಯಿಂದ ಪದಾರ್ಥಗಳು ನೈಸರ್ಗಿಕ ರೀತಿಯಲ್ಲಿ ಚೆನ್ನಾಗಿರುವುದು : ಮಣ್ಣಿನ ತಂಪುಪೆಟ್ಟಿಗೆಯ ತಾಪಮಾನ ಹೊರಗಿನ ವಾತಾವರಣಕ್ಕಿಂತ ೧೦ ರಿಂದ ೧೫ ಡಿಗ್ರಿ ಸೆಲ್ಸಿಯಸ್ ರಷ್ಟು ಕಡಿಮೆಯಿರುತ್ತದೆ. ಇದರಿಂದ ಅದರಲ್ಲಿಟ್ಟಿರುವ ತರಕಾರಿಗಳು ಸ್ವಲ್ಪ ಸಮಯದ ಮೊದಲು ಗಿಡಗಳಿಂದ ತೆಗೆದಿದ್ದರೂ, ಮಣ್ಣಿನ ತಂಪುಪೆಟ್ಟಿಗೆಯಲ್ಲಿಟ್ಟ ಬಳಿಕ ಅವು ನೈಸರ್ಗಿಕ ಸ್ಥಿತಿಯಲ್ಲಿರುತ್ತವೆ. ಮಣ್ಣಿನ ತಂಪುಪೆಟ್ಟಿಗೆಯ ವಾತಾವರಣ ಬಹಳ ತಣ್ಣಗೆ ಇಲ್ಲದಿರುವುದರಿಂದ ತರಕಾರಿಗಳಲ್ಲಿರುವ ಜೀವಸತ್ವಗಳೂ ಉಳಿಯುತ್ತವೆ.
೨ ಈ. ಸಾಧಾರಣ ತಂಪು ವಾತಾವರಣದಲ್ಲಿ ತರಕಾರಿಗಳ ಜೀವಕೋಶಗಳು ತಾಜಾ ಇರುವುದು ಮತ್ತು ಮಣ್ಣಿನ ಮಡಕೆಯ ಶೀತಲತೆ ಪೋಷಕವಾಗಿರುವುದರಿಂದ ಮಡಕೆಯಿಂದ ತರಕಾರಿ ಅಥವಾ ಹಣ್ಣುಗಳನ್ನು ಹೊರಗೆ ತೆಗೆದ ಬಳಿಕವೂ ಅವು ಚೆನ್ನಾಗಿರುವುದು : ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಇಟ್ಟಾಗ ಅವುಗಳಿಗೆ ನೈಸರ್ಗಿಕ ತಂಪು ದೊರೆಯುವುದರಿಂದ ಅವು ಅಧಿಕ ಕಾಲದವರೆಗೆ ಉಳಿಯುತ್ತವೆ. ನಾವು ಚಳಿಗಾಲದಲ್ಲಿ ತಂದಿರುವ ತರಕಾರಿಗಳು ತಣ್ಣನೆಯ ವಾತಾವರಣದಿಂದಾಗಿ ಹೆಚ್ಚು ಸಮಯ ತಾಜಾ ಉಳಿಯುತ್ತವೆ. ಇದು ಸಾಧಾರಣ ಅಂತಹ ಪ್ರಕ್ರಿಯೆಯೇ ಆಗಿದೆ. ತಣ್ಣಗಿನ ವಾತಾವರಣದಲ್ಲಿ ತರಕಾರಿಗಳ ಜೀವಕೋಶಗಳು ಅಧಿಕ ಕಾಲ ಬಾಳುತ್ತವೆ; ಆದರೆ ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ವಾತಾವರಣ ಬಹಳ ತಣ್ಣಗಿರುವುದರಿಂದ ಆ ಜೀವಕೋಶಗಳು ಗಟ್ಟಿಯಾಗುತ್ತವೆ. ಇಂತಹ ತಣ್ಣಗಿನ ಸ್ಥಿತಿಯಲ್ಲಿರುವ ತರಕಾರಿಗಳನ್ನು ಶೀತಕಪಾಟಿನಿಂದ ಹೊರಗೆ ತೆಗೆದ ಬಳಿಕ ಅಕಸ್ಮಿಕವಾಗಿ ಆದ ವಾತಾವರಣದ ಬದಲಾವಣೆಯಿಂದ ಆ ಜೀವಕೋಶಗಳು ಸಾಯುತ್ತವೆ. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ತಂಪು ಬಹಳ ಶೀತಲನೆಯ ಪ್ರಮಾಣವು ಸಮತೋಲನವಾಗಿರುವುದರಿಂದ ಇಂತಹ ಪ್ರಕ್ರಿಯೆ ಅದರಲ್ಲಿರುವ ತರಕಾರಿಗಳ ಮೇಲಾಗುವುದಿಲ್ಲ.
೨ ಉ. ಹೆಚ್ಚು ದಿನಗಳ ವರೆಗೆ ತರಕಾರಿ ಅಥವಾ ಹಣ್ಣುಗಳನ್ನು ಕಾಪಾಡುವುದು ಅಯೋಗ್ಯವಾಗಿದೆ; ಆದರೆ ಆಪತ್ಕಾಲಕ್ಕಾಗಿ ಇದು ಉಪಯುಕ್ತವಾಗಿದೆ : ಈ ರೀತಿ ತಯಾರಿಸಿದ ಮಣ್ಣಿನ ತಂಪುಪೆಟ್ಟಿಗೆ ಯಲ್ಲಿ ತರಕಾರಿಗಳು ೮ ರಿಂದ ೧೦ ದಿನಗಳವರೆಗೆ ಚೆನ್ನಾಗಿ ಉಳಿಯುತ್ತವೆ; ಆದರೆ ಪ್ರತ್ಯಕ್ಷದಲ್ಲಿ ಇಷ್ಟು ದಿನಗಳವರೆಗೆ ಹಣ್ಣು ಅಥವಾ ತರಕಾರಿಗಳನ್ನು ಜೋಪಾನ ಮಾಡಿಡುವುದು ಯೋಗ್ಯವಾಗಿಲ್ಲ, ಆದರೆ ನಾವು ಆಪತ್ಕಾಲದ ದೃಷ್ಟಿಯಿಂದ ವಿಚಾರ ಮಾಡಿದರೆ, ಇಷ್ಟು ಕಾಲ ತರಕಾರಿಗಳು ಬಾಳಿಕೆ ಬರುವುದು ಬಹಳ ಒಳ್ಳೆಯದಾಗಿದೆ.
ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಮತ್ತು ಮಣ್ಣಿನ ತಂಪುಪೆಟ್ಟಿಗೆಯಲ್ಲಿ ೮ ಗಂಟೆಗಳವರಿಗೆ ಇಟ್ಟಿರುವ ಪದಾರ್ಥಗಳನ್ನು ಸೇವಿಸಿದ ಬಳಿಕ ಗಮನಕ್ಕೆ ಬಂದ ಎರೆಡರಲ್ಲಿನ ವ್ಯತ್ಯಾಸವನ್ನು ತೋರಿಸುವ ಅಂಶಗಳು
ಟಿಪ್ಪಣಿ – ಇಲ್ಲಿ ನಮ್ಮ ಮಾಹಿತಿಗನುಸಾರ ಮಣ್ಣಿನ ೨ ರೀತಿಯ ತಂಪುಪೆಟ್ಟಿಗೆಗಳನ್ನು ನೀಡಲಾಗಿದೆ. ಮಣ್ಣಿನ ತಂಪುಪೆಟ್ಟಿಗೆಯ ಬೆಲೆ ೫ ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಆದುದರಿಂದ ಯಾರಿಗೆ ಇಂತಹ ಪೆಟ್ಟಿಗೆಗಳನ್ನು ಖರೀದಿಸಲು ಸಾಧ್ಯವಿಲ್ಲವೋ ಅವರು ಮಣ್ಣಿನ ಮಡಿಕೆಗಳಿಂದಲೂ ತಂಪುಪೆಟ್ಟಿಗೆಯನ್ನು ತಯಾರಿಸಬಹುದು.
ಮಣ್ಣಿನ ಮಡಿಕೆಗಳಿಂದ ತಂಪುಪೆಟ್ಟಿಗೆಯನ್ನು ತಯಾರಿಸುವ ಪದ್ಧತಿ
ಮಣ್ಣಿನ ಮಡಿಕೆಗಳಿಂದ ತಂಪುಪೆಟ್ಟಿಗೆಯನ್ನು ತಯಾರಿಸುವ ಪದ್ಧತಿ ಪದ್ಧತಿಯನ್ನು ಶ್ರೀ.ಮನಸುಖಭಾಯಿ ಪ್ರಜಾಪತಿಯವರು ಎಲ್ಲಕ್ಕಿಂತ ಮೊದಲು ಕಂಡು ಹಿಡಿದರು. ಅದಕ್ಕಾಗಿ ಅವರು ವಿವಿಧ ರೀತಿಯ ಮಣ್ಣುಗಳ ಮಿಶ್ರಣವನ್ನು ಮಾಡಿ ಅಧಿಕ ಸಮಯದವರೆಗೆ ನೀರನ್ನು ಹಿಡಿದಿಡುವಂತಹ ಮಣ್ಣನ್ನು ತಯಾರಿಸಿದರು ಮತ್ತು ಅದಕ್ಕೆ ತಂಪುಪೆಟ್ಟಿಗೆಯ ಆಕಾರವನ್ನು ನೀಡಿದರು. ಈ ಪದ್ಧತಿಯನ್ನು ಅವರು ‘ಪೇಟೆಂಟ್ ಮಾಡಿದ್ದಾರೆ. ಇದರಿಂದ ನಮಗೆ ಈ ಪದ್ಧತಿಯಿಂದ ತಂಪುಪೆಟ್ಟಿಗೆಗಳನ್ನು ತಯಾರಿಸಲು ಕಠಿಣವಾಗಬಹುದು, ಹಾಗೆಯೇ ಮೊದಲು ಆನ್‌ಲೈನ್ ಮಾಧ್ಯಮದಿಂದ ಈ ತಂಪುಪೆಟ್ಟಿಗೆಗಳ ಮಾರಾಟವಾಗುತ್ತಿತ್ತು; ಆದರೆ ಈಗ ಈ ರೀತಿ ಮಾರಾಟ ಮಾಡುವುದನ್ನು ಅವರು ನಿಲ್ಲಿಸಿದ್ದಾರೆ. – ಶ್ರೀ. ಋತ್ವಿಜ ಢವಣ (‘ಹೊಟೇಲ್ ಮ್ಯಾನೇಜಮೆಂಟ್ನ ಮಾಜಿ ವಿದ್ಯಾರ್ಥಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೯.೨೦೨೦)
(ಟಿಪ್ಪಣಿ : ಈ ಲೇಖನದಲ್ಲಿ ನೀಡಿದ ಮಾಹಿತಿಯು ಆಪತ್ಕಾಲದ ದೃಷ್ಟಿಯಿಂದ ಸಾಧಕರು ಮಾಡಿಕೊಳ್ಳಬೇಕಾದ ಸಿದ್ಧತೆಗಾಗಿದೆ, ಇದನ್ನು ಓದುಗರು ಗಮನಿಸಬೇಕು. – ಸಂಕಲನಕಾರರು)