ಭಗವಂತನ ಮಾರ್ಗದಲ್ಲಿ ಅಡ್ಡ ಬರುವ ಪತ್ನಿಯ ತ್ಯಾಗವನ್ನು ಮಾಡಲು ಹೇಳುವ ಶ್ರೀರಾಮಕೃಷ್ಣ ಪರಮಹಂಸರು !

‘ಮಣಿಕಾಂತನು ರಾಮಕೃಷ್ಣರ ಅನುಗ್ರಹ ಪಡೆದವನಾಗಿದ್ದನು. ೨೮ ವರ್ಷದ ಈ ಯುವಕನು ವಿವಾಹಿತನಾಗಿದ್ದನು. ಅವನಿಗೆ ಭಗವಂತನ, ರಾಮ-ಕೃಷ್ಣ ಇವರ, ಸತ್ಸಂಗದ ವಿಲಕ್ಷಣ ಸೆಳೆತವಿತ್ತು. ಅವನ ಪತ್ನಿಗೆ ಅದು ಇಷ್ಟವಾಗುತ್ತಿರಲಿಲ್ಲ. ಮಣಿಕಾಂತನು ರಾಮಕೃಷ್ಣರಿಗೆ, “ಹೆಂಡತಿಯು, ಈ ದೇವರು-ದೇವರು ಎಂಬುದನ್ನು ನಿಲ್ಲಿಸಿದರೆ ಸರಿ. ಇಲ್ಲದಿದ್ದರೆ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವೆನು. ನಿಮ್ಮ ಮೇಲೆ ಹತ್ಯೆಯ ದೋಷವನ್ನು ಹಾಕುವೆನು ಎಂದು ಹೆದರಿಸುತ್ತಾಳೆ. ನಾನು ಏನು ಮಾಡಲಿ ?, ಎಂದು ಹೇಳಿದನು.

ಶ್ರೀರಾಮಕೃಷ್ಣರು ಗಂಭೀರವಾಗಿ, ಹೊಳೆಯುವ ಕಣ್ಣುಗಳಿಂದ ನೋಡುತ್ತಾ ಉದ್ಗರಿಸುತ್ತಾರೆ, “ಭಗವಂತನ ಮಾರ್ಗದಲ್ಲಿ ಅಡ್ಡ ಬರುವ ಅವಳು ಪತ್ನಿಯಲ್ಲ ವೈರಿಯಾಗಿದ್ದಾಳೆ ! ಅವಳ ತ್ಯಾಗವನ್ನು ಮಾಡಬೇಕು. ಅವಳನ್ನು ಬಿಟ್ಟುಬಿಡು. ಅವಳು ಆತ್ಮಹತ್ಯೆ ಮಾಡಿಕೊಳ್ಳಲಿ. ಅವಳು ಏನು ಬೇಕೋ ಅದನ್ನು ಮಾಡಲಿ ! ಅದರ ಚಿಂತೆ ಮಾಡಬೇಡ ! ಈಶ್ವರನ ಬಳಿಗೆ ಹೋಗುವುದಕ್ಕೆ ಏನೆಲ್ಲ ಅಡ್ಡಿ ಬರುತ್ತದೆಯೋ, ಅದೆಲ್ಲ ಅವಿದ್ಯೆಯಾಗಿದೆ ! ಅದನ್ನು ದೂರ ಸರಿಸಬೇಕು, ಎಂದರು. (ಆಧಾರ : ಮಾಸಿಕ ‘ಘನಗರ್ಜಿತ, ಮಾರ್ಚ್ ೨೦೧೨)