ಸದ್ಗುರು ಪದವಿಯಲ್ಲಿ ವಿರಾಜಮಾನರಾದ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಪೂ. ನೀಲೇಶ ಸಿಂಗಬಾಳ

ಉತ್ತರ ಭಾರತದಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲೂ ಧರ್ಮಪ್ರಚಾರದ ಕಾರ್ಯವನ್ನು ಅತ್ಯಂತ ತಳಮಳದಿಂದ ಮಾಡುವ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಅವರು ಸದ್ಗುರು ಪದದಲ್ಲಿ ವಿರಾಜಮಾನರಾಗಿದ್ದಾರೆ.

ಸಾಧಕರೇ, ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಭಗವಂತನ ಬಗ್ಗೆ ಕೃತಜ್ಞತೆಯೆಂದು ಜೀವ ಸವೆಸಿ ಸಾಧನೆಯನ್ನು ಮಾಡಿ !

ಇಷ್ಟು ಚಿಕ್ಕ ಪೃಥ್ವಿಯ ಮೇಲಿನ ಕ್ಷುದ್ರ ಮಾನವನ ಉದ್ಧಾರಕ್ಕಾಗಿ ಅನಂತ ಕೋಟಿ ಬ್ರಹ್ಮಾಂಡಗಳ ನಾಯಕನಾದ ಶ್ರೀವಿಷ್ಣು ಸ್ವತಃ ಈ ಭೂಮಂಡಲದ ಮೇಲೆ ಅವತಾರ ತಾಳುತ್ತಾನೆ. ಅವನ ಈ ಪ್ರೀತಿಯ ಬಗ್ಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ, ಅದು ಕಡಿಮೆಯೇ ಆಗುತ್ತದೆ.

ದೇವರನ್ನು ಗುರುತಿಸಲು ಪ್ರಾರ್ಥನೆಯ ಅವಶ್ಯಕತೆ !

ದೇವರನ್ನು ಗುರುತಿಸಲು ಹಾಗೂ ಅವರ ಅಸ್ತಿತ್ವವು ದೇಹ, ಮನಸ್ಸು ಮತ್ತು ಬುದ್ಧಿಗೆ ಅರಿವಾಗಲು ಪ್ರಾರ್ಥನೆಯ ಅವಶ್ಯಕತೆಯಿರುತ್ತದೆ. ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಿಕ್ಕಿದ್ದರೆ ನಿರಂತರ ಪ್ರಾರ್ಥನೆಯನ್ನು ಮಾಡುತ್ತಿರಬೇಕು.

ಭಾವಪೂರ್ಣವಾಗಿ ದೇವತೆಗಳ ಮತ್ತು ಗುರುಗಳ ಪೂಜೆಯನ್ನು ಮಾಡಿದರೆ ಅವರು ಪ್ರಸನ್ನರಾಗಿ ನಮ್ಮ ಮೇಲೆ ಆಶೀರ್ವಾದದ ಮಳೆಗರೆಯುತ್ತಾರೆ !

ಮನೆಯಲ್ಲಿನ ಇತರ ಕೆಲಸಗಳಂತೆ ಪೂಜೆಯೂ ಒಂದು ಕೆಲಸವೆಂದು ಅಥವಾ ಕೇವಲ ಒಂದು ನಿತ್ಯಕರ್ಮವೆಂದು ಮುಗಿಸಬಾರದು. ಎಲ್ಲರ ಪಾಲನೆ ಪೋಷಣೆಯ ಕಾಳಜಿಯನ್ನು ತೆಗೆದುಕೊಳ್ಳುವ ಆ ಭಗವಂತನ ಪೂಜೆಯನ್ನು ಈ ರೀತಿ ‘ಮಾಡಿದರೆ’, ಅದಕ್ಕೆ ದೇವರ ಪೂಜೆ ಎಂದು ಹೇಳಬಹುದೇ ?

 ಪರಾತ್ಪರ ಗುರು ಡಾಕ್ಟರರು ಕಲಿಸಿದ ‘ಭಾವಜಾಗೃತಿಯ ಪ್ರಯತ್ನ’, ಈ ಪ್ರಕ್ರಿಯೆಯೇ ಆಪತ್ಕಾಲದಲ್ಲಿ ಜೀವಿಸಲಿಕ್ಕಾಗಿರುವ ಸಂಜೀವನಿ !

‘ಆಪತ್ಕಾಲದಲ್ಲಿ ಯಾರು ಎಲ್ಲಿರುತ್ತಾರೆ ?’, ಎಂಬುದು ಗೊತ್ತಿಲ್ಲ; ಆದುದರಿಂದ ಬಾಹ್ಯ ಸಂಬಂಧದಲ್ಲಿ ಸಿಲುಕಬೇಡಿ. ಆಂತರಿಕ ಸಂಬಂಧದಿಂದ ಮನುಷ್ಯನಲ್ಲಿನ ದೇವರನ್ನು ಹತ್ತಿರ ಮಾಡಿಕೊಳ್ಳಿ. ದೇವರು ನಮ್ಮನ್ನು ಎಂದಿಗೂ ದೂರ ಇಡುವುದಿಲ್ಲ.

ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

ಅನೇಕ ಸಾಧಕರು ಆ ಸ್ವಭಾವದೋಷಗಳನ್ನು ದಿನವಿಡೀ ನೆನಪಿಸಿಕೊಂಡು ದುಃಖಿಯಾಗುತ್ತಾರೆ. ಕೆಲವು ಸಾಧಕರು ಇತರರ ಗುಣಗಳೊಂದಿಗೆ ಅಥವಾ ಪ್ರಗತಿಯೊಂದಿಗೆ ತುಲನೆ ಮಾಡಿ ‘ನಾವು ಅವರಿಗಿಂತ ಹಿಂದೆ ಇದ್ದೇವೆ’ ಎಂಬುದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.

ಸಾಧನೆಯನ್ನು ಮಾಡುತ್ತಾ ಪರೀಕ್ಷೆಯಲ್ಲಿ ಸುಯಶಸ್ಸು ಕಂಡ ಸನಾತನದ ವಿದ್ಯಾರ್ಥಿ ಸಾಧಕರು

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲನ ಸನಾತನದ ಸಾಧಕರಾದ ಶ್ರೀ. ಗಣೇಶ ಸಾಲ್ಯಾನ್ ಮತ್ತು ಸೌ. ಹೇಮಾವತಿ ಸಾಲ್ಯಾನ್ ಇವರ ಮಗನಾದ ಚಿ. ಲಿಖಿತ ಗಣೇಶ ಸಾಲ್ಯಾನ್ ಇವರು ಇತ್ತೀಚೆಗೆ ನಡೆದ ೧೦ ನೇ ತರಗತಿಯ ಪರೀಕ್ಷೆಯಲ್ಲಿ ೬೨೫ ಕ್ಕೆ ೬೦೪ ಅಂದರೆ ಶೇ. ೯೬.೫೪ ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾನೆ.

ಗುರುಪೂರ್ಣಿಮೆಯ ನಂತರ ಬರುವ ಭೀಕರ ವಿಪತ್ತಿನಲ್ಲಿ ಸುರಕ್ಷಿತವಾಗಿರಲು ಗುರುರೂಪಿ ಸಂತರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ !

ಗುರುರೂಪಿ ಸಂತರಿಗೆ ಶರಣಾಗಿ ಹಾಗೂ ಅವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿರಿ. ಗುರುರೂಪಿ ಸಂತರ ಕೃಪೆಯ ಕವಚ ಅಥವಾ ಸಾಧನೆಯ ಆಧ್ಯಾತ್ಮಿಕ ಬಲ ಇವುಗಳೇ ಮುಂದಿನ ೪-೫ ವರ್ಷಗಳ ಕಾಲ ಪೃಥ್ವಿಯ ಮೇಲಿನ ಎಲ್ಲಾ ಕೆಟ್ಟ ಕಾಲದಿಂದ ನಮ್ಮನ್ನು ಪಾರು ಮಾಡಲಿವೆ. ಈ ಬಗ್ಗೆ ಶ್ರದ್ಧೆಯನ್ನು ಇಡಿರಿ !

ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಇಂದಿನ ಸ್ಥಿತಿಯಲ್ಲಿ ಸಾಮಾನ್ಯ ವ್ಯಕ್ತಿಗೆ ದೈನಂದಿನ ಜೀವನವನ್ನೂ ಜೀವಿಸಲು ಬಹಳ ಸಂಘರ್ಷ ಮಾಡಬೇಕಾಗುತ್ತಿದೆ. ಜೀವನ ಆನಂದಮಯವಾಗಲು ವ್ಯಕ್ತಿಯು ಸಾಧನೆ (ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಮಾಡಬೇಕಾದ ಪ್ರಯತ್ನಗಳು) ಮಾಡುವುದು ಆವಶ್ಯಕವಾಗಿರುತ್ತದೆ.

ಸದ್ಗುರು ಡಾ. ಚಾರುದತ್ತ ಪಿಂಗಳೆ ಕಾಕಾ ಇವರು ಹೇಳಿದ ಸುಖ-ದುಃಖದ ಪ್ರಸಂಗಗಳನ್ನು ನೋಡುವ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನದಲ್ಲಿನ ವ್ಯತ್ಯಾಸ !

ಸಾಧಕನ ಜೀವನದಲ್ಲಿ ದುಃಖದ ಪ್ರಸಂಗ ಬಂದಾಗ ‘ಇದು ನನ್ನ ಪ್ರಾರಬ್ಧದಿಂದಾಯಿತು’, ಎಂದು ಹೇಳುತ್ತಾನೆ. ಸಾಧಕನು ಸುಖ-ದುಃಖಗಳನ್ನು ಜಯಿಸಲು ಪ್ರಯತ್ನಿಸುತ್ತಿರುವುದರಿಂದ ಅವನು ಕಠಿಣ ಪ್ರಸಂಗಳಲ್ಲಿ ನಿರಾಶನಾಗದೇ ಅವುಗಳಿಂದ ಹೊರಗೆ ಬರುತ್ತಾನೆ.