ತಿರುವಣ್ಣಾಮಲೈ (ತಮಿಳುನಾಡು)ಯಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು ಕಾರ್ತಿಕ ದೀಪೋತ್ಸವ ಆಚರಣೆ !

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನ

ತಿರುವಣ್ಣಮಲೈ (ತಮಿಳುನಾಡು) – ಇಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು, ಅಂದರೆ ೨೯ ನವೆಂಬರ್ ೨೦೨೦ ರಂದು ಅರುಣಾಚಲ ಪರ್ವತದ ಮೇಲೆ ಸಾಯಂಕಾಲ ೬ ಗಂಟೆಗೆ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಯಿತು. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮತ್ತು ಅಲ್ಲಿನ ಅರುಣಾಚಲ ಪರ್ವತದ ಮೇಲೆ ಸುಂದರವಾದ ಒಂದು ದೊಡ್ಡ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಕಾರ್ತಿಕ ದೀಪ

ಇಲ್ಲಿ ಹಚ್ಚಲಾಗುವ ದೊಡ್ಡ ದೀಪದಲ್ಲಿ ಬಹುತೇಕ ಮೂರೂವರೆ ಸಾವಿರ ಕಿಲೋಗಳಿಗಿಂತ ಹೆಚ್ಚು ತುಪ್ಪ ಮತ್ತು ೧ ಸಾವಿರ ಮೀಟರ್‌ನಷ್ಟು ಬಟ್ಟೆಯನ್ನು ಬತ್ತಿಗಾಗಿ ಉಪಯೋಗಿಸಲಾಗುತ್ತದೆ. ಅದಕ್ಕೂ ಮೊದಲು ಪ್ರಾತಃಕಾಲ ೪ ಗಂಟೆಗೆ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಅದೇ ದೀಪವನ್ನು ಅರ್ಚಕರು ಮತ್ತು ಗ್ರಾಮಸ್ಥರು ಒಟ್ಟಿಗೆ ಪರ್ವತದ ಮೇಲೆ ತೆಗೆದುಕೊಂಡು ಹೋಗುತ್ತಾರೆ. ಸಾಯಂಕಾಲ ಸರಿಯಾಗಿ ೬ ಗಂಟೆಗೆ ‘ಕಾರ್ತಿಕ ದೀಪಮ್ ಪ್ರಜ್ವಲಿಸಲಾಗುತ್ತದೆ. ಈ ದೀಪೋತ್ಸವದ ನೇರಪ್ರಸಾರವನ್ನು ದೂರಚಿತ್ರವಾಹಿನಿಗಳ ಮೂಲಕ ಮಾಡಲಾಗುತ್ತದೆ. ಆ ಪ್ರಸರಣವನ್ನು ಜಗತ್ತಿನಾದ್ಯಂತದ ೧೪ ಕೋಟಿ ತಮಿಳು ಭಾಷೆಯನ್ನು ಮಾತನಾಡುವ ಹಿಂದೂಗಳು ‘ಕಾರ್ತಿಕ ದೀಪಮ್ನ ಉತ್ಸವವನ್ನು ನೋಡುತ್ತಾರೆ ಮತ್ತು ಪ್ರತಿಯೊಬ್ಬರು ‘ಕಾರ್ತಿಕ ದೀಪಮ್ ಪ್ರಜ್ವಲಿಸಿ ಒಂದು ರೀತಿಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸನಾತನದ ೩ ಗುರುಗಳಿಗಾಗಿ ದೀಪಗಳನ್ನು ಪ್ರಜ್ವಲಿಸಿದರು !

ಸನಾತನದ ಗುರುಪರಂಪರೆಯ ೩ ಗುರುಗಳಿಗಾಗಿ ದೀಪಗಳನ್ನು ಪ್ರಜ್ವಲಿಸಿ ಪ್ರಾರ್ಥನೆಯನ್ನು ಮಾಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಈ ಉತ್ಸವದ ನಿಮಿತ್ತ ಸನಾತನದ ಗುರುಪರಂಪರೆಯ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂರು ಗುರುಗಳಿಗಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಿರುವಣ್ಣಾಮಲೈಯ ಅರುಣಾಚಲ ಪರ್ವತದ ಮೇಲೆ ಸಾಯಂಕಾಲ ೩ ದೀಪಗಳನ್ನು ಪ್ರಜ್ವಲಿಸಿದರು.

ದೀಪಗಳನ್ನು ಪ್ರಜ್ವಲಿಸಿದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, ‘ಹೇ ಶಿವಶಂಕರ, ನಮಗೆ ದೈದೀಪ್ಯಮಾನ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬಲವನ್ನು ನೀಡು ಮತ್ತು ಈ ದೀಪಗಳಂತೆ ತೇಜವನ್ನು ಪ್ರದಾನಿಸು, ಎಂದು ಪ್ರಾರ್ಥಿಸಿದರು.