ತುಮಕೂರಿನ ‘ಯೋಗ ವಿಸ್ಮಯ ಟ್ರಸ್ಟ್ನ ಯೋಗಪ್ರಶಿಕ್ಷಕರಾದ ಅನಂತಜಿ ಗುರುಜಿಯವರ ಪುತ್ರಿ ಚಿ. ಲಹರಿ (೬ ತಿಂಗಳು) ಇವಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದಳೆಂದು ಘೋಷಣೆ !

ತುಮಕೂರಿನ ‘ಯೋಗ ವಿಸ್ಮಯ ಟ್ಟಸ್ಟ್ನ ಯೋಗಪ್ರಶಿಕ್ಷಕರಾದ ಶ್ರೀ. ಅನಂತಜಿ ಗುರುಜಿಯವರ ಮಗಳು ಚಿ. ಲಹರಿ (೬ ತಿಂಗಳು) ಇವಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಳು. ಶ್ರೀ. ಅನಂತಜಿ ಗುರುಜಿಯವರು ಇಲ್ಲಿನ ಸನಾತನದ ಆಶ್ರಮದ ಸಾಧಕರಿಗೆ ಯೋಗಾಸನ ಮತ್ತು ಪ್ರಾಣಾಯಾಮಗಳ ಪ್ರಶಿಕ್ಷಣವನ್ನು ನೀಡಲು ಬಂದಿದ್ದರು.

ನಮ್ರತೆ ಹಾಗೂ ಇತರರ ವಿಚಾರ ಮಾಡುವ ಶ್ರೀ. ಅನಂತಜಿ ಗುರುಜಿ !

ಶ್ರೀ. ಅನಂತಜಿ ಗುರುಜಿಯವರು, “ಆಶ್ರಮಕ್ಕೆ ಬಂದ ದಿನದಿಂದ ಪ್ರತಿದಿನ ತಮ್ಮ ಮನಸ್ಸಿನಲ್ಲಿ ಬಹಳಷ್ಟು ಸಾತ್ತ್ವಿಕ ಭಾವವು ಜಾಗೃತವಾಗುತ್ತಿದೆ, ಎಂದು ಹೇಳಿದರು. ಶ್ರೀ. ಅನಂತಜಿಯವರು ಯಾವಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೋ, ಆಗ ಆ ಸ್ಥಳಗಳಲ್ಲಿ ಮನಸ್ಸಿನಲ್ಲಿ ಯಾವ ಭಾವ ಅಥವಾ ಭಾವನೆಗಳು ಜಾಗೃತವಾಗುತ್ತವೆ, ಎಂದು ಅವರು ಯಾವಾಗಲೂ ಅಧ್ಯಯನ ಮಾಡುತ್ತಾರೆ.

ಸೂಕ್ಷ್ಮ ಜ್ಞಾನ ಪ್ರಾಪ್ತಕರ್ತೆ ಸಾಧಕಿ ಕು. ಮಧುರಾ ಭೋಸಲೆ ಇವರಿಗೆ ಶ್ರೀ. ಅನಂತಜಿ ಗುರುಜಿಯವರ ಬಗ್ಗೆ ಗಮನಕ್ಕೆ ಬಂದ ಅಂಶಗಳು

ಶ್ರೀ. ಅನಂತಜಿ ಗುರುಜಿ ಇವರು ತುಮಕೂರಿನವರಾಗಿದ್ದು ಅವರು ‘ಯೋಗ ವಿಸ್ಮಯ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರು ಕಳೆದ ೯ ವರ್ಷ ಸಾತ್ತ್ವಿಕ ಆಹಾರ, ಯೋಗ ಹಾಗೂ ವಿವಿಧ ಮನೆ ಮದ್ದುಗಳ ವನಸ್ಪತಿಗಳ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಅವರಿಗೆ ಇವೆಲ್ಲದರ ಬಗ್ಗೆ ಆಳವಾದ ಅಧ್ಯಯನವಿದೆ. ‘ಪ್ರಜಾ ವಾಹಿನಿಯಲ್ಲಿ ಶ್ರೀ. ಅನಂತಜಿ ಗುರುಜಿ ಇವರ ಯೋಗ ಹಾಗೂ ಪ್ರಾಣಾಯಾಮ ಇವುಗಳನ್ನಧರಿಸಿದ ಮಾಲಿಕೆ ನಡೆಯುತ್ತಿದ್ದು ಅದರ ಒಟ್ಟು ೩೫ ಭಾಗಗಳು ಪೂರ್ಣವಾಗಿವೆ.

ಬಿಸಿಲಿನ ಉಪಾಯ ಮಾಡಿದ್ದರಿಂದ (ಬಿಸಿಲಿಗೆ ಮೈ ಒಡ್ಡುವುದರಿಂದ) ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಶರೀರ ಆರೋಗ್ಯಶಾಲಿಯಾಗಿರಲು ಪ್ರತಿದಿನ ಶರೀರಕ್ಕೆ ಬಿಸಿಲು ತಗಲುವುದು ಆವಶ್ಯಕವಾಗಿರುತ್ತದೆ. ಶರೀರ ಬಿಸಿಲನ್ನು ತೆಗೆದುಕೊಳ್ಳುವಾಗ ಅದನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದರ ನಿಯಮಗಳನ್ನು ಪಾಲಿಸಬೇಕು. ಪ್ರತಿದಿನ ಯೋಗ್ಯ ಪ್ರಮಾಣದಲ್ಲಿ ಮೈಮೇಲೆ ಬಿಸಿಲನ್ನು ತೆಗೆದುಕೊಳ್ಳುವುದರಿಂದ ಶರೀರದಲ್ಲಿ ಹೆಚ್ಚಾಗಿರುವ ದೋಷಗಳು (ರೋಗಕಾರಕ ದ್ರವ್ಯ) ದೂರವಾಗಲು ಸಹಾಯವಾಗುತ್ತದೆ. ಬಿಸಿಲಿನಿಂದ ಉಪಾಯ ಮಾಡಿದರೆ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ದೂರವಾಗಲು ಸಹಾಯವಾಗುತ್ತದೆ. ಇದರಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಿ ಅವನ ಆರೋಗ್ಯ ಸುಧಾರಿಸುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಅಂತರ್ಮುಖತೆಯು ಮನುಷ್ಯನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ದೈವಿ ಶಕ್ತಿಯಿಂದ ಮನುಷ್ಯನು ಸಾಮರ್ಥ್ಯವುಳ್ಳವನಾಗುತ್ತಾನೆ. ಅಂತರ್ಮುಖತೆಯ ಆಧ್ಯಾತ್ಮಿಕ ಶಕ್ತಿಯು ಮನುಷ್ಯನಿಗೆ ಯಾವುದೇ ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಕಲಿಸುತ್ತದೆ. ಕೊನೆಗೆ ಅದೇ ಅವನಿಗೆ ಅಂತರ್ಗುರುವಾಗುತ್ತದೆ. ಬಹಿರ್ಮುಖತೆಯು ಮಾತ್ರ ಮನುಷ್ಯನನ್ನು ಶಕ್ತಿಹೀನ ಮಾಡುತ್ತದೆ. ಬಹಿರ್ಮುಖತೆಯಿಂದಾಗಿ ಮನುಷ್ಯನು ಭಾವನಾಶೀಲನಾಗುತ್ತಾನೆ. ‘ಭಾವನಾಶೀಲತೆ’ ಇದು ಮನುಷ್ಯನ ದುಃಖದ ಒಂದು ಮುಖ್ಯ ಕಾರಣವಾಗಿದೆ.

ಅವಧೂತ ವಿನಯಗುರುಜಿಯವರು ಪರಾತ್ಪರ ಗುರು ಡಾ. ಆಠವಲೆಯವರ ಮತ್ತು ಅವರ ಕಾರ್ಯದ ಬಗ್ಗೆ ತೆಗೆದ ಗೌರವೋದ್ಗಾರ !

ರಾಮ-ಕೃಷ್ಣರು ಅವತಾರ ತಾಳಿದಂತೆ ಗುರುದೇವರು ಸಹ ಅವತಾರ ತಾಳಿ ಬಂದಿದ್ದು ಸಂಪೂರ್ಣ ವಿಶ್ವಕ್ಕೆ ಜ್ಞಾನದ ಶಿಕ್ಷಣವನ್ನು ನೀಡಲು ಅವರ ಜನ್ಮವಾಗಿದೆ. ಅವರ ಪ್ರತಿಯೊಂದು ಕರ್ಮವು ನಿಷ್ಕಾಮವಾಗಿದೆ. ಇದರೊಂದಿಗೆ ವಿಶ್ವದಲ್ಲಿ ಹಿಂದೂ ಧರ್ಮದ ಪ್ರತಿಷ್ಠಾಪನೆ ಮತ್ತು ಎಲ್ಲರಲ್ಲಿ ಧರ್ಮದ ಸ್ಥಾಪನೆ ಮಾಡಲು ಅವರ ಜನ್ಮವಾಗಿದೆ. ಅವರು ಕರುಣೆಯ ಸಾಗರವಾಗಿದ್ದು ಅವರಲ್ಲಿ ಮೇಲುಕೀಳೆಂಬ ಭೇದಭಾವವಿಲ್ಲ.

ಆಪತ್ಕಾಲದ ಪೂರ್ವಸಿದ್ಧತೆ : ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ವನಸ್ಪತಿಗಳನ್ನು ಸಂಗ್ರಹಿಸಿರಿ ! (ಭಾಗ ೧)

ವನಸ್ಪತಿಗಳು ತುಂಬಾ ಹಳೆಯದ್ದಾಗಿದ್ದರೆ ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಅನೇಕ ಬಾರಿ ಪೇಟೆಯಲ್ಲಿ ಸಿಗುವ ಔಷಧಿ ವನಸ್ಪತಿಗಳಲ್ಲಿ ಕಲಬೆರಕೆಯ ಪ್ರಮಾಣವು ಹೆಚ್ಚಿರುತ್ತದೆ. ಅವುಗಳಲ್ಲಿ ಧೂಳು, ಮಣ್ಣು ಮತ್ತು ಇತರ ಕಸವೂ ಇರುತ್ತದೆ. ತದ್ವಿರುದ್ಧ ಯಾವಾಗ ನಾವು ಸ್ವತಃ ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸುತ್ತೇವೆಯೋ, ಆಗ ನಮಗೆ ತಾಜಾ ಹಾಗೂ ಶುದ್ಧ ವನಸ್ಪತಿಗಳು ಸಿಗುತ್ತವೆ.

ಪ.ಪೂ. ದಾಸ ಮಹಾರಾಜರು ಮತ್ತು ರಾಮಪುರದ (ಬಾಗಲಕೋಟೆ) ಕೀರ್ತನಕಾರರಾದ ಪೂ. ಸದಾನಂದ ಭಸ್ಮೆ ಮಹಾರಾಜ ಇವರ ನಡುವಿನ ವೈಶಿಷ್ಟ್ಯಪೂರ್ಣ ಸಂವಾದ

ನಾನು ಈ ಮೊದಲು ಚಿಕ್ಕ ಕುಟೀರದಲ್ಲಿರುತ್ತಿದ್ದೆನು. ಅಲ್ಲಿಯೇ ನಮ್ಮ ಶಿಷ್ಯರೊಂದಿಗೆ ಶ್ರೀರಾಮನ ೨ ಸಾವಿರ ಕೋಟಿ ನಾಮಜಪವನ್ನು ಪೂರ್ಣ ಮಾಡಿದೆನು. ನಾಮಜಪವು ಪೂರ್ತಿಯಾದ ನಂತರ ಶಂಕರ ಶೆಟ್ಟಿ ಎಂಬ ಭಕ್ತನು ನನಗೆ ಆ ಸ್ಥಳದಲ್ಲಿ ಹೊಸ ಕಟ್ಟಡವನ್ನು ಕಟ್ಟಿಕೊಟ್ಟನು.

ರಾಮಪುರ (ಬಾಗಲಕೋಟೆ)ದ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು  ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರ ಮತ್ತು ಅವರ ಬಗೆಗಿನ ಭಾವ

‘ರಾಮಪುರ (ಬಾಗಲಕೋಟೆ)ದಲ್ಲಿನ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಅಂತರಂಗದ ಭಕ್ತರಾಗಿದ್ದಾರೆ. ಸಂತ ತುಕಾರಾಮ ಮಹಾರಾಜರು ಸೂಕ್ಷ್ಮದಿಂದ ನೀಡಿದ ಜ್ಞಾನದ ಮೂಲಕ ಭಸ್ಮೆ ಮಹಾರಾಜರು ೬ ವರ್ಷಗಳಲ್ಲಿ ‘ತುಕಾರಾಮ ಚೈತನ್ಯ’ ಎಂಬ ಹೆಸರಿನ ಕನ್ನಡ ಭಾಷೆಯಲ್ಲಿನ ಗ್ರಂಥವನ್ನು ಬರೆದರು.

ತಿರುವಣ್ಣಾಮಲೈ (ತಮಿಳುನಾಡು)ಯಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು ಕಾರ್ತಿಕ ದೀಪೋತ್ಸವ ಆಚರಣೆ !

ಇಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು, ಅಂದರೆ ೨೯ ನವೆಂಬರ್ ೨೦೨೦ ರಂದು ಅರುಣಾಚಲ ಪರ್ವತದ ಮೇಲೆ ಸಾಯಂಕಾಲ ೬ ಗಂಟೆಗೆ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಯಿತು. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮತ್ತು ಅಲ್ಲಿನ ಅರುಣಾಚಲ ಪರ್ವತದ ಮೇಲೆ ಸುಂದರವಾದ ಒಂದು ದೊಡ್ಡ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ.