‘ರಾಮಪುರ (ಬಾಗಲಕೋಟೆ)ದಲ್ಲಿನ ಕೀರ್ತನಕಾರರಾದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಅಂತರಂಗದ ಭಕ್ತರಾಗಿದ್ದಾರೆ. ಸಂತ ತುಕಾರಾಮ ಮಹಾರಾಜರು ಸೂಕ್ಷ್ಮದಿಂದ ನೀಡಿದ ಜ್ಞಾನದ ಮೂಲಕ ಭಸ್ಮೆ ಮಹಾರಾಜರು ೬ ವರ್ಷಗಳಲ್ಲಿ ‘ತುಕಾರಾಮ ಚೈತನ್ಯ’ ಎಂಬ ಹೆಸರಿನ ಕನ್ನಡ ಭಾಷೆಯಲ್ಲಿನ ಗ್ರಂಥವನ್ನು ಬರೆದರು. ಭಸ್ಮೆ ಮಹಾರಾಜರು ನಿರಂತರ ರಾಮನಾಮದ ಜಪವನ್ನು ಮಾಡುತ್ತಾರೆ. ಅವರು ತಮ್ಮ ಶಿಷ್ಯರೊಂದಿಗೆ ಇದುವರೆಗೆ ೨ ಸಾವಿರ ಕೋಟಿ ರಾಮನಾಮದ ಜಪವನ್ನು ಮಾಡಿದ್ದಾರೆ.
ಶ್ರೀ. ಭಸ್ಮೆ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರ !
ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಶ್ರೀರಾಮನೇ ಆಗಿದ್ದಾರೆ ಮತ್ತು ಎಲ್ಲ ಸಮಸ್ಯೆಗಳನ್ನು ಅವರು ಮಾತ್ರ ನಿವಾರಿಸ ಬಲ್ಲರು. ಅವರ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು !
ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಶ್ರೀ. ಭಸ್ಮೆ ಮಹಾರಾಜರಲ್ಲಿರುವ ಭಾವ
ಒಮ್ಮೆ ಭಸ್ಮೆ ಮಹಾರಾಜರು ಉಡುಪಿಯಲ್ಲಿನ ಅವರ ಪರಿಚಯದ ಸಾಧಕ ಶ್ರೀ. ಸೋಮನಾಥ ಮಲ್ಯ ಇವರನ್ನು ‘ಸೋಮನಾಥಾನಂದ’ ಎಂದು ಕರೆಯತೊಡಗಿದರು. ಆಗ ಶ್ರೀ. ಸೋಮನಾಥ ಇವರು ಭಸ್ಮೆ ಮಹಾರಾಜರಿಗೆ, “ನನ್ನನ್ನು ಈ ರೀತಿ ಕರೆಯುವುದರ ಕಾರಣವೇನು ?” ಎಂದು ಕೇಳಿದರು. ಆಗ ಭಸ್ಮೆ ಮಹಾರಾಜರು, “ನಿಮ್ಮ ಹೃದಯದಲ್ಲಿ ಆನಂದಸ್ವರೂಪರಾದ ಪರಾತ್ಪರ ಗುರು ಡಾಕ್ಟರರ ವಾಸವಿದೆ; ಆದುದರಿಂದ ನಾನು ನಿಮ್ಮನ್ನು ‘ಸೋಮನಾಥಾನಂದ’ ಎಂದು ಕರೆಯುತ್ತೇನೆ,” ಎಂದು ಹೇಳಿದರು. – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೭.೨೦೨೦)
ಈ ಲೇಖನವನ್ನು ಪೂ. ಸದಾನಂದ ಭಸ್ಮೆ ಮಹಾರಾಜರು ಸಂತರೆಂದು ಘೋಷಿಸುವ ಮೊದಲು ಬರೆದಿದ್ದರಿಂದ ಶ್ರೀ. ಸದಾನಂದ ಭಸ್ಮೆ ಮಹಾರಾಜರು ಎಂದು ಉಲ್ಲೇಖಿಸಲಾಗಿದೆ.