ಯಾವುದೇ ಸುಂದರವಾದ ಚಿತ್ರಕ್ಕಿಂತ ನೈಸರ್ಗಿಕ ಸೌಂದರ್ಯವು ಮನಸ್ಸಿಗೆ ಹೆಚ್ಚು ಆನಂದವನ್ನು ನೀಡುತ್ತದೆ !

ಪರಾತ್ಪರ ಗುರು ಡಾ. ಆಠವಲೆ

‘ಚಿತ್ರಕಾರನು ನಿಸರ್ಗದ ಎಷ್ಟೇ ಸುಂದರವಾದ ಚಿತ್ರಗಳನ್ನು ಬಿಡಿಸಿದರೂ, ಆ ಚಿತ್ರಗಳನ್ನು ನೋಡುವುದಕ್ಕಿಂತ ಹಸಿರು ಮತ್ತು ನಯನಮನೋಹರ ನಿಸರ್ಗವನ್ನು ನೋಡುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಸಿಗುತ್ತದೆ. ನೈಸರ್ಗಿಕ ಸೌಂದರ್ಯದಲ್ಲಿರುವ ಜೀವಂತಿಕೆಯು ಮನಸ್ಸಿಗೆ ಹೆಚ್ಚು ಆನಂದ ನೀಡುತ್ತದೆ. ಆದ್ದರಿಂದ ‘ನಿಸರ್ಗವನ್ನು ನೋಡುತ್ತಲೇ ಇರಬೇಕು, ಎಂದು ನನಗೆ ಅನ್ನಿಸುತ್ತದೆ. ಸುಂದರ ಚಿತ್ರವನ್ನು ನೋಡಿದಾಗ ಹಾಗೆ ಅನ್ನಿಸುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ