ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧. ದೈವೀ ಅನುಸಂಧಾನದಲ್ಲಿದ್ದರೆ ಮನಸ್ಸಿನಲ್ಲಿರುವ ಒತ್ತಡವು ಕಡಿಮೆಯಾಗಿ ಆನಂದದಲ್ಲಿರಲು ಸಾಧ್ಯವಾಗುತ್ತದೆ !

‘ಸಾಧನೆಯು ಒತ್ತಡವನ್ನು ದೂರ ಮಾಡಲಿಕ್ಕಾಗಿಯೇ ಇದೆ. ನಾವು ಒತ್ತಡವೇ ಬರದಂತೆ ಜೀವನ ನಡೆಸಬೇಕು. ಪರಿಸ್ಥಿತಿಯನ್ನು ತನ್ನಲ್ಲಿರುವ ದೈವೀ ಭಾವದಿಂದ ಗೆದ್ದರೆ ಒತ್ತಡಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮಾನಸೋಪಚಾರ ತಜ್ಞರ ಅವಶ್ಯಕತೆಯಿರುವುದಿಲ್ಲ. ಮನಸ್ಸಿನ ದೈವೀ ಅನುಸಂಧಾನದಿಂದ ಸಕಾರಾತ್ಮಕ ವಿಚಾರಗಳು ನಿರ್ಮಾಣವಾಗುತ್ತವೆ. ದೈವೀ ವಿಚಾರಗಳ ನಿರ್ಮಾಣವು ಜೀವನಕ್ಕೆ ಆನಂದ ನೀಡುತ್ತದೆ.

೨. ಸಮಾಜವೆಲ್ಲ ಸಾಧನೆಯನ್ನು ಮಾಡತೊಡಗಿದರೆ, ಬೇಗನೆ ‘ರಾಮರಾಜ್ಯ’ದ ಉದಯವಾಗುವುದು !

ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿದ್ದಾನೆ. ಜಿಜ್ಞಾಸು ಮನುಷ್ಯನಿಗೆ ಸಾಧನೆಯನ್ನು ಹೇಳಲೇಬೇಕು. ‘ಜ್ಯೋತ ಸೆ ಜ್ಯೋತ ಜಗಾವೋ’, ಎಂಬ ಉಕ್ತಿಯಂತೆ ಸಮಾಜವೆಲ್ಲ ಸಾಧನೆಯನ್ನು ಮಾಡತೊಡಗಿದರೆ, ಪೃಥ್ವಿಯ ಸ್ಪಂದನಗಳು ಆದಷ್ಟು ಬೇಗ ಬದಲಾವಣೆಯಾಗುವುದು ಮತ್ತು ಒಂದು ದಿನ ‘ರಾಮರಾಜ್ಯ’ ಖಂಡಿತ ಉದಯವಾಗುವುದು. ಇದಕ್ಕಾಗಿ ಪ್ರತಿಯೊಬ್ಬ ಸಾಧಕನು ಹಿಂದೂ ಧರ್ಮಪ್ರಸಾರದ ಶಿವಧನುಷ್ಯವನ್ನು ಎತ್ತಬೇಕು. ಇದೇ ಪ್ರಸಕ್ತ ಕಾಲದ ಸಮಷ್ಟಿ ಸಾಧನೆಯಾಗಿದೆ.

೩. ಕರ್ಮವನ್ನು ನಿರಪೇಕ್ಷಭಾವದಿಂದಲೇ ಮಾಡಬೇಕು. ‘ಕರ್ಮದ ಫಲವನ್ನು ಎಲ್ಲಿ ಮತ್ತು ಯಾವಾಗ ಕೊಡುವುದು ?’, ಎಂಬುದು ಸರ್ವಶಕ್ತಿವಂತನಾದ ದೇವರ ಕೈಯಲ್ಲಿರುತ್ತದೆ. ಕರ್ಮವು ನಾಮಸಹಿತವಾದಾಗಲೇ ಅದು ನಿರಪೇಕ್ಷವಾಗುತ್ತದೆ.

೪. ಕರ್ಮವನ್ನು ಮಾಡುತ್ತಿರಬೇಕು. ಫಲದ ಇಚ್ಛೆಯನ್ನು ಇಡಬಾರದು. ಸಾಧನೆಯು ಹೆಚ್ಚಾದರೆ, ದೇವರ ಆಶೀರ್ವಾದವೂ ಸಿಗುತ್ತದೆ. ದೇವರ ಆಶೀರ್ವಾದದಿಂದ ಕಾಲದೊಂದಿಗೆ ಕರ್ಮದ ಅಡಚಣೆಗಳೂ ತನ್ನಷ್ಟಕ್ಕೆ ತಾನೆ ದೂರವಾಗುತ್ತವೆ.

೫. ಅಂತರ್ಮುಖತೆಯಿಂದ ಆಧ್ಯಾತ್ಮಿಕ ಶಕ್ತಿಯು ಜಾಗೃತವಾಗಿ ಮನುಷ್ಯನು ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರುತ್ತಾನೆ ಮತ್ತು ಬಹಿರ್ಮುಖತೆಯಿಂದ ಶಕ್ತಿಹೀನನಾಗುತ್ತಾನೆ !

ಅಂತರ್ಮುಖತೆಯು ಮನುಷ್ಯನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ದೈವಿ ಶಕ್ತಿಯಿಂದ ಮನುಷ್ಯನು ಸಾಮರ್ಥ್ಯವುಳ್ಳವನಾಗುತ್ತಾನೆ. ಅಂತರ್ಮುಖತೆಯ ಆಧ್ಯಾತ್ಮಿಕ ಶಕ್ತಿಯು ಮನುಷ್ಯನಿಗೆ ಯಾವುದೇ ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಕಲಿಸುತ್ತದೆ. ಕೊನೆಗೆ ಅದೇ ಅವನಿಗೆ ಅಂತರ್ಗುರುವಾಗುತ್ತದೆ. ಬಹಿರ್ಮುಖತೆಯು ಮಾತ್ರ ಮನುಷ್ಯನನ್ನು ಶಕ್ತಿಹೀನ ಮಾಡುತ್ತದೆ. ಬಹಿರ್ಮುಖತೆಯಿಂದಾಗಿ ಮನುಷ್ಯನು ಭಾವನಾಶೀಲನಾಗುತ್ತಾನೆ. ‘ಭಾವನಾಶೀಲತೆ’ ಇದು ಮನುಷ್ಯನ ದುಃಖದ ಒಂದು ಮುಖ್ಯ ಕಾರಣವಾಗಿದೆ.

೬. ಈಶ್ವರೀ ಜ್ಞಾನವು ಈಶ್ವರೇಚ್ಛೆಯಿಂದಲೇ ಪ್ರಾಪ್ತವಾಗುತ್ತಿರುವುದರಿಂದ ಅದರಲ್ಲಿ ಹಗುರತೆಯ ಆನಂದವಿರುತ್ತದೆ !

ಈಶ್ವರೀ ಜ್ಞಾನವು ಶೀಘ್ರಗತಿಯಿಂದ ಪ್ರಾಪ್ತವಾಗುತ್ತದೆ. ಈ ಜ್ಞಾನವು ಪ್ರಾಪ್ತವಾಗಲು ಆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಕ್ಷಮತೆಯೂ ದೇವರ ಆಶೀರ್ವಾದದಿಂದಲೇ ಲಭಿಸುತ್ತದೆ. ಈಶ್ವರೀ ಜ್ಞಾನವನ್ನು ಗ್ರಹಿಸುವಾಗ ಜ್ಞಾನದಲ್ಲಿ ತಮ್ಮ ವಿಚಾರಗಳಿರುವುದಿಲ್ಲ. ಜ್ಞಾನದಲ್ಲಿ ಕೇವಲ ಈಶ್ವರೇಚ್ಛೆ ಇರುತ್ತದೆ. ಆದುದರಿಂದ ಅದರಲ್ಲಿ ಹಗುರತನದ ಆನಂದವಿರುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೨.೩.೨೦೨೦)