ಹಿಂದೂದ್ವೇಷಿ ‘ಟೈಮ್ಸ್ ಆಫ್ ಇಂಡಿಯಾ’ದ ದೂರಿನ ನಂತರ ‘ಲವ್ ಜಿಹಾದ್’ಅನ್ನು ವಿರೋಧಿಸುವ ೩ ಫೇಸ್‌ಬುಕ್ ಖಾತೆ ಬಂದ್ !

ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳುತ್ತಾ ಫೇಸ್‌ಬುಕ್‌ನಿಂದ ‘ಲವ್ ಜಿಹಾದ್’ ವಿರೋಧಿಸುವ ೩ ಗುಂಪುಗಳನ್ನು ತೆಗೆದುಹಾಕಲಾಗಿದೆ. ಇದನ್ನು ಆಂಗ್ಲ ದಿನಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇದೇ ದೈನಿಕದಿಂದ ಈ ಗುಂಪುಗಳ ವಿರುದ್ಧ ದೂರು ದಾಖಲಿಸಲಾಗಿತ್ತು.

ಗಿಲ್ಗಿಟ್-ಬಾಲ್ಟಿಸ್ತಾನದ ನಿಯಂತ್ರಣವನ್ನು ಕೈಬಿಡಿ ! – ಭಾರತದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಪಾಕಿಸ್ತಾನ ನುಸುಳಿ ವಶಪಡಿಸಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಮಧ್ಯಂತರ ರಾಜ್ಯದ ಸ್ಥಾನಮಾನ ನೀಡುವುದನ್ನು ಭಾರತ ಸರಕಾರ ವಿರೋಧಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ ಮೇಲಿರುವ ನಿಯಂತ್ರಣವನ್ನು ಬಿಡಬೇಕು.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳನ್ನು ಸುಟ್ಟರು

ಸಿಂಧ್ ಪ್ರಾಂತ್ಯದ ಗೋಥ್ ಸೊಮರ್ ಪಾಲಿ ಪ್ರದೇಶದಲ್ಲಿ ಹಿಂದೂಗಳು ತಮ್ಮ ಮನೆಗಳನ್ನು ತೊರೆಯುವಂತೆ ದೋಸ್ತ್ ಮೊಹಮ್ಮದ್ ಮತ್ತು ಅವರ ಗೂಂಡಾ ಸಹಚರರು ಬೆದರಿಕೆ ಹಾಕಿದರು. ಹಿಂದೂಗಳು ಹೋಗಲು ನಿರಾಕರಿಸಿದಾಗ, ಅವರನ್ನು ಹೊಡೆದರು ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ, ಎಂದು ಟ್ವಿಟರ್ ಖಾತೆ ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಟಿ’ ವರದಿ ಮಾಡಿದೆ.

ವ್ಯಂಗ್ಯಚಿತ್ರಗಳ ವಿರೋಧದಲ್ಲಿ ಹಿಂಸಾಚಾರ ಸಹಿಸುವುದಿಲ್ಲ ! – ಎಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷ

ನಾನು ಮುಸ್ಲಿಮರನ್ನು ಗೌರವಿಸುತ್ತೇನೆ. ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳಿಂದ ನೋವಾಗಿರುವುದು ನಾನು ಅರ್ಥಮಾಡಿಕೊಳ್ಳಬಲ್ಲೆ. ಹೀಗಿದ್ದರೂ ಅದರ ಪ್ರತಿಕ್ರಿಯೆಯೆಂದು ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಪ್ರವಾದಿಯ ವ್ಯಂಗ್ಯಚಿತ್ರಗಳಿಂದ ಉಂಟಾದ ಹಿಂಸಾಚಾರದ ಬಗ್ಗೆ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಯಾವುದೇ ರೋಗ ಬರಬಾರದೆಂದು ಲಸಿಕೀಕರಣ (ವ್ಯಾಕ್ಸಿನೇಶನ್) ಮಾಡುತ್ತೇವೆ, ಹಾಗೆ ಕೇವಲ ಸಾಧನೆಯೇ ಮೂರನೇ ಮಹಾಯುದ್ಧದ ಸಮಯದಲ್ಲಿ ಬದುಕುಳಿಯುವ ಲಸಿಕೆಯಾಗಿದೆ.’

ಕೊರೋನಾ ಲಸಿಕೆ ಹಾಗೂ ಭಾರತದ ಜವಾಬ್ದಾರಿ !

ಪ್ರತಿಯೊಬ್ಬರೂ ‘ಸ್ಯಾನಿಟೈಸರ್’ ಹಾಗೂ ‘ಮಾಸ್ಕ್’ನ ಆಧಾರದಿಂದ ಕೊರೋನಾದೊಂದಿಗೆ ದಿನಕಳೆಯುತ್ತಿದ್ದಾರೆ. ಎಲ್ಲರೂ ಈ ಸಾಂಕ್ರಾಮಿಕತೆಯನ್ನು ತಡೆಗಟ್ಟಲು ಕೊರೋನಾದ ಮೇಲೆ ಲಸಿಕೆ ಅಥವಾ ಔಷಧಿಯ ನಿರೀಕ್ಷೆಯಲ್ಲಿದ್ದಾರೆ. ವೈರಾಣುವನ್ನು ಪ್ರತಿಬಂಧಿಸಲು ಸುಮಾರು ಅರ್ಧ ಶತಕೋಟಿ ನಾಗರಿಕರಿಗೆ ಕೊರೋನಾ ಪ್ರತಿಬಂಧಕ ಲಸಿಕೆಯನ್ನು ನೀಡಬೇಕಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೆ, ಯಾರಾದರೂ ಹಣ ಅಥವಾ ಸ್ಥಾನವನ್ನು ನೀಡಿದರೆ ಅವರು ಆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ, ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣಗಳಲ್ಲಿರುವ ಸ್ಥಾನವನ್ನು ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ.’

ಆಂಧ್ರಪ್ರದೇಶದಲ್ಲಿ ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ಹಲ್ಲೆಗಳು : ಹೊಸ ‘ಇನ್ಕ್ವಿಝಿಶನ್ ?

೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿಯೂ ಹಿಂದೂಗಳ ದೇವಸ್ಥಾನಗಳ ಮೇಲೆ ಹಲ್ಲೆಗಳು ನಡೆಯುತ್ತಿದ್ದವು. ಅನಂತರ ೧೯೯೦ ರಲ್ಲಿ ಕಾಶ್ಮೀರದಲ್ಲಿ ಜಿಹಾದಿ ಉಗ್ರವಾದದ ಒಂದು ಹೊಸ ಕಾಲ ಆರಂಭವಾಯಿತು. ಆ ಕಾಲದಲ್ಲಿಯೂ ಅಲ್ಲಿನ ಹಿಂದೂಗಳ ಮೇಲೆ ಭೀಕರ ದೌರ್ಜನ್ಯಗಳಾದವು ಹಾಗೂ ಹಿಂದೂ ದೇವಸ್ಥಾನಗಳೊಂದಿಗೆ ಅಲ್ಲಿನ ಮೂರ್ತಿಗಳನ್ನು ಕೂಡ ಧ್ವಂಸ ಮಾಡಲಾಯಿತು.

ಕೋಲಕಾತಾದಲ್ಲಿ ೧೬ ಆಗಸ್ಟ್ ೧೯೪೬ ರಂದು ಮತಾಂಧರಿಂದಾದ ಗಲಭೆಗೆ ‘ಏಟಿಗೆ ಎದುರೇಟು’ ಎಂಬಂತೆ ಪ್ರತ್ಯುತ್ತರ ನೀಡಿದ ಗೋಪಾಲಚಂದ್ರ ಮುಖ್ಯೋಪಾಧ್ಯಾಯರು !

ಆಗಸ್ಟ್ ೧೬ ರಂದು ಮುಸ್ಲಿಮ್ ಲೀಗ್‌ನ ಒಂದು ಸಭೆಯಾಯಿತು, ಅದರಲ್ಲಿ ಸುರ‍್ಹಾವರ್ದಿ ಮತ್ತು ಮುಜಿಬೂರ್ ಇವರು ನೆರೆದಿದ್ದ ಸಾವಿರಾರು ಜನರೆದುರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದರು ಮತ್ತು ಇಸ್ಲಾಂ ಧರ್ಮವನ್ನು ನಂಬದ (ಕಾಫೀರ) ಹಿಂದೂಗಳ ಹತ್ಯೆಯನ್ನು ಮಾಡಲು ಅವರನ್ನು ಪ್ರಚೋದಿಸಿದರು. ತದನಂತರ ಇಸ್ಲಾಮೀ ಕಾಲದ ಭೀಕರ ಅತ್ಯಾಚಾರವು ಮತ್ತೊಮ್ಮೆ ಒಂದು ಬಾರಿ ಕೋಲಕಾತಾದಲ್ಲಿ ಪ್ರಾರಂಭವಾಯಿತು.

ಹಿಂದೂ ಧರ್ಮಗ್ರಂಥವನ್ನು ಅವಮಾನಿಸುವ ‘ಕೆಬಿಸಿ’ ಹಾಗೂ ಅಮಿತಾಭ ಬಚ್ಚನ ಇವರು ಹಿಂದೂ ಸಮಾಜದ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

‘ಸೋನಿ ಟಿವಿ’ಯಲ್ಲಿ ಅಕ್ಟೋಬರ್ ೩೦ ರಂದು ‘ಕೌನ್ ಬನೇಗಾ ಕರೋಡಪತಿ – ಸಿಝನ್ ೧೨’ (ಕೆಬಿಸಿ) ಈ ಕಾರ್ಯಕ್ರಮದಲ್ಲಿ ಭಿತ್ತರವಾದ ‘ಕರ್ಮವೀರ್ ವಿಶೇಷ’ ಈ ಭಾಗದಲ್ಲಿ ಹಿಂದೂ ಧರ್ಮಗ್ರಂಥಗಳ ಬಗ್ಗೆ ವಿಕಲ್ಪ ಹಾಗೂ ನಕಾರಾತ್ಮಕವನ್ನು ಹಬ್ಬಿಸುವಂತಹ ಪ್ರಶ್ನೆಯನ್ನು ಕೇಳುವ ಮೂಲಕ ಹಿಂದೂಗಳ ಶ್ರದ್ಧಾಸ್ಥಾನವನ್ನು ಮತ್ತೊಮ್ಮೆ ಅವಮಾನಿಸಲಾಯಿತು.