ಬಿಸಿಲಿನ ಉಪಾಯ ಮಾಡಿದ್ದರಿಂದ (ಬಿಸಿಲಿಗೆ ಮೈ ಒಡ್ಡುವುದರಿಂದ) ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಇತ್ತೀಚೆಗೆ ಹೆಚ್ಚಿನವರಿಗೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇದೆ. ಹಾಗೆಯೇ ವಾತಾವರಣದಲ್ಲಿ ರಜ-ತಮದ ಪ್ರಮಾಣ ಬಹಳ ಹೆಚ್ಚಾಗಿರುವುದರಿಂದ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣ ಬರುತ್ತದೆ. ಇದರಿಂದ ವ್ಯಕ್ತಿಗೆ ವಿವಿಧ ರೀತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬಿಸಿಲಿನ ಉಪಾಯ ಮಾಡಿದರೆ (ಶರೀರವನ್ನು ಬಿಸಿಲಿಗೆ ಒಡ್ಡುವುದರಿಂದ) ವ್ಯಕ್ತಿಯ ಸುತ್ತಲೂ ನಿರ್ಮಾಣವಾಗಿರುವ ತೊಂದರೆದಾಯಕ ಸ್ಪಂದನಗಳ ಆವರಣ ಕಡಿಮೆಯಾಗಲು ಸಹಾಯವಾಗುತ್ತದೆ. ಬಿಸಿಲಿನ ಉಪಾಯ ಮಾಡುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೧೩.೧೧.೨೦೨೦ ರಂದು ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ಟಿಪ್ಪಣಿ : ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದೆಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ.೫೦ ಅಥವಾ ಅದಕ್ಕಿಂತ ಅಧಿಕ ಪ್ರಮಾಣದಲ್ಲಿರುವುದೆಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ೪೯ ಇರುವುದೆಂದರೆ ಮಧ್ಯಮ ತೊಂದರೆ ಮತ್ತು ಶೇ. ೩೦ ಕ್ಕಿಂತ ಕಡಿಮೆ ಇರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಗುರುತಿಸಬಲ್ಲರು.

೧. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕ ಇವರು ೨೦ ನಿಮಿಷ ಬಿಸಿಲಿನ ಉಪಾಯವನ್ನು ಮಾಡಿದ ಬಳಿಕ ಅವರ ಮೇಲಾಗಿರುವ ಪರಿಣಾಮವನ್ನು ಮುಂದೆ ನೀಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ (ಶಕ್ತಿಯ) ನಿರೀಕ್ಷಣೆಯ ವಿಶ್ಲೇಷಣೆ – ಬಿಸಿಲಿನ ಉಪಾಯ ಮಾಡಿದ ಬಳಿಕ ಪರೀಕ್ಷಣೆಯಲ್ಲಿ ಇಬ್ಬರು ಸಾಧಕರ ಮೇಲಾಗಿರುವ ಪರಿಣಾಮ : ಮುಂದೆ ನೀಡಲಾಗಿದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.

೧. ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿ ಉಪಾಯದ ಮೊದಲು ‘ಇನ್‌ಫ್ರಾರೆಡ್ ಹಾಗೂ ‘ಅಲ್ಟ್ರಾವೈಲೆಟ್ ಈ ಎರಡೂ ರೀತಿಯ ನಕಾರಾತ್ಮಕ ಶಕ್ತಿಗಳು ಅಧಿಕ ಪ್ರಮಾಣದಲ್ಲಿದ್ದವು. ಅವನು ಬಿಸಿಲಿನ ಉಪಾಯ ಮಾಡಿದ ಬಳಿಕ ಅವನಲ್ಲಿರುವ ಎರಡೂ ನಕಾರಾತ್ಮಕ ಶಕ್ತಿಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾದವು ಮತ್ತು ಅವನ ಸಕಾರಾತ್ಮಕ ಶಕ್ತಿಯು ಹೆಚ್ಚಾಯಿತು.

೨. ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕನು ಬಿಸಿಲಿನ ಉಪಾಯ ಮಾಡಿದ ಬಳಿಕ ಅವನಲ್ಲಿ ‘ಇನ್‌ಫ್ರಾರೆಡ್ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿಯು ಹೆಚ್ಚಾಯಿತು.

೨. ನಿಷ್ಕರ್ಷ

ಬಿಸಿಲಿನ ಉಪಾಯ ಮಾಡಿದ ಬಳಿಕ ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರ ಮೇಲೆ ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಬಿಸಿಲಿನ ಉಪಾಯ ಮಾಡಿದ್ದರಿಂದ ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುವುದು: ಸೂರ್ಯದೇವನು ಆರೋಗ್ಯವನ್ನು ಕೊಡುತ್ತಾನೆ. ಆದುದರಿಂದ ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್ ! ಅಂದರೆ ‘ಸೂರ್ಯ ದೇವನಲ್ಲಿ ಆರೋಗ್ಯವನ್ನು ಬೇಡಬೇಕು, ಎಂದು ಹೇಳಲಾಗಿದೆ. ಶರೀರ ಆರೋಗ್ಯಶಾಲಿಯಾಗಿರಲು ಪ್ರತಿದಿನ ಶರೀರಕ್ಕೆ ಬಿಸಿಲು ತಗಲುವುದು ಆವಶ್ಯಕವಾಗಿರುತ್ತದೆ. ಶರೀರ ಬಿಸಿಲನ್ನು ತೆಗೆದುಕೊಳ್ಳುವಾಗ ಅದನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದರ ನಿಯಮಗಳನ್ನು ಪಾಲಿಸಬೇಕು. ಪ್ರತಿದಿನ ಯೋಗ್ಯ ಪ್ರಮಾಣದಲ್ಲಿ ಮೈಮೇಲೆ ಬಿಸಿಲನ್ನು ತೆಗೆದುಕೊಳ್ಳುವುದರಿಂದ ಶರೀರದಲ್ಲಿ ಹೆಚ್ಚಾಗಿರುವ ದೋಷಗಳು (ರೋಗಕಾರಕ ದ್ರವ್ಯ) ದೂರವಾಗಲು ಸಹಾಯವಾಗುತ್ತದೆ. ಬಿಸಿಲಿನಿಂದ ಉಪಾಯ ಮಾಡಿದರೆ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ದೂರವಾಗಲು ಸಹಾಯವಾಗುತ್ತದೆ. ಇದರಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಿ ಅವನ ಆರೋಗ್ಯ ಸುಧಾರಿಸುತ್ತದೆ. ಪರೀಕ್ಷಣೆಯಲ್ಲಿ ಸಾಧಕರು ಬಿಸಿಲಿನ ಉಪಾಯವನ್ನು ಕೇವಲ ೧ ದಿನ ಮತ್ತು ಅದನ್ನು ಕೇವಲ ೨೦ ನಿಮಿಷ ಮಾಡಿದ್ದರಿಂದ ಅವರಲ್ಲಿ ನಕಾರಾತ್ಮಕ ಶಕ್ತಿಯು ಬಹಳ ಕಡಿಮೆಯಾಗಿ, ಅವರಲ್ಲಿ ಸಕಾರಾತ್ಮಕ ಶಕ್ತಿಯು ಬಹಳ ಹೆಚ್ಚಳವಾಯಿತು. ಇದರಿಂದ ‘ಬಿಸಿಲಿನ ಉಪಾಯ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಲಾಭದಾಯಕ ವಾಗಿದೆ, ಎನ್ನುವುದು ಸಿದ್ಧವಾಗುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೧.೨೦೨೦)

ವಿ-ಅಂಚೆ – [email protected]