‘೧೭.೮.೨೦೨೦ ರಂದು ಪ.ಪೂ. ದಾಸ ಮಹಾರಾಜ ಮತ್ತು ರಾಮಪುರದ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ವೈಶಿಷ್ಟ್ಯಪೂರ್ಣ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.
೧. ಪ.ಪೂ. ದಾಸ ಮಹಾರಾಜರು ಮತ್ತು ಭಸ್ಮೆ ಮಹಾರಾಜರು ಪರಸ್ಪರರಲ್ಲಿ ಆಶೀರ್ವಾದವನ್ನು ಬೇಡುವುದು
ಪ.ಪೂ. ದಾಸ ಮಹಾರಾಜರು : ತಾವು ಪ್ರಭು ಶ್ರೀರಾಮ ಮತ್ತು ಸಂತ ತುಕಾರಾಮ ಮಹಾರಾಜರ ಭಕ್ತರಾಗಿರುವಿರಿ. ನನಗೆ ಆಶೀರ್ವಾದವನ್ನು ನೀಡಿರಿ.
ಭಸ್ಮೆ ಮಹಾರಾಜರು : ನಾನು ನಿಮಗಿಂತ ಚಿಕ್ಕವನಿದ್ದೇನೆ. ನೀವೇ ನನಗೆ ಆಶೀರ್ವಾದವನ್ನು ನೀಡಿರಿ.
೨. ಪ.ಪೂ. ದಾಸ ಮಹಾರಾಜ ಮತ್ತು ಪೂ. ಭಸ್ಮೆ ಮಹಾರಾಜ ಇವರಿಗೆ ಬಂದಿರುವ ಒಂದೇ ತರಹದ ಅನುಭೂತಿಗಳು
ಪ.ಪೂ.ದಾಸ ಮಹಾರಾಜರು : ತಾವು ತಮ್ಮ ಶಿಷ್ಯರೊಂದಿಗೆ ಶ್ರೀರಾಮನ ೨ ಸಾವಿರ ಕೋಟಿ ನಾಮಜಪವನ್ನು ಪೂರ್ಣಗೊಳಿಸಿರುವಿರಿ. ಅನಂತರ ತಮಗೆ ಏನು ಅನುಭೂತಿ ಬಂದಿದೆ ?
ಭಸ್ಮೆ ಮಹಾರಾಜರು : ನಾನು ಈ ಮೊದಲು ಚಿಕ್ಕ ಕುಟೀರದಲ್ಲಿರುತ್ತಿದ್ದೆನು. ಅಲ್ಲಿಯೇ ನಮ್ಮ ಶಿಷ್ಯರೊಂದಿಗೆ ಶ್ರೀರಾಮನ ೨ ಸಾವಿರ ಕೋಟಿ ನಾಮಜಪವನ್ನು ಪೂರ್ಣ ಮಾಡಿದೆನು. ನಾಮಜಪವು ಪೂರ್ತಿಯಾದ ನಂತರ ಶಂಕರ ಶೆಟ್ಟಿ ಎಂಬ ಭಕ್ತನು ನನಗೆ ಆ ಸ್ಥಳದಲ್ಲಿ ಹೊಸ ಕಟ್ಟಡವನ್ನು ಕಟ್ಟಿಕೊಟ್ಟನು.
ಪ.ಪೂ. ದಾಸ ಮಹಾರಾಜರು : ನನಗೂ ಹೀಗೆಯೇ ಅನುಭೂತಿ ಬಂದಿದೆ. ನಾನು ಈ ಮೊದಲು ಬಾಂದಾ (ಪಾನವಳ)ದಲ್ಲಿ ಒಂದು ಚಿಕ್ಕದಾದ ಕುಟೀರದಲ್ಲಿರುತ್ತಿದ್ದೆನು. ಅಲ್ಲಿಯೇ ಸಾಧನೆಯನ್ನು ಮಾಡುತ್ತಿದ್ದೆನು. ನಂತರ ಓರ್ವ ಸಂತರು ಆ ಜಾಗದಲ್ಲಿ ಶ್ರೀರಾಮನ ಸುಂದರವಾದ ದೇವಸ್ಥಾನವನ್ನು ಕಟ್ಟಿದರು. ನಾನು ತಮಗೆ ಗೋವಾದ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಬೇಕು ಎಂದು ಆಮಂತ್ರಿಸುತ್ತಿದ್ದೇನೆ.
ಭಸ್ಮೆ ಮಹಾರಾಜರು : ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಶ್ರೀರಾಮನೇ ಆಗಿದ್ದಾರೆ. ನಾವು ತುಂಬಾ ಅದೃಷ್ಟವಂತರಾಗಿದ್ದೇವೆ, ನಮಗೆ ಇಂತಹ ಪಾವನ ಭೂಮಿಯಲ್ಲಿ ಕಾಲಿಡಲು ಸಿಗಲಿದೆ
೩. ಪ.ಪೂ. ದಾಸ ಮಹಾರಾಜರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಒಟ್ಟಿಗೆ ಕಾರ್ಯ ಮಾಡುವ ಬಗ್ಗೆ ಮಂಡಿಸಿದ ವಿಚಾರಗಳನ್ನು ಭಸ್ಮೆ ಮಹಾರಾಜರು ಸ್ವೀಕರಿಸುವುದು
ಪ.ಪೂ. ದಾಸ ಮಹಾರಾಜರು : ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾಕ್ಟರರ ಸಂಕಲ್ಪವಾಗಿದೆ. ಅದು ಪೂರ್ತಿಯಾಗಲು ನಾವೆಲ್ಲ ಒಟ್ಟಿಗೆ ಪ್ರಯತ್ನ ಮಾಡಬೇಕಾಗಿದೆ. ಭಾರತವು ಪಾಕಿಸ್ತಾನವಾಗಬಾರದು.
ಭಸ್ಮೆ ಮಹಾರಾಜರು : ನನ್ನ ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಳ್ಳುವರು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವು ಒಟ್ಟಿಗೆ ಕಾರ್ಯವನ್ನು ಮಾಡೋಣ.
೪. ಭಸ್ಮೆ ಮಹಾರಾಜರಿಗೆ ಪ.ಪೂ. ದಾಸ ಮಹಾರಾಜರ ಹಿಂದೆ ಹನುಮಂತನ ದರ್ಶನವಾಗುವುದು
ಭಸ್ಮೆ ಮಹಾರಾಜರು : ಹಿಂದೂ ರಾಷ್ಟ್ರವು ಬಂದೇ ಬರುತ್ತದೆ. ಈ ಕಾರ್ಯವನ್ನು ಮಾಡಲು ಪ್ರಭು ಶ್ರೀರಾಮನು, ಎಂದರೆ ಪರಾತ್ಪರ ಗುರು ಡಾಕ್ಟರರೇ ನನಗೆ ಶಕ್ತಿಯನ್ನು ಕೊಡಬೇಕು. ತಾವೂ ನನಗೆ ಶಕ್ತಿಯನ್ನು ಕೊಡಬೇಕು.
ಪ.ಪೂ. ದಾಸ ಮಹಾರಾಜರು : ತಾವು ನನಗೆ ಶಕ್ತಿಯನ್ನು ಕೊಡಬೇಕು !
ಭಸ್ಮೆ ಮಹಾರಾಜರು : ನಾವು ಮಾತನಾಡುತ್ತಿರುವಾಗ ನನಗೆ ತಮ್ಮ ಹಿಂದೆ ಹನುಮಂತನ ದರ್ಶನವಾಯಿತು. ಪ್ರಭು ಶ್ರೀರಾಮನು ಇದ್ದಲ್ಲಿ, ಅಂದರೆ ಪರಾತ್ಪರ ಗುರು ಡಾಕ್ಟರರು ಇದ್ದಲ್ಲಿ, ತಾವು ಅಂದರೆ ಹನುಮಂತನು ಇದ್ದೇ ಇರುತ್ತಾನೆ.
೫. ಭಸ್ಮೆ ಮಹಾರಾಜರಿಗೆ ಪ.ಪೂ. ದಾಸ ಮಹಾರಾಜರ ಬಗ್ಗೆ ಇರುವ ಭಾವ
‘ಭಸ್ಮೆ ಮಹಾರಾಜರು ಮತ್ತು ಪ.ಪೂ. ದಾಸ ಮಹಾರಾಜರಲ್ಲಿ ರಾತ್ರಿ ೧೦ ಗಂಟೆಗೆ ಸಂಭಾಷಣೆಯಾಯಿತು. ತದನಂತರ ಭಸ್ಮೆ ಮಹಾರಾಜರು ಒಬ್ಬ ಸಾಧಕಿಗೆ, “ನಾನು ಯಾವಾಗಲೂ ಬೇಗ ಊಟ ಮಾಡುತ್ತೇನೆ. ‘ಪ.ಪೂ. ದಾಸ ಮಹಾರಾಜರ ಸತ್ಸಂಗದಿಂದ ನನಗೆ ರಸಾಮೃತವು ಸಿಗಬೇಕು ಮತ್ತು ಅದರಲ್ಲಿ ಯಾವ ಅಡತಡೆಗಳು ಬರಬಾರದು’, ಅದಕ್ಕಾಗಿ ಪ.ಪೂ. ದಾಸ ಮಹಾರಾಜರೊಂದಿಗೆ ಮಾತನಾಡಿದ ನಂತರ ನಾನು ಊಟ ಮಾಡಬೇಕೆಂದು ನಿರ್ಧರಿಸಿದ್ದೇನೆ,” ಎಂದು ಹೇಳಿದರು.
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೮.೨೦೨೦)