ಮುಂಬರುವ ಭೀಕರ ಮಹಾ ಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಪೇಟೆಯಲ್ಲಿ ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು. ಅನುಕ್ರಮವಾಗಿ ಪ್ರಕಟವಾಗುತ್ತಿರುವ ಲೇಖನದ ಈ ವಾರದ ಭಾಗದಲ್ಲಿ ‘ನಿಸರ್ಗದಲ್ಲಿ ವನಸ್ಪತಿಗಳ ಸಂಗ್ರಹವನ್ನು ಹೇಗೆ ಮಾಡಬೇಕು’, ಇದರ ಮಾಹಿತಿಯ ಜೊತೆಗೆ ಅಣ್ಣಿಸೊಪ್ಪು ಮತ್ತು ತಗಚೆ ಈ ೨ ವನಸ್ಪತಿಗಳ ಮಾಹಿತಿಯನ್ನು ತಿಳಿದುಕೊಳ್ಳೋಣ. ಶೀಘ್ರದಲ್ಲಿಯೇ ಈ ವಿಷಯದ ಸನಾತನದ ಗ್ರಂಥವೂ ಪ್ರಕಾಶಿತಗೊಳ್ಳಲಿದೆ. ಈ ಗ್ರಂಥದಲ್ಲಿ ‘ಔಷಧಿ ವನಸ್ಪತಿಗಳನ್ನು ಒಟ್ಟು ಮಾಡಿ ಸಂಗ್ರಹಿಸಿಡುವುದು’ ಇದರ ಬಗೆಗಿನ ವ್ಯಾವಹಾರಿಕ (ಪ್ರತ್ಯಕ್ಷ ಮಾಡುವ ಕೃತಿಗಳ) ಮಾಹಿತಿಯನ್ನು ಸವಿಸ್ತಾರವಾಗಿ ನೀಡಲಾಗುವುದು.
೧. ಮಳೆಗಾಲದ ನಂತರ ಕೆಲವು ಔಷಧಿ ವನಸ್ಪತಿಗಳು ಒಣಗಿ ಹೋಗುವುದರಿಂದ ಅವುಗಳನ್ನು ಈಗಲೇ ಸಂಗ್ರಹಿಸಿರಿ !
‘ಪ್ರತಿವರ್ಷ ವರುಣದೇವತೆಯ ಕೃಪೆಯಿಂದ ಮಳೆಗಾಲದಲ್ಲಿ ನೈಸರ್ಗಿಕವಾಗಿ ಅಸಂಖ್ಯಾತ ಔಷಧಿ ವನಸ್ಪತಿಗಳು ಬೆಳೆಯುತ್ತವೆ. ಇದರಲ್ಲಿ ಕೆಲವು ವನಸ್ಪತಿಗಳು ಮಳೆಗಾಲ ಮುಗಿದ ನಂತರ ಸಾಧಾರಣ ೧ – ೨ ತಿಂಗಳುಗಳಲ್ಲಿ ಒಣಗಿ ಹೋಗುತ್ತವೆ. ಅನಂತರ ಪುನಃ ಮಳೆಗಾಲ ಬರುವವರೆಗೆ ಈ ವನಸ್ಪತಿಗಳು ಸಿಗುವುದಿಲ್ಲ. ಆದ್ದರಿಂದ ಇಂತಹ ವನಸ್ಪತಿಗಳನ್ನು ಈಗಲೇ ಸಂಗ್ರಹಿಸಿಡಬೇಕು.
೨. ಔಷಧಿ ವನಸ್ಪತಿಗಳನ್ನು ಸಂಗ್ರಹಿಸಿಡುವುದರಿಂದ ಆಗುವ ಲಾಭ
ಈ ಲೇಖನದಲ್ಲಿ ಕೊಟ್ಟಿರುವ ಔಷಧಿ ವನಸ್ಪತಿಗಳ ಪೈಕಿ ಕೆಲವು ವನಸ್ಪತಿಗಳು ಆಯುರ್ವೇದಿಕ ಔಷಧಿಗಳ ಅಂಗಡಿಗಳಲ್ಲಿ ಮಾರಾಟಕ್ಕಿರುತ್ತವೆ; ಆದರೆ ಇಂತಹ ವನಸ್ಪತಿಗಳನ್ನು ಅಂಗಡಿಗಳಲ್ಲಿ ಖರೀದಿಸುವುದಕ್ಕಿಂತ ಅವುಗಳನ್ನು ನಿಸರ್ಗದಿಂದ ಸಂಗ್ರಹಿಸುವುದು ಯಾವಾಗಲೂ ಉತ್ತಮವಾಗಿದೆ. ಮಾರಾಟಕ್ಕಾಗಿರುವ ಔಷಧಿ ವನಸ್ಪತಿಗಳು ತಾಜಾ ಇರುತ್ತವೆ, ಎಂದು ಹೇಳಲು ಬರುವುದಿಲ್ಲ. ವನಸ್ಪತಿಗಳು ತುಂಬಾ ಹಳೆಯದ್ದಾಗಿದ್ದರೆ ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಅನೇಕ ಬಾರಿ ಪೇಟೆಯಲ್ಲಿ ಸಿಗುವ ಔಷಧಿ ವನಸ್ಪತಿಗಳಲ್ಲಿ ಕಲಬೆರಕೆಯ ಪ್ರಮಾಣವು ಹೆಚ್ಚಿರುತ್ತದೆ. ಅವುಗಳಲ್ಲಿ ಧೂಳು, ಮಣ್ಣು ಮತ್ತು ಇತರ ಕಸವೂ ಇರುತ್ತದೆ. ತದ್ವಿರುದ್ಧ ಯಾವಾಗ ನಾವು ಸ್ವತಃ ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸುತ್ತೇವೆಯೋ, ಆಗ ನಮಗೆ ತಾಜಾ ಹಾಗೂ ಶುದ್ಧ ವನಸ್ಪತಿಗಳು ಸಿಗುತ್ತವೆ. ಇಂತಹ ವನಸ್ಪತಿಗಳನ್ನು ನಾವು ತೊಳೆದು ಸ್ವಚ್ಛ ಮಾಡಿಡಬಹುದು. ಇದರಿಂದ ಅವು ಸ್ವಚ್ಛವಾಗಿರುತ್ತವೆ. ವನಸ್ಪತಿಗಳನ್ನು ಸಂಗ್ರಹಿಸಿ ಸರಿಯಾಗಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಸುರಕ್ಷಿತವಾಗಿಟ್ಟರೆ ಸಾಧಾರಣ ೧ ರಿಂದ ಒಂದೂವರೆ ವರ್ಷ ಉಪಯೋಗಿಸಬಹುದು.
೩. ವನಸ್ಪತಿಗಳನ್ನು ಗುರುತಿಸಲು ಹಳ್ಳಿಗಳಲ್ಲಿ ಅದರ ಬಗ್ಗೆ ಜ್ಞಾನವಿರುವ ಅಥವಾ ಪರಿಚಿತ ವೈದ್ಯರ ಸಹಾಯವನ್ನು ಪಡೆಯಿರಿ !
ಹಳ್ಳಿಗಳಲ್ಲಿ ಹೆಚ್ಚಾಗಿ ಹಿರಿಯ ವ್ಯಕ್ತಿಗಳಿಗೆ ಬಹಳಷ್ಟು ಔಷಧಿ ವನಸ್ಪತಿಗಳ ಮಾಹಿತಿ ಇರುತ್ತದೆ. ಇಂತಹ ವ್ಯಕ್ತಿಗಳಿಗೆ ಈ ಲೇಖನದಲ್ಲಿ ನೀಡಲಾದ ವನಸ್ಪತಿಗಳ ಛಾಯಾಚಿತ್ರಗಳನ್ನು ತೋರಿಸಿ ಈ ವನಸ್ಪತಿಗಳು ಎಲ್ಲಿ ಸಿಗುತ್ತವೆ, ಎಂದು ಕೇಳಿ ಈ ವನಸ್ಪತಿಗಳ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಸಾಧ್ಯವಿದ್ದರೆ ತಮ್ಮ ಪರಿಚಯದ ವೈದ್ಯರ ಸಹಾಯವನ್ನೂ ಪಡೆಯಬಹುದು. ವೈದ್ಯರಿಗೆ ಔಷಧಿ ವನಸ್ಪತಿಗಳ ಪರಿಚಯದೊಂದಿಗೆ, ಅವುಗಳನ್ನು ಹೇಗೆ ಉಪಯೋಗಿಸಬೇಕು, ಎಂಬ ಜ್ಞಾನವೂ ಇರುತ್ತದೆ. ಯಾರಾದರೊಬ್ಬ ಕುಶಲ ವೈದ್ಯರು ಒಂದೇ ಔಷಧೀಯ ವನಸ್ಪತಿಯನ್ನು ವಿವಿಧ ರೋಗಗಳಿಗೆ ಪ್ರಭಾವಿಯಾಗಿ ಉಪಯೋಸುತ್ತಾರೆ. ಈ ಲೇಖನದಲ್ಲಿ ಕೊಡಲಾದ ವನಸ್ಪತಿಗಳ ಹೊರತಾಗಿ ಯಾರಾದರೂ ತಿಳುವಳಿಕೆಯುಳ್ಳವರು ಇತರ ವನಸ್ಪತಿಗಳ ಬಗ್ಗೆ ಹೇಳಿದರೆ ಅವುಗಳನ್ನು ಸಹ ಯೋಗ್ಯ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು.
೪. ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸುವ ಕುರಿತು ಕೆಲವು ಪ್ರಾಯೋಗಿಕ ಅಂಶಗಳು
ಅ. ಮನೆಯಿಂದ ಹೊರಗೆ ಹೋಗುವ ಮೊದಲು ಪ್ರಾರ್ಥನೆಯನ್ನು ಮಾಡಬೇಕು ಮತ್ತು ಮನೆಗೆ ಬಂದ ನಂತರ ಕೃತಜ್ಞತೆಯನ್ನು ಸಲ್ಲಿಸಬೇಕು.
ಆ. ಹೊಲಸು, ಕೊಳಚೆ ನೀರು, ಕೆಸರು, ಸ್ಮಶಾನಭೂಮಿ ಮುಂತಾದ ಸ್ಥಳಗಳಲ್ಲಿರುವ ವನಸ್ಪತಿಗಳನ್ನು ಸಂಗ್ರಹಿಸಬಾರದು. ಔಷಧೀಯ ವನಸ್ಪತಿಗಳನ್ನು ಸಂಗ್ರಹ ಮಾಡುವ ಜಾಗವು ಸ್ವಚ್ಛವಾಗಿರಬೇಕು.
ಇ. ಆ ಪರಿಸರದಲ್ಲಿ ಪ್ರದೂಷಣೆಯನ್ನುಂಟು ಮಾಡುವ, ವಿಶೇಷವಾಗಿ ಹಾನಿಕರ ರಾಸಾಯನಿಕಗಳನ್ನು ಬಿಡುವ ಕಾರ್ಖಾನೆಗಳು ಇರಬಾರದು.
ಈ. ಮುಗ್ಗಲು (ಬುರಸು) ಅಥವಾ ಹುಳ ಹಿಡಿದ ಹಾಗೆಯೇ ರೋಗವಿರುವ ವನಸ್ಪತಿಗಳನ್ನು ತೆಗೆದುಕೊಳ್ಳಬಾರದು.
ಉ. ವಿಷಕಾರಿ ವೃಕ್ಷಗಳ ಮೇಲಿನ ಔಷಧಿ ವನಸ್ಪತಿಗಳನ್ನು ತೆಗೆದುಕೊಳ್ಳಬಾರದು, ಉದಾ. ಹೆಮ್ಮುಷ್ಟಿಯ (strychnos nux-vomica) ಗಿಡದ ಮೇಲಿನ ಅಮೃತಬಳ್ಳಿಯನ್ನು ತೆಗೆದುಕೊಳ್ಳಬಾರದು.
ಊ. ಮನಸ್ಸಿಗೆ ತೊಂದರೆದಾಯಕ ಸ್ಪಂದನಗಳ ಅರಿವಾಗುವ ಜಾಗದ ವನಸ್ಪತಿಗಳನ್ನು ತೆಗೆದುಕೊಳ್ಳಬಾರದು.
ಎ. ವನಸ್ಪತಿಗಳನ್ನು ಖಚಿತ ಪಡಿಸಿಕೊಳ್ಳದೇ ಅವುಗಳನ್ನು ತೆಗೆದುಕೊಳ್ಳಬಾರದು. ತಪ್ಪು ವನಸ್ಪತಿಗಳನ್ನು ಬಳಸಿದರೆ ಹಾನಿಕರ ಪರಿಣಾಮಗಳೂ ಆಗಬಹುದು. ಆದ್ದರಿಂದ ನುರಿತವರಿಂದ ವನಸ್ಪತಿಯನ್ನು ಖಚಿತ ಪರಿಚಯ ಮಾಡಿಕೊಳ್ಳಬೇಕು.
ಏ. ಸೂರ್ಯಾಸ್ತದ ನಂತರ ಔಷಧೀಯ ವನಸ್ಪತಿಗಳನ್ನು ಕೀಳಬಾರದು.
೫. ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸಿದ ನಂತರ ಮಾಡಬೇಕಾದ ಪ್ರಕ್ರಿಯೆ
ಅ. ಸಂಗ್ರಹಿಸಿದ ವನಸ್ಪತಿಗಳನ್ನು ಹಗ್ಗದಿಂದ / ದಾರದಿಂದ ಒಟ್ಟಿಗೆ ಕಟ್ಟಿ ಅದರ ಮೇಲೆ ತಕ್ಷಣ ಹೆಸರು ಬರೆದು ಚೀಲಗಳಲ್ಲಿ ತುಂಬಬೇಕು.
ಆ. ಅವುಗಳನ್ನು ಮನೆಗೆ ತಂದು ಸ್ವಚ್ಛವಾಗಿ ತೊಳೆದಿಡಬೇಕು. ವನಸ್ಪತಿಗಳನ್ನು ತೊಳೆಯುವಾಗ ಅವುಗಳ ಬೀಜಗಳು ವ್ಯರ್ಥವಾಗದಂತೆ, ತೊಳೆಯುವ ಮೊದಲು ಅವುಗಳನ್ನು ಬೇರೆ ತೆಗೆದಿಡಬೇಕು. ವನಸ್ಪತಿಗಳನ್ನು ಬೇರುಸಹಿತ ಕಿತ್ತು ತಂದಿದ್ದರೆ ಅವುಗಳ ಬೇರುಗಳನ್ನು ಕತ್ತರಿಯಿಂದ ಕತ್ತರಿಸಿ ಗಿಡದಿಂದ ಪ್ರತ್ಯೇಕವಾಗಿಡಬೇಕು. ಬೇರುಗಳಿಗೆ ಮಣ್ಣುತಾಗಿದ್ದರೆ ಆ ಮಣ್ಣು, ವನಸ್ಪತಿಗಳನ್ನು ತೊಳೆಯುವಾಗ ಇತರ ವನಸ್ಪತಿಗಳಿಗೆ ತಾಗದಂತೆ, ಬೇರುಗಳನ್ನು ಬೇರೆ ತೊಳೆಯಬೇಕು.
ಇ. ವನಸ್ಪತಿಗಳನ್ನು ಸ್ವಚ್ಛವಾಗಿ ತೊಳೆಯಲು ಬರಬೇಕೆಂದು, ಅವುಗಳನ್ನು ಅರ್ಧ ಗಂಟೆಯಿಂದ ೧ ಗಂಟೆಯ ಕಾಲ ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಅವುಗಳ ಮೇಲಿನ ಧೂಳು ಮತ್ತು ಇತರ ಹೊಲಸು ಬೇಗನೆ ಬೇರ್ಪಡಲು ಸಹಾಯವಾಗುತ್ತದೆ.
ಈ. ವನಸ್ಪತಿಗಳು ಹಸಿಯಿರುವಾಗಲೇ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಡಬೇಕು.
ಉ. ವನಸ್ಪತಿಗಳನ್ನು ತೊಳೆದ ನಂತರ ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಸುಗಂಧಿತ ವನಸ್ಪತಿಗಳಿದ್ದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು, ನೆರಳಿನಲ್ಲಿ ಒಣಗಿಸಬೇಕು. ಒಣಗಿದ ವನಸ್ಪತಿಗಳ ಮೇಲೆ ಮುಂದಿನ ಪ್ರಕ್ರಿಯೆಯನ್ನು ತಕ್ಷಣ ಮಾಡುವುದಿಲ್ಲದಿದ್ದರೆ ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹೆಸರು ಬರೆದು ಸೀಲ್ ಮಾಡಿಡಬೇಕು. ವನಸ್ಪತಿಗಳ ಸೀಲ್ ಮಾಡಿದ ಚೀಲಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ಇಡಬೇಕು.
ಊ. ಒಣಗಿಸಿಟ್ಟ ವನಸ್ಪತಿಗಳನ್ನು ಅಥವಾ ಅವುಗಳ ಚೂರ್ಣಗಳನ್ನು ತಯಾರಿಸಿಟ್ಟ ನಂತರ ಉಪಯೋಗಿಸಿಲ್ಲ ಎಂದಾದರೆ ನಿಗದಿತ ಅವಧಿಯಲ್ಲಿ ಆಗಾಗ ಡಬ್ಬಗಳನ್ನು ತೆರೆದು ಅವು ಸುಸ್ಥಿತಿಯಲ್ಲಿವೆಯೋ ಎಂದು ಪರಿಶೀಲನೆ ಮಾಡಬೇಕು.
ಎ. ಚೆನ್ನಾಗಿ ಒಣಗಿದ ವನಸ್ಪತಿಗಳ ಚಿಕ್ಕ ತುಂಡುಗಳನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಡಬೇಕು. ಮಿಕ್ಸರ್‌ನಲ್ಲಿ ಮಾಡಿದ ಪುಡಿಯನ್ನು ಜರಡಿ ಹಿಡಿಯಬೇಕು. ಜರಡಿಯಲ್ಲಿ ಉಳಿದ ಪುಡಿಯನ್ನು ಪುನಃ ಮಿಕ್ಸರ್‌ನಲ್ಲಿ ಹಾಕಿ ಪುಡಿ ಮಾಡಬೇಕು ಅಥವಾ ಹಾಗೆಯೇ ಬೇರೆ ಚೀಲದಲ್ಲಿ ಇಡಬೇಕು. ವನಸ್ಪತಿಯ ನುಣ್ಣನೆಯ ಪುಡಿಗೆ ‘ಚೂರ್ಣ ಮತ್ತು ಜರಡಿಯಲ್ಲಿ ಉಳಿದ ಪುಡಿಗೆ ‘ಯವಕುಟ ಚೂರ್ಣ ಅಥವಾ ‘ಭರಡ (ನುಚ್ಚು) ಎಂದು ಹೇಳುತ್ತಾರೆ. ಚೂರ್ಣವನ್ನು ಹೊಟ್ಟೆಗೆ ಸೇವಿಸಲು ಅಥವಾ ಲೇಪನಕ್ಕಾಗಿ ಮತ್ತು ಭರಡನ್ನು ಕಶಾಯವನ್ನು ಮಾಡಲು ಉಪಯೋಗಿಸಲು ಬರುತ್ತದೆ. ಎಲ್ಲ ಚೂರ್ಣವನ್ನು ಒಟ್ಟಿಗೆ ಒಂದೇ ಚೀಲದಲ್ಲಿ ತುಂಬಿಸಿಡುವುದಕ್ಕಿಂತ ಸಾಧಾರಣ ೧೫ ಚಮಚಗಳಷ್ಟು ಚೂರ್ಣವನ್ನು ಚಿಕ್ಕ ಚಿಕ್ಕ ಚೀಲಗಳಲ್ಲಿ ತುಂಬಬೇಕು. ಪ್ರತಿಯೊಂದು ಚೀಲದ ಮೇಲೆ ಚೂರ್ಣದ ಹೆಸರು ಮತ್ತು ಉತ್ಪಾದನೆಯ ದಿನಾಂಕ ಬರೆದು ಅವುಗಳನ್ನು ಸೀಲ್ ಮಾಡಿ ಗಾಳಿಯಾಡದ ಡಬ್ಬಿಗಳಲ್ಲಿ ಇಡಬೇಕು. ಹೀಗೆ ಮಾಡಿದರೆ ಚೂರ್ಣವು ಹೆಚ್ಚು ಸುರಕ್ಷಿತವಾಗಿರುತ್ತದೆ.
೬. ವನಸ್ಪತಿಗಳನ್ನು ಒಟ್ಟು ಮಾಡುವಾಗ ಸಿಗುವ ಬೀಜಗಳಿಂದ ನಾವೇ ಗಿಡಗಳನ್ನು ಬೆಳೆಸಬಹುದು !
ಕೆಲವು ವನಸ್ಪತಿಗಳು ನೈಸರ್ಗಿಕವಾಗಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಾದರೂ ಅವುಗಳನ್ನು ನಾವೇ ಬೆಳೆಸುವುದು ಯೋಗ್ಯವಾಗಿದೆ. ನಾವೇ ಗಿಡಗಳನ್ನು ಬೆಳೆಸಿದರೆ (ಕೃಷಿಮಾಡಿದರೆ) ನಮ್ಮ ಆವಶ್ಯಕತೆಗನುಸಾರ ಬೇಕಾದಾಗ ವನಸ್ಪತಿಗಳು ಲಭ್ಯವಾಗುತ್ತವೆ. ಔಷಧಿ ವನಸ್ಪತಿಗಳನ್ನು ಸಂಗ್ರಹಿಸುವಾಗ ಆ ವನಸ್ಪತಿಗಳ ಬೀಜಗಳನ್ನೂ ಬೇರೆ ತೆಗೆದಿಡಬೇಕು. ಯಾರಿಗೆ ಸಾಧ್ಯವಿದೆಯೋ, ಅವರು ಈ ವನಸ್ಪತಿಗಳನ್ನು ತಮ್ಮ ಮನೆಯ ಹಿಂಭಾಗದಲ್ಲಿ ಅಥವಾ ಹೊಲದಲ್ಲಿ ಬೆಳೆಸಬೇಕು. ಯಾವ ವನಸ್ಪತಿಗಳನ್ನು ಬೆಳೆಸಬೇಕು, ಎಂಬುದನ್ನು ಮುಂದೆ ಆಯಾ ವನಸ್ಪತಿಗಳ ಮಾಹಿತಿಯಲ್ಲಿ ನೀಡಲಾಗಿದೆ.
೭. ರಸ್ತೆಯಲ್ಲಿ ಓಡಾಡುವಾಗ ನಮಗೆ ಕಾಣಿಸುವ ವನಸ್ಪತಿಗಳ ನಿರೀಕ್ಷಣೆಯನ್ನು ಮಾಡುವ ಅಭ್ಯಾಸವನ್ನು ಮಾಡಿರಿ !
ನಾವು ರಸ್ತೆಯಲ್ಲಿ ಓಡಾಡುವಾಗ ಅನೇಕ ವನಸ್ಪತಿಗಳನ್ನು ನೋಡುತ್ತೇವೆ; ಆದರೆ ಅವು ಔಷಧೀಯ ವನಸ್ಪತಿಗಳಾಗಿವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಈ ಲೇಖನದಲ್ಲಿ ನೀಡಿದ ವನಸ್ಪತಿಗಳು ಎಲ್ಲೆಡೆ ಕಂಡುಬರುವ ವನಸ್ಪತಿಗಳಾಗಿವೆ. ಈ ವನಸ್ಪತಿಗಳನ್ನು ರಸ್ತೆಯಲ್ಲಿ ಓಡಾಡುವಾಗ ಸಹಜವಾಗಿ ಗುರುತಿಸಬಹುದು. ಇವು, ಹಾಗೆಯೇ ಇತರ ವನಸ್ಪತಿಗಳ ನಿರೀಕ್ಷಣೆಯನ್ನು ಮಾಡಲು ಮತ್ತು ಅವುಗಳ ಪರಿಚಯ ಮಾಡಿಕೊಳ್ಳಲು ನಾವು ಸ್ವತಃ ಅಭ್ಯಾಸವನ್ನು ಮಾಡಿಕೊಂಡರೆ, ಭೀಕರ ಆಪತ್ಕಾಲದಲ್ಲಿ ನಮಗೆ ಅವುಗಳನ್ನು ಬಳಸಲು ಸಾಧ್ಯವಾಗುವುದು.
೮. ವನಸ್ಪತಿಗಳ ಮಾಹಿತಿಯನ್ನು ಓದುವಾಗ ಉಪಯುಕ್ತವಾದ ಕೆಲವು ಸಾಮೂಹಿಕ ಸೂಚನೆಗಳು
ಅ. ಮುಂದೆ ಕೊಡಲಾದ ವನಸ್ಪತಿಗಳ ಮಾಹಿತಿಯಲ್ಲಿ ವನಸ್ಪತಿಗಳ ಲ್ಯಾಟಿನ್ ಹೆಸರು ಮತ್ತು ಕುಲವನ್ನೂ ಕೊಡಲಾಗಿದೆ. ಇವು ಆಧುನಿಕ ವನಸ್ಪತಿಶಾಸ್ತ್ರದಲ್ಲಿನ ಸಂಜ್ಞೆಗಳಾಗಿವೆ. ಇವುಗಳ ಮೂಲಕ ಅಂತರ್ಜಾಲದಲ್ಲಿ ಈ ವನಸ್ಪತಿಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಲು ಸುಲಭವಾಗುತ್ತದೆ.
ಆ. ಆರಂಭದಲ್ಲಿ ಔಷಧಿ ವನಸ್ಪತಿಗಳ ಉಪಯೋಗವನ್ನು ಕೊಡಲಾಗಿದೆ. ದೊಡ್ಡವರಿಗೆ ವನಸ್ಪತಿಗಳ ಚೂರ್ಣ ಇತ್ಯಾದಿ ಸಾಮಾನ್ಯವಾಗಿ ಎಷ್ಟು ಪ್ರಮಾಣದಲ್ಲಿ ಕೊಡಬೇಕು, ಎಂಬುದನ್ನು ಅದರ ಮುಂದಿನ ಉಪ ಅಂಶದಲ್ಲಿ ಕೊಡಲಾಗಿದೆ. ೩ ರಿಂದ ೭ ವಯೋಮಾನದವರಿಗೆ ದೊಡ್ಡವರ ಅಳತೆಯ ಕಾಲು ಪ್ರಮಾಣದಲ್ಲಿ ಮತ್ತು ೮ ರಿಂದ ೧೪ ವಯೋಮಾನದವರಿಗೆ ವಯಸ್ಕರರ ಅಳತೆಯ ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.
ಇ. ಔಷಧದ ಉಪಯುಕ್ತತೆಗನುಸಾರ ೪ ಜನರ ಕುಟುಂಬಕ್ಕಾಗಿ ತಾಜಾ (ಒಣಗಿದ್ದಲ್ಲ) ವನಸ್ಪತಿಯನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಬೇಕು, ಎಂಬುದನ್ನು ಇಲ್ಲಿ ಕೊಡಲಾಗಿದೆ. ಇದು ಕೇವಲ ಮಾರ್ಗದರ್ಶಕ ಅಂದಾಜಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಆವಶ್ಯಕತೆಗನುಸಾರ ವನಸ್ಪತಿಗಳನ್ನು ಸಂಗ್ರಹಿಸಬೇಕು.
ಈ. ಎಲ್ಲಿ ಔಷಧಗಳ ಪ್ರಮಾಣವನ್ನು ಚಮಚಗಳಲ್ಲಿ ಕೊಡಲಾಗಿದೆ, ಅಲ್ಲಿ ಚಮಚ ಎಂದರೆ ಮಧ್ಯಮ ಆಕಾರದ ಚಮಚವನ್ನು ತೆಗೆದುಕೊಳ್ಳಬೇಕು.
೯. ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ವನಸ್ಪತಿಗಳು
೯ ಅ. ಅಣ್ಣಿಸೊಪ್ಪು
೯ ಅ ೧. ಮರಾಠಿ ಹೆಸರುಗಳು : ಕುರ್ಡೂ ಹರಳೂ
೯ ಅ ೨. ಸಂಸ್ಕೃತ ಹೆಸರು : ಶಿತಿವಾರ
೯ ಅ ೩. ಲ್ಯಾಟಿನ್ ಹೆಸರು : Celosia argentea
೯ ಅ ೪. ಕುಲ : Amaranthaceae
೯ ಅ ೫. ಉಪಯೋಗ
ಅ. ಔಷಧೀಯ ಉಪಯೋಗ
೧. ಈ ವನಸ್ಪತಿಯು ಎಲ್ಲ ಪ್ರಕೃತಿಗಳ ಜನರಿಗೆ ಹೊಂದುವ ಮತ್ತು ಎಲ್ಲರಿಗೂ ಸುರಕ್ಷಿತವಾಗಿದೆ, ಅದು ಅಪಾಯ ಮಾಡದಿರುವುದಾಗಿದೆ.
೨. ಮೂತ್ರಕಲ್ಲು ಮತ್ತು ಮೂತ್ರದ ಸಮಸ್ಯೆಗಳಿಗೆ ಇದು ಹೆಸರಾಂತ ಔಷಧಿಯಾಗಿದೆ. ಮೂತ್ರಕಲ್ಲಿಗೆ ನಿವಾರಣೆಗೆ ಇದರ ಬೀಜಗಳು ಹೆಚ್ಚು ಉಪಯುಕ್ತವಾಗಿವೆ. ಮೂತ್ರಕಲ್ಲಿಗಾಗಿ, ಹಾಗೆಯೇ ತಡೆಗಟ್ಟಿದ ಮೂತ್ರ ವಿಸರ್ಜನೆಯಾಗಲು ೧ ಚಮಚ ಕಲ್ಲುಸಕ್ಕರೆಯೊಂದಿಗೆ ೧ ಚಮಚದಷ್ಟು ಬೀಜಗಳನ್ನು ಸೇವಿಸಬೇಕು.
೩. ಈ ವನಸ್ಪತಿಯು ತಂಪು ಗುಣಧರ್ಮದ್ದಾಗಿದ್ದು, ಇದು ಶರೀರದಲ್ಲಿ ಯಾವುದೇ ಕಾರಣದಿಂದ ಹೆಚ್ಚಾದ ಉಷ್ಣತೆಯನ್ನು ಕಡಿಮೆ ಮಾಡುವುದಾಗಿದೆ. ದಡಾರ, ಸಿಡುಬು (chickenpox), ಸರ್ಪಸುತ್ತು ಇವುಗಳಂತಹ ರೋಗಗಳಿಂದ ಶರೀರದಲ್ಲಿ ನಿರ್ಮಾಣವಾದ ಉಷ್ಣತೆ, ಆಲೋಪತಿ ಔಷಧಿಗಳಿಂದಾಗುವ ಉಷ್ಣತೆ, ಕೆಂಗಣ್ಣು ಬರುವುದು (conjunctivits) ಮುಖದ ಮೇಲೆ ಮೊಡವೆಗಳಾಗುವುದು (ಪಿಂಪಲ್ಸ), ಶರೀರದ ಮೇಲೆ ಗುಳ್ಳೆಗಳು ಏಳುವುದು, ರಕ್ತ ಮೂಲವ್ಯಾಧಿ, ಮಾಸಿಕ ಸರದಿಯ ಅಥವಾ ಇತರ ಸಮಯದಲ್ಲಿ ಯೋನಿಮಾರ್ಗದಿಂದ ಹೆಚ್ಚು ರಕ್ತಸ್ರಾವವಾಗುವುದು, ಉರಿಮೂತ್ರವಾಗುವುದು, ಹಾಗೆಯೆ ತಲೆ ತಿರುಗುವುದು ಮುಂತಾದ ಉಷ್ಣತೆಯ ರೋಗಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ.
೪. ಇದು ರಕ್ತವನ್ನು (ಹಿಮೊಗ್ಲೊಬಿನ್) ಹೆಚ್ಚಿಸುವ ಮತ್ತು ದಣಿವನ್ನು ದೂರ ಮಾಡುವ ಔಷಧಿಯಾಗಿದೆ. ಇದರಲ್ಲಿ ಲೋಹ, ಸುಣ್ಣ (calcium), ಸತು (Zink), ಪೊಟ್ಯಾಶಿಯಮ್ ಮುಂತಾದ ಖನಿಜಗಳು ಬಹಳಷ್ಟು ಪ್ರಮಾಣದಲ್ಲಿರುತ್ತವೆ. ಇದರ ಸೊಪ್ಪನ್ನು ಆಹಾರದಲ್ಲಿ ಬಳಸಬೇಕು.
೫. ಕಣ್ಣುಗಳ ರೋಗಗಳು, ಅತಿಸಾರ (ಭೇದಿ), ಶರೀರದಿಂದ (ಯೋನಿಮಾರ್ಗದ ಮೂಲಕ) ಬಿಳಿ ಸೆರಗು ಹೋಗುವುದು, ಚರ್ಮರೋಗ, ಹಾಗೆಯೇ ಹುಣ್ಣುಗಳು ಮಾಯಲು ಪಂಚಾಂಗ (ಪಂಚಾಂಗ ಅಂದರೆ ಪೂರ್ಣ ವನಸ್ಪತಿ)ದ ಚೂರ್ಣವನ್ನು ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
೬. ವೀರ್ಯವೃದ್ಧಿಗಾಗಿ ೧ ಚಮಚದಷ್ಟು ಬೀಜವನ್ನು ೧ ಬಟ್ಟಲು ಹಾಲು ಮತ್ತು ೨ ಚಮಚಗಳಷ್ಟು ತುಪ್ಪದೊಂದಿಗೆ ತೆಗೆದುಕೊಳ್ಳಬೇಕು.
೭. ಅಮಲು ಪದಾರ್ಥಗಳ (ಉದಾ. ಭಾಂಗ, ಗಾಂಜಾ) ಹೆಚ್ಚು ಪರಿಣಾಮವಾದಾಗ ಅದನ್ನು ಇಳಿಸಲು ಈ ವನಸ್ಪತಿಗಳ ಬೇರುಗಳನ್ನು ತಣ್ಣಗಿನ ನೀರಿನಲ್ಲಿ ತೇಯ್ದು ಕೊಡುತ್ತಾರೆ.
೮. ಅನಾರೋಗ್ಯದ ಸ್ಥಿತಿಯಿಂದ ಹೊರಗೆ ಬಂದ ನಂತರ, (ಯಾವುದಾದರೊಂದು ರೋಗ ಗುಣವಾದ ನಂತರ) ಸ್ನಾನದ ನೀರನ್ನು ಬಿಸಿ ಮಾಡುವಾಗ ಆ ನೀರಿನಲ್ಲಿ ಈ ವನಸ್ಪತಿಯನ್ನು ಹಾಕಬೇಕು, ನಂತರ ಆ ನೀರನ್ನು ಸೋಸಿ ಅದರಿಂದ ಸ್ನಾನ ಮಾಡಬೇಕು.
ಆ. ಆಹಾರದಲ್ಲಿ ಇದರ ಉಪಯೋಗ
೧. ಇದರ ಎಳೆಯ ಎಲೆಗಳ ಪಲ್ಯ ರುಚಿಕರ ಮತ್ತು ಪೌಷ್ಟಿಕವಾಗಿರುತ್ತದೆ. ಆಪತ್ಕಾಲದಲ್ಲಿ ಆಹಾರಧಾನ್ಯಗಳ ಅಭಾವವಿದ್ದಾಗ ಇದನ್ನು ಆಹಾರವೆಂದು ಉಪಯೋಗಿಸಬಹುದು.
೨. ಬೀಜಗಳಿಂದ ಅಡಿಗೆಯ ಎಣ್ಣೆಯನ್ನು ತೆಗೆಯಬಹುದು.
೯ ಅ ೬. ವನಸ್ಪತಿಯನ್ನು ಗುರುತಿಸುವ ಕುರುಹುಗಳು : ಮಳೆಗಾಲದ ಕೊನೆಯಲ್ಲಿ ರಸ್ತೆಯ ಬದಿಗೆ, ಹಾಗೆಯೇ ಬಯಲು ಭೂಮಿಯಲ್ಲಿ ಈ ವನಸ್ಪತಿಯು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಸೊಂಟದಷ್ಟು ಎತ್ತರದವರೆಗೆ ಬೆಳೆಯುವ ಈ ವನಸ್ಪತಿಯ ಚಂಡಿಕೆಯ ಮೇಲೆ ಬಿಳಿ ಮತ್ತು ಗುಲಾಬಿ ಬಣ್ಣದ ಶಂಖದ ಆಕಾರದ ತುರಾಯಿಗಳಿರುತ್ತವೆ. (ಛಾಯಾಚಿತ್ರವನ್ನು ನೋಡಿರಿ.) ಈ ತುರಾಯಿಗಳಲ್ಲಿ ಕಪ್ಪು ಬಣ್ಣದ ಸಾಸಿವೆಗಿಂತ ಚಿಕ್ಕ ಆಕಾರದ ಬೀಜಗಳಿರುತ್ತವೆ. ಇದು ಹರವಿಯ (‘ಹರವಿ ಹೆಸರಿನ ಪಲ್ಯ) ಕುಲದ ವನಸ್ಪತಿಯಾಗಿದೆ.
೯ ಅ ೭. ಸಂಗ್ರಹಿಸುವ ಭಾಗ
ಅ. ಸಾಧಾರಣ ಬೇರುಗಳೊಂದಿಗೆ ೫ ಕಿಲೋ ಸಂಪೂರ್ಣ ವನಸ್ಪತಿಯನ್ನು ಸಂಗ್ರಹಿಸಿ ಅದರ ಚೂರ್ಣವನ್ನು ಮಾಡಿಡಬೇಕು.
ಆ. ಒಂದು ಚೀಲದ ತುಂಬ ತುರಾಯಿಗಳನ್ನು ಸಂಗ್ರಹಿಸಬೇಕು. ತುರಾಯಿಗಳನ್ನು ಸಂಗ್ರಹಿಸುವ ಮೊದಲು ಕೆಲವು ತುರಾಯಿಗಳನ್ನು ಕೈಗಳಿಂದ ತಿಕ್ಕಿ ಅದರಲ್ಲಿ ಬೀಜಗಳು ಪರಿಪಕ್ವವಾಗಿವೆಯೇ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಪಕ್ವ ಬೀಜಗಳು ಕಪ್ಪು ಬಣ್ಣದ್ದಾಗಿರುತ್ತವೆ. ತುರಾಯಿಗಳನ್ನು ತೆಗೆದ ನಂತರ ಅವುಗಳನ್ನು ತೊಳೆಯದೇ ಬಿಸಿಲಿನಲ್ಲಿ ಒಣಗಿಸಿ ಕೈಗಳಿಂದ ತಿಕ್ಕಿ ಅಥವಾ ಕೋಲಿನಿಂದ ಬಡಿದು ಅವುಗಳಲ್ಲಿನ ಬೀಜಗಳನ್ನು ಸಂಗ್ರಹಿಸಿಡಬೇಕು. ಆವಶ್ಯಕವೆನಿಸಿದರೆ ಬೀಜಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿಡಬಹುದು.
ಇ. ಬೀಜಗಳನ್ನು ತೆಗೆದ ನಂತರ ಉಳಿದ ತುರಾಯಿಗಳ ಪುಡಿಯನ್ನು ಬೇರೇ ತೆಗೆದಿಡಬೇಕು ಮತ್ತು ಸ್ನಾನದ ನೀರಿನಲ್ಲಿ ಹಾಕಿ ಉಪಯೋಗಿಸಬೇಕು.
೯ ಅ ೮. ಅಳತೆ (ಪ್ರಮಾಣ)
ಅ. ೧ ಚಮಚದಷ್ಟು ಪಂಚಾಂಗ (ಪೂರ್ಣ ವನಸ್ಪತಿ) ಚೂರ್ಣವನ್ನು ದಿನದಲ್ಲಿ ೨ – ೩ ಬಾರಿ ಒಂದು ಬಟ್ಟಲು ನೀರಿನಲ್ಲಿ ಸೇರಿಸಿ ಸೇವಿಸಬೇಕು.
ಆ. ೧ ಚಮಚದಷ್ಟು ಬೀಜವನ್ನು ಒಂದು ಬಟ್ಟಲು ನೀರಿನೊಂದಿಗೆ ಸೇವಿಸಬೇಕು.
ಇ. ಲಭ್ಯವಿದ್ದಾಗ ಇದರ ಎಲೆಗಳ ಪಲ್ಯವನ್ನು ಮಾಡಬಹುದು.
೯ ಅ ೯. ಕೃಷಿ : ‘ಈ ವನಸ್ಪತಿಯು ನಮಗೆ ಬೇಕಾದಾಗ ಲಭ್ಯವಾಗಲು ನಮ್ಮ ಹಿತ್ತಲಿನಲ್ಲಿ ಅಥವಾ ತಾರಸಿಯ ಮೇಲಿನ ಉದ್ಯಾನದಲ್ಲಿ ಇದನ್ನು ಬೆಳೆಸಬಹುದು. ಇದರ ಬೀಜಗಳು ಬಿತ್ತಿದ ೫ ರಿಂದ ೭ ದಿನಗಳಲ್ಲಿ ಮೊಳಕೆ ಒಡೆಯುತ್ತವೆ. ೩೦ ರಿಂದ ೪೦ ದಿನಗಳಲ್ಲಿ ಉತ್ತಮ ಸೊಪ್ಪು ಸಿಗುತ್ತದೆ. ೮೦ ರಿಂದ ೯೦ ದಿನಗಳಲ್ಲಿ ಬೀಜಗಳು ಪರಿಪಕ್ವವಾಗುತ್ತವೆ. ಎಳೆಯ ಎಲೆಗಳನ್ನು ಕೀಳುತ್ತಾ ಹೋದರೆ ಬೀಜಗಳು ತಡವಾಗಿ ಸಿಗುತ್ತವೆ. ಸೊಪ್ಪಿಗಾಗಿ ಈ ವನಸ್ಪತಿಯನ್ನು ಬೆಳೆಸುವುದಿದ್ದರೆ ಚೆನ್ನಾಗಿ ನೀರು-ಗೊಬ್ಬರವನ್ನು ಹಾಕಿದರೆ ಉತ್ತಮ ಎಲೆಗಳು ಸಿಗುತ್ತವೆ. ೧೦ x ೧೦ ಮೀಟರ್‌ನ ಪರಿಸರದಲ್ಲಿ ಇದನ್ನು ಬೆಳೆಸಿದರೆ ಒಂದೇ ಬಾರಿಗೆ ೧೦ ರಿಂದ ೧೫ ಕಿಲೋ ಸೊಪ್ಪು ಸಿಗುತ್ತದೆ.
೯ ಅ ೧೦. ವನಸ್ಪತಿಯನ್ನು ಯಾರು ಬಳಸಬಾರದು ? : ಈ ವನಸ್ಪತಿಯ ಬೀಜಗಳನ್ನು ಹೊಟ್ಟೆಗೆ ಸೇವಿಸಿದ ನಂತರ ಕಣ್ಣುಗಳ ಪಾಪೆಗಳು ಸ್ವಲ್ಪ ಪ್ರಮಾಣದಲ್ಲಿ ತೆರೆಯುತ್ತವೆ. ಆದ್ದರಿಂದ ಯಾರಿಗೆ ಗ್ಲುಕೋಮಾದ ತೊಂದರೆ ಇದೆಯೋ, ಅವರು ಇದರ ಬೀಜಗಳನ್ನು ಸೇವಿಸಬಾರದು.
(ಆಧಾರ : http://tropical.theferns.info/viewtropical.php?id=Celosia+argentea (೧೬.೧೧.೨೦೨೦))
೯ ಆ. ತಗಚೆ
೯ ಆ ೧. ಇತರ ಮರಾಠಿ ಹೆಸರುಗಳು : ತರೋಟಾ, ಟಾಕಳಿ,
೯ ಆ ೨. ಸಂಸ್ಕೃತ ಹೆಸರುಗಳು : ಚಕ್ರಮರ್ದ್, ಎಡ್‌ಗಜ್
೯ ಆ ೩. ಲ್ಯಾಟಿನ್ ಹೆಸರುಗಳು : Senna tora, Senna obtusifolia
೯ ಆ ೪. ಕುಲ : Fabaceae
೯ ಆ ೫. ಉಪಯೋಗ
ಅ. ಔಷಧೀಯ ಉಪಯೋಗ
೧. ಇದರ ಸಂಸ್ಕೃತ ಹೆಸರು ‘ಚಕ್ರಮರ್ದ ಎಂದಾಗಿದೆ. ‘ಚಕ್ರ ಎಂದರೆ ‘ಗಜಕರ್ಣ. ಅದನ್ನು ‘ಮರ್ದ್, ಅಂದರೆ ನಾಶ ಮಾಡುವ ವನಸ್ಪತಿ ಎಂದು ಇದಕ್ಕೆ ‘ಚಕ್ರಮರ್ದ್ ಎಂದು ಹೇಳುತ್ತಾರೆ. ಕಜ್ಜಿ, ತದ್ದು, ಗಜಕರ್ಣ ಈ ಬುರುಸುಜನ್ಯ ಚರ್ಮರೋಗಗಳಿದ್ದಲ್ಲಿ (Fungal infection) ಇದರ ರಸವನ್ನು ದಿನದಲ್ಲಿ ೩ – ೪ ಬಾರಿ ಚರ್ಮದ ಮೇಲೆ ಹಚ್ಚಿದರೆ ಈ ರೋಗಗಳು ಗುಣವಾಗುತ್ತವೆ.
೨. ‘ತಗಚೆಯ ರಸವನ್ನು ಶರೀರಕ್ಕೆ (ವಿಶೇಷವಾಗಿ ಹೊಟ್ಟೆ, ನಿತಂಬ, ಸ್ತನಗಳು, ಕುತ್ತಿಗೆ ಈ ಭಾಗಗಳ ಮೇಲೆ) ಹಚ್ಚಿದರೆ ಅಥವಾ ಪಂಚಾಂಗದ (ಪೂರ್ಣ ವನಸ್ಪತಿಯ) ಚೂರ್ಣವನ್ನು ಲೇಪನದಂತೆ ಶರೀರಕ್ಕೆ ಉಜ್ಜಿದರೆ ಅನಾವಶ್ಯಕ ಕೊಬ್ಬು ಕಡಿಮೆಯಾಗಿ ಶರೀರವು ಸುಂದರವಾಗುತ್ತದೆ. ಹೆಚ್ಚಿನ ಲಾಭಕ್ಕಾಗಿ ಪ್ರತಿದಿನ ಸೂರ್ಯನಮಸ್ಕಾರಗಳನ್ನು ಮಾಡಬೇಕು.
೩. ತಗಚೆಯ ರಸ ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ತ್ವಚೆಯ ಮೇಲೆ ಉಜ್ಜಿ ಹಚ್ಚಬೇಕು. ಇದರಿಂದ ತ್ವಚೆಯು ಕೋಮಲ ಮತ್ತು ಕಾಂತಿಮಯವಾಗುತ್ತದೆ. ತ್ವಚೆಯ ಮೇಲಿನ ಅನಾವಶ್ಯಕ ಜಿಡ್ಡು, ಶರೀರ ಕಪ್ಪಾಗಿ ಕಾಣಿಸುವುದು, ಶರೀರ ಜಡ್ಡುಗಟ್ಟುವುದು ಮುಂತಾದವುಗಳು ಕಡಿಮೆಯಾಗುತ್ತವೆ. ರಸವಿಲ್ಲದಿದ್ದರೆ ತಗಚೆಯ ಚೂರ್ಣ ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಉಪಯೋಗಿಸಬೇಕು.
೪. ಜಂತುಗಳಾಗುವ ಪ್ರವೃತ್ತಿ ಇರುವವರು ೨ ಚಮಚಗಳಷ್ಟು ತಗಚೆಯ ಬೀಜಗಳನ್ನು ಕಚ್ಚಿ ತಿನ್ನಬೇಕು ಮತ್ತು ಒಂದು ಗಂಟೆಯ ನಂತರ ೨ ಚಮಚಗಳಷ್ಟು ಹರಳೆಣ್ಣೆ (castrol oil) ಕುಡಿದು ಅನಂತರ ಅರ್ಧ ಬಟ್ಟಲು ಬಿಸಿನೀರು ಕುಡಿಯಬೇಕು. ಇದರಿಂದ ಜಂತುಗಳು ಮಲದೊಂದಿಗೆ ಹೊರಬೀಳುತ್ತವೆ.
೫. ತುಂಬಾ ಕೆಮ್ಮು ಬರುವುದು, ಎದೆಯಲ್ಲಿ ಕಫ ತುಂಬುವುದು, ದಮ್ಮು ಬರುವುದು, ಶರೀರ ಜಡವಾಗುವುದು, ಮಂಪರು ಬರುವುದು ಈ ಅವಸ್ಥೆಗಳಲ್ಲಿ ತಗಚೆಯ ಬೀಜಗಳ ೨ ಚಮಚಗಳಷ್ಟು ಚೂರ್ಣವನ್ನು ೪ ಕಪ್ ನೀರಿನಲ್ಲಿ ಕುದಿಸಿ ೧ ಕಪ್ ಕಷಾಯ ಮಾಡಬೇಕು. ಕಷಾಯ ಮಾಡುವಾಗ ಅದರಲ್ಲಿ ತುಳಸಿಯ ೨ ಎಲೆಗಳನ್ನು ಮತ್ತು ಕಾಳುಮೆಣಸಿನ ೨ ಕಾಳುಗಳನ್ನು ಕುಟ್ಟಿ ಹಾಕಬೇಕು. ಈ ಕಷಾಯವನ್ನು ಬಿಸಿ ಇರುವಾಗಲೇ ಒಂದೊಂದು ಗುಟುಕು ಕುಡಿಯಬೇಕು. ಇದರಿಂದ ಬಿಳಿ, ನೊರೆಯುಳ್ಳ ಕಫವು ಹೊರಹೋಗುತ್ತದೆ.
೬. ಶರೀರದ ಮೇಲೆ ಬಿಳಿ ಕಲೆಗಳು ಕಾಣಿಸುವುದು, ಶರೀರಕ್ಕೆ ತುರಿಕೆ ಬರುವುದು, ಮೇಲಿಂದ ಮೇಲೆ ಶೀತ, ಕೆಮ್ಮು ಬರುವುದು, ಈ ಲಕ್ಷಣಗಳಿರುವಾಗ ತಗಚೆಯ ಎಲೆಗಳ ಪಲ್ಯ ಮತ್ತು ಬೇರೆ ಬೇರೆ ಬೇಳೆಗಳನ್ನು ಹುರಿದ ಮಾಡಿದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ತಿನ್ನಬೇಕು, ಸಾಧ್ಯವಿಲ್ಲದಿದ್ದರೆ ಜೋಳದ ಅಥವಾ ಸಜ್ಜೆಯ ರೊಟ್ಟಿಯೊಂದಿಗೆ ಈ ಪಲ್ಯವನ್ನು ತಿನ್ನಬೇಕು .
೭. ತಗಚೆಯ ಎಣ್ಣೆ : ತಗಚೆಯ ರಸ ೧ ಲೀಟರ್, ಗೋಮೂತ್ರ ೨ ಲೀಟರ್, ಅರಿಶಿಣದ ಚೂರ್ಣ ೨೫ ಗ್ರಾಮ್, ಜ್ಯೇಷ್ಠಮದ್ದಿನ ಚೂರ್ಣ ೨೫ ಗ್ರಾಮ್ ಮತ್ತು ಎಳ್ಳೆಣ್ಣೆ ೧ ಲೀಟರ್ ಇವೆಲ್ಲವುಗಳನ್ನು ಒಟ್ಟು ಮಾಡಿ ಕೇವಲ ಎಣ್ಣೆ ಉಳಿಯುವವರೆಗೆ ಮಂದ ಅಗ್ನಿಯ ಮೇಲೆ ಕುದಿಸಬೇಕು. ಎಣ್ಣೆ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿಡಬೇಕು ಮತ್ತು ಅದರಲ್ಲಿ ೨ ಗ್ರಾಮ್ ‘ಅಜ್ವಾನದ ಹೂವುಗಳನ್ನು ಪುಡಿ ಮಾಡಿ ಹಾಕಿ ಬಾಟಲಿಯ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು ಮತ್ತು ಬಾಟಲಿಯನ್ನು ಅಲುಗಾಡಿಸಿ ಅಜ್ವಾನದ ಹೂವುಗಳು ಎಣ್ಣೆಯಲ್ಲಿ ಕರಗುವಂತೆ ಮಾಡಬೇಕು. (ಅಜ್ವಾನದ ಹೂವುಗಳು ಆಯುರ್ವೇದಿಕ ಔಷಧಿಗಳ ಅಂಗಡಿಯಲ್ಲಿ ಸಿಗುತ್ತವೆ. ಅವು ಸಿಗದಿದ್ದರೆ ಅದರ ಬದಲು ಅಷ್ಟೇ ಪ್ರಮಾಣದಲ್ಲಿ ಭೀಮಸೇನಿ ಕರ್ಪೂರವನ್ನು ಉಪಯೋಗಿಸ ಬೇಕು.) ಈ ಎಣ್ಣೆಯನ್ನು ಬಾಹ್ಯೋಪಚಾರಕ್ಕಾಗಿ ಉದಾ. ಮೈಗೆ ಹಚ್ಚಿಕೊಳ್ಳಲು ಉಪಯೋಗಿಸಬೇಕು.
ಅ. ಎಲ್ಲ ರೀತಿಯ ಚರ್ಮರೋಗಗಳಲ್ಲಿ, ವಿಶೇಷವಾಗಿ ಯಾವ ಚರ್ಮರೋಗಗಳಲ್ಲಿ ಲಸಿಕೆ ಹೆಚ್ಚು ಪ್ರಮಾಣದಲ್ಲಿ ಬರುವುದು, ಹಸಿ ಇರುವುದು ಮತ್ತು ತುರಿಕೆ ಬರುವುದು ಆಗುತ್ತದೆಯೋ, ಅಂತಹ ಚರ್ಮರೋಗಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.
ಆ. ಯೋನಿಯಲ್ಲಿ ತುರಿಕೆ ಬರುವುದು, ಹಾಗೆಯೇ ಯೋನಿಯಿಂದ ಜಿಗುಟು ಸ್ರಾವ ಬರುವುದು ಇಂತಹ ತೊಂದರೆಗಳಿದ್ದಲ್ಲಿ ಈ ಎಣ್ಣೆಯಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ರಾತ್ರಿ ಮಲಗುವಾಗ ಯೋನಿಯಲ್ಲಿಡಬೇಕು.
ಇ. ಬೆಂಕಿ, ಬಿಸಿನೀರು, ಹಬೆ, ವಿದ್ಯುತ್‌ನ ಆಘಾತ ಇತ್ಯಾದಿಗಳಿಂದ ಸುಟ್ಟ ಗಾಯಗಳಾಗಿದ್ದರೆ ಈ ಎಣ್ಣೆಯು ಬಹಳ ಲಾಭದಾಯಕವಾಗಿದೆ. ಸುಟ್ಟ ಜಾಗಕ್ಕೆ ನೀರು ತಾಗದಂತೆ ಕಾಳಜಿ ವಹಿಸಬೇಕು.
ಈ. ತರಚುಗಾಯ (ತ್ವಚೆ ಕಿತ್ತು ಹೋಗುವುದು), ಬಿದ್ದು ಮೈಮೇಲೆ ದೊಡ್ಡ ಗಾಯವಾಗುವುದು ಇತ್ಯಾದಿ ಗಾಯಗಳಲ್ಲಿ ಈ ಎಣ್ಣೆಯನ್ನು ಹಚ್ಚಿದರೆ ಲಾಭವಾಗುತ್ತದೆ.
ಉ. ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಈ ಎಣ್ಣೆಯಿಂದ ಮರ್ದನ ಮಾಡಬೇಕು.
(ಆಧಾರ : ಆಹಾರ ರಹಸ್ಯ (ಭಾಗ ೩ ಮತ್ತು ೪), ಲೇಖಕ : ವೈದ್ಯ ರಮೇಶ ಮಧುಸೂದನ ನಾನಲ್)
ಆ. ಆಹಾರದಲ್ಲಿ ಇದರ ಉಪಯೋಗ
೧. ಬೀಜಗಳನ್ನು ಹುರಿದು ಮಾಡಿದ ಪುಡಿಯನ್ನು ಕಾಫಿಯ ಬದಲು ಉಪಯೋಗಿಸಬಹುದು. ಇದರ ರುಚಿ ಕಾಫಿಯಂತೆಯೇ ಇರುತ್ತದೆ. ಕಾಫಿಯಿಂದಾಗುವ ದುಷ್ಪಪರಿಣಾಮಗಳು ಈ ಪುಡಿಯಿಂದ ಆಗುವುದಿಲ್ಲ. ಈ ಪುಡಿಯು ಕಫ ಮತ್ತು ಶ್ವಾಸನಾಂಗವ್ಯೂಹದ ರೋಗಗಳನ್ನು ದೂರ ಮಾಡುತ್ತದೆ. ಆದ್ದರಿಂದ ಚಹಾ ಅಥವಾ ಕಾಫಿಯ ಬದಲು ತಗಚೆಯ ಬೀಜಗಳ ಚೂರ್ಣವನ್ನು ಉಪಯೋಗಿಸುವುದು ಆರೋಗ್ಯಕ್ಕೆ ಲಾಭದಾಯಕವಾಗಿದೆ.
೨. ಎಳೆಯ ಎಲೆಗಳ ಪಲ್ಯ ಚೆನ್ನಾಗಿ ಆಗುತ್ತದೆ. ಆಪತ್ಕಾಲದಲ್ಲಿ ಆಹಾರಧಾನ್ಯಗಳ ಅಭಾವವಿದ್ದಾಗ ಇದನ್ನು ಆಹಾರವೆಂದು ಉಪಯೋಗಿಸಬಹುದು.
೯ ಆ ೬. ವನಸ್ಪತಿಯನ್ನು ಗುರುತಿಸುವ ಗುರುತುಗಳು : ಈ ವನಸ್ಪತಿಯು ಎಲ್ಲರ ಪರಿಚಯದ್ದಾಗಿದೆ. ಈ ಗಿಡಗಳು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆಯ ಬದಿಯಲ್ಲಿ ಬೆಳೆಯುತ್ತವೆ. ಅನೇಕ ಜನರು ಇವುಗಳ ಎಳೆಯ ಎಲೆಗಳ ಪಲ್ಯವನ್ನು ಮಾಡಿ ತಿನ್ನುತ್ತಾರೆ. ಈ ಗಿಡಗಳು ಸೊಂಟದ ಎತ್ತರದಷ್ಟಿರುತ್ತವೆ. ಇವುಗಳಿಗೆ ಹಳದಿ ಬಣ್ಣದ ಹೂವುಗಳಿರುತ್ತವೆ. ಈ ಗಿಡಗಳಿಗೆ ಈಳಗಿಯಂತೆ (ಕುಡುಗೋಲಿನಂತೆ) ಸಾಧಾರಣ ಅರ್ಧವರ್ತುಲಾಕೃತಿಯ ಕಾಯಿಗಳು ಬರುತ್ತವೆ. ಮಳೆಗಾಲದ ನಂತರ ಕಾಯಿಗಳು ಒಣಗಿ ಮಣ್ಣಿನ ಬಣ್ಣಕ್ಕೆ ತಿರುಗುತ್ತವೆ. ಈ ಕಾಯಿಗಳಲ್ಲಿ ಮೆಂತೆಕಾಳುಗಳಂತಹ ಬೀಜಗಳಿರುತ್ತವೆ.
೧೦. ಆ. ೭. ಸಂಗ್ರಹಿಸಬೇಕಾದ ಭಾಗಗಳು ಮತ್ತು ತಯಾರಾಗುವ ಔಷಧಗಳು
ಅ. ಬೇರುಗಳೊಂದಿಗೆ ಸಂಪೂರ್ಣ ವನಸ್ಪತಿಯನ್ನು ಸಾಧಾರಣ ೨ ಕಿಲೋ. ಸಂಗ್ರಹಿಸಿ ಅದರ ಚೂರ್ಣವನ್ನು ಮಾಡಿಡಬೇಕು. ಇದನ್ನು ಬಾಹ್ಯ ಉಪಚಾರಕ್ಕಾಗಿ ಉಪಯೋಗಿಸಬಹುದು.
ಆ. ಗಿಡದ ಮೇಲಿನ ಒಣಗುವ ಸ್ಥಿತಿಯಲ್ಲಿರುವ ಕಾಯಿಗಳನ್ನು ಕತ್ತರಿಯಿಂದ ನಿಧಾನವಾಗಿ ಕತ್ತರಿಸಿ ಸಂಗ್ರಹಿಸಬೇಕು. ಕಾಯಿಗಳನ್ನು ಅಲುಗಾಡಿಸಿದರೆ ಅವುಗಳಲ್ಲಿನ ಬೀಜಗಳು ಬೀಳುತ್ತವೆ. ಸಾಧಾರಣ ೨ ರಿಂದ ೪ ಕಿಲೋ (ಅಥವಾ ವರ್ಷವಿಡಿ ನಮಗೆ ಎಷ್ಟು ಚಹಾ ಅಥವಾ ಕಾಫಿಯ ಪುಡಿ ಬೇಕಾಗುವುದೋ ಅಷ್ಟು ಕಿಲೋ) ಕಾಯಿಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ಮತ್ತು ಅವುಗಳಲ್ಲಿನ ಬೀಜಗಳನ್ನು ಬೇರೆ ಮಾಡಬೇಕು. ಕಾಯಿಗಳ ತೊಗಟೆಯನ್ನು ಎಸೆಯಬೇಕು ಮತ್ತು ಬೀಜಗಳನ್ನು ಚೆನ್ನಾಗಿ ಒಣಗಿಸಬೇಕು. ಒಣಗಿದ ಬೀಜಗಳನ್ನು ಕಡಾಯಿಯಲ್ಲಿ ಮಂದ ಅಗ್ನಿಯ ಮೇಲೆ ಹುರಿದು ಅವು ತಣ್ಣಗಾಗುವ ಸಮಯದಲ್ಲಿ ಅವುಗಳ ಚೂರ್ಣವನ್ನು ಮಾಡಿಡಬೇಕು.
ಇ. ಎಣ್ಣೆಯನ್ನು ತಯಾರಿಸುವುದಿದ್ದರೆ ಸಾಕಷ್ಟು ರಸ ಬರುವ ಹಾಗೆ ಬೇರುಸಹಿತ ಸಂಪೂರ್ಣ ವನಸ್ಪತಿಯನ್ನು ಒಟ್ಟು ಮಾಡಬೇಕು. ಮಳೆಗಾಲದಲ್ಲಿ ಎಲೆಗಳು ತಾಜಾ ಇರುವಾಗ ಹೆಚ್ಚು ರಸ ಬರುತ್ತದೆ. ಮಳೆಗಾಲ ಮುಗಿದ ನಂತರ ವನಸ್ಪತಿಗಳು ಒಣಗುವುದ ರಿಂದ ಸ್ವಲ್ಪ ಹೆಚ್ಚು ನೀರು ಹಾಕಿ ರಸವನ್ನು ತೆಗೆಯಬೇಕು.
೯. ಆ ೮. ಪ್ರಮಾಣ : ಬೀಜಗಳ ಚೂರ್ಣ ೧ ರಿಂದ ೨ ಚಮಚಗಳು (ಕಾಫಿ ತಯಾರಿಸುವ ಪ್ರಮಾಣಕ್ಕನುಸಾರ)
೯ ಆ ೯. ಕೃಷಿ : ಕೃಷಿ ಮಾಡುವ ಆವಶ್ಯಕತೆ ಇರುವುದಿಲ್ಲ. ಇದು ನಿಸರ್ಗದಲ್ಲಿ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಹುಲುಸಾಗಿ ಬೆಳೆಯುತ್ತದೆ; ಆದರೆ ಕೆಲವು ದೇಶಗಳಲ್ಲಿ ಬೀಜಗಳಿಗಾಗಿ ಈ ವನಸ್ಪತಿಗಳ ಕೃಷಿಯನ್ನು ಮಾಡುತ್ತಾರೆ. ಕೃಷಿ ಮಾಡುವುದಿದ್ದರೆ ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ತಗಚೆಯ ಒಣಗಿದ ಬೀಜಗಳನ್ನು ಹಾಕಿ ಅವುಗಳನ್ನು ೧೨ ಗಂಟೆ ನೆನೆಸಿಡಬೇಕು. ಅನಂತರ ಅವುಗಳನ್ನು ಅಂಕುರಿಸಲು ನೆಲದಲ್ಲಿ ಬಿತ್ತಬೇಕು. ಹೀಗೆ ಮಾಡಿದರೆ ಬೀಜಗಳ ಅಂಕುರಿಸುವ ಪ್ರಮಾಣವು ಹೆಚ್ಚಾಗುತ್ತದೆ.
೯ ಆ ೧೦. ಈ ವನಸ್ಪತಿಯನ್ನು ಯಾರು ಉಪಯೋಗಿಸಬಾರದು ?
ಅ. ತಗಚೆಯ ಬೀಜಗಳನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬಾರದು. ಇದರಿಂದ ವಾಂತಿ ಅಥವಾ ಭೇದಿಯಾಗಬಹುದು.
ಆ. ಕೆಲವು ಸ್ಥಳಗಳಲ್ಲಿ ತಗಚೆಯ ಬೀಜಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ; ಆದರೆ ಇದನ್ನು ಆಹಾರದಲ್ಲಿ ಉಪಯೋಗಿಸಬಾರದು. ಇದರಿಂದ ಕರುಳುಗಳಿಗೆ ಹಾನಿಯಾಗಿ ವಿವಿಧ ರೋಗಗಳು ಉದ್ಭವಿಸಬಹುದು.
ಇ. ತಗಚೆಯ ಹಳೆಯ ಎಲೆಗಳು ಪಚನಕ್ಕೆ ಜಡವಾಗಿರುವುದರಿಂದ ಅವುಗಳನ್ನು ತಿನ್ನಬಾರದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧೧.೨೦೨೦)
ವನಸ್ಪತಿಗಳನ್ನು ಸಂಗ್ರಹಿಸುವ ಸೇವೆಯನ್ನು ಪರಸ್ಪರರಲ್ಲಿ ಯೋಗ್ಯ ಸಮನ್ವಯ ಸಾಧಿಸಿ ಆಯೋಜನಾಪೂರ್ವಕವಾಗಿ ಮತ್ತು ಕೂಡಲೇ ಪೂರ್ಣಗೊಳಿಸಬೇಕು !
ಸಾಧಕರು ಯಾವ ವನಸ್ಪತಿಯನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ, ಎಂಬುದರ ನೋಂದಣಿಯನ್ನು ಮಾಡಿಡಬೇಕು. ಇದರಿಂದ ಯಾರಾದರೊಬ್ಬರಿಗೆ ಒಂದು ಔಷಧಿ ಬೇಕಾಗಿದ್ದರೆ ಅದನ್ನು ಮಾಡಿಕೊಡುವುದು ಸುಲಭವಾಗುತ್ತದೆ. ಯಾವುದಾದದೊಂದು ಕೇಂದ್ರದಲ್ಲಿ ಕೆಲವು ವನಸ್ಪತಿಗಳು ಹೆಚ್ಚು ಪ್ರಮಾಣದಲ್ಲಿ ಸಿಕ್ಕರೆ ಅವುಗಳನ್ನು ಯಾವ ಕೇಂದ್ರಗಳಲ್ಲಿ ಆವಶ್ಯಕವಾಗಿದೆ, ಅಂತಹ ಪಕ್ಕದ ಕೇಂದ್ರಗಳಲ್ಲಿನ ಸಾಧಕರಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಯಾರಿಗೆ ಸಾಧ್ಯವಿದೆಯೋ, ಅವರು ತಮ್ಮ ಕುಟುಂಬಕ್ಕಾಗಿ ಔಷಧಿ ವನಸ್ಪತಿಗಳನ್ನು ಸಂಗ್ರಹಿಸುವಾಗಲೇ ಕೇಂದ್ರದಲ್ಲಿ ಯಾವ ಸಾಧಕರಿಗೆ ಔಷಧೀಯ ವನಸ್ಪತಿಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲವೋ, ಅವರಿಗಾಗಿ ಅಥವಾ ಪಕ್ಕದ ಆಶ್ರಮ ಅಥವಾ ಸೇವಾಕೇಂದ್ರಗಳಿಗಾಗಿ ವನಸ್ಪತಿಗಳನ್ನು ಸಂಗ್ರಹಿಸಬೇಕು. ಹೀಗೆ ಮಾಡುವ ಮೊದಲು ಜವಾಬ್ದಾರ ಸಾಧಕರೊಂದಿಗೆ ಮಾತನಾಡಬೇಕು, ಅಂದರೆ ಔಷಧಿಗಳ ಪ್ರಮಾಣದ ಕುರಿತು ಸಮನ್ವಯ ಸಾಧಿಸಲು ಸುಲಭವಾಗುತ್ತದೆ. ನಗರಗಳಲ್ಲಿ ಈ ವನಸ್ಪತಿಗಳು ಸಿಗುತ್ತವೆ ಎಂದೇನಿಲ್ಲ. ಇಂತಹ ಸಮಯದಲ್ಲಿ ನಗರಗಳ ಪಕ್ಕದ ಹಳ್ಳಿಗಳಿಗೆ ಹೋಗಿ ಈ ವನಸ್ಪತಿಗಳನ್ನು ತರಬಹುದು ಅಥವಾ ಹಳ್ಳಿಗಳಲ್ಲಿ ತಮ್ಮ ಪರಿಚಯದವರಿದ್ದರೆ, ಅವರಿಗೆ ಈ ಲೇಖನವನ್ನು ಕಳುಹಿಸಿ ಅವರಿಗೆ ಔಷಧೀಯ ವನಸ್ಪತಿಗಳನ್ನು ಸಂಗ್ರಹ ಮಾಡಲು ಹೇಳಬಹುದು.