೧. ಶ್ರೀ. ಅನಂತಜಿ ಗುರುಜಿ ಇವರನ್ನು ನೋಡಿದಾಗ ಅವರು ಹಿಂದಿನ ಜನ್ಮದಲ್ಲಿ ಋಷಿಯಾಗಿದ್ದರು ಹಾಗೂ ಅವರು ಧ್ಯಾನಯೋಗಕ್ಕನುಸಾರ ಸಾಧನೆ ಮಾಡಿದ್ದಾರೆ, ಎಂದೆನಿಸಿತು. ಆದ್ದರಿಂದ ಅವರಿಗೆ ಯೋಗ ಹಾಗೂ ಪ್ರಾಣಾಯಾಮಕ್ಕೆ ಸಂಬಂಧಿಸಿದಂತೆ ಜ್ಞಾನ ಸಿಗುತ್ತದೆ.
೨. ಅವರ ಆಜ್ಞಾಚಕ್ರದ ಬಳಿ ಆತ್ಮಜ್ಯೋತಿ ಕಂಡಿತು. ಇದರಿಂದ ಅವರ ಕುಂಡಲಿನಿ ಚಕ್ರ ಜಾಗೃತವಾಗಿದ್ದು ಅದು ಆಜ್ಞಾಚಕ್ರದ ತನಕ ಬಂದಿದೆ. ಆದ್ದರಿಂದ ಅವರ ಆಧ್ಯಾತ್ಮಿಕ ಪ್ರಗತಿ ವೇಗವಾಗಿ ಹಾಗೂ ಒಳ್ಳೆಯದಾಗಿ ಆಗುತ್ತಿದೆ, ಎಂದೆನಿಸಿತು.
೩. ಅವರ ಮೇಲೆ ದೇವಿ, ಶಿವ, ದತ್ತ ಹಾಗೂ ಗಣಪತಿ ಹೀಗೆ ೪ ದೇವತೆಗಳ ಕೃಪೆಯಿದ್ದು ಇದರಿಂದಾಗಿಯೇ ಅವರಿಗೆ ಯೋಗ, ಪ್ರಾಣಾಯಾಮ ಇತ್ಯಾದಿ ವಿಷಯಗಳಲ್ಲಿ ಜ್ಞಾನ ಸಿಗುತ್ತದೆ.
೪. ಶ್ರೀ. ಅನಂತಜಿ ಗುರುಜಿ ಇವರ ಅಹಂಭಾವ ತುಂಬಾ ಕಡಿಮೆ ಇರುವುದರಿಂದ ಅವರ ಮೇಲೆ ದೈವಿಕೃಪೆಯಾಗುತ್ತದೆ ಹಾಗೂ ಈ ಮಾಧ್ಯಮದಿಂದ ಕೆಟ್ಟಶಕ್ತಿಗಳಿಂದ ಅವರ ರಕ್ಷಣೆಯಾಗುತ್ತದೆ.
೫. ಅವರಲ್ಲಿ ನಮ್ರತೆ ಹಾಗೂ ಸಮಷ್ಟಿಗಾಗಿ ಕಲ್ಯಾಣ ಮಾಡುವ ತಳಮಳ ತುಂಬಾ ಇರುವುದರಿಂದ ದೈವಿ ಶಕ್ತಿಯು ಅವರ ಮಾಧ್ಯಮದಿಂದ ಚಿಕಿತ್ಸೆ ಮಾಡುತ್ತದೆ.
೬. ಅವರು ಕರ್ಮಯೋಗ ಹಾಗೂ ಜ್ಞಾನಯೋಗ ಈ ಮಾರ್ಗದಿಂದ ಸಾಧನೆ ಮಾಡುವವರಾಗಿದ್ದು ಅವರಿಗೆ ಈಶ್ವರದಿಂದ ಅಂದರೆ ವಿಶ್ವಬುದ್ಧಿಯಿಂದ ಯೋಗ ಹಾಗೂ ಪ್ರಾಣಾಯಾಮಗಳ ಬಗ್ಗೆ ಜ್ಞಾನ ಸಿಗುತ್ತದೆ.
೭. ಶ್ರೀ. ಅನಂತಜಿ ಗುರುಜಿ ಇವರಲ್ಲಿ ತುಂಬಾ ಕಲಿಯುವ ವೃತ್ತಿಯಿದೆ.
– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.(೬.೧೨.೨೦೨೦)
ಶ್ರೀ. ಅನಂತಜಿ ಗುರುಜಿಯವರ ಪರಿಚಯ
ಶ್ರೀ. ಅನಂತಜಿ ಗುರುಜಿ ಇವರು ತುಮಕೂರಿನವರಾಗಿದ್ದು ಅವರು ‘ಯೋಗ ವಿಸ್ಮಯ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರು ಕಳೆದ ೯ ವರ್ಷ ಸಾತ್ತ್ವಿಕ ಆಹಾರ, ಯೋಗ ಹಾಗೂ ವಿವಿಧ ಮನೆ ಮದ್ದುಗಳ ವನಸ್ಪತಿಗಳ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಅವರಿಗೆ ಇವೆಲ್ಲದರ ಬಗ್ಗೆ ಆಳವಾದ ಅಧ್ಯಯನವಿದೆ. ‘ಪ್ರಜಾ ವಾಹಿನಿಯಲ್ಲಿ ಶ್ರೀ. ಅನಂತಜಿ ಗುರುಜಿ ಇವರ ಯೋಗ ಹಾಗೂ ಪ್ರಾಣಾಯಾಮ ಇವುಗಳನ್ನಧರಿಸಿದ ಮಾಲಿಕೆ ನಡೆಯುತ್ತಿದ್ದು ಅದರ ಒಟ್ಟು ೩೫ ಭಾಗಗಳು ಪೂರ್ಣವಾಗಿವೆ. ಈ ಮಾಲಿಕೆಗೆ ಜನರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ. ಅವರು ಸಾವಿರಾರು ವೈದ್ಯರಿಗೆ ತಮ್ಮಲ್ಲಿರುವ ಜ್ಞಾನದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ, ಅದೇರೀತಿ ಅವರು ಯೋಗ ಹಾಗೂ ಮನೆಮದ್ದುಗಳ ಮಾಧ್ಯಮದಿಂದ ಅನೇಕ ರೋಗಿಗಳನ್ನು ಗುಣಮುಖ ಮಾಡಿದ್ದಾರೆ. ಶ್ರೀ. ಅನಂತಜಿ ಗುರುಜಿಯವರಿಗೆ ೭೦ ರಿಂದ ೮೦ ಲಕ್ಷ ಅನುಯಾಯಿಗಳಿದ್ದಾರೆ, ಅದೇರೀತಿ ‘ಫೇಸ್‌ಬುಕ್ನ ಮಾಧ್ಯಮದಿಂದ ಅವರ ಯೋಗ ಹಾಗೂ ಪ್ರಾಣಾಯಾಮಗಳ ವಿಡಿಯೋಗಳನ್ನು ನೋಡುವವರ ಸಂಖ್ಯೆ (ವಿವರ್ಸ್) ೩ ಕೋಟಿಯಷ್ಟಿದೆ. ಶ್ರೀ. ಅನಂತ ಗುರುಜಿಯವರ ಮಾರ್ಗದರ್ಶಕ್ಕನುಸಾರ ೯೦ ಲಕ್ಷ ಜನರು ಆಚರಣೆ ಮಾಡುತ್ತಿದ್ದಾರೆ.
ಇತರರ ವಿಚಾರ ಮಾಡುವ ಶ್ರೀ. ಅನಂತಜಿ ಗುರುಜಿ !
ಶ್ರೀ. ಅನಂತ ಗುರುಜಿ ಇವರು ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸುತ್ತಿರುವಾಗ ಇತರರ ವಿಚಾರ ಮಾಡುತ್ತಾರೆ. ಅವರಲ್ಲಿ ಆತ್ಮವಿಶ್ವಾಸ, ಇತರರಿಗೆ ಸಹಜವಾಗಿ ಜ್ಞಾನ ನೀಡುವುದು ಇತ್ಯಾದಿ ಅನೇಕ ಗುಣಗಳಿವೆ. ಶರೀರವನ್ನು ಸದೃಢವಾಗಿಡಲು ಹಾಗೂ ಮನಸ್ಸು ಶಾಂತವಾಗಿಡಲು ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸುತ್ತಿರುವಾಗ ಅಧ್ಯಾತ್ಮದ ಅಂಗವಾಗಿರುವ ಅಂದರೆ ಒಳ್ಳೆಯ ಸಾಧನೆಗಾಗಿಯೂ ಮಾರ್ಗದರ್ಶನ ಮಾಡುತ್ತಾರೆ. ಅವರು ಇಲ್ಲಿಯ ಸನಾತನ ಆಶ್ರಮದ ಸಾಧಕರಿಗೆ ಯೋಗ ಹಾಗೂ ಪ್ರಾಣಾಯಾಮವನ್ನು ಆನಂದದಿಂದ ಹಾಗೂ ಸಹಜವಾಗಿ ಹೇಳಿಕೊಟ್ಟರು. – ಸೌ. ಅಕ್ಷತಾ ರೇಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ