ರಾಮನಾಥಿ (ಫೋಂಡಾ, ಗೋವಾ) – ತುಮಕೂರಿನ ‘ಯೋಗ ವಿಸ್ಮಯ ಟ್ಟಸ್ಟ್ನ ಯೋಗಪ್ರಶಿಕ್ಷಕರಾದ ಶ್ರೀ. ಅನಂತಜಿ ಗುರುಜಿಯವರ ಮಗಳು ಚಿ. ಲಹರಿ (೬ ತಿಂಗಳು) ಇವಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಳು. ಶ್ರೀ. ಅನಂತಜಿ ಗುರುಜಿಯವರು ಇಲ್ಲಿನ ಸನಾತನದ ಆಶ್ರಮದ ಸಾಧಕರಿಗೆ ಯೋಗಾಸನ ಮತ್ತು ಪ್ರಾಣಾಯಾಮಗಳ ಪ್ರಶಿಕ್ಷಣವನ್ನು ನೀಡಲು ಬಂದಿದ್ದರು. ಆ ಸಮಯದಲ್ಲಿ ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ಚಿ. ಲಹರಿಯ ಬಗ್ಗೆ ಸೂಕ್ಷ್ಮ ಪ್ರಯೋಗವನ್ನು ಮಾಡಲು ಹೇಳಲಾಯಿತು. ಆಗ ಉಪಸ್ಥಿತರು ಅವಳ ಗುಣವೈಶಿಷ್ಟ್ಯಗಳನ್ನು ಹೇಳಿದರು. ಆಗ ‘ಚಿ. ಲಹರಿಯು ಮಹರ್ಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ್ದು ಅವಳ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿದೆ, ಎಂದು ಹೇಳಲಾಯಿತು.
ತದನಂತರ ಸನಾತನದ ಸಂತರಾದ ಪೂ. ಪದ್ಮಾಕರ ಹೊನಪ ಇವರು ತಮ್ಮ ಹಸ್ತಗಳಿಂದ ಚಿ. ಲಹರಿ ಇವಳಿಗೆ ಉಡುಗೊರೆಯನ್ನು ನೀಡಿ ಸತ್ಕರಿಸಿದರು. ಪೂ. ಪದ್ಮಾಕರ ಹೊನಪ ಇವರು ಶ್ರೀ. ಅನಂತಜಿ ಗುರುಜಿ ಇವರಿಗೂ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಸತ್ಕಾರವನ್ನು ಮಾಡಿದರು. ಹಾಗೆಯೇ ಸನಾತನದ ಸಾಧಕಿ ಸೌ. ವಿದ್ಯಾ ಶಾನಭಾಗ ಇವರು ಚಿ. ಲಹರಿಯ ತಾಯಿ ಸೌ. ಕುಮುದಾ ಇವರಿಗೆ ಉಡಿ ತುಂಬಿಸಿದರು. ಈ ಪ್ರಸಂಗದಲ್ಲಿ ಶ್ರೀ. ಅನಂತಜಿ ಗುರುಜಿ ಇವರ ಸಂಬಂಧಿಕರಾದ ಶ್ರೀ. ಹೇಮಂತಕುಮಾರ ಇವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಚಿ. ಲಹರಿಯ ಕುರಿತು ಅರಿವಾದ ದೈವಿ ಗುಣವೈಶಿಷ್ಟ್ಯಗಳ ಬಗ್ಗೆ ಅವಳ ತಾಯಿ-ತಂದೆಯರು ಹೇಳಿದರು. ಶ್ರೀ. ಅನಂತಜಿ ಗುರುಜಿಯವರು ಈ ಆನಂದದ ವಾರ್ತೆಯನ್ನು ಕೇಳಿದಾಗ ‘ಶೃಂಗೇರಿಯ ಶ್ರೀ ಶಾರದಾದೇವಿಯ ಒಂದು ದೈವಿ ಅಂಶ ಚಿ. ಲಹರಿಯಲ್ಲಿ ಬಂದಿದೆ, ಎಂದು ನನ್ನ ಭಾವವಿದೆ, ಎಂದು ಹೇಳಿದರು.
ಅನೇಕ ದೈವಿ ಗುಣವೈಶಿಷ್ಟ್ಯಗಳಿರುವ ಮತ್ತು ಇತರರಿಗೆ ಆನಂದದ ಅನುಭೂತಿಯನ್ನು ನೀಡುವ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಮಹರ್ಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದ ಚಿ. ಲಹರಿ !
ಅನಂತಜಿ ಗುರುಜಿ ಇವರು ಸನಾತನ ಸಂಸ್ಥೆಯ ರಾಮನಾಥಿ (ಗೋವಾ)ಯ ಆಶ್ರಮದಲ್ಲಿ ಯೋಗ ಮತ್ತು ಪ್ರಾಣಾಯಾಮ ಕಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರ ಮಗಳು ಚಿ. ಲಹರಿ (೬ ತಿಂಗಳು) ಇವಳಲ್ಲಿರುವ ದೈವಿ ಗುಣಗಳ ಕುರಿತು ಸನಾತನದ ಸಾಧಕರಿಗೆ ಗಮನಕ್ಕೆ ಬಂದ ಅಂಶಗಳನ್ನು ಮುಂದೆ ನೀಡುತ್ತಿದೇವೆ.
೧. ಸೌ. ವಿದ್ಯಾ ಶಾನಭಾಗ
೧ ಅ. ಜನಿಸುವ ಮೊದಲು
೧. ‘ಗರ್ಭಧಾರಣೆಯ ಸಮಯದ ಅನುಭವದ ಬಗ್ಗೆ ಲಹರಿಯ ತಾಯಿ ಸೌ. ಕುಮುದಾ ಇವರು, “ನಾನು ಶ್ರೀವಿಷ್ಣುಸಹಸ್ರ ನಾಮವನ್ನು ಓದುವಾಗ ಮಗುವಿನ ಚಲನವಲನ ಹೆಚ್ಚು ಪ್ರಮಾಣದಲ್ಲಿರುತ್ತಿತ್ತು, ಎಂದು ಹೇಳಿದರು.
೨. ಲಹರಿಯ ತಂದೆ ಮತ್ತು ತಾಯಿಯವರು ಯೋಗದ ಅಂತರ್ಗತ ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಗರ್ಭಧಾರಣೆಯ ಸಮಯದಲ್ಲಿ ಸೌ. ಕುಮುದಾ ಇವರು ಯೋಗ ಶಿಬಿರದ ಉಪಕ್ರಮಗಳಲ್ಲಿ ದಿನವಿಡಿ ತೊಡಗಿರುತ್ತಿದ್ದರು. ‘ಸನಾತನ ಸಂಸ್ಕೃತಿ’ಯ ರಕ್ಷಣೆಯು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಮತ್ತು ಆ ದೃಷ್ಟಿಯಿಂದ ಅವರ ಮನೆಯಲ್ಲಿಯೂ ಪೂರಕ ವಾತಾವರಣವಿದೆ. ಲಹರಿಯು ಗರ್ಭದಲ್ಲಿರುವಾಗಲೇ ‘ಅವಳು ಅಭಿಮನ್ಯುವಿನಂತೆ ಯೋಗದ ಬಗ್ಗೆ ಎಲ್ಲವನ್ನೂ ಕಲಿಯುತ್ತಿದ್ದಾಳೆ’, ಎಂದು ಅವಳ ತಂದೆ ಗುರುಜಿ ಅನಂತಜಿಯವರಿಗೆ ಅರಿವಾಗುತ್ತಿತ್ತು.
೩. ‘ಸೌ. ಕುಮುದಾ ಇವರು ಗರ್ಭವತಿಯಾಗಿರುವಾಗ ಮತ್ತು ಹೆರಿಗೆಯ ನಂತರವೂ ಸ್ವತಃ ಯಾವುದೇ ಔಷಧಿಯನ್ನು ತೆಗೆದುಕೊಂಡಿರಲಿಲ್ಲ, ಹಾಗೆಯೇ ಲಹರಿಯು ಜನಿಸಿದ ನಂತರ ಅವಳಿಗೂ ಯಾವುದೇ ಔಷಧಿಯನ್ನು ಕೊಡಲಿಲ್ಲ, ಆದರೂ ಲಹರಿಯು ಬಹಳ ಆರೋಗ್ಯಶಾಲಿಯಾಗಿದ್ದಾಳೆ. ಅವಳ ಜನ್ಮಕ್ಕೂ ಮೊದಲು ಮತ್ತು ಜನಿಸಿದ ನಂತರವೂ ಅವರಿಬ್ಬರಿಗೂ ಯಾವುದೇ ಅಡಚಣೆ ಬಂದಿಲ್ಲ.
೧ ಆ. ಜನಿಸಿದ ನಂತರದ ೬ ತಿಂಗಳು
೧. ಲಹರಿಯು ಎಲ್ಲರ ನಿರೀಕ್ಷಣೆ ಮಾಡುತ್ತಾಳೆ. ಅವಳ ತಂದೆಯವರು ಮಾತನಾಡುತ್ತಿರುವಾಗ ಅವಳು ಅವರ ಮಾತುಗಳನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಾಳೆ ಮತ್ತು ಇತರರು ಮಾತನಾಡುತ್ತಿರುವಾಗ ಅವಳು ಆಟವಾಡುತ್ತಾಳೆ.
೨. ಅವಳಲ್ಲಿ ಹಟಮಾರಿತನವಿಲ್ಲ. ಅವಳಿಗೆ ಹಸಿವಾದರೂ, ಇತರ ಮಕ್ಕಳಷ್ಟು ಅಳುವುದಿಲ್ಲ.
೩. ವರದಹಳ್ಳಿಯ ಪ.ಪ. ಶ್ರೀಧರಸ್ವಾಮಿಯವರ ಮಠದ ಓರ್ವ ಭಕ್ತರು (ಅವರು ಶ್ರೀಧರಸ್ವಾಮಿಗಳ ಒಡನಾಟದಲ್ಲಿ ೧೭ – ೧೮ ವರ್ಷಗಳ ಕಾಲ ಇದ್ದರು.) ಚಿ. ಲಹರಿಯ ಕುರಿತು ಅವಳ ತಂದೆಯವರಿಗೆ, “ನಿಮ್ಮ ಮಗಳು ನಿಮಗಿಂತ ೧೦ ಪಟ್ಟುಗಳಲ್ಲಿ ಹೆಚ್ಚು ಸಾಧನಾ-ಕಾರ್ಯವನ್ನು ಮಾಡುವಳು !”, ಎಂದು ಹೇಳಿದರು.
೨. ಸೌ. ಸೌಮ್ಯಾ ಕುದರವಳ್ಳಿ
ಅ. ‘ಹೆಚ್ಚಿನ ಮಕ್ಕಳಿಗೆ ತಮ್ಮ ಪಾಲಕರು ಬಹಳ ಹೊತ್ತಿನ ತನಕ ಕಾಣಿಸದಿದ್ದರೆ ಮತ್ತು ನಂತರ ಅವರು ಅಕಸ್ಮಾತ್ ಎದುರಿಗೆ ಕಂಡರೆ, ಆಗ ಮಕ್ಕಳು ಪಾಲಕರ ಬಳಿ ಹೋಗಲು ಹಾತೊರೆಯುತ್ತಿರುತ್ತಾರೆ ಅಥವಾ ಏನಾದರೂ ಚಲನವಲನ ಮಾಡುತ್ತಾರೆ. ನಾನು ಗುರುಜಿಯವರಿಗೆ ೩-೪ ಗಂಟೆಗಳ ಕಾಲ ‘ಸನಾತನ ಆಶ್ರಮ’ವನ್ನು ತೋರಿಸಿ ಆಶ್ರಮದಲ್ಲಿ ನಡೆಯುವ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದ ಬಗ್ಗೆ ಮಾಹಿತಿಯನ್ನು ಹೇಳಿದೆನು. ಆಗ ಚಿ. ಲಹರಿಯು ಅವರೊಂದಿಗೆ ಇರಲಿಲ್ಲ. ನಂತರ ನಾವು ಅವರ ಕೋಣೆಗೆ ಹೋದಾಗ ಚಿ. ಲಹರಿಯು ತನ್ನ ತಂದೆಯವರ ಕಡೆಗೆ ನೋಡುವಾಗ ಸ್ಥಿರ ಮತ್ತು ಹಸನ್ಮುಖಳಾಗಿಯೇ ಇದ್ದಳು.
ಆ. ನಂತರ ನಾನು ಕು. ಲಹರಿಯನ್ನು, “ನಿನಗೂ ಆಶ್ರಮವನ್ನು ತೋರಿಸಲೇ ?” ಎಂದು ಕೇಳಿದೆನು. ಆಗ ಅವಳು ‘ಹೂಂ’ ಎಂದು ಧ್ವನಿ ಮಾಡಿ ಹೌದೆಂದು ಕುತ್ತಿಗೆಯನ್ನು ಅಲ್ಲಾಡಿಸಿದಳು ಮತ್ತು ಮಂದಹಾಸ ಬೀರಿ ನನಗೆ ಸ್ಪಂದಿಸಿದಳು. ಆಗ ನನಗೆ ಈ ಪ್ರಸಂಗದ ಬಗ್ಗೆ ಆಶ್ಚರ್ಯವೆನಿಸಿತು.
ಇ. ನಾನು ಗುರುಜಿಯವರೊಂದಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಕು. ಲಹರಿ ನಮ್ಮ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದಳು ಮತ್ತು ನಾವು ಅವಳತ್ತ ನಡುನಡುವೆ ನೋಡಿದಾಗ ಅವಳು ನಮಗೆ ಸ್ಪಂದಿಸುತ್ತಿದ್ದಳು.
ಈ. ಒಂದು ಬಾರಿ ಅವಳು ನಿದ್ದೆಯಿಂದ ಆಗಷ್ಟೇ ಎದ್ದಿದ್ದಳು. ಆಗ ನಾನು ಲಹರಿಗೆ, “ನೀನು ನಮ್ಮೊಂದಿಗೆ ಆಶ್ರಮದಲ್ಲಿಯೇ ಇರು’, ಎಂದು ಹೇಳಿದೆನು. ಆಗ ಗುರುಜಿಯವರು, “ಮುಂದೆ ಇಲ್ಲಿ ಗುರುಕುಲದ ಸ್ಥಾಪನೆಯಾದಾಗ ಅವಳು ಬರುವಳು !” ಎಂದು ಹೇಳಿದರು. ತನ್ನ ತಂದೆಯವರ ಈ ವಾಕ್ಯವನ್ನು ಕೇಳಿದ ತಕ್ಷಣ ಚಿ. ಲಹರಿಯು ಆನಂದದಿಂದ ಮಂದಹಾಸ ಬೀರಿ ಸ್ಪಂದಿಸಿದಳು.
ಗುರುಕೃಪೆಯಿಂದ ನಮಗೆ ಇಂತಹ ದೈವಿ ಬಾಲಕಿಯ ಭೇಟಿಯಾಯಿತು ಮತ್ತು ಆನಂದ ದೊರಕಿತು, ಈ ಕುರಿತು ಶ್ರೀ ಗುರುಚರಣಗಳಲ್ಲಿ ಕೃತಜ್ಞತೆಗಳು !’
೩. ಶ್ರೀ. ರಾಮ ಹೊನಪ ಮತ್ತು ಸೌ. ಸೌಮ್ಯಾ ಕುದರವಳ್ಳಿ
ಅ. ‘ಚಿ. ಲಹರಿಯ ಕಡೆಗೆ ನೋಡಿದಾಗ ಮನಸ್ಸಿಗೆ ಆನಂದ ಮತ್ತು ಉತ್ಸಾಹದ ಅರಿವಾಗುತ್ತದೆ.
ಆ. ಆಶ್ರಮದ ಸಾಧಕರು ಅವಳ ಬಳಿಗೆ ಹೋಗುತ್ತಲೇ ಅವಳು ಅವರೆಡೆ ನಗುಮುಖದಿಂದ ನೋಡಿ ಸ್ಪಂದಿಸುತ್ತಿದ್ದಳು. ಇತರ ಮಕ್ಕಳ ತುಲನೆಯಲ್ಲಿ ಅವಳ ಈ ನಡವಳಿಕೆ ವೈಶಿಷ್ಟ್ಯ ಪೂರ್ಣವಾಗಿರುವುದು ಅರಿವಾಯಿತು.
ಇ. ಆ ಪ್ರಸಂಗದಲ್ಲಿ ‘ಚಿ. ಲಹರಿಯು ಇತರ ಮಕ್ಕಳಂತಲ್ಲ ‘ದೈವಿ ಬಾಲಕಿ’ಯಾಗಿದ್ದಾಳೆ ಮತ್ತು ದೊಡ್ಡವಳಾದ ಮೇಲೆ ಅವಳು ಧರ್ಮಕಾರ್ಯವನ್ನು ಮಾಡುವವಳಾಗಿದ್ದು ಅವಳ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿದೆ’, ಎಂಬ ವಿಚಾರ ನಮ್ಮ ಮನಸ್ಸಿನಲ್ಲಿ ಬಂದಿತು.’
೪. ಶ್ರೀ. ಗಿರಿಧರ ಭಾರ್ಗವ ವಝೆ
ಅ. ‘ಕು. ಲಹರಿಯ ಗುಣವೈಶಿಷ್ಟ್ಯಗಳ ಕಡತಗಳ ಸಂಕಲನ ಮಾಡುವಾಗ ನನ್ನ ಅಂತರ್ಮನದಲ್ಲಿ ನಾಮಜಪವು ತನ್ನಿಂದ ತಾನೇ ಆರಂಭವಾಯಿತು.
ಆ. ಕಡತವನ್ನು ಓದುವಾಗ ನನಗೆ ಒಳಗಿನಿಂದ ಆನಂದದ ಅರಿವಾಗುತ್ತಿತ್ತು. ಆ ಸ್ಥಿತಿಯಲ್ಲಿ ನನಗೆ ‘ಯಾರೊಂದಿಗೂ ಏನೂ ಮಾತನಾಡಬಾರದು ಮತ್ತು ಒಳಗೆ ನಡೆಯುತ್ತಿರುವ ನಾಮಜಪದ ಕಡೆಗೆ ಅನುಸಂಧಾನವಿಟ್ಟು ಸಂಕಲನದ ಸೇವೆಯನ್ನು ಮಾಡಬೇಕು’, ಎಂದು ಅನಿಸುತ್ತಿತ್ತು.’
೫. ಶ್ರೀ. ಸೋಮನಾಥ ಮಲ್ಯಾ, ಉಡುಪಿ.
ಅ. ‘ನಾನು ಗುರುಜಿಯವರೊಂದಿಗೆ ಕರ್ನಾಟಕದಿಂದ ಚತುಷ್ಚಕ್ರ ವಾಹನದಿಂದ ರಾಮನಾಥಿ ಆಶ್ರಮಕ್ಕೆ ಬಂದೆನು. ಇಂತಹ ದೂರದ ಪ್ರವಾಸದಲ್ಲಿ ಹೆಚ್ಚಿನ ಮಕ್ಕಳು ಅಸ್ವಸ್ಥರಾಗುತ್ತಾರೆ ಅಥವಾ ಅಳುತ್ತಾರೆ; ಆದರೆ ಚಿ. ಲಹರಿಯು ಬಹಳಷ್ಟು ಸಮಯ ಶಾಂತವಾಗಿದ್ದಳು.
ಆ. ಗುರುಜಿಯವರೊಂದಿಗೆ ಸಂಚಾರವಾಣಿಯಲ್ಲಿ ಮೊದಲ ಬಾರಿಗೆ ಮಾತನಾಡುವಾಗ ನಾನು ಚಿ. ಲಹರಿಯ ಹೆಸರು ಕೇಳಿದೆನು, ಆಗ ನನ್ನ ಮನಸ್ಸಿಗೆ ಆನಂದದ ಅರಿವಾಯಿತು.
ಇ. ಅವಳನ್ನು ನೋಡುವಾಗ ‘ಅವಳ ಕಣ್ಣುಗಳಿಂದ ದೈವಿ ಶಕ್ತಿಯ ಪ್ರಕ್ಷೇಪಣೆಯಾಗುತ್ತಿದೆ ಮತ್ತು ಅವಳು ದೈವಿ ಬಾಲಕಿಯಾಗಿದ್ದಾಳೆ’, ಎಂದು ನನಗೆ ಅರಿವಾಯಿತು.’