ನಮ್ರತೆ ಹಾಗೂ ಇತರರ ವಿಚಾರ ಮಾಡುವ ಶ್ರೀ. ಅನಂತಜಿ ಗುರುಜಿ !

ಶ್ರೀ. ಅನಂತಜಿ ಗುರುಜಿ

೧. ‘ಶ್ರೀ. ಅನಂತಜಿ ಗುರುಜಿ ಹಸನ್ಮುಖ ಹಾಗೂ ಆನಂದಿಯಾಗಿರುತ್ತಾರೆ. ಅವರನ್ನು ನೋಡಿದಾಗ ನಮ್ಮ ಮನಸ್ಸು ಸಹ ಪ್ರಸನ್ನವಾಗುತ್ತದೆ.

೨. ಅವರು ನಮ್ರತೆಯಿಂದ ಮಾತನಾಡುತ್ತಾರೆ.

೩. ನಮಗೆ ಕನ್ನಡ ಭಾಷೆ ಬರುವುದಿಲ್ಲ. ಅವರ ಕನ್ನಡ ಮಾತುಗಳು ನಮಗೆ ಅರ್ಥವಾಗದಿದ್ದರೂ, ಅವರ ಮಾತು ಕೇಳುವಾಗ ಅವರ ಮಾತು ಕೇಳುತ್ತಲೇ ಇರಬೇಕು, ಎಂದು ನಮಗೆ ಅನಿಸುತ್ತದೆ.

೪. ಚಿತ್ರೀಕರಣದ ಬಗ್ಗೆ ಉತ್ತಮ ಮಾಹಿತಿ ಇರುವುದು

ಅವರು ಚಿತ್ರೀಕರಣದ ಸಮಯದಲ್ಲಿ ಛಾಯಾಚಿತ್ರಕದ(ಕ್ಯಾಮೆರಾ) ಮುಂದೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು ಚಿತ್ರೀಕರಣದಲ್ಲಿ ವ್ಯತ್ಯಯ ಬಂದಾಗ ಅವರು ಪುನಃ ಅಚ್ಚುಕಟ್ಟಾಗಿ ಹೊಂದಿ ಕೊಳ್ಳುತ್ತಿದ್ದರು. ‘ಅವರಿಗೆ ‘ಛಾಯಾಚಿತ್ರಕದ ಮುಂದೆ ಮಾತನಾಡಿ ೧೦ ವರ್ಷಗಳ ಅನುಭವವಿದೆ, ಎಂದು ತಿಳಿಯಿತು. – ಶ್ರೀ. ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ

೬. ಇತರರ ವಿಚಾರ ಮಾಡುವುದು

‘ಅವರು ತೆಗೆದುಕೊಳ್ಳುವ ಯೋಗಾಸನಗಳ ವರ್ಗಗಳ ಚಿತ್ರೀಕರಣ ಮಾಡಲಿಕ್ಕಿತ್ತು. ‘ಸ್ಥಳದಲ್ಲಿ ಎಷ್ಟು ಸಾಧಕರು ಕುಳಿತುಕೊಳ್ಳಬಹುದು ? ಅವರಿಗೆ ಹೇಗೆ ‘ಸೆಟಪ್ ಬೇಕು ?’ ಇದರ ಬಗ್ಗೆ ಸ್ಪಷ್ಟವಾದರೆ ಚಿತ್ರೀಕರಣದ ಸಿದ್ಧತೆಗೆ ಸುಲಭವಾಗುತ್ತದೆ. ಶ್ರೀ. ಅನಂತಜಿ ಇವರಿಗೆ ಚಿತ್ರೀಕರಣದ ಸಾಧಕರು ಇದನ್ನು ಹೇಳುವ ಮೊದಲೇ ತರಗತಿಯ ಅಭ್ಯಾಸ ಮಾಡಲು ಹೇಳಿದರು.’ – ತರಗತಿಗೆ ಭಾಗವಹಿಸಿದ್ದ ಸಾಧಕರು

೭. ಪರೇಚ್ಛೆಯಿಂದ ವರ್ತಿಸುವವರು

‘ಅವರು ರಾಮನಾಥಿ ಆಶ್ರಮದಲ್ಲಿ ವೈದ್ಯ ಸಾಧಕರಿಗೆ ಯೋಗಾಸನವನ್ನು ಕಲಿಸಿದರು. ಸಾಧಕರು ಅವರಿಗೆ ‘ನಮಗೆ ಕೆಲವು ವಿಷಯಗಳನ್ನು ಕಲಿಯಲಿಕ್ಕಿದೆ, ಎಂದು ಹೇಳಿದ ತಕ್ಷಣ ಅವರು ಅದನ್ನು ಕೂಡಲೇ ಸ್ವೀಕಾರ ಮಾಡಿ ಮನಮುಕ್ತವಾಗಿ ಕಲಿಸಿದರು. ಅವರಿಗೆ ‘ತಮ್ಮ ಅಭಿಪ್ರಾಯದಂತೆ ಆಗಬೇಕು, ಎಂದು ಎಲ್ಲಿಯೂ ಆಗ್ರಹ ಇರಲಿಲ್ಲ. – ವೈದ್ಯ ಮೇಘರಾಜ ಮಾಧವ ಪರಾಡಕರ

೮. ಭಾವ

ಅ. ‘ಅವರ ಮುಖದಲ್ಲಿ ಭಾವ ಅರಿವಾಗುತ್ತದೆ.

ಆ. ಅವರು ಸಮಾಜದ ವ್ಯಕ್ತಿಗಳಿಗಾಗಿ ದೊಡ್ಡ ಶಿಬಿರಗಳನ್ನು ತೆಗೆದುಕೊಳ್ಳುತ್ತಾರೆ; ಆದರೆ ಅವರು ಆಶ್ರಮದ ಸಾಧಕರಿಗಾಗಿ ಎಲ್ಲವನ್ನು ಉಚಿತವಾಗಿ ಕಲಿಸಿದರು. ಅವರು ಎಲ್ಲ ಸಾಧಕರಿಗೆ ೬ ದಿನಗಳ ಶಿಬಿರವನ್ನು ತೆಗೆದುಕೊಳ್ಳುವಂತೆ ಇಚ್ಛೆಯನ್ನು ವ್ಯಕ್ತಪಡಿಸಿ ದರು, ಅದೇರೀತಿ ನನ್ನ ಗುರುಗಳು ನನಗೇನು ಜ್ಞಾನವನ್ನು ಕಲಿಸಿದರು, ಅದನ್ನು ನಾನು ನಿಃಸ್ವಾರ್ಥವಾಗಿ ನೀಡುವೆನು, ಎಂದರು. – ತರಬೇತಿಯಲ್ಲಿ ಭಾಗವಹಿಸಿದ ಸಾಧಕರು.

ಸನಾತನ ಆಶ್ರಮದ ಬಗ್ಗೆ ಶ್ರೀ. ಅನಂತಜಿ ಗುರುಜಿಯವರು ತೆಗೆದ ಗೌರವೋದ್ಗಾರ !

ಆಶ್ರಮದಲ್ಲಿ ಸಾತ್ತ್ವಿಕ ಭಾವವು ಜಾಗೃತವಾಗುತ್ತಿದೆ !

ಶ್ರೀ. ಅನಂತಜಿ ಗುರುಜಿಯವರು, “ಆಶ್ರಮಕ್ಕೆ ಬಂದ ದಿನದಿಂದ ಪ್ರತಿದಿನ ತಮ್ಮ ಮನಸ್ಸಿನಲ್ಲಿ ಬಹಳಷ್ಟು ಸಾತ್ತ್ವಿಕ ಭಾವವು ಜಾಗೃತವಾಗುತ್ತಿದೆ, ಎಂದು ಹೇಳಿದರು. ಶ್ರೀ. ಅನಂತಜಿಯವರು ಯಾವಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೋ, ಆಗ ಆ ಸ್ಥಳಗಳಲ್ಲಿ ಮನಸ್ಸಿನಲ್ಲಿ ಯಾವ ಭಾವ ಅಥವಾ ಭಾವನೆಗಳು ಜಾಗೃತವಾಗುತ್ತವೆ, ಎಂದು ಅವರು ಯಾವಾಗಲೂ ಅಧ್ಯಯನ ಮಾಡುತ್ತಾರೆ. ಇತರ ಸ್ಥಳಗಳಲ್ಲಿ ಅವರು ಅಲ್ಲಿನ ಸ್ಥಿತಿಯಲ್ಲಿ ಬದಲಾವಣೆಯ ಕುರಿತು ಹೇಳುತ್ತಾರೆ; ಆದರೆ ಸನಾತನದ ಆಶ್ರಮಕ್ಕೆ ಬಂದ ನಂತರ ಅವರಲ್ಲಿ ತಕ್ಷಣ ಸಾತ್ತ್ವಿಕ ಭಾವವು ಜಾಗೃತವಾಯಿತು.