ಅವಧೂತ ವಿನಯಗುರುಜಿಯವರು ಪರಾತ್ಪರ ಗುರು ಡಾ. ಆಠವಲೆಯವರ ಮತ್ತು ಅವರ ಕಾರ್ಯದ ಬಗ್ಗೆ ತೆಗೆದ ಗೌರವೋದ್ಗಾರ !

ಪರಾತ್ಪರ ಗುರು ಡಾ. ಆಠವಲೆ
ಅವಧೂತ ವಿನಯಗುರುಜಿ

೧. ಪರಾತ್ಪರ ಗುರುದೇವರಲ್ಲಿ ವಿಷ್ಣುತತ್ತ್ವವಿದ್ದು ಭಕ್ತರ ಕಲ್ಯಾಣಕ್ಕಾಗಿ ಅವರ ಅವತಾರವಾಗಿದೆ !

ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಪರಮಾತ್ಮನಾಗಿದ್ದಾರೆ, ಹಾಗೆಯೇ ಅವರ ಬೋಧನೆಯು ಮೌನ, ಮಹಾಮೌನ ಮತ್ತು ಧ್ಯಾನ ಈ ರೀತಿಯಾಗಿದೆ. ಪರಾತ್ಪರ ಗುರುದೇವರಲ್ಲಿ ವಿಷ್ಣುತತ್ತ್ವವಿದ್ದು ಅವರಲ್ಲಿ ವಿಷ್ಣುವಿನ ಶಕ್ತಿಯು ಕಾರ್ಯನಿರತವಾಗಿದೆ. ಅವರ ಕಾರಣದೇಹವು ವೈಕುಂಠದಲ್ಲಿದ್ದು ಅವರಲ್ಲಿ ವೈಷ್ಣವೀ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ. ಪರಾತ್ಪರ ಗುರುದೇವರಿಗೆ ತಮ್ಮದೆಂಬ ಪ್ರಾರಬ್ಧವಿಲ್ಲ. ಭಕ್ತರ (ಸಾಧಕರ) ಕಲ್ಯಾಣಕ್ಕಾಗಿ ಅವರ ಅವತಾರವಾಗಿದೆ. ಯಾವ ರೀತಿ ಪ್ರಭು ಶ್ರೀರಾಮನಿಗೆ ಪ್ರಾರಬ್ಧವಿದ್ದರೂ ಅದನ್ನು ಲೋಕಲ್ಯಾಣಕ್ಕಾಗಿ ತಂದಿದ್ದರೋ ಅದೇ ರೀತಿ ಪರಾತ್ಪರ ಗುರು ಡಾ. ಆಠವಲೆಯವರದ್ದಾಗಿದೆ.

೨. ಪರಾತ್ಪರ ಗುರು ಡಾ. ಆಠವಲೆಯವರು ಅನಂತರಾಗಿದ್ದಾರೆ !

ರಾಮ-ಕೃಷ್ಣರು ಅವತಾರ ತಾಳಿದಂತೆ ಗುರುದೇವರು ಸಹ ಅವತಾರ ತಾಳಿ ಬಂದಿದ್ದು ಸಂಪೂರ್ಣ ವಿಶ್ವಕ್ಕೆ ಜ್ಞಾನದ ಶಿಕ್ಷಣವನ್ನು ನೀಡಲು ಅವರ ಜನ್ಮವಾಗಿದೆ. ಅವರ ಪ್ರತಿಯೊಂದು ಕರ್ಮವು ನಿಷ್ಕಾಮವಾಗಿದೆ. ಇದರೊಂದಿಗೆ ವಿಶ್ವದಲ್ಲಿ ಹಿಂದೂ ಧರ್ಮದ ಪ್ರತಿಷ್ಠಾಪನೆ ಮತ್ತು ಎಲ್ಲರಲ್ಲಿ ಧರ್ಮದ ಸ್ಥಾಪನೆ ಮಾಡಲು ಅವರ ಜನ್ಮವಾಗಿದೆ. ಅವರು ಕರುಣೆಯ ಸಾಗರವಾಗಿದ್ದು ಅವರಲ್ಲಿ ಮೇಲುಕೀಳೆಂಬ ಭೇದಭಾವವಿಲ್ಲ. ಅವರಲ್ಲಿ ತಂದೆ-ತಾಯಿ ಹೀಗೆ ಇಬ್ಬರ ಪ್ರೇಮವಿದ್ದು ಅದರಂತೆ ಅವರ ಶಕ್ತಿಯು ಕಾರ್ಯವನ್ನು ಮಾಡುತ್ತಿರುತ್ತದೆ. ಅವರಲ್ಲಿ ಶಿವ ಮತ್ತು ಶಕ್ತಿ ಇವರಿಬ್ಬರ ಸಂಗಮವಿದೆ. ಪರಾತ್ಪರ ಗುರುದೇವರ ಸ್ಥಿತಿಯು ಪರಮಹಂಸ ಯೋಗಾನಂದ ಇವರಂತಿದೆ. ಮಾಯೆಯು ಪರಾತ್ಪರ ಗುರುದೇವರ ಅಧೀನವಾಗಿರುವುದರಿಂದ ಅವರ ಮೇಲೆ ಮಾಯೆಯ ತಂತ್ರವು ನಡೆಯುವುದಿಲ್ಲ. ಪರಾತ್ಪರ ಗುರುದೇವರಲ್ಲಿ ಶಾಶ್ವತ ಆನಂದವಿದೆ. ಅವರನ್ನು ಕಣ್ಣುಗಳನ್ನು ಮುಚ್ಚಿ ನೋಡಿದರೆ ಈಶ್ವರನ ನಿರ್ಗುಣ ರೂಪದ ಪ್ರಕಾಶದ ಅರಿವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಅನಂತ (Infinite)ರಾಗಿದ್ದಾರೆ.