ಹಿಂದೂ ಧರ್ಮಗ್ರಂಥವನ್ನು ಅವಮಾನಿಸುವ ‘ಕೆಬಿಸಿ’ ಹಾಗೂ ಅಮಿತಾಭ ಬಚ್ಚನ ಇವರು ಹಿಂದೂ ಸಮಾಜದ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

‘ಕೆಬಿಸಿ’ಯಿಂದ ಮುಂದುವರಿದ ಹಿಂದೂದ್ರೋಹ; ಹಿಂದೂಗಳ ಧಾರ್ಮಿಕ ಭಾವನೆಯನ್ನು ಪುನಃ ಉದ್ದೇಶಪೂರ್ವಕವಾಗಿ ನೋಯಿಸಿದ್ದರಿಂದ ಹಿಂದೂಗಳಲ್ಲಿ ಅಸಮಧಾನದ ಭಾವನೆ !

ಮುಂಬಯಿ – ‘ಸೋನಿ ಟಿವಿ’ಯಲ್ಲಿ ಅಕ್ಟೋಬರ್ ೩೦ ರಂದು ‘ಕೌನ್ ಬನೇಗಾ ಕರೋಡಪತಿ – ಸಿಝನ್ ೧೨’ (ಕೆಬಿಸಿ) ಈ ಕಾರ್ಯಕ್ರಮದಲ್ಲಿ ಭಿತ್ತರವಾದ ‘ಕರ್ಮವೀರ್ ವಿಶೇಷ’ ಈ ಭಾಗದಲ್ಲಿ ಹಿಂದೂ ಧರ್ಮಗ್ರಂಥಗಳ ಬಗ್ಗೆ ವಿಕಲ್ಪ ಹಾಗೂ ನಕಾರಾತ್ಮಕವನ್ನು ಹಬ್ಬಿಸುವಂತಹ ಪ್ರಶ್ನೆಯನ್ನು ಕೇಳುವ ಮೂಲಕ ಹಿಂದೂಗಳ ಶ್ರದ್ಧಾಸ್ಥಾನವನ್ನು ಮತ್ತೊಮ್ಮೆ ಅವಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಕ ನಟ ಅಮಿತಾಭ ಬಚ್ಚನ ಇವರು ‘25 ಡಿಸೆಂಬರ್ 1927’ ರಂದು ಡಾ. ಬಾಬಾಸಾಹೇಬ್ ಅಂಬೇಡಕರ ಹಾಗೂ ಅವರ ಅನುಯಾಯಿಗಳು ಯಾವ ಧರ್ಮಗ್ರಂಥವನ್ನು ಸುಟ್ಟರು ?’ ಎಂದು ಪ್ರಶ್ನಿಸಿ ಅದಕ್ಕೆ ಆಯ್ಕೆ ಎಂದು ‘ವಿಷ್ಣುಪುರಾಣ’,‘ಭಗವದ್ಗೀತೆ’, ‘ಋಗ್ವೇದ್’ ಹಾಗೂ ‘ಮನುಸ್ಮೃತಿ’ ಎಂಬ ಉತ್ತರಗಳನ್ನು ನೀಡಿದ್ದರು. ಈ ಪ್ರಶ್ನೆಯಿಂದ ಅಮಿತಾಭ ಬಚ್ಚನ ಹಾಗೂ ‘ಕೆಬಿಸಿ’ಯವರು ಯಾವ ಸಂದೇಶವನ್ನು ನೀಡಲು ಬಯಸಿದ್ದಾರೆ ? ಅನಂತರ ಜಾತಿತಾರತಮ್ಯ ಹಾಗೂ ಅಸ್ಪೃಶ್ಯತೆಯನ್ನು ವೈಚಾರಿಕ ದೃಷ್ಟಿಯಿಂದ ಅಯೋಗ್ಯವೆಂದು ನಿರ್ಧರಿಸಲು ಮನುಸ್ಮೃತಿಯನ್ನು ಟೀಕಿಸಿದರು ಹಾಗೂ ಅದನ್ನು ಸುಟ್ಟರು, ಎಂದು ಹೇಳಿದ ಬಚ್ಚನ ಈ ಮೂಲಕ ಸಮಾಜದ ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕೆಬಿಸಿ’ ಹಾಗೂ ಅಮಿತಾಭ ಬಚ್ಚನ ಇವರು ಹಿಂದೂ ಸಮಾಜದ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಆಗ್ರಹಿಸಿದ್ದಾರೆ.

ಶ್ರೀ. ರಮೇಶ ಶಿಂದೆ

ಕೆಬಿಸಿಯು ಹಿಂದಿನ ವರ್ಷವೂ ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುತ್ತಾ ಹಿಂದೂ ರಾಷ್ಟ್ರಪುರುಷರನ್ನು ಅವಮಾನಿಸಿತ್ತು. ಈಗ ಮತ್ತೊಮ್ಮೆ ಹಿಂದೂ ಧರ್ಮಗ್ರಂಥದ ಬಗ್ಗೆ ಅಯೋಗ್ಯ ಮಾಹಿತಿಯನ್ನು ಹೇಳುತ್ತಾ ಮನುಸ್ಮೃತಿಯನ್ನು ಅವಮಾನಿಸಿದ್ದಾರೆ. 19 27 ರಲ್ಲಿ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡಕರ ಇವರು ಮನುಸ್ಮೃತಿಯನ್ನು ಸುಟ್ಟಿದ್ದರು; ಆದರೆ ನಂತರ ಅಂದರೆ 11 ಜನವರಿ 1950 ರಲ್ಲಿ ಮುಂಬಯಿಯ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಸಭಿಕರೆದುರು ಮಾತನಾಡಿದ ಡಾ. ಅಂಬೇಡಕರ ಇವರು, ‘ನಾನು ಜಾತಿ ನಿರ್ಣಯಕ್ಕಾಗಿ ಮನುವಿನ, ವಿಚ್ಛೇದನೆಗಾಗಿ ಪಾರಾಶರ ಸ್ಮೃತಿಯ, ಸ್ತ್ರೀಯರ ಹಕ್ಕುಗಳಿಗಾಗಿ ಬೃಹಸ್ಪತಿಯ ಸ್ಮೃತಿಯ ಆಧಾರವನ್ನು ತೆಗೆದುಕೊಂಡಿದ್ದೇನೆ. ಅದೇರೀತಿ ದಯಾಭಾಗ ಪದ್ದತಿಯ ಪಿತ್ರಾರ್ಜಿತ ಹಕ್ಕಿಗಾಗಿ ಮನುಸ್ಮೃತಿಯ ಆಧಾರವನ್ನು ತೆಗೆದುಕೊಂಡಿದ್ದೇನೆ’ ಎಂದು ಹೇಳಿದ್ದರು. ಅದೇರೀತಿ ಸುಡುವ ಮೊದಲು ನಾವು ಈ ಮನುಸ್ಮೃತಿ ಈ ಗ್ರಂಥವನ್ನು ಓದಿಲ್ಲವೆಂದೂ ಅವರು ಹೇಳಿದ್ದರು. ಇದರಿಂದ ಮನುಸ್ಮೃತಿಯ ಮಹತ್ವವನ್ನು ಬಾಬಾಸಾಹೇಬರು ಒತ್ತಿಹೇಳಿದ್ದರು. ಈ ಘಟನೆಯಿಂದ ಕೆಬಿಸಿಯ ಹಿಂದೂವಿರೋಧಿ ವೃತ್ತಿಯು ಮತ್ತೊಮ್ಮೆ ಬಯಲಾಯಿತು. ಒಂದು ವೇಳೆ ಹಿಂದೂ ಧರ್ಮಗ್ರಂಥವನ್ನು ಡಾ. ಬಾಬಾಸಾಹೇಬ್ ಇವರು ಸುಟ್ಟಿದ್ದರೆಂದು ಈ ಪ್ರಶ್ನೆಯನ್ನು ಕೆಬಿಸಿಯಲ್ಲಿ ಕೇಳುತ್ತಿದ್ದಲ್ಲಿ, ‘ತಕ್ಷಶಿಲಾ’ ಹಾಗೂ ‘ನಾಲಂದಾ’ ಈ ಹಿಂದೂಗಳ ಪ್ರಾಚೀನ ವಿಶ್ವವಿದ್ಯಾಲಯಗಳು ಹಾಗೂ ಅಲ್ಲಿದ್ದ ಅಮೂಲ್ಯ ಗ್ರಂಥಸಂಪತ್ತನ್ನು ಯಾರು ಸುಟ್ಟು ಶಾಶ್ವತವಾಗಿ ನಾಶ ಮಾಡಿದರು ?’, ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿರುವ ಪ್ರಾಚೀನ ಬುದ್ಧನ ಮೂರ್ತಿಗಳನ್ನು ಯಾವ ಧರ್ಮಗ್ರಂಥಗಳ ಅನುಯಾಯಿಗಳು ನಾಶಪಡಿಸಿದರು ? ‘ಚಾರ್ಲಿ ಹೆಬ್ಡೊ’ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಯಾವ ಧರ್ಮಗ್ರಂಥಗಳಿಂದ ಪ್ರೇರಣೆ ಪಡೆದಿದ್ದರು?’ ಈ ರೀತಿಯಲ್ಲಿ ಇತರ ಪಂಥದವರ ಬಗ್ಗೆ ಪ್ರಶ್ನೆ ಕೇಳುವ ಧೈರ್ಯವನ್ನು ಕೆಬಿಸಿ ಮತ್ತು ಅಮಿತಾಭ ಬಚ್ಚನಗೆ ಇದೆಯೇ? ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ರಾಷ್ಟ್ರಪುರುಷರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ ‘ಕೆಬಿಸಿ’ ಮತ್ತು ‘ಸೋನಿ ಟಿವಿ’ಯನ್ನು ಹಿಂದೂ ಸಮಾಜವು ನಿಷೇಧಿಸಬೇಕು ಮತ್ತು ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀ. ಶಿಂದೆಯವರು ಈ ವೇಳೆ ಕರೆ ನೀಡಿದ್ದಾರೆ.